1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ: : 279, 337, 304(ಎ) ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ.
ದಿನಾಂಕ: 20-09-2017 ರಂದು
ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ಗಂಗಾವತಿ-ಕೊಪ್ಪಳ ರಸ್ತೆಯಲ್ಲಿ ಗುಡದಳ್ಳಿ ಗ್ರಾಮದ ಭೀಮ್ಮಮ್ಮನ
ಗುಡಿ ಹತ್ತಿರ ನಮ್ಮ ಲಾರಿ ಕೆಟ್ಟಿದ್ದರಿಂದ ರಿಪೇರಿ ಮಾಡುವ ಸಲುವಾಗಿ ರಸ್ತೆಯ ಸೈಡಿನಲ್ಲಿ ನಿಲ್ಲಿಸಿ
ರಿಪೇರಿ ಮಾಡುತ್ತಿರುವಾಗ ನಮ್ಮ ಲಾರಿಯಲ್ಲಿ ಬಂದಿದ್ದ ಐ.ಲಕ್ಷ್ಮಣ ತಂದೆ ವೆಂಕಟೇಶ್ವರಲು ವಯ: 40 ವರ್ಷ
ಇತನು ಲಾರಿಯಿಂದ ಕೆಳಗೆ ಇಳಿದು ಬರುತ್ತಿದ್ದಾಗ ಆರೋಪಿತನು ತನ್ನ ಲಾರಿ ನಂ. ಕೆಎ-48/3667 ನೇದ್ದರ
ಚಾಲಕನು ತನ್ನ ಲಾರಿಯನ್ನು ಗಂಗಾವತಿ ಕಡೆಯಿಂದ ಕೊಪ್ಪಳ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ
ಓಡಿಸಿಕೊಂಡು ಬಂದು ಐ.ಲಕ್ಷ್ಮಣನ್ನು ಗಮನಿಸದೇ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಐ.ಲಕ್ಷ್ಮಣ
ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಆದ್ದರಿಂದ ಲಾರಿ ನಂ. ಕೆಎ-48/3667 ಮತ್ತು ಅದರ
ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 209/2017 ಕಲಂ: :
279, 338 ಐ.ಪಿ.ಸಿ.
ದಿ:20-09-2017 ರಂದು ಮದ್ಯಾಹ್ನ 1-45 ಗಂಟೆಗೆ
ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಮೇಶ ಬಾರಕೇರ. ಸಾ: ಕೋಳೂರ. ಇವರಿಗೆ ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು
ಸಾರಾಂಶವೇನೇಂದರೇ, ದಿ:20-09-2017 ರಂದು ಬೆಳಿಗ್ಗೆ 10-45 ಗಂಟೆಗೆ ಫಿರ್ಯಾದಿದಾರರು ಮಾದಿನೂರ ದಲ್ಲಿ
ಶ‍್ರೀ ಹೊನ್ನಿನಕೇರಿ ಮಲ್ಲಯ್ಯ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಊರಿಗೆ ಅಂತಾ ತಮ್ಮ ಮೋಟಾರ ಸೈಕಲ್
ನಂ: ಕೆಎ-37/ಇಎ-2997 ನೇದ್ದನ್ನು ಓಡಿಸಿಕೊಂಡು ಮಾದಿನೂರ-ಕೊಪ್ಪಳ ರಸ್ತೆಯ ಹುಚ್ಚೇಶ್ವರ ಕ್ಯಾಂಪ್
ದಾಟಿ ಬರುತ್ತಿದ್ದಾಗ ಅದೇಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಟ್ರ್ಯಾಕ್ಟರ ಇಂಜನ್ ನಂ: 3100FL73B617945F3 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಚಲಾಯಿಸಿಕೊಂಡು ಕರ್ವಿಂಗನ್ನು ಗಮನಿಸದೇ ಬಂದು ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ
ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿದಾರರ ಬಲಕಾಲ ಮೊಣಕಾಲ ಕೆಳಗಡೆ ಪಾದದ ಸಮೀಪ ಭಾರಿ ರಕ್ತಗಾಯವಾಗಿ
ಮೂಳೆ ಮುರಿದಿರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment