Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 4, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 229/2017 ಕಲಂ. 279, 337, 304(ಎ) ಐ.ಪಿ.ಸಿ
ದಿನಾಂಕ:- 03-10-2017 ರಂದು ಮುಂಜಾನೆ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸೈಯದ್ ಅಬ್ದುಲ್ ರಹಿಮಾ ತಂದೆ ಸೈಯದ್ ಮಹ್ಮದ ವಯಾ 45 ವರ್ಷ ಜಾತಿ ಮುಸ್ಲಿಂ ಉ; ಒಕ್ಕಲುತನ ಸಾ: ಮಹಿಬೂಬ ಕಾಲೋನಿ ಸಿಂದನೂರ ತಾ. ಸಿಂಧನೂರ ರವರು  ಠಾಣೆಗೆ  ಹಾಜರಾಗಿ ತಮ್ಮದೊಂದು ಗಣಕೀಕೃತ ದೂರನ್ನು ಕೊಟ್ಟಿದ್ದು ಅದರ ಸಾರಾಂಶವೆನಂದರೆ, ನನ್ನ ಅಣ್ಣನ ಮಗನಾದ ಸೈಯದ್ ಶಫೀ ಹಾಗೂ ನನ್ನ ಅಳಿಯನಾದ ಸೈಯದ್ ರಿಯಾಜ್ ಇವರು ನಿನ್ನೆ ದಿನಾಂಕ 02-10-2017 ರಂದು ಕಾರಟಗಿ ಕಡೆ ಅಗರಭತ್ತಿ ವ್ಯಾಪಾರಕ್ಕೆ ಹೋಗಿದ್ದರು. ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ಕಾರಟಗಿ ಪಟ್ಟಣದ ನಮ್ಮ ಪರಿಚಯದವರಾದ ಶ್ರೀ ಎಂ. ಯುಸುಪ್ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಗನಾದ ಸೈಯದ್ ಶಫೀ ಈತನು ತನ್ನ ಟಿ,ವಿ.ಎಸ್. ಎಕ್ಸ್ ಎಲ್ ಮೋ.ಸೈ, ಚಸ್ಸಿ ನಂ,MD621BD13E1P83992 ಇಂಜಿನ್ ನಂ.ODIPE1028656 ನೇದ್ದರಲ್ಲಿ ತನ್ನ ಹಿಂದೆ ಸೈಯದ್ ರಿಯಾಜ್ ಇವರನ್ನು ಕೂಡಿಸಿಕೊಂಡು ಸಿಂದನೂರ-ಕಾರಟಗಿ ರಸ್ತೆಯ ಮೇಲೆ ದುಡುಕುತನದಿಂದ ಹಾಗೂ ಅಲಕ್ಷತನದಿಂದ ಕಾರಟಗಿ ಕಡೆ ನಡೆಸಿಕೊಂಡು ಬಂದು ಕಾರಟಗಿ ಎ.ಪಿ.ಎಂ.ಸಿ. ಹತ್ತಿರ ರಸ್ತೆಗೆ ಹಂದಿಯು ಬಂದಿದ್ದರಿಂದ ತನ್ನ ಮೊ.ಸೈ.ನ್ನು ನಿಯಂತ್ರಣ ಮಾಡಲಾಗದೇ ಸ್ಕೀಡ್ ಆಗಿ ನೆಲಕ್ಕೆ ಬಿದ್ದಿದ್ದರಿಂದ ಶಫೀಗೆ ತಲೆಗೆ ಬಾರಿ ಪೆಟ್ಟಾಗಿ ರಕ್ತ ಬರುತ್ತಿದ್ದು, ಮಾತಾನಾಡುವ ಸ್ಥಿತಿಯಲ್ಲಿ ಇರುವುದಿಲ್ಲ, ಅವನ ಹಿಂದೆ ಕುಳಿತ್ತಿದ್ದ ಸೈಯದ ರಿಯಾಜ್ ಈತನ ಹಣೆಗೆ, ಕಪಾಳಕ್ಕೆ ತೆರಚಿದ ಗಾಯವಾಗಿದ್ದು ಇಬ್ಬರಿಗೂ ಚಿಕಿತ್ಸೆ ಕುರಿತು ಕಾರಟಗಿಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದುಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಳಿಯ ಸೈಯದ್ ಸಾಧಿಕ ರವರೊಂದಿಗೆ ಕಾರಟಗಿ ಸರಕಾರಿ ಆಸ್ಪತ್ರೆ ಬಂದಿದ್ದು ನಂತರ ಗಾಯಗೊಂಡ ಇಬ್ಬರನ್ನೂ ಕಾರಟಗಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದಿವಸ 03-10-2017 ರಂದು ಮದ್ಯರಾತ್ರಿ 1-00 ಗಂಟೆಯ ಸುಮಾರಿಗೆ ಸೈಯದ್ ಶಫಿ ಈತನು ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾನೆ.
2]  ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 273/2017 ಕಲಂ. 87 Karnataka Police Act.
ದಿನಾಂಕ : 03-10-2017 ರಂದು 6-30 ಪಿ.ಎಂ. ಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಪ್ರಕರಣವನ್ನು ದಾಖಲು ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೇಳಿದ್ದು ಸದರಿ ಪರವಾನಿಗೆಯು 6-45 ಗಂಟೆಗೆ ಸ್ವೀಕೃತವಾಗಿದ್ದು ಸಾರಾಂಶವೆನಂದರೆ ತೋಪಲಕಟ್ಟಿ ಗ್ರಾಮದ ಕನಕದಾಸ ದೇವಸ್ಥಾನದ ಬಯಲು ಜಾಗೆಯ ಸಾರ್ವ ಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ  3 ಜನ ಆರೋಪಿತರು ಸಿಕ್ಕಿದ್ದು 4 ಜನ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3750-00 ರೂಪಾಯಿ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು 3 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 151/2017 ಕಲಂ.  379 ಐ.ಪಿ.ಸಿ:

ದಿನಾಂಕ: 03-10-2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾಧಿದಾರರಾದ ದಾದಾಫೀರ ತಂದೆ ಚಂದುಸಾಬ ಕುಷ್ಟಗಿ : 50 ಸಾ: ನಿರ್ಮಿತಿ ಕೇಂದ್ರ ಕೊಪ್ಪಳ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 23-09-2017 ರಂದು ಬೆಳಿಗ್ಗೆ 11-00 ಗಂಟೆಗೆ ಗಂಟೆಯ ಸುಮಾರಿಗೆ ತಮ್ಮ ಹೆಸರಿನಲ್ಲಿರುವ ಸೂಪರ್ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ KA-37 R-4672 ನೇದ್ದನ್ನು ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ಎದುರುಗಡೆ ನಿಲ್ಲಿಸಿ ತಾವು ಒಳಗಡೆ ಹೋಗಿ ತಮ್ಮ ಮಗನನ್ನು ರೈಲ್ವೆಗೇ ಹತ್ತಿಸಿ ವಾಪಾಸ್ ಬೆಳಿಗ್ಗೆ 11-45 ಗಂಟೆಗೆ ಹೊರಗಡೆ ಬಂದು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ ಯಾರೋ ಕಳ್ಳರು ಕಳ್ಲತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನನ್ನ ಮೋಟಾರ ಸೈಕಲ್ ನ್ನು ಕಳ್ಳತನ ಮಾಡಿದ ಕಳ್ಳರನ್ನ ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮೋಟಾರ ಸೈಕಲ್ ನ್ನು ಮರಳಿಸಬೇಕಾಗಿ ವಿನಂತಿ ಹಾಗು ನಾನು ಇಲ್ಲಿಯವರೆಗೂ ಹುಡುಕಿದರೂ ಸಿಗದೇ ಇದ್ದುದ್ದರಿಂದ ಇಂದು ತಡವಾಗಿ ಬಂದು ದೂರನನ್ನ ಸಲ್ಲಿಸಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಠಾಣಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008