Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 3, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 227/2017 ಕಲಂ. 78(3) Karnataka Police Act.
ದಿನಾಂಕ:-02-10-2017 ರಂದು ಮದ್ಯಾಹ್ನ 12-00 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ಮತ್ತು 2 ನೇದ್ದವರು ಕಾರಟಗಿಯ ಶ್ರೀ ವೆಂಕಟೇಶ್ವರ್ ರೈಸ್ ಮಿಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ 1 ಮತ್ತು 2 ರವರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ 1130=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದ್ರಿ ಸಿಕ್ಕ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 3 ಸೋಮಶೇಖರ್ ಸಾ:ಸಿರಗುಪ್ಪಾ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ  
2]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 228/2017 ಕಲಂ. 78(3) Karnataka Police Act.
ದಿನಾಂಕ:-02-10-2017 ರಂದು ಸಂಜೆ 6-50 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ನೇದ್ದವನು ಸಿದ್ದಾಪೂರ ಗ್ರಾಮದ ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು   ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ  ಕಡೆಯಿಂದ 2640=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದ್ರಿ ಸಿಕ್ಕ ಆರೋಪಿತನು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಚಂದ್ರಯ್ಯ ತಂದೆ ಪಂಪಯ್ಯ ಸಾ. ಸಿದ್ದಾಪೂರ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 215/2017 ಕಲಂ. 457, 380 ಐ.ಪಿ.ಸಿ:
ದಿ:02-10-2017 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಅಮಿತ್. ಜಾನಾ. ಸಾ: ಗಿಣಿಗೇರಿ ತಾ:ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:01-10-2017 ರಂದು ರಾತ್ರಿ 9-30 ಗಂಟೆಯಿಂದ ದಿ:02-10-2017 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗಿಣಿಗೇರಿ ಗ್ರಾಮದಲ್ಲಿರುವ ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯ ಬಾಜು ಇರುವ ಫಿರ್ಯಾದಿದಾರರ ಮಾರುತಿ ಮೆಡಿಕಲ್ಸ ಬೀಗವನ್ನು ಮುರಿದು ಶೆಟರ್ಸ ತೆಗೆದು ಒಳಗಡೆ ಪ್ರವೇಶ ಮಾಡಿ ಸದರಿ ಅಂಗಡಿಯ ಕ್ಯಾಷ್ ಟೇಬಲ್ ಡ್ರಾದಲ್ಲಿದ್ದ ಸಣ‍್ಣ ಟ್ರಂಕ್ ದಲ್ಲಿನ ನಗದು ಹಣ 5,34,000=00 ರೂ.  ಗಳನ್ನು ಟ್ರಂಕ್ ಸಮೇತ ಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 216/2017 ಕಲಂ. 143, 147, 341, 323, 504, 506, 447, 355  ಸಹಿತ 149 ಐ.ಪಿ.ಸಿ ಹಾಗೂ 3(1)(10) ಮತ್ತು 3(2)(5) 3, 2, 5[ಎ] ಎಸ್.ಸಿ/ಎಸ್.ಟಿ. ಕಾಯ್ದೆ:
ದಿ:02-10-2017 ರಂದು ಸಂಜೆ 6-45 ಗಂಟೆಗೆ ಫಿರ್ಯಾದಿದಾರರಾದ ಹನುಮಂತಪ್ಪ ವಾಲ್ಮಿಕಿ. ಸಾ:ಕುಟುಗನಹಳ‍್ಳಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ಬರುವ ಶ್ರೀ ವಾಲ್ಮಿಕಿ ಮಹರ್ಷಿ ಯವರ ಜಯಂತಿಯ ಪ್ರಯುಕ್ತ ಇಂದು ದಿ:02-10-2017 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಕುಟುಗನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಆಸ್ತಿ ನಂ:36 ರಲ್ಲಿಯ ಖುಲ್ಲಾಜಾಗೆಯಲ್ಲಿ ಫಿರ್ಯಾದಿತರು ಶ್ರೀ ಮಹರ್ಷಿ ವಾಲ್ಮಿಕಿ ಯವರ ಭಾವಚಿತ್ರದ ಪ್ಲೆಕ್ಸ ಅಳವಡಿಸುವಾಗ, ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಏಕೋದ್ದೇಶದಿಂದಾ ಅತೀಕ್ರಮ ಪ್ರವೇಶ ಮಾಡಿ ಫಿರ್ಯಾದಿತರಿಗೆ ಈ ಜಾಗೆಯಲ್ಲಿ ಫೋಟೋವನ್ನು ಹಾಕಬೇಡಿರಿ ಸೂಳೇಮಕ್ಕಳೆ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಫೋಟೋವನ್ನು ಹರಿದು ಹಾಕಿ, ಚಪ್ಪಲಿಯಿಂದ ಫೋಟೋಕ್ಕೆ ಹೊಡೆದು ಅವಮಾನ ಮಾಡಿ ಅವರ ಸಮಾಜದ ಭಾವನೆಗಳಿಗೆ ಧಕ್ಕೆ ತಂದು ಘಾಸಿಯನ್ನುಂಟು ಮಾಡಿದ್ದಲ್ಲದೇ ಫಿರ್ಯಾದಿತರಿಗೆ ಕೈಗಳಿಂದ ಹಲ್ಲೆ ಮಾಡಿ, ಹೊಡೆದು ಸಾಯಿಸುವುದಾಗಿ ಪ್ರಾಣದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
5] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 295/2017 ಕಲಂ. 32, 34 Karnataka Excise Act.

ದಿನಾಂಕ:- 02-10-2017 ರಂದು ಸಂಜೆ ಠಾಣೆ ವ್ಯಾಪ್ತಿಯ ದಾಸನಾಳ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ  ಸಿಬ್ಬಂದಿಯವರಾದ ಶರಣಪ್ಪ ಪಿ.ಸಿ. 180, ಮರಿಶಾಂತಗೌಡ ಪಿ.ಸಿ. 363, ಅಮರೇಶ ಹೆಚ್.ಸಿ. 80, ಎ.ಪಿ.ಸಿ. 15 ನೀಲಪ್ಪ ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು  ದಾಸನಾಳ ಬ್ರಿಡ್ಜ್ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿ ಎಲ್ಲರೂ ಮಾಹಿತಿ ಇದ್ದ ಪ್ರಕಾರ ಕಾಲ್ನಡಿಗೆಯಲ್ಲಿ ದಾಸನಾಳ ಬ್ರಿಡ್ಜ ಹತ್ತಿರ ಇರುವ ವೆಂಕಟಗಿರಿಗೆ ಹೋಗುವ ಕ್ರಾಸ್ ನಲ್ಲಿ ರಸ್ತೆಯ ಬಲಗಡೆ ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದಿದ್ದು,  ವಿಚಾರಿಸಲು ಅವನು ತನ್ನ ಹೆಸರು ಶರಣಪ್ಪ ತಂದೆ ಬೆಟದಪ್ಪ ಊರಮುಂದಲ, ವಯಸ್ಸು 32 ವರ್ಷ, ಜಾತಿ: ಈಡಿಗರು ಉ: ಕೂಲಿ ಕೆಲಸ ಸಾ: ದುರಗಮ್ಮನ ಗುಡಿಯ ಹತ್ತಿರ, ದಾಸನಾಳ ತಾ: ಗಂಗಾವತಿ. ಜಿ-. ಕೊಪ್ಪಳ ಅಂತಾ ತಿಳಿಸಿದನು ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ / ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ ಅದರಲ್ಲಿ  1]  Original Choise 90 ml. 47 ಟೆಟ್ರಾ ಪಾಕೀಟ್ ಗಳು ಒಟ್ಟು 4230 ml  (ಪ್ರತಿಯೊಂದರ ಬೆಲೆ ರೂ. 28.13) ಅಂ.ಕಿ. ರೂ. 1,322.11 ಇರುತ್ತದೆಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 150-00 ಗಳು ಸಿಕ್ಕವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008