1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 248/2017 ಕಲಂ: : 287, 304(ಎ) ಐ.ಪಿ.ಸಿ.
ದಿನಾಂಕ: 19-09-2017 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಪಿರ್ಯಾದಿದಾರರ ಜಮೀನಿ (ಗದ್ದಿ) ನಲ್ಲಿ ತಮ್ಮ ಟ್ರ್ಯಾಕ್ಟರ ನಂ. ಕೆಎ-37/ಟಿಬಿ-2365 ರಲ್ಲಿ ಆರೋಪಿತನು ಕೆಸರು ಗದ್ದಿ ಹೊಡೆಯುತ್ತಿದ್ದಾಗ ಟ್ರ್ಯಾಕ್ಟರ ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಮೃತನು ಅದನ್ನು ಹಿಂದಿನಿಂದ ತಳ್ಳುತ್ತಿದ್ದಾಗ ಟ್ರ್ಯಾಕ್ಟರ ಚಾಲಕನಾದ ಜಗದೀಶ ತಂದೆ ಹನಮಪ್ಪ ಎಗ್ಗ ವಯ: 38 ಇತನು ಒಮ್ಮೆಲೆ ಟ್ರ್ಯಾಕ್ಟರ ಎಕ್ಸಲೇಟರನ್ನು ಕೊಟ್ಟು ಜೋರಾಗಿ ಓಡಿಸಿದ್ದರಿಂದ ಟ್ರ್ಯಾಕ್ಟರ ಹಿಂಬದಿಯಾಗಿ ಪಲ್ಟಿಯಾಗಿದ್ದರಿಂದ ಹಿಂದೆ ತಳ್ಳುತ್ತಿದ್ದ ಮೃತ ರವಿಕುಮಾರನು ಟ್ರ್ಯಾಕ್ಟರ ಕೆಳಗೆ ಸಿಕ್ಕಿ ಮೃತಪಟ್ಟಿರುತ್ತಾನೆ. ಈ ಅಪಘಾತವು ಟ್ರ್ಯಾಕ್ಟರ ಚಾಲಕನಾದ ಜಗದೀಶ ಇತನಿಗೆ ಈ ರೀತಿಯಲ್ಲಿ ಟ್ರ್ಯಾಕ್ಟರ ಚಲಾಯಿಸುವುದರಿಂದ ಅಪಘಾತ ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಸಹಿತ ಟ್ರ್ಯಾಕ್ಟರನ್ನು ನಿರ್ಲಕ್ಷತನದಿಂದ ಮತ್ತು ದುಡುಕಿನಿಂದ ಚಲಾಯಿಸಿದ್ದರಿಂದ ಸಂಭವಿಸುರತ್ತದೆ. ಆದ್ದರಿಂದ ಸದರಿ ಟ್ರ್ಯಾಕ್ಟರ ನಂ. ಕೆಎ-37/ಟಿಬಿ-2365 ಮತ್ತು ಅದರ ಚಾಲಕನಾದ ಜಗದೀಶ ತಂದೆ ಹನಮಪ್ಪ ಎಗ್ಗ ಸಾ: ಕಂಪಸಾಗರ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಪಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 138/2017 ಕಲಂ:
: 379 ಐ.ಪಿ.ಸಿ.
ದಿನಾಂಕ: 19-09-2017 ರಂದು ಮಧ್ಯಾಹ್ನ 13-3 ಗಂಟೆಗೆ ಫಿರ್ಯಾದಿದಾರರಾದ ಮಲ್ಲಪ್ಪ ಬದಾಮಿ ಸಾ: ಹನಮಸಾಗರ ರವರು ಠಾಣೆಗೆ ಹಾಜರಾತಿ ಲಿಖಿತ ಫಿರ್ಯಾದಿ
ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ:
16-09-2017 ರಂದು
ತಮ್ಮ ಆಕಳು ಮತ್ತು ಕರುವನ್ನು ಸಂಜೆಯವರೆಗೆ ಮೇಯಿಸಿ ರಾತ್ರಿ 8-00 ಗಂಟೆಯ ಸುಮಾರು ತಮ್ಮ ಹೊಲದ ಶೆಡ್ಡಿನಲ್ಲಿ ಕಟ್ಟಿ ವಾಪಸ್
ಮನೆಗೆ ಬಂದು ನಂತರ ದಿನಾಂಕ: 17-9-2017 ರಂದು
ಬೆಳಗಿನ ಜಾವ 5-00 ಗಂಟೆಗೆ
ಹಾಲು ಕರೆಯಲು ಹೊಲಕ್ಕೆ ಹೋಗಿ ಶೆಡ್ಡಿನಲ್ಲಿ ನೋಡಲು ಆಕಳು ಮತ್ತು ಕರು ಇರಲಿಲ್ಲ ಅಲ್ಲಿ
ಇಲ್ಲಿ ಹುಡುಕಲಾಗಿ ಕಾಣಲಿಲ್ಲ,
ನಂತರ ಸಂಜೆ 6-0 ಗಂಟೆಯ ಸುಮಾರು
ಫಿರ್ಯಾದಿದಾರರು ಮನೆಯಲ್ಲಿದ್ದಾಗ ತಮ್ಮೂರ ನಾಗಪ್ಪ ಗೊಲ್ಲರ ರವರು ಈತನು ಫೋನ್ ಮಾಡಿ ನಿಮ್ಮ ಆಕಳು
ಮತ್ತು ಕರು ಮುದಗಲ್ ಸಂತೆ ಮಾರಾಟಕ್ಕೆ ತಂದಿರುವುದಾಗ ತಿಳಿಸಿ ನಂತರ ನಾಗಪ್ಪನ ವ್ಯಾಟ್ಸಪಗೆ
ತರಿಸಿ ನೋಡಲಾಗಿ ಅದು ತಮ್ಮ ಆಕಳು ಮತ್ತು ಕರು ಅಂತಾ ಗೊತ್ತಾಗಿ ಯಾರೂ ತೆಗೆದುಕೊಂಡು ಬಂದಿದ್ದು
ಅಂತಾ ವಿಚಾರಿಸಲಾಗಿ ತಮ್ಮೂರ ಹುಲಗಪ್ಪ ತಂದೆ ಹನಮಪ್ಪ ಗುಡಿಹೊಲ ಮತ್ತು ಆತನ ಹೆಂಡತಿ ಮಂಜವ್ವ ಗಂಡ
ಹುಲಗಪ್ಪ ಗುಡಿಹೊಲ ರವರು ತೆಗೆದುಕೊಂಡ ಹೋದ ಬಗ್ಗೆ ತಿಳಿದು ಬಂದಿದ್ದು, ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ
ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment