1] ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 280/2017 ಕಲಂ: :
279, 337, 338, 304(ಎ) ಐ.ಪಿ.ಸಿ.
ದಿನಾಂಕ:- 17-09-2017 ರಂದು ನಮ್ಮೂರ ದುರಗಪ್ಪ ದಾಸನಾಳ ಜಾತಿ: ಈಡಿಗರು ಸಾ: ಬಸಾಪಟ್ಟಣ
ಇವರ ಮೊಮ್ಮಗನ ನಾಮಕಾರಣ ಕಾರ್ಯಕ್ರಮವು ಸಿರಗುಪ್ಪ ಹತ್ತಿರ ಕ್ಯಾದಗಿಹಳ್ಳಿ ಕ್ರಾಸಿನದಲ್ಲಿ ಇದ್ದುದರಿಂದ
ನಾನು ಹಾಗೂ ನನ್ನ ಮಕ್ಕಳಾದ ಸೋಮನಾಥ, ಲಕ್ಷ್ಮೀ ಹಾಗೂ ನಮ್ಮೂರ ಸುಮಾರು 25-30 ಜನರು ಕೂಡಿಕೊಂಡು ದುರಗಪ್ಪನವರ
ಮಹಿಂದ್ರಾ ಟ್ರ್ಯಾಕ್ಟರ್ ನಂಬರ್ ಇಲ್ಲಾ (ಚಾಸ್ಸಿ ನಂ: RE0S00940) ಮತ್ತು ಟ್ರಾಲಿ (ನಂಬರ್ ಇರುವುದಿಲ್ಲಾ)
ನೇದ್ದರಲ್ಲಿ ಬಸಾಪಟ್ಟಣದಿಂದ ಕ್ಯಾದಗಿಹಳ್ಳಿ ಕ್ರಾಸಿಗೆ ಹೋಗಿದ್ದೆವು. ಕಾರ್ಯಕ್ರಮವನ್ನು ಮುಗಿಸಿಕೊಂಡು
ವಾಪಸ್ ಬಸಾಪಟ್ಟಣಕ್ಕೆ ಬರುತ್ತಿರುವಾಗ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಬಸಾಪಟ್ಟಣ ಸೀಮಾದ ಮಸ್ಕಿ
ಸಿದ್ದಣ್ಣನ ರೈಸ್ ಮಿಲ್ ಹತ್ತಿರ ಸಂಜೆ 6:45 ಗಂಟೆಯ ಸುಮಾರಿಗೆ ಟ್ರ್ಯಾಕ್ಟರ್/ಟ್ರಾಲಿ ಚಾಲಕ ಶರಣಪ್ಪ
ತಂದೆ ದುರಗಪ್ಪ ದಾಸನಾಳ ಜಾತಿ: ಈಡಿಗರು ಸಾ: ಬಸಾಪಟ್ಟಣ ಈತನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ಚಲಾಯಿಸಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಮೇಲೆ ಎಡಭಾಗದಲ್ಲಿ ಪಲ್ಟಿಯಾಗಿ
ಉರುಳಿ ಬಿದ್ದಿದ್ದು, ಇದರಿಂದ ಟ್ರ್ಯಾಕ್ಟರ್/ಟ್ರಾಲಿಯಲ್ಲಿದ್ದ ಪರಶುರಾಮ ತಂದೆ ರಾಮಣ್ಣ ಹಳ್ಳಿ, ವಯಸ್ಸು
34 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಬಸಾಪಟ್ಟಣ ತಾ: ಗಂಗಾವತಿ ಈತನು ತೀವ್ರಗಾಯವಾಗಿ
ಮೃತಪಟ್ಟಿದ್ದು ಉಳಿದ 22 ಜನಗಳಿಗೆ ಸಾದಾ ಹಾಗೂ ತೀವ್ರಗಾಯ ಹೊಂದಿದವರಿಗೆ ಆಸ್ಪತ್ರೆಯಲ್ಲಿ ಚಕಿತ್ಸೆಗಾಗಿ
ದಾಖಲು ಮಾಡಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 120/2017 ಕಲಂ:
: 304(ಎ), 337 ಐ.ಪಿ.ಸಿ.
ದಿನಾಂಕ: 17-09-2017 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರ ಮಕ್ಕಳಾದ 1] ತೇಜಸ್ವಿನಿ ತಂದೆ ಗುರಪ್ಪ
ನಾಯಕ, ವಯ: 07 ವರ್ಷ ಜಾತಿ: ಲಮಾಣಿ ಸಾ: ಚಿಕ್ಕೊಪ್ಪತಾಂಡಾ 2] ಸಾನಿಕಾ ತಂದೆ ಗುರಪ್ಪ ನಾಯಕ, ವಯ:
10 ವರ್ಷ ಜಾತಿ: ಲಮಾಣಿ ಸಾ: ಚಿಕ್ಕೊಪ್ಪತಾಂಡಾ ಇವರು ತಮ್ಮ ಊರ ಹೊರಗಡೆ ಸಜ್ಜೆ ಹೊಲದಲ್ಲಿ ಹತ್ತಿರ
ಬಹಿರ್ದೆಸೆಗೆ ಹೋಗಿ, ವಾಪಸ್ ಬರುತ್ತಿದ್ದಾಗ ವಿಧ್ಯುತ್ ಮೇನ್ ಲೈನ್ ತಂತಿ ಹರಿದು ತುಂಡಾಗಿ, ಫಿರ್ಯಾದಿದಾರರ
ಮಗಳಾದ ತೇಜಸ್ವಿನಿ ಇವಳ ಎಡಗೈ ಮೇಲೆ ಬಿದ್ದು, ಕರೆಂಟ್ ಶಾಕ್ ಹೊಡೆದು ಎಡ ಗೈ ರಟ್ಟೆಗೆ ಭಾರಿ ಸ್ವರೂಪದ
ಸುಟ್ಟ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಅಲ್ಲದೆ ಸಾನಿಕಾ ಇವಳಿಗೂ ಸಹ ವಿಧ್ಯುತ್
ತಂತಿ ತಗುಲಿ ಬಲಗೈ ಬೆರಳಿ ಹತ್ತಿರ ಸುಟ್ಟ ಗಾಯವಾಗಿದ್ದು ಇರುತ್ತದೆ. ಈ ವಿಧ್ಯುತ್ ತಂತಿ ಸುಮಾರು
30 ರಿಂದ 40 ವರ್ಷ ಹಳೆಯ ಲೈನ್ ಆಗಿದ್ದು, ಸಂಪೂರ್ಣ ತೆಗೆದು ಮರು ಜೋಡಣೆ ಮಾಡಲು ಸಂಭಂದ ಪಟ್ಟ ಯಲಬುರ್ಗಾದ
ಜೆಸ್ಕಾಂ ಅಧಿಕಾರಿಗಳಿಗೆ ಮತ್ತು ಶಾಖಾಧಿಕಾರಿಗಳಿಗೆ ಸಾಕ್ಷಷ್ಟು ಬಾರಿ ಮೌಕಿಕವಾಗಿ ಊರಿನ ಜನರೆಲ್ಲ
ತಿಳಿಸಿದ್ದರೂ, ಸಹ ಸದರಿ ಲೈನ್ ನ್ನು ಸದರಿ ಪಡಿಸಲಯ ಯಾವುದೇ ಕ್ರಮ ಕೈಗೊಳ್ಳದೇ ಆರೋಪಿತರು ನಿರ್ಲಕ್ಷ ತಾಳಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 144/2017 ಕಲಂ:
: 304(ಎ) ಐ.ಪಿ.ಸಿ.
ದಿ: 17-09-2017 ರಂದು ಬೆಳಿಗ್ಗೆ 07-00 ಗಂಟೆಗೆ ಫಿರ್ಯಾದಿದಾರರಾದ ಮರ್ದಾನಅಲಿ ಮುಜಾವರ ಸಾ: ಸಜ್ಜಿಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಕಿತ ದೂರಿನ ಸಾರಾಂಶವೇನೆಂದರೇ, ದಿ: 17-09-2017 ರಂದು ಮುಂಜಾನೆ 09-00 ಗಂಟೆಗೆ ನನ್ನ ಸೋದರಮಾವನ ಮಗನಾದ ಮಹಿಬೂಬ ತಂದೆ ಅಬ್ದುಲರಜಾಕಸಾಬ
ಮನಿಯಾರ ವ: 19 ವರ್ಷ ಈತನಿಗೆ ಕೊಪ್ಪಳ ಬೆಂಕಿನಗರದಲ್ಲಿ ಒಂದು ಬಿಲ್ಡಿಂಗ್ ಕಟ್ಟುತ್ತಿರುವ ಕಟ್ಟಡದ
ಇಂಜಿನೀಯರಾದ ಶ್ರೀಪಾದ ವೈದ್ಯ ಮತ್ತು ಮೇಸ್ತ್ರೀ ಮೈನುದ್ದೀನ ಬೆಟಗೇರಿ ಇವರು ಕರೆದುಕೊಂಡು ಹೋಗಿ ಕಟ್ಟಡದ
ಮೇಲೆ ಹತ್ತಿಸಿ ಮುಂಜಾಗೃತವಾಗಿ ಸುರಕ್ಷಿತವಾಗಿ ಯಾವುದೇ ಮುಂಜಾಗೃತೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ
ಕಟ್ಟಡದ ಮೇಲೆ ಮಹಿಬೂಬ ಈತನಿಗೆ ಹತ್ತಿಸಿ ಕೆಲಸ ಮಾಡಿಸುತ್ತಿದ್ದಾಗ ಮಹಿಬೂಬ ಒಮ್ಮೇಲೆ ಕೆಳಗೆ ಬಿದ್ದು
ತಲೆಗೆ ಬಾರಿ ಪೆಟ್ಟಾಗಿ ಆಸ್ಸ್ಪತ್ರೆಗೆ ದಾಖಲಾಗಿದ್ದು, ನಂತರ ರಾತ್ರಿ 08-05 ಗಂಟೆಗೆ ಹುಬ್ಬಳ್ಳಿ
ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲೀಸದೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 134/2017 ಕಲಂ: :
279, 304(ಎ), ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 17-09-2017 ರಂದು ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾದಿಯನ್ನು
ಹಾಜರುಪಡಿಸಿದ್ದು ಇದರಲ್ಲಿನ ಸಾರಾಂಶವೇನೇಂದರೇ, ಫಿರ್ಯಾಧಿದಾರನು ತನ್ನ ಮೋಟರ್ ಸೈಕಲ್ ತಗೆದುಕೊಂಡು
ತನ್ನ ಹೆಂಡತಿ ಊರಾದ ಒಬಳಬಂಡಿ ಗ್ರಾಮಕ್ಕೆ ತಮ್ಮೂರಿನಿಂದ ಸಂಜೆ ಊರಿನಿಂದ ಹೊರಟು ಅರಳಳ್ಳಿ ಕ್ರಾಸ್
ದಾಟಿ ಮುಂದೆ ಹೋಗುತ್ತಿರುವಾಗ ಸಾಯಾಮಕಾಲ 7:00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೋಟರ್ ಸೈಕಲ್
ಸವಾರನು ತನ್ನ ಮೋಟರ್ ಸೈಕಲ್ ಹಿಂದೆ ಒಬ್ಬ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ತನ್ನ ಮೋಟರ್ ಸೈಕಲ್
ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಸೂಳೆಕಲ್ ಕ್ರಾಸ್ ಹತ್ತಿರ ತನ್ನ ಮೋಟರ್ ಸೈಕಲ್
ನಿಯಂತ್ರಣ ಸಾಧೀಸದೆ ಸ್ಕೀಡ್ ಮಾಡಿ ಮೋಟರ್ ಸೈಕಲ್ ಸಮೇತ ಇಬ್ಬರೂ ಬಿದ್ದರು ನಂತರ ಫಿರ್ಯಾದಿ ತನ್ನ
ಮೋಟರ್ ಸೈಕಲ್ ನಿಲ್ಲಿಸಿ ಹೋಗಿ ನೋಡಲು ಮೋಟರ್ ಸೈಕಲ್ ನಡೆಸುತ್ತಿದ್ದವರು ತಮ್ಮೂರ ಲಕ್ಷ್ಮಣ ತಂದೆ
ದುರುಗಪ್ಪ ಬೆನಕನಾಳ ಇದ್ದು ಅವನಿಗೆ ನೋಡಲು ಅವನಿಗೆ ಯಾವದೇ ಗಾಯಗಳಾಗಿರಲಿಲ್ಲಾ ಹಿಂದೆ ಕುಳಿತ ವ್ಯಕ್ತಿಯ
ಹೆಸರು ಅವನು ಕೂಡ ತಮ್ಮೂರ ಬಸವರಾಜ ತಂದೆ ದುರುಗಪ್ಪ ಕನ್ಯಾರಮಡು ಇದ್ದು. ಅವನಿಗೆ ತಲೆಯೆ ಹಣೆಯ ಮೇಲೆ,
ಎದೆಗೆ ಒಳಪೆಟ್ಟಾಗಿದ್ದು. ಇರುತ್ತದೆ. ಲಕ್ಷ್ಮಣ ನಡೆಸುತ್ತಿದ್ದ ಮೋಟರ್ ಸೈಕಲ್ ನೋಡಲು ಕೆ.ಎ-37/ವಾಯ್-6023
ಅಂತಾ ಇದ್ದು ನಂತರ ನಾನು ಲಕ್ಷ್ಮಣನಿಗೆ ವಿಚಾರಿಸಲು ನಾನು ಮತ್ತು ಬಸವರಾಜ ಇಬ್ಬರೂ ಅವರ ಸಜ್ಜೆ ಹೋಲ
ನೋಡಿಕೊಂಡು ಬರಲು ಹೋಗಿದ್ದು ಅಂತಾ ತಿಳಿಸಿದನು. ನಾನು ಬಸವರಾಜ ಇವರ ಮಾವನಾದ ಫಕೀರಪ್ಪ ಅಯ್ಯೋದ್ಯ
ಇವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು . ನಾನು ಪೋನ್ ಮಾಡುವಷ್ಠರಲ್ಲಿ ಲಕ್ಷ್ಮಣ ಇತನು ನನಗೆ ಹೇಳದೆ
ತನ್ನ ಮೋಟರ್ ಸೈಕಲ್ ತಗೆದುಕೊಂಡು ಆಗೆ ಹೋಗಿದ್ದು. ಇನ್ನೂ ಊರಿಗೆ ಬಂದಿರುವದಿಲ್ಲಾ. ನಂತರ ಸ್ಥಳಕ್ಕೆ
108 ವಾಹನ ಬಂದಿದ್ದು. ಅಷ್ಠರಲ್ಲಿ ಬಸವರಾಜನ ಮಾವ ಫಕೀರಪ್ಪನು ಕೂಡ ಅಲ್ಲಿಗೆ ಬಂದಿದ್ದು. ಅತ ಬಂದ
ನಂತರ 108 ವಾಹನದಲ್ಲಿ ಬಸವರಜನನ್ನು ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು
ಹೋಗಿದ್ದು. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ
ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾನು ಮತ್ತು ಅವರ ಮಾವ ಇಬ್ಬರೂ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ
ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಕಾಲಕ್ಕೆ ರಾತ್ರಿ 10:00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು
ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
0 comments:
Post a Comment