Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 8, 2017

1]  ಬೇವೂರ ಪೊಲೀಸ್  ಠಾಣೆ  ಗುನ್ನೆ ನಂ. 128/2017 ಕಲಂ.  87 Karnataka Police Act.
ತರಲಕಟ್ಟಿ ಗ್ರಾಮದ ದುರ್ಗಾ ದೇವಸ್ಥಾನದ ಮುಂದೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 05 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸದರಿ ದಾಳಿಯ ಕಾಲಕ್ಕೆ 2 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸದರಿ ಸಿಕ್ಕಿಬಿದ್ದ ಆರೋಪಿತರಿಂದ 8120=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
2]  ಬೇವೂರ ಪೊಲೀಸ್  ಠಾಣೆ  ಗುನ್ನೆ ನಂ. 129/2017 ಕಲಂ.  87 Karnataka Police Act.
ಹಿರೇವಂಕಲಕುಂಟಾ-ಚಿಕ್ಕವಂಕಲಕುಂಟಾ ರಸ್ತೆಯ ಅಮರೇಶ ಇವರ ಸಿಮೇಂಟ್ ಇಟ್ಟಂಗಿ ಭಟ್ಟಿ ಹತ್ತಿರ ರಸ್ತೆಯ ಪಕ್ಕಕ್ಕೆ ಇರುವ ವಿಧ್ಯುತ್ ಕಂಬದ ಬೆಳಕಿನ ಕೆಳಗೆ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 06 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸದರಿ ಸಿಕ್ಕಿಬಿದ್ದ ಆರೋಪಿತರಿಂದ 1400=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
3] ಕೊಪ್ಪಳ  ಗ್ರಾಮೀಣ  ಪೊಲೀಸ್  ಠಾಣೆ   ಗುನ್ನೆ ನಂ. 223/2017 ಕಲಂ. 32, 34 Karnataka Excise Act.
ದಿ:07-10-2017 ರಂದು ಸಂಜೆ 6-00 ಗಂಟೆಗೆ ಠಾಣಾ ವ್ಯಾಪ್ತಿಯ ಹಾಲವರ್ತಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಶ್ರೀ. ಗುರುರಾಜ ಪಿ.ಎಸ್.ಐ. ರವರಿಗೆ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಸಂಜೆ 6-30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90 ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ 1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 234/2017 ಕಲಂ. 379 ಐ.ಪಿ.ಸಿ :.

ದಿನಾಂಕ: 07-10-2017 ರಂದು ಮುಂಜಾನೆ 8-30 ಗಂಟೆಗೆ ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಅದರ ಸಾರಾಂಶದಲ್ಲಿ ದಿನಾಂಕ 05-10-2017 ರಂದು ಮುಂಜಾನೆ 9-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಕಾರಟಗಿಯ ಪಟ್ಟಣದ ನಾಡ ಕಚೇರಿಯ ಹತ್ತಿರ ನನ್ನ ಮಗನ ಮನೆಯ ಮುಂದೆ ಇಟ್ಟ ಮ್ಮ ಹಿರೋ ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ.ಕೆಎ-36/ಎಕ್ಸ್-8529 ಅದರ ಚಾಸ್ಸಿ ನಂ MBLHA10EWBGF16560 ಮತ್ತು ಇಂಜಿನ್ ನಂ. HA10EDBGF38242 .ಕಿ.ರೂ.20,000/-ನೇದ್ದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಗ್ಗೆ ನಾವು ಸುತ್ತ-ಮುತ್ತಲಿನ ಊರುಗಳಿಗೆ ಹೋಗಿ ಹುಡುಕಾಡಿದರೂ ಕಳುವಾದ ಮೋ.ಸೈ. ಸಿಗದೆ ಇದ್ದುದ್ದರಿಂದ ದಿವಸ ತಡವಾಗಿ ಠಾಣೆಗೆ ಬಂದು ದೂರ ನೀಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008