Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 9, 2017

1]  ಯಲಬರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 132/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ : 08-10-2017 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ಮಂಡಲಮರಿ ಸೀಮಾದಲ್ಲಿರುವ ವಿಶ್ವಾಸ ಎಂಟರ್ ಪ್ರೈಸಸ್ ರವರ ಕ್ಯಾಂಪನಲ್ಲಿ ಟಿಪ್ಪರ ನಂ:ಕೆ.-25/ಎಎ-6139 ನೇದ್ದರ ವಾಹನದ ಗಾಲಿಗಳ ಹವಾವನ್ನು ಚೆಕ್ ಮಾಡುತ್ತಿದ್ದ ಮೃತ ಜಕ್ಕಪ್ಪನು ಚೆಕ್ ಮಾಡುತ್ತಿ ದ್ದಾಗ ಸದರಿ ಟಿಪ್ಪರ ಚಾಲಕನಾದ ಆರೋಪಿ ಬಸನಗೌಡ ಯಾಳಗಿ ಈತನು ಬಂದು ಟಿಪ್ಪರದ ಹಿಂದೆ-ಮುಂದೆ ಹಾಗೂ ಕೆಳಗೆ ನೋಡದೇ ಸದರಿ ಟಿಪ್ಪರನ್ನು  ಚಾಲು ಮಾಡಿ ಒಮ್ಮೇಲೆ ಹಿಂದಕ್ಕೆ ತೆಗೆದೊಕೊಂಡಿದ್ದರಿಂದ ಕೆಳಗಡೆ ಹವಾ ಚೆಕ್ ಮಾಡುತಿದ್ದ ಜಕ್ಕಪ್ಪನ ಮೇಲೆ ಟಿಪ್ಪರಿನ ಮುಂದಿನ ಬಲಗಡೆ ಭಾಗದ ಗಾಲಿಯು ನಡುವಿನ ಮೇಲೆ, ಮತ್ತು ಕಾಲಿನ ಮೇಲೆ ಹಾಯ್ದು ಹೋಗಿದ್ದರಿಂದ ಜಕ್ಕಪ್ಪನ ಬಲಗಾಲ ಮೊಣಕಾಲ ಕೆಳಗೆ ಭಾರಿ ಸ್ವರೂಪದ ರಕ್ತಗಾಯವಾಗಿ ಕಾಲು ಮುರಿದು ಮೂಳೆ ಹೊರ ಬಂದಿರುತ್ತದೆ ಅಲ್ಲದೇ ಮತ್ತು ನಡುವಿನ ಹತ್ತಿರ ಭಾರಿ ಸ್ವರೂಪದ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಯಲಬರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 133/2017 ಕಲಂ. 87 Karnataka Police Act.
ದಿನಾಂಕ: 08-10-2017 ರಂದು ಸಂಜೆ 6-00 ಗಂಟೆಯ ಸುಮಾರು ಗೆದಗೇರಿ ಗ್ರಾಮದ ಬಸವರಾಜ ಬಂಡಿಹಾಳ ಇವರ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 8 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಇಬ್ಬರು ಓಡಿ ಹೋಗಿದ್ದು ಇರುತ್ತದೆ.  ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 5,450=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು ಅಂ.ಕಿ. ಇಲ್ಲ ಮತ್ತು ಒಂದು ಹಳೆಯ ಪ್ಲಾಸ್ಟೀಕ ಬರ್ಕಾ ಅಂ.ಕಿ. ಇಲ್ಲ ಇವುಗಳು ಸಿಕ್ಕಿದ್ದು ಇರುತ್ತದೆ.  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3]  ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 280/2017 ಕಲಂ.  273, 284 ಐ.ಪಿ.ಸಿ. ಮತ್ತು 32, 34 Karnataka Excise Act
ದಿನಾಂಕ: 08-10-2017 ರಂದು ಸಂಜೆ 6-00 ಗಂಟೆಗೆ ಮಾನ್ಯ ಪಿಎಸ್ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಒಂದು ವರದಿ ಮತ್ತು ಎರಡು ದಾಳಿ ಪಂಚನಾಮೆಯನ್ನು ಹಾಗೂ 3 ಜನ ಆರೋಪಿತನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಇಂದು ಮೆಣಸಗೇರಿ ತಾಂಡದಲ್ಲಿ ಕಳ್ಳಭಟ್ಟಿ ಸರಾಯಿಯನ್ನು ದೇಶಪ್ಪ ಚೌಹಾಣ್ ಇವರ ಮನೆಯ ಸಂದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಬಂದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ 11-00 ಎ.ಎಂ. ಕ್ಕೆ ದಾಳಿ ಮಾಡಿ  ಅರೋಪಿ ನಂಬರು 1 ಮತ್ತು 2 ಇವರನ್ನು ದಸ್ತಗಿರಿ ಮಾಡಿದ್ದು ಸದರಿ ಆರೋಪಿತರಿಂದ 1 ಲೀಟರ ಕಳ್ಳಭಟ್ಟಿ ಸರಾಯಿಯನ್ನು ಮತ್ತು ನಗದು ಹಣ 450-00 ರೂಪಾಯಿಗಳನ್ನು ಹಾಗೂ 12 ಸಣ್ಣ ಖಾಲಿ ಪ್ಲಾಸ್ಟೀಕಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಸಂಚಾರಿ ಠಾಣೆ  ಪೊಲೀಸ್  ಕೊಪ್ಪಳ  ಗುನ್ನೆ ನಂ. 44/2017 ಕಲಂ. 279, 337, 338, 304(ಎ) ಐ.ಪಿ.ಸಿ:.

ದಿನಾಂಕ. 08-10-2017 ರಂದು  ಸಂಜೆ ಫಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂಬರ. KA-37/X-0267 ನೆದ್ದರ ಹಿಂದೆ ತನಗೆ ಪರಿಚಯದ ಶ್ರೀಮತಿ ಸುನಿತಾ ಗಂಡ ಕೊಟೇಶ ಮಡಿವಾಳ ಮತ್ತು ಆಕೆಯ ದು ವರ್ಷದ ಮಗ ಮೈಲಾರಿ ಇವರನ್ನು ಕರೆದುಕೊಂಡು ಕೊಪ್ಪಳದಲ್ಲಿ ಇರುವ ಅಲೆ ದೇವರು ನೊಡಲು ತಮ್ಮ ಊರಿನಿಂದ ಹೊರಟು ಕೊಪ್ಪಳಕ್ಕೆ ಬಂದು. ಸಂಜೆ ಸುಮಾರು 6-00 ಗಂಟೆಯ ಸುಮಾರಿಗೆ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಕುಟೀರ ಹೊಟಲ್ ಸಮೀಪ ತನ್ನ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಅಲ್ಲಿರುವ ರಸ್ತೆ ಅಡೆತಡೆಯನ್ನು ದಾಟಲು ತನ್ನ ಮೋಟಾರ್ ಸೈಕಲ್ ವಾಹನವನ್ನು ನಿಧಾನವಾಗಿ ಚಲಿಸುತ್ತಿರುವಾಗ ಹಿಂದಿನಿಂದ ಟ್ರಾಕ್ಟರ ನಂಬರ. KA-37/M-9086 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ಟ್ರಾಕ್ಟರ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಅಡೆತಡೆ ಇರುವುದನ್ನು ಗಮನಿಸದೇ ಒಮ್ಮೇಲೆ ವಾಹನನ್ನು ಅದರ ಮೇಲೆ ಹತ್ತಿಸಿ ಜಂಪ್ ಮಾಡಿಸಿ ಫಿರ್ಯಾದಿಯ ಮೋಟಾರ್ ಸೈಕಲ್ ಹಿಂದಿನ ಭಾಗಕ್ಕೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಮೋಟಾರ್ ಸೈಕಲ್ ಹಿಂದೆ ಕುಳಿತ ಸುನಿತಾ ಮತ್ತು ಆಕೆಯ ಮಗು ಕೆಳಗೆ ಬಿದ್ದಿದ್ದು ನಂತರ ಟ್ರಾಕ್ಟರದ ಮುಂದಿನ ಎಡಗಾಲಿಯು ಸುನಿತಾ ಇವರ ಬಲಕಾಲಿನ ಮೇಲೆ ಹಾಯ್ದು ರಕ್ತಗಾಯ ಮತ್ತು ಮಗನಿಗೆ ತೆರಚಿದಗಾಯವಾಗಿರುತ್ತದೆ. ಟ್ರಾಕ್ಟರ ಚಾಲಕನ ಪಕ್ಕದಲ್ಲಿ ಕುಳಿತುಕೊಂಡಿದ್ದ ಮೌಲಾಹುಸೇನ ತಂದೆ ಬುಡಾನಸಾಬ ಕಟಗಿ ಸಾ. ಕೊಪ್ಪಳ ಇತನು ಟ್ರಾಕ್ಟರದಿಂದ ಕೆಳಗೆ ಬಿದ್ದಿದ್ದು ನಂತರ ಟ್ರಾಕ್ಟರ ಗಾಲಿಯು ಆತನ ಎದೆಯ ಮೇಲೆ ಹಾಯ್ದು ಆತನಿಗೆ ಬಾರಿ ಒಳಪೆಟ್ಟು ಆಗಿ ಚಿಕಿತ್ಸೆ ಕುರಿತು ಕೊಪ್ಪಳದ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

0 comments:

 
Will Smith Visitors
Since 01/02/2008