1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ: 87 Karnataka Police Act.
ದಿ:07-09-2017 ರಂದು 04-35 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಲೇಬಗೇರ ಗ್ರಾಮದ ಶ್ರೀ ಆಂಜನೆಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ಪಂಚರ ಸಮಕ್ಷಮ
ದಾಳಿ ಮಾಡಿದ್ದು 03 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 630=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 114/2017 ಕಲಂ:
32 , 34 Karnataka Excise Act.
ದಿನಾಂಕ : 07-09-2017 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ಆರೋಪಿತನು ಲಿಂಗನಬಂಡಿ ಗ್ರಾಮದಿಂದ
ಕಲಕಬಂಡಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಪೂರ್ವಭಾಗದಲ್ಲಿ ಹನಮಪ್ಪ ಹುಡೇದ ಇವರ ಹೊಲದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು
ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮಧ್ಯಸಾರದ ಟ್ರೇಟ್ರಾ ಪಾಕೀಟಗಳನ್ನು
ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ
ಮಾಡಿ ಆರೋಪಿತನಿಂದ 1] 90 ML ನ HAYWARDS
CHEERS WHISKY -ಒಟ್ಟು 70 (ಎಪ್ಪತ್ತು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ -28.13 ರೂ.
ಗಳಂತೆ ಒಟ್ಟು 1969.1 ರೂ. 2] ಒಂದು ಪ್ಲಾಸ್ಟಿಕ್ ಚೀಲ ಅ.ಕಿ.ಇಲ್ಲ 3] ಮಧ್ಯಾಸಾರ ಮಾರಾಟದಿಂದ ಬಂದ
ನಗದು ಹಣ : 150/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು 2119.1/-ರೂ ಸಿಕ್ಕಿದ್ದು ಇರುತ್ತದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ: 78(3) Karnataka Police Act.
ದಿನಾಂಕ 07-09-2017 ರಂದು ಸಂಜೆ 6-45 ಗಂಟೆಯಿಂದ 7-45 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ
ಸ್ಥಳೀಯ ಕನಕಗಿರಿ ಪಟ್ಟಣದ ಬಜಾರದಲ್ಲಿರುವ ಶೇಖರಪ್ಪ ಚಹದ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಸ್ಥಳದಲ್ಲಿ ಆರೋಪಿತರು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ನಂಬರಗಳನ್ನು ಬರೆದು ಕೊಡುತ್ತಿದ್ದಾಗ
ಶ್ರೀ ಶಶಿಕಾಂತ ರಾಠೋಡ ಸಿಹೆಚ್ಸಿ-01 ಸಿಬ್ಬಂದಿ ಹಾಗೂ ಪಂಚರ ಸಮೇತ ದಾಳಿ ಮಾಡಿ ಹಿಡಿದು ಇಬ್ಬರೂ ಆರೋಪಿತರಿಂದ
ಒಟ್ಟು ನಗದು ಹಣ ರೂ.1510/- 02 ಮಟಕಾ ಪಟ್ಟಿ, 02 ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು
ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 204/2017 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:07-09-2017 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕಿನ್ನಾಳ ಗ್ರಾಮದ ಅಂಬೇಡ್ಕರ
ಸರ್ಕಲ್ ಹತ್ತಿರ ತಮ್ಮ ಮೋಟಾರ ಸೈಕಲ್ ನಂ: ಕೆ.ಎ: 35/ಎಕ್ಸ: 1018 ನೇದ್ದರಲ್ಲಿ ಹೋಗುವಾಗ ತನ್ನ ಹಿಂದೆ
ಬರುತ್ತಿದ ಟಾಟಾ ಎ,ಸಿ ನಂ: ಕೆಎ-37/6654 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ಬಂದು
ಅಪಘಾತ ಮಾಡಿದ್ದು ಇರುತ್ತದೆ. ಇದರಿಂದ ಎಡಗಾಲಿಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಮತ್ತು ಟಾ,ಟಾ
ಎ,ಸಿ ವಾಹನಂ: ಕೆ.ಎ: 37 /6654 ನೇದ್ದರ ಸವಾರನು ಸ್ವಲ್ಪ ಮುಂದೆ ಹೋಗಿ ರಸ್ತೆಯ ಮೇಲೆ ನಡೆದುಕೊಕಂಡು
ಹೋಗುತ್ತಿದ್ದ ಶರಣಪ್ಪ ಮಲ್ಲಪ್ಪ ಹಳ್ಳಿ ಇವರಿಗೆ ಕೂಡ ಟಕ್ಕರ ಕೊಟ್ಟಿದ್ದರಿಂದ ಬಲಕಪಾಳಕ್ಕೆ, ಬಲಗಣ್ಣಿನ
ಹುಬ್ಬಿನ ಮೇಲೆ ತರಚಿದ ಗಾಯ ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ. ಅಪಘಾತಪಡಿಸಿದ ಸವಾರನು ಸ್ಥಳದಿಂದ
ಓಡಿ ಹೋಗಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು,
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ
0 comments:
Post a Comment