1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ : 05-09-2017 ರಂದು
ಮುಂಜಾನೆ 11-15 ಗಂಟೆಯ
ಸುಮಾರಿಗೆ ನನ್ನ ಹೆಂಡತಿ ಈರಮ್ಮ ವಯಾ 44 ವರ್ಷ ಇವಳು ಕಿರಾಣಿ ಸಾಮಾನು ತರಲು ಹನಮಸಾಗರಕ್ಕೆ ಕಾಲ್ನಡಿಗೆಯಲ್ಲಿ
ನಡೆದುಕೊಂಡು ಜುಂಜಲಕೊಪ್ಪ ಸೀಮಾದ ಶೇಖರಯ್ಯ ಹಿರೇಮಠ ಇವರ ಹೊಲದ ಹತ್ತಿರ ರಸ್ತೆಯ ಎಡಬಾಜು
ಹೊರಟಿದ್ದಾಗ ಹನಮಸಾಗರ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ
ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ನನ್ನ ಹೆಂಡತಿಗೆ ಟಕ್ಕರ್ ಕೊಟ್ಟು
ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ಈ ಅಪಘಾತದಲ್ಲಿ ನನ್ನ ಹೆಂಡತಿಯು ತಲೆ ಹಚ್ಚಿ ರಸ್ತೆಯ ಮೇಲೆ
ಬಿದ್ದಿದರಿಂದ ತಲೆಯ ನೆತ್ತಿಗೆ ಭಾರಿ ರಕ್ತಗಾಯವಾಗಿ, ಇಲಾಜು ಪಡೆಯುವಾಗ ಗುಣಮುಖಳಾಗದೇ ಮದ್ಯಾಹ್ನ 12-45 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ
ಹೆಂಡತಿಗೆ ಅಪಘಾತಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಚಲಾಯಿಸಿಕೊಂಡು ಹೋದ ಯಾವುದೋ
ಒಂದು ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 202/2017 ಕಲಂ:
143, 147, 341, 323, 354, 504, 506 ಸಹಿತ 149 ಐ.ಪಿ.ಸಿ:
ದಿನಾಂಕ05-09-2017 ರಂದು
ರಾತ್ರಿ ಸಮಯದಲ್ಲಿ ನಮ್ಮಮ ಊರಿನಲ್ಲಿ ವಿಪರಿತ ಮಳೆ ಬಂದಿತ್ತು ಇದರಿಂದ ನಮ್ಮ ಮನೆಯ ಪಕ್ಕದ ಮೇಲೆ
ಹೇಳಿದವರು ನನಗೆ ತೊಂದರೆ ಕೊಡುವ ಉದ್ದೆದಿಂದ ರಸ್ತೆಗುಂಟಾ ಹೋಗುವ ಮಳೆ ನೀರನ್ನು ನನ್ನ ಮನೆಯ
ಒಳಗಡೆ ಬರುವ ಹಾಗೆ ರಸ್ತೆಗೆ ಮರಮ್ ಹಾಕಿ ಒಡ್ಡಿ ಮಾಡಿದ್ದರು ಇದರಿಂದ ನನ್ನ ಮನೆಯಲ್ಲಿ ಮಳೆ ನೀರು
ಬರುತ್ತಿದ್ದರಿಂದ ರಾತ್ರಿ ಅದೇ ಊರಿನಲ್ಲಿ ವಾಸವಾಗಿರುವ ನನ್ನ ತಂದೆ ದೇಸು ತಂದೆ ಮೋಹನ್ ಈತನಿಗೆ ಫೋನ್
ಮಾಡಿದ್ದರಿಂದ ಅವರು ಬಂದಿದ್ದರಿಂದ ಇಂದು ದಿನಾಂಕ-05-09-2017 ರಂದು ಬೆಳಗಿನ ಜಾವ 2-00 ಗಂಟೆಯ
ಸಮಯದಲ್ಲಿ ನಾನು ನನ್ನ ತಂದೆ ರಸ್ತೆಗೆ ಹಾಕಿದ್ದ ಒಡ್ಡಿಯನ್ನು ಕಿತ್ತಿ ಹಾಕುತ್ತಿದ್ದಾಗ್ಗೆ ಮೇಲೆ
ಹೇಳಿದ ಎಲ್ಲಾರೂ ನನಗೆ ಹೊಡೆಯಬೇಕಂತ ಕೂಡಿಕೊಂಡು ಬಂದು ನನಗೆ ಲೇ ಸೂಳೆ ಆ ಒಡ್ಡು ನಾವು ಹಾಕಿವಿ
ನಾವು ಹಾಕಿದ ಒಡ್ಡನ್ನು ತೆಗೆದು ಹಾಕುತ್ತಿರಾ ಅಂತಾ ಅಸ್ಲಿವಾಗಿ ಬೈದಾಡುತ್ತಾ ಬಂದ್ದಿದ್ದರಿಂದ
ವಯಸ್ಸಾದ ನನ್ನ ತಂದೆ ಅವರಿಗೆ ನೋಡಿ ನನ್ನ ಜೋಪಡಿಗೆ ಓಡಿ ಹೋದನು ಆಗ ಹನುಮಂತಪ್ಪನು ಲೇ ಅಗ್ಗದ
ಸೂಳೆ ಅಂತಾ ನನ್ನ ತಲೆಯ ಕೂದಲು ಹಿಡಿದುಕೊಂಡು ಎಳೆದಾಡಿದನು ಪಾಂಡು ಈತನು ನನಗೆ ಕಾಲಿನಿಂದ
ಒದ್ದನು ಚಾಂದುಬಾಯಿ ಈಕೆಯು ಕೆಟ್ಟ ಕೆಟ್ಟ ಶಬ್ದಗಳಿಂದ ನನಗೆ ನಿಂದಿಸಿ ಕೈಯಿಂದ ನನ್ನ ಬೆನ್ನಿಗೆ
ಹೊಡೆದಳು ಊಳಿದವರು ಕೂಡಾ ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದರು ಆಗ ನಮ್ಮ ತಂದೆ ಮತ್ತು ಈ
ಘಟನೆಯನ್ನು ನೋಡುತ್ತಿದ್ದ ನನ್ನ ಮಕ್ಕಳು ಅಳುವುದು ಚೀರಾಡುವುದು ಮಾಡಿದ್ದರಿಂದ ನಮ್ಮ ಅಣ್ಣ ರಾಮು
ತಂದೆ ದೇಸು ಈತನು ಓಡಿ ಬರುತ್ತಿದ್ದಂತೆ ಅವರು ಈ ಸೂಳಿಯನ್ನು ಈಗ ಬಿಟ್ಟು ಬಿಡಿ ಜನರು ಎದ್ದು
ಬರುತ್ತಾರೆ ಯಾರು ಇಲ್ಲದ ಸಮಯದಲ್ಲಿ ಇವಳನ್ನು ಮತ್ತು ಮಕ್ಕಳನ್ನು ಮುಗಿಸಿ ಗುಡಸಲಿ ಖಾಲಿ
ಮಾಡಿಸಿಬಿಡೋಣ ಅಂತಾ ನನಗೆ ನನ್ನ ಮಕ್ಕಳಿಗೆ ಪ್ರಾಣದ ಬೆದರಿಕೆ ಹಾಕುತ್ತಾ ನನಗೆ ಬಿಟ್ಟು ತಮ್ಮ
ಮನೆಯಲ್ಲಿ ಹೋದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment