Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, September 9, 2017

1] ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ. 129/2017 ಕಲಂ: 87 Karnataka Police Act.
ದಿನಾಂಕ 08-09-2017 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಪಿ.ಎಸ್.ಐ ಶ್ರೀ ವೀರಭದ್ರಪ್ಪ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಕನಕಗಿರಿ ಪಟ್ಟಣದಲ್ಲಿ ನೀರಲೂಟಿ ರಸ್ತೆೆಯಲ್ಲಿರುವ ಹನುಮೇಶಪ್ಪ ಭತ್ತದ ಇವರ ಕಾಂಪ್ಲೆಕ್ಸ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ  ನಡೆದಿರುವುದಾಗಿ ಭಾತ್ಮಿ ಬಂದ ಮೇರೆಗೆ ರಾತ್ರಿ 7-30 ಗಂಟೆಯಿಂದ 8:30 ಗಂಟೆಯ ಅವಧಿಯಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಪೊಲೀಸ್ರು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ ಆಡುತ್ತಿದ್ದ 08 ಜನರು ಸಿಕ್ಕಿದ್ದು, ಸಿಕ್ಕ ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ. 10,180=00 ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  
2] ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ. 123/2017 ಕಲಂ: 457, 380 ಐ.ಪಿ.ಸಿ:

ದಿನಾಂಕ: 07-09-2017 ರಂದು ಮುಂಜಾನೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರನ ಮನೆಯ ಹಿಂದಿನ ಬಾಗಿಲದ ಚೀಲಕದ ಕೊಂಡಿ ಮೀಟಿ ಮನೆಯಲ್ಲಿಯ ಅಲಮಾರದಲ್ಲಿಟ್ಟಿದ್ದ ಸುಮಾರು 5,65,300/-ರೂ. ಬೆಲೆ ಬಾಳುವ ಬಂಗಾದ & ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣ 4,000/-ರೂ. ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಹಾಗೂ ಕಳ್ಳತನವಾದ ಬಂಗಾರ, ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

1 comments:

News said...

nyc information.....thanks a lot ....keep posting ..this information is really helpful for me ..please post for SSC MTS Result

 
Will Smith Visitors
Since 01/02/2008