1] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 258/2017 ಕಲಂ. 78(3)
Karnataka Police Act.
ದಿನಾಂಕ:-08-11-2017 ರಂದು
ಮದ್ಯಾಹ್ನ 1-40 ಗಂಟೆಗೆ
ನಮೂದು ಮಾಡಿದ ಆರೋಪಿ ನೇದ್ದವನು ಕಾರಟಗಿ ಪಟ್ಟಣದ ಸುರಕ್ಷಾ ಆಸ್ಪತ್ರೆಯ ಮುಂದೆ
ಸಾರ್ವಜನಿಕ ಸ್ಥಳದಲ್ಲಿ, ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ .ಶಿವಕುಮಾರ ಪಿ.ಎಸ್.ಐ. ರವರು
ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದವನ ಕಡೆಯಿಂದ 2340=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ಸದ್ರಿ ಸಿಕ್ಕ ಆರೋಪಿತನು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಮಲ್ಲಯ್ಯ
ಶೀಲವಂತರ ಕಾರಟಗಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ
ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 259/2017 ಕಲಂ. 78(3)
Karnataka Police Act.
ದಿನಾಂಕ:-08-11-2017 ರಂದು
ಸಾಯಂಕಾಲ 6-45 ಗಂಟೆಗೆ
ನಮೂದು ಮಾಡಿದ ಆರೋಪಿ ನಂ.1 ನೇದ್ದವನು ಕಾರಟಗಿ ಪಟ್ಟಣದ ಎ.ಪಿಎಮ್.ಸಿ ಹತ್ತಿರ ಒಂದು ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಮಟ್ಕಾ
ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಮೋನಯ್ಯ ಎ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ
ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದವನ ಕಡೆಯಿಂದ 690=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ಸದ್ರಿ ಸಿಕ್ಕ ಆರೋಪಿತನು ತನಗೆ ಆರೋಪಿ ನಂ 2 ಈತನು ಕೂಲಿ ಕೆಲಸಕ್ಕೆ ಮಟ್ಕಾ ನಂಬರ್ ಬರೆದುಕೊಳ್ಳಲು
ಇಟ್ಟುಕೊಂಡಿರುತ್ತಾನೆ ಮತ್ತು ಮಟ್ಕಾ ಪಟ್ಟಿ ಮತ್ತು ಹಣವನ್ನು ಮಟ್ಕಾ ಬುಕ್ಕಿಯಾದ ಆರೋಪಿ ನಂ 3 ಈತನಿಗೆ
ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ. 78(3) Karnataka Police Act.
ದಿನಾಂಕ: 07-11-2017 ರಂದು
ಸಾಯಂಕಾಲ 5:30 ಗಂಟೆ ಸುಮಾರಿಗೆ ಕುದರಿಮೋತಿ ಗ್ರಾಮದ ಮೇನ್ ಬಜಾರದಲ್ಲಿ ಮಾರುತೇಶ್ವರ ದೇವಸ್ಥಾನದ
ಮುಂದೆ ಹೋಗುವ ರಸ್ತೆಯ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದ ರಸ್ತೆಯ ಮೇಲೆ ಆರೋಪಿತನು ಜನರಿಂದ
ಹಣ ಪಡೆದುಕೊಂಡು ಓಸಿ ಚೀಟಿಗಳನ್ನು ಬರೆದು ಕೊಡುತ್ತಾ ಇದು ನಸೀಬದ ಜೂಜಾಟ ಓ/ಸಿ ಹಚ್ಚಿರಿ ಒಂದು ರೂಪಾಯಿಗೆ
80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆಯುತ್ತಾ ಓಸಿ ಜೂಜಾಟದಲ್ಲಿ ತೊಡಗಿದ್ದಾಗ ಸದರಿ ಭಾತ್ಮಿ ಮೇರೆಗೆ
ಪಿಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಆರೋಪಿತನು ಸಿಕ್ಕಿ ಬಿದ್ದಿದ್ದು
ಓಸಿ ಜೂಜಾಟದ ನಗದು ಹಣ 1400=00 ರೂ ಒಂದು ಬಾಲ ಪೆನ್ ಒಂದು ಓಸಿ ಪಟ್ಟಿ ಜಪ್ತ ಮಾಡಿಕೊಂಡಿದ್ದು, ಸದರಿ
ಸಿಕ್ಕಿ ಬಿದ್ದ ಆರೋಪಿತನಿಗೆ ಸದರಿ ಓ.ಸಿ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಅವನು
ತಾನು ಬರೆದುಕೊಂಡಿದ್ದ ಓ.ಸಿ ಪಟ್ಟಿಯನ್ನು ಶೇಖಪ್ಪ ಬೂದಗುಂಪಿ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ
ನಂ. 261/2017 ಕಲಂ. 78(3)
Karnataka Police Act.
ದಿನಾಂಕ 08-11-2017
ರಂದು ಸಾಯಂಕಾಲ 4-45 ಗಂಟೆಗೆ ಆರೋಪಿ ನಿಂಗಪ್ಪ ತಂದೆ ಗುರಪ್ಪ ಮೂಲಿಮನಿ ವಯ
: 65 ವರ್ಷ ಜಾ : ಲಿಂಗಾಯತ, ಉ: ಚಹದ ಅಂಗಡಿ ವ್ಯಾಪರ ಸಾ : ಇಸ್ಲಾಂಪುರ ಗಂಗಾವತಿ ಇವನು ಬನ್ನಿಗಿಡದ
ಕ್ಯಾಂಪಿನ ಎಂ. ಆರ್.ಎಫ್ ಟೈರ್ ಅಂಗಡಿ ಹತ್ತಿರ ಗಂಗಾವತಿ ಸಾರ್ವಜನಿಕ
ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು
ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ
ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ
ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (1) ನಗದು ಹಣ ರೂ. 190-00. (2) ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ.
ಕಿ. 00 (3) 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ. 78(3) Karnataka Police Act.
ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಇಂದು 19-00 ಗಂಟೆಗೆ ಬಂಡರಗಲ್ ಕ್ರಾದಿಂದ ಕಾಟಾಪೂರಕ್ಕೆ ಹಳ್ಳಿ ಬೇಟಿ ಕುರಿತು ಹೋಗುವಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಬಂಡರಗಲ ಗ್ರಾಮದಲ್ಲಿ
ದುರಗಮ್ಮ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ ಮಾಡಲಾಗಿ ಮಟಕಾ
ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ
ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮರಿಲಿಂಗಪ್ಪ ತಂದೆ ಶಿವರಾಯಪ್ಪ ಮೇಟಿ ವಯಾ: 44 ವರ್ಷ ಜಾ: ಉಪ್ಪಾರ ಉ: ಕಿರಾಣಿ
ವ್ಯಾಪಾರ ಸಾ: ಬಂಡರಗಲ ತಾ: ಕುಷ್ಟಗಿ
ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1900=00 ರೂಪಾಯಿ
ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಬಸವರಾಜನಿಗೆ ಈ ಮಟಕಾ
ಚೀಟಿಯನ್ನು ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ
ನಂ. 170/2017 ಕಲಂ. 79, 80
Karnataka Police Act.
ದಿನಾಂಕ: 09-11-2017 ರಂದು ರಾತ್ರಿ 01-15 ಗಂಟೆಯ ಸುಮಾರಿಗೆ ಫಿರ್ಯಾಧಿದಾರರಾದ
ಶ್ರೀ ರವಿ. ಸಿ. ಉಕ್ಕುಂದ್ ಪಿ.ಐ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:
08-11-2017 ರಂದು ರಾತ್ರಿ 11-45 ಗಂಟೆಗೆ ಕೊಪ್ಪಳ ನಗರದ ಸಿಂಪಿ ಲಿಂಗಣ್ಣ ರಸ್ತೆಯ ಮುದಗಲ್ ಬಿಲ್ಡಿಂಗ್
ದಲ್ಲಿ ಆರೋಪಿತರು ಕೂಡಿಕೊಂಡು ವಿದ್ಯುತ್ ಬೆಳಕಿನಲ್ಲಿ ಪಣಕ್ಕೆ ನಗದು ಹಣ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಮಾನ್ಯ ಡಿ.ಎಸ್.ಪಿ.
ಕೊಪ್ಪಳ ರವರ ನೇತ್ರತ್ವದಲ್ಲಿ ಸಿಬ್ಬಂದಿಗಳ ಸಂಗಡ ದಾಳಿ ಮಾಡಿ 1,43,000/- ರೂಪಾಯಿ ಜೂಜಾಟದ ನಗದು ಹಣ ಮುದ್ದೇಮಾಲುಗಳನ್ನು ಜಫ್ತು ಮಾಡಿಕೊಂಡು 09 ಜನ ಜೂಜುಕೋರರನ್ನು ವಶಕ್ಕೆ ತಗೆದುಕೊಂಡು ಬಂದಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment