1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 251/2017 ಕಲಂ. 78(3) Karnataka Police Act.
ದಿ:09-11-2017 ರಂದು ಸಂಜೆ 5.30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ
ವ್ಯಾಪ್ತಿಯ, ಕಿನ್ನಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ ಶ್ರೀಶೈಲಪ್ಪ ತೂನಾ, ಈತನು ರಸ್ತೆಯಲ್ಲಿ ಹೋಗು ಬರುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00
ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಜನರಿಂದ ಹಣ ಪಡೆದು ಮಟ್ಕಾ ನಂಬರ್ ಚೀಟಿ ಬರೆದು ಕೊಡುತ್ತಿದ್ದಾಗ ಶ್ರೀ
ಗುರುರಾಜ ಕಟ್ಟಿಮನಿ, ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 490=00 ರೂ,
ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಮಟ್ಕಾ ನಂಬರ ಬರೆದ ಚೀಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ಹೇಳಿರುತ್ತಾನೆ, ಪ್ರಕರಣವನ್ನು ದಾಖಲಿಸಿಕೊಂಡು
ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 264/2017 ಕಲಂ. 78(3)
Karnataka Police Act.
ದಿನಾಂಕ 09-11-2017
ರಂದು ರಾತ್ರಿ 8-15 ಗಂಟೆಗೆ ಆರೋಪಿ ಮಹಾಂತೇಶ ತಂದೆ ರಾಮಣ್ಣ ಹಳ್ಳಳ್ಳಿ
ವಯಸ್ಸು 39 ವರ್ಷ ಜಾ: ಮಾದಿಗ ಸಾ: ಅಂಬೇಡ್ಕರ ನಗರ ಗಂಗಾವತಿ. ಇವನು ಅಂಬೇಡ್ಕರ
ನಗರದ ಪರಿವಾರ ಬೇಕರಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ
ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಶ್ರೀ. ಉದಯ ರವಿ ಪಿ.ಐ. ರವರು ಸಿಬ್ಬಂದಿಯವರೊಂದಿಗೆ
ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 430-00. (2) ಮಟಕಾ ನಂಬರ ಬರೆದ 02 ಮಟ್ಕಾ ಪಟ್ಟಿ
ಅಂ. ಕಿ. 00 (3) 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ
ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 288/2017 ಕಲಂ. 78(3) Karnataka Police Act.
ದಿನಾಂಕ: 09-11-2017 ರಂದು 5-45 ಪಿ.ಎಂ. ಸುಮಾರಿಗೆ ಹೊಸನಿಂಗಾಪೂರ ಗ್ರಾಮದ ಪಾಂಡುರಂಗ
ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ
ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು
ಹಿಡಿದುಕೊಂಡು ಅವರಿಂದ 5340-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು
ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 289/2017 ಕಲಂ. 78(3) Karnataka Police Act.
ದಿನಾಂಕ: 09-11-2017 ರಂದು 7-10 ಪಿ.ಎಂ. ಸುಮಾರಿಗೆ ಮುನಿರಾಬಾದನ ಹನಮಂತ ದೇವರ
ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ
ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು
ಹಿಡಿದುಕೊಂಡು ಅವರಿಂದ 680-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಪೆನ್ ಹಾಗೂ ಒಂದು ಮಟಕಾ
ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು
ಇರುತ್ತದೆ.
5] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂ. 78(3) Karnataka Police Act.
ದಿನಾಂಕ: 09-11-2017 ರಂದು
ರಾತ್ರಿ 8-20 ಗಂಟೆಗೆ ಪಿ.ಎಸ್.ಐ ರವರು ಹಾಜರಾಗಿ ಫಿರ್ಯಾದಿ ನೀಡಿದ್ದರ ಸಾರಾಂಶ ಏನೆಂದರೆ, ಸಾಯಾಂಕಾಲ
18-10 ಗಂಟೆಗೆ ಹನಮಸಾಗರ ಹಳೇ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲಿಂಗನಲ್ಲಿದ್ದಾಗ
ಗೊರೆಬಿಹಾಳ ಕ್ರಾಸದಲ್ಲಿ ಚಹದ ಅಂಗಡಿ ಹತ್ತಿರ ಮಟ್ಕಾ ಜೂಜಾಟ ನಡೆದಿದೆ ಅಂತಾ
ಖಚಿತ ಬಾತ್ಮಿ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು
ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ
ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲ್ಲಪ್ಪ ತಂದೆ ನಿಂಗಪ್ಪ ಮುಶಿಗೇರಿ, ವಯಾ: 49 ವರ್ಷ,
ಜಾತಿ: ಕುರುಬರ, ಉ: ಹೊಟೆಲ್ ವ್ಯಾಪಾರ, ಸಾ: ಗೊರೆಬಾಳ ಅಂತಾ ತಿಳಿಸಿದ್ದು ಅವನ
ಹತ್ತಿರ ಮಟಕಾ ಚೀಟಿ, 470=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ
ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಮಲ್ಲಪ್ಪನಿಗೆ ಈ ಮಟಕಾ ಚೀಟಿಯನ್ನು
ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 171/2017 ಕಲಂ. 78(3)
Karnataka Police Act.
ದಿ: 09-11-2017 ರಂದು ರಾತ್ರಿ 07-30 ಗಂಟೆಗೆ ಠಾಣಾ ವ್ಯಾಪ್ತಿಯ ಭಾಗ್ಯನಗರ ಅಂಬೇಡ್ಕರ್
ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾಗರಾಜ ಗುರುರನಾಥಸಾ ಮೇಘರಾಜ ಸಾ: ಭಾಗ್ಯನಗರ
ಈತನು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಗೆ ಕರೆದು ಇದು ನಶೀಬದ ಆಟ ನಂಬರ ಹತ್ತಿದಲ್ಲಿ
1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ, ಯಾರ ಅದೃಷ್ಟ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ
ತೊಡಗಿದ್ದಾಗ ಫಿರ್ಯಾದಿದಾರರಾದ ರಾಮಪ್ಪ ಎ.ಎಸ್.ಐ. ರವರು ಸಿಬ್ಬಂದಿಗಳ ಸಂಗಡ ಮಾಡಿ ಆರೋಪಿತನಿಗೆ ವಶಕ್ಕೆ
ಪಡೆದುಕೊಂಡು ಸದರಿ ಆರೋಪಿತನಿಂದ ನಗದು ಹಣ ರೂ 480=00 ರೂ, ಮಟಕಾ ನಂಬರ ಬರೆದ ಒಂದು ಚೀಟಿ, ಒಂದು
ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ
ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
7] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ. 340/2017 ಕಲಂ. 78(3)
Karnataka Police Act.
ದಿನಾಂಕ:- 09-11-2017 ರಂದು ಮಧ್ಯಾಹ್ನ
ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬರುವ ಶರಣ ಬಸವೇಶ್ವರ
ಕ್ಯಾಂಪಿನ ಅಕ್ಬರ್ ಸಾಬನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ
ಮಾಹಿತಿ ಬಂದ ಮೇರೆಗೆ ಶ್ರೀ ಕಾಶೀನಾಥ, ಎ.ಎಸ್.ಐ ಹಾಜರಿದ್ದ ಸಿಬ್ಬಂದಿಯವರಾದ ಹೆಚ್.ಸಿ. 68, ಪಿ.ಸಿ.
129, 60, 160, 180 ಇವರನ್ನು ಮತ್ತು ಇಬ್ಬರು ಪಂಚರು ಕೂಡಿಕೊಂಡು ಶರಣಬಸವೇಶ್ವರ ಕ್ಯಾಂಪಿಗೆ ಹೋಗಿ
ಮರೆಯಲ್ಲಿ ನಿಂತು ನೋಡಲಾಗಿ ಅಕ್ಬರ ಸಾಬ ಎಂಬುವವರ ಮನೆಯ ಹತ್ತಿರ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ
ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅದೃಷ್ಟದ
ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆದು ಜನರಿಂದ ಹಣ ಪಡೆದುಕೊಂಡು
ಮಟಕಾ ಅಂಕಿ ಸಂಖ್ಯೆಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ,
ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ
ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು.
ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಕುಂಟೆಪ್ಪ ತಂದೆ ದುರಗಪ್ಪ ತರಲಕಟ್ಟಿ, ವಯಸ್ಸು 67 ವರ್ಷ,
ಜಾತಿ: ನಾಯಕ ಸಾ: ಶರಣಬಸವೇಶ್ವರ ಕ್ಯಾಂಪ್ ತಾ. ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ
ಜೂಜಾಟದ ನಗದು ಹಣ 3,430-00 ರೂಪಾಯಿ, ಒಂದು ಮಟಕಾ ಪಟ್ಟಿ, ಹಾಗೂ ಒಂದು ಬಾಲ್ಪೆನ್ನು ದೊರೆತಿದ್ದು,
ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅವನು ತನ್ನ ಮಟಕಾ ಪಟ್ಟಿಯನ್ನು ಬುಕ್ಕಿಯಾದ
ಯಮನಪ್ಪ ವಯಸ್ಸು 40 ವರ್ಷ, ಸಾ: ಗಂಗಾವತಿ ಈತನಿಗೆ ಕೊಡುವುದಾಗಿ ಒಪ್ಪಿಕೊಂಡನು ಪ್ರಕರಣ ದಾಖಲು ಮಾಡಿ
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment