Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 7, 2017

1]  ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 256/2017 ಕಲಂ.  353 ಐ.ಪಿ.ಸಿ:
ದಿನಾಂಕ: 06-10-2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ. ಜಯಪ್ರಕಾಶ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದು ಅದರ ಸಾರಾಂಶವೇನಂದರೆ, ಕಾಸನಕಂಡಿ -ಹಿರೇಬಗನಾಳ ಗ್ರಾಮದ ರಸ್ತೆ ರಿಪೇರಿ ಕಾಮಗಾರಿ ಸಮಯದಲ್ಲಿ ಆರೋಪಿತನು ತಕರಾರು ಮಾಡುತ್ತಾನೆ, ಆ ಸಮಯದಲ್ಲಿ ಪಿರ್ಯಾದಿದಾರರು ಹಾಜರಿದ್ದು ಆತನಿಗೆ ತಿಳಿ ಹೇಳಲು ವಿನಂತಿ ಎಂದು ಪಿ.ಡಿ.. ಹಿರೇಬಗನಾಳ ಇವರು ನೀಡಿದ ಅರ್ಜಿಯ ಮೇರೆಗೆ ಪಿರ್ಯಾದಿದಾರರು ಇಂದು ದಿನಾಂಕ: 06-10-2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಕಾಸನಕಂಡಿ-ಹಿರೇಬಗನಾಳ ರಸ್ತೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಹೋಗಿದ್ದ ಸಮಯದಲ್ಲಿ ಆರೋಪಿ ಆನಂದಪ್ಪನು ಏಕಾಏಕಿ ಬಂದವನೇ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದಾಡಿ ಕರ್ತವ್ಯ ನಿರ್ವಹಿಸದಂತೆ ಅಡತಡೆ ಮಾಡಿ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೇನೆ.
2]  ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ   ಗುನ್ನೆ ನಂ. 302/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ :  06-10-2017 ರಂದು ನವೀನಕುಮಾರ ತಂದಿ ಸುಬ್ಬಾರಾವ್ ಶೇಷಯ್ಯ ವಯಾ- 30 ವರ್ಷ ಈತನು  ತನ್ನ ವೈಯಕ್ತಿಕ ಕೆಲಸದ ಸಲುವಾಗಿ ತನ್ನ ಯಮಹ ಮೋಟಾರ್ ಸೈಕಲ್ ನಂ : ಕೆ.ಎ- 35 / ಯು- 3860 ನೇದ್ದರಲ್ಲಿ ಗಂಗಾವತಿಯಲ್ಲಿ ಕೆಲಸವಿದೆ ಅಂತಾ ನಮ್ಮೂರಿನಿಂದ ಗಂಗಾವತಿಗೆ ಬೆಳಗ್ಗೆ ಬಂದಿದ್ದನು. ಮದ್ಯಾಹ್ನ- 3-30 ಗಂಟೆಯ ಸುಮಾರಿಗೆ ಬಕಾರ್ ತಂದಿ  ಗುಲಾಮ ಸಮದಾನಿ  ಸಾ-ವಡ್ಡರಹಟ್ಟಿಕ್ಯಾಂಪ್ ಇವರು  ನವೀನಕುಮಾರ ಈತನ ಮೊಬೈಲನಿಂದ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ,  ನವೀನಕುಮಾರ ಈತನು  ಗಂಗಾವತಿಯಲ್ಲಿ ಕೆಲಸ ಮುಗಿಸಿಕೊಂಡು ಕಂಪ್ಲಿಗೆ ಹೋಗಲೆಂದು ಗಂಗಾವತಿ-ಕಂಪ್ಲಿ ರಸ್ತೆಯಲ್ಲಿ ದೇವಿನಗರ ಹತ್ತಿರ ತನ್ನ ಮೊಟಾರ್ ಸೈಕಲ್ ಮೇಲೆ  ರಸ್ತೆಯ ಎಡಬದಿಗೆ ಮಧ್ಯಾಹ್ನ 3-15 ಗಂಟೆಯ ಸುಮಾರಿಗೆ  ಹೊರಟಿದ್ದಾಗ್ಗೆ ಕಂಪ್ಲಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ- 37 / ಎಫ್- 0427 ರ ಚಾಲಕ ಮಲ್ಲಪ್ಪ ದಳವಾಯಿ-ಗಂಗಾವತಿ ಡಿಪೋ ಈತನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನವೀನಕುಮಾರನ ಮೋಟಾರ ಸೈಕಲಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ  ನವೀನಕುಮಾರನಿಗೆ ತಲೆಗೆ ಮುಖಕ್ಕೆ, ಕೈಕಾಲುಗಳಿಗೆ  ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 278/2017 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 06-10-2017 ರಂದು ಪ್ರತಿದಿನದಂತೆ ಪ್ರಶಾಂತ ಇತನು ಯಲಬುರ್ತಿಯಿಂದ ಕೊರಡಕೇರಾಕ್ಕೆ ಶಾಲೆಗೆ ಸೈಕಲ್ ನ್ನು ತೆಗೆದುಕೊಂಡು ಶಾಲೆಗೆ ಬೆಳಿಗ್ಗೆ ಹೋಗಿ ವಾಪಾಸ್ ಸಾಯಂಕಾಲ 4-30 ಗಂಟೆಗೆ ಶಾಲೆ ಬಿಟ್ಟ ನಂತರ ಸೈಕಲ್ ನ್ನು ತೆಗೆದುಕೊಂಡು ತಮ್ಮೂರಾದ ಯಲಬುರ್ತಿಗೆ ಹೋಗುತ್ತಿರುವಾಗ ಸಾಯಂಕಾಲ 4-45 ಗಂಟೆಯ ಸುಮಾರಿಗೆ ಯಲಬುರ್ತಿ ಕೊರಡಕೇರಾ ರಸ್ತೆಯ ಮಹಾಂತಮ್ಮ ಬಳೂಟಗಿ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಮೊ.ಸೈ ನಂ: ಕೆ.-37/ಇಎ-9416 ನೇದ್ದರ ಸವಾರನಾದ ಲಕ್ಷ್ಮಪ್ಪ ತಂದೆ ಹೊನ್ನಪ್ಪ @ ಗೌಡಪ್ಪ ಪೂಜಾರಿ ಸಾ: ಯಲಬುರ್ತಿ ಇತನು ಮೊ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರ ಮಾಡಿ ಮೊ.ಸೈ ನ್ನು ಬಿಟ್ಟು ಓಡಿ ಹೋಗಿದ್ದು ಇದ್ದರಿಂದ ಸದರಿ ಪ್ರಶಾಂತನ ತಲೆಯ ಹಿಂದುಗಡೆ ಎಡಗಡೆಗೆ ಭಾರಿ ರಕ್ತ ಗಾಯವಾಗಿ ಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 303/2017 ಕಲಂ. 87 Karnataka Police Act.

ದಿನಾಂಕ: 06-10-2017 ರಂದು ಸಂಜೆ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಸೀಮಾದ ತಾಯಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ, ಹೆಚ್.ಸಿ. 44, ಪಿ.ಸಿ 363, 180, 60, ಎ.ಪಿ.ಸಿ. 15 ರವರು ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ತಾಯಮ್ಮನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ  (1) ಬಸವರಾಜ ಕೋರಿ ತಂದೆ ರುದ್ರಪ್ಪ, ವಯಸ್ಸು 35 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಆರಾಳ ಹಾಗೂ ಇತರೆ 4 ಜನರು ಸಿಕ್ಕಿ ಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,590/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಖಾಲಿ ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008