1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 130/2017 ಕಲಂ: : 279, 304(ಎ) ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ.
ಪಿರ್ಯಾದಿದಾರನ ತಂದೆಯಾದ ಯಲ್ಲಪ್ಪನು ಕುದರಿಮೋತಿ ಸೀಮಾದಲ್ಲಿರುವ ಅದೇ ಗ್ರಾಮದ ಹನುಮಂತಪ್ಪ
ಚವ್ಹಾಣ ಇವರ ಹೋಲಕ್ಕೆ ಸಜ್ಜೆ ಕೊಯ್ಯುವ ಕೆಲಸಕ್ಕೆ ಅಂತಾ ಹೋಗಿದ್ದನು. ನಂತರ ಸಾಯಂಕಾಲ 5-30
ಗಂಟೆ ಸುಮಾರಿಗೆ ಯಲ್ಲಪ್ಪನು ಹನುಮಂತಪ್ಪನ ಹೊಲದಿಂದ ಊರ ಕಡೆಗೆ ಬರುವ ಕಾಲಕ್ಕೆ ಸದರಿ ಹನುಮಂತಪ್ಪ
ಚವ್ಹಾಣ ಇತನು ತನ್ನ ಮೋಟಾರ್ ಸೈಕಲ್ ನಂ. ಕೆಎ-35/ಯು-1802 ನೇದ್ದರ ಮೇಲೆ ಯಲ್ಲಪ್ಪನನ್ನು ಕುಡಿಸಿಕೊಂಡು
ಹೊನ್ನುಣಸಿ ಗ್ರಾಮದಿಂದ ಹಾಗೆ ಯಾವುದೋ ಕೆಲಸಕ್ಕಾಗಿ ಕಿನ್ನಾಳ ಗ್ರಾಮದ ಕಡೆಗೆ ಕರೆದುಕೊಂಡು ಹೋಗುವ
ಕಾಲಕ್ಕೆ ಚಿಕ್ಕ ಬೀಡನಾಳ ಸೀಮಾದಲ್ಲಿ ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ
ಯಾವುದೋ ಒಂದು ವಾಹನದ ಚಾಲಕನು ತಾನು ಚಲಾಯಿಸುತಿದ್ದ ವಾಹನವನ್ನು ಮಂಗಳೂರು ಕಡೆಯಿಂದ ಕಿನ್ನಾಳ ಕಡೆಗೆ
ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು
ಸದರಿ ಮೋಟಾರ್ ಸೈಕಲ್ಲಿಗೆ ಹಿಂದಿನಿಂದ ಬಲವಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದಿದಾರನ
ತಂದೆಯಾದ ಯಲ್ಲಪ್ಪ ಹಾಗೂ ಹನುಮಂತಪ್ಪ ಚವ್ಹಾಣ ಇವರಿಬ್ಬರಿಗೂ ಭಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ
ನಂ. 251/2017 ಕಲಂ:
: 279, 337, 338, 304(ಎ)
ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ: 23-09-2017 ರಂದು
ಮುಂಜಾನೆ 7-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು
ಅದರ ಸಾರಾಂಶವೇನಂದರೆ, ನಿನ್ನೆ ದಿನಾಂಕ: 22-09-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮೃತ
ಸಂತೋಷಕುಮಾರ ಮತ್ತು ಗಾಯಾಳುಗಳಾದ ಮಲ್ಲಪ್ಪ ತಂದ ಶಂಕ್ರಪ್ಪ, ವೆಂಕಟೇಶ ತಂದೆ ನರಸಿಂಹಲು ಹಾಗೂ ಪೂಜಾ
ವಯ: 4 ವರ್ಷ, ಶಂಕರ ವಯ: 3 ವರ್ಷ ಇವರು ಮೋಟರ ಸೈಕಲ್ ನಂ. ಕೆಎ-49/ಜೆ-5039 ನೇದ್ದರಲ್ಲಿ ಗಿಣಗೇರಿಯಿಂದ
ಕುಣಕೇರಿ ತಾಂಡಾಕ್ಕೆ ಗಿಣಗೇರಿ-ಅಲ್ಲಾನಗರ ರಸ್ತೆಯಲ್ಲಿ ಸುಣ್ಣದ ಭಟ್ಟಿ ಹತ್ತಿರ ಹೋಗುತ್ತಿರುವಾಗ
ಆರೋಪಿತನು ತನ್ನ ಬುಲೆರೋ ಮ್ಯಾಕ್ಸಿಟ್ರಕ್ ವಾಹನ ನಂ. ಕೆಎ-37/ಎ-8317 ನೇದ್ದನ್ನು ಅಲ್ಲಾನಗರ ಕಡೆಯಿಂದ
ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಮೋಟರ ಸೈಕಲಗೆ ಡಿಕ್ಕಿ ಪಡಿಸಿ
ಅಪಘಾತ ಪಡಿಸಿದ್ದರಿಂದ ಮೇಲ್ಕಂಡವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯ ಪೆಟ್ಟುಗಳಾಗಿ ಸಂತೋಷಕುಮಾರನು
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲಕ್ಕೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ
ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
0 comments:
Post a Comment