1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ
ನಂ. 283/2017
ಕಲಂ. 392 ಐ.ಪಿ.ಸಿ:
ದಿನಾಂಕ:
10-10-2017 ರಂದು ಸಂಜೆ
6-00 ಗಂಟೆಯ ಸುಮಾರಿಗೆ ಫೀರ್ಯಾದಿದಾರರಾದ ಲತಾ ಗಂಡ ಮಹಾಂತೇಶ ಮಂಗಳೂರು, ವಯಾ
38 ವರ್ಷ ಮತ್ತು ನಮ್ಮ ತಂಗಿಯಾದ ನೇತ್ರಾವತಿ ಗಂಡ ದಿ: ಮಹೇಶ ಕೂಡಿಕೊಂಡು ಮನೆಯಿಂದ ಬಟ್ಟೆ ಖರೀದಿಮಾಡಿಕೊಂಡು ಬರಲು ಮಾರ್ಕೆಟಿಗೆ ಹೋಗಿ ಬಟ್ಟೆಯನ್ನು
ಖರೀದಿಮಾಡಿಕೊಂಡು ರಾತ್ರಿ ಸುಮಾರು
7-30 ಗಂಟೆಗೆ ಮನೆಗೆ ಬರುವ ಕುರಿತು ಬಸ್ ಡೀಪೋದ ಹಿಂದಿನ ರಸ್ತೆಯಲ್ಲಿ ಇರುವ
ಮುದುಕಪ್ಪ ಜಿಗಜೀನಿ ಇವರ ಮನೆಯ ಮುಂದೆ ಬರುತ್ತಿರಲು ನಮ್ಮ ಹಿಂದಿನಿಂದ ಒಂದು ಬೈಕ್ ಸವಾರನು ತನ್ನ
ಗಾಡಿಯನ್ನು ನಮ್ಮ ಹತ್ತಿರ ಬಂದಾಗ ನಿಧಾನಗೊಳಿಸಿದ್ದು ಆಗ ನಾವು ರಸ್ತೆಯ ಪಕ್ಕದಲ್ಲಿ ಸರಿದರೂ ಸಹ
ಸದರಿಯವನು ನನ್ನ ಪಕ್ಕದಲ್ಲಿರುವ ನಮ್ಮ ತಂಗಿಯಾದ ನೇತ್ರಾವತಿ ಹತ್ತಿರ ಬಂದು ಏಕಾ ಏಕಿ ಅವರ ಕೊರಳಲ್ಲಿನ
ಒಂದುವರೇ
[ 1 ½ ] ತೊಲೆಯ ಬಂಗಾರದ ಸರಕ್ಕೆ ಕೈ ಹಾಕಿ ಜೋರಾಗಿ ಜಗ್ಗಿ ಕಿತ್ತುಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.
2] ಗಂಗಾವತಿ ಗ್ರಾಮೀಣ
ಪೊಲೀಸ್ ಠಾಣೆ ಗುನ್ನೆ ನಂ. 308/2017 ಕಲಂ. 32, 34 Karnataka Excise Act.
ದಿನಾಂಕ:-
10-10-2017 ರಂದು ಸಾಯಂಕಾಲ ಖಚಿತವಾದ ಭಾತ್ಮೀ ಶ್ರೀ ದೀಪಕ ಬೂಸರೆಡ್ಡಿ ಸಿ.ಪಿ.ಐ
ಗಂಗಾವತಿ ಗ್ರಾಮೀಣ ವೃತ್ತ ರವರಿಗೆ ಬಂದ ಮೇರೆಗೆ ದಾಳಿ ಮಾಡುವ ಕುರಿತು
ಸಾಯಂಕಾಲ
05:30 ಗಂಟೆಗೆ ಹೊರಟು ಸಣಾಪುರ ಗ್ರಾಮದ ಹೊರಗೆ ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಮಾಹಿತಿ ಇದ್ದ ಪ್ರಕಾರ ಬಸ್ ಸ್ಟ್ಯಾಂಡ ಹತ್ತಿರ ಹೋಗಿ
ಮರೆಯಲ್ಲಿ ನಿಂತು ನೋಡಲಾಗಿ ಬಸ್ ಸ್ಟ್ಯಾಂಡ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ
ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ
ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿ ಮಾಡಲಾಗಿ
ಸಾರ್ವಜನಿಕರು ಓಡಿ ಹೋಗಿದ್ದು,
ಮಧ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದಿದ್ದು, ವಿಚಾರಿಸಲು ಅವನು
ತನ್ನ ಹೆಸರು ವಿನೋದ
ತಂದೆ ದಿ. ಅಶೋಕ ವಯಸ್ಸು 32 ವರ್ಷ, ಜಾತಿ: ಕ್ರಿಶ್ಚಿಯನ್ ಉ. ಕುಕ್ಕಿಂಗ್ ಕೆಲಸ ಸಾ. ಮಾರೆಮ್ಮ ಗುಡಿ
ಹತ್ತಿರ ಕಂಪ್ಲಿ ಹಾ.ವ. ಸಣಾಪುರ ತಾ. ಗಂಗಾವತಿ ಅಂತಾ ತಿಳಿಸಿದನು
ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ / ಲೈಸೆನ್ಸ್ ಇದೆಯೇ
? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ
ಇರುವುದಿಲ್ಲಾ.
ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಅವನ
ಹತ್ತಿರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ
ಮಧ್ಯದ ಟೆಟ್ರಾ ಪಾಕೇಟಗಳನ್ನು ಪರಿಶೀಲಿಸಲಾಗಿ ಅದರಲ್ಲಿ [1] 09 - 180 ml. ನ
8PM Whisky (ಪ್ರತಿಯೊಂದರ ಬೆಲೆ ರೂ. 68.56) ಅಂ.ಕಿ. ರೂ. 617=04 [2] 08 – 180 ml ನ
Original Choise Whisky. (ಪ್ರತಿಯೊಂದರ ಬೆಲೆ ರೂ. 56.27) ಅಂ.ಕಿ. ರೂ.
450=16 [3] 02 25 – 180 ml ನ Old Tavern Whisky (ಪ್ರತಿಯೊಂದರ ಬೆಲೆ ರೂ.
68.56) ಅಂ.ಕಿ. ರೂ. 132=12 [4] 08 – 90 ml ನ Original Choise Whisky. (ಪ್ರತಿಯೊಂದರ ಬೆಲೆ ರೂ.
28.13) ಅಂ.ಕಿ. ರೂ. 225=04 ಹೀಗೆ ಒಟ್ಟು ರೂ. 1429=36 ಕಿಮ್ಮತ್ತಿನ 4140 ml ವಿಸ್ಕಿ ಪಾಕೇಟು
ಸದರಿಯವನ ವಶದಿಂದ ದೊರೆತಿರುತ್ತದೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ. 78(3) Karnataka Police Act
ದಿನಾಂಕ:
10-10-2017 ರಂದು ಮಧ್ಯಾಹ್ನ 3-05 ಗಂಟೆಯ ಸುಮಾರಿಗೆ ಆರೋಪಿತನು ಹಿರೇಸಿಂಧೋಗಿ ಗ್ರಾಮದಲ್ಲಿ ಬರುವ
ಬಸ್ ನಿಲ್ದಾಣದ ಹತ್ತಿರ ಒಂದು ಹೋಟಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ,
ಪಿ.ಎಸ್.ಐ. ರವರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ
ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 380=00 ರೂ.ಗಳನ್ನು ಜಪ್ತ
ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment