1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 159/2017
ಕಲಂ. 392 ಐ.ಪಿ.ಸಿ:
ದಿನಾಂಕ: 11-10-2017 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಾದ ಕಾವ್ಯ ಗಂಡ ಪ್ರಸನ್
ಗಡಾದ ಸಾ: ಎಸ್.ಡಿ ಬಡಾವಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ,
ಇಂದು ರಾತ್ರಿ 7-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಮಕ್ಕಳು ಕೂಡಿಕೊಂಡು ಸೂಪರ್ ಬಜಾರ ಮಾರ್ಕೇಟ್
ನಿಂದ ತಮ್ಮ ಮನೆಯ ಕಡೆ ಎಸ್.ಡಿ ಬಡಾವಣೆಯ ಪ್ರಮೋದ ಕಲ್ಯಾಣ ಮಂಟಪದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ
ಯಾರೊ ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಫೀರ್ಯಾದಿದಾರರ ಕೋರಳಲ್ಲಿದ್ದ ಬಂಗಾರದ ಎರಡು ಎಳೆ
ಮಾಂಗಲ್ಯ ಸರ ಅಂ.ತೂ 55 ಗ್ರಾಂ ನೇದ್ದನ್ನು ಬಲವಂತವಾಗಿ ಕಿತ್ತುಕೊಂಡು ಹಿಂದಿನಿಂದ ಓಡಿ ಹೋಗಿದ್ದು
ಇರುತ್ತದೆ. ಆ ಅಪರಿಚಿತ ವ್ಯಕ್ತಿಯು ಸ್ವಲ್ಪ ದಪ್ಪಗೆ ಇದ್ದನು, ಅವನ ವಯಸ್ಸು ಅಂದಾಜು 23-24 ಇರಬಹುದು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment