1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ. 279, 338 ಐ.ಪಿ.ಸಿ:
ದಿನಾಂಕ: 18-11-2017 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ಗುದ್ನೆಪ್ಪನಮಠ-ಕುಕನೂರು
ರಸ್ತೆಯ ಮೇಲೆ ಕುಕನೂರಿನ ನವೋದಯ ಶಾಲೆ ಮುಂದುಗಡೆ ಆರೋಪಿತನು ತಾನು ನಡೆಸುತ್ತಿದ್ದ
ಪ್ಯಾಸೆಂಜರ್ ಅಟೊ ವಾಹನ ನಂ: KA-26 A 1011 ನೇದ್ದನ್ನು ಗುದ್ನೆಪ್ಪನಮಠದ ಕಡೆಯಿಂದ ಕುಕನೂರು ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು
ರಸ್ತೆಯ ಎಡಬದಿಗೆ ಹೊರಟಿದ್ದ ಫಿರ್ಯಾದಿದಾರನ ಮೋಟಾರ್ ಸೈಕಲ್ ನಂ : KA 35 U 8528 ನೇದ್ದಕ್ಕೆ
ಎದುರುಗಡೆಯಿಂದ ಬಲವಾಗಿ ಟಕ್ಕರ ಕೊಟ್ಟು ಅಪಘಾತ ಮಾಡಿ ಅಟೋ ವಾಹನವನ್ನು ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ
ಸದರಿ ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರನಾದ ಫಿರ್ಯಾದಿದಾರನಿಗೆ ಹಾಗೂ ಇವನ ಹಿಂದೆ ಕುಳಿತಿದ್ದ ಶರಣಬಸಯ್ಯನಿಗೆ
ಹಾಗೂ ಅಟೋ ವಾಹನದಲ್ಲಿದ್ದ ಪ್ರಯಾಣಿಸುತ್ತಿದ್ದ ರತ್ನಮ್ಮ ಎಂಬುವರಿಗೆ ಭಾರಿ ಸ್ವರೂಪದ ಗಾಯಗಾಳಾಗಿರುತ್ತವೆ,
ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 270/2017 ಕಲಂ. 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ:-19-10-2017 ತಮ್ಮ ಮಾವನವರಾದ ವಿರುನಗೌಡ ತಂದೆ ಶರಣೇಗೌಡ ಇವರು ತಮ್ಮ ಮೋಟಾರ್ ಸೈಕಲ್
ನಂ ಕೆ.ಎ-37ಇಡಿ-4654 ನೆದ್ದರ ಮೇಲೆ ತಮ್ಮ ಗೆಳೆಯ ಹನುಮೇಶ ರವರನ್ನು ಲಕ್ಷ್ಮೀ ಪೂಜೆಗೆಂದು ಮನೆಗೆ
ಬಂದಾಗ ಅವರು ಮತ್ತು ನಾನು ಕಾರಟಗಿಯಲ್ಲಿ ಕಟ್ಟಿಸುತ್ತಿರುವ ನಮ್ಮ ಮನೆಯನ್ನು ನೋಡಿಕೊಂಡು ಬರಲೆಂದು
ಕಾರಟಗಿಗೆ ಬಂದು ಮನೆಯಲ್ಲಿ ನೋಡಿಕೊಂಡು ಅವರ ಮೋಟಾರ್ ಸೈಕಲ್ ಮೇಲೆ ವಿರುನಗೌಡ ಮತ್ತು ಹನುಮೇಶ ರವರು
ಮತ್ತು ನನ್ನ ಮೋಟಾರ್ ಸೈಕಲ್ ಮೇಲೆ ನಾನು ಕೂಡಿ ವಾಪಾಸ ಊರ ಕಡೆಗೆ ಹೋಗುತ್ತಿರುವಾಗ್ಗೆ ಬೂದಗುಂಪಾ
ರಸ್ತೆಯ ಮುಖಾಂತರ ನನ್ನ ಮುಂದೆ ಯರಡೋಣದಲ್ಲಿ ಸಿದ್ದಾಪೂರ ಕ್ರಾಸ್ ಹತ್ತಿರ ಬೆಳಿಗ್ಗೆ
10-30 ಗಂಟೆಗೆ ತಮ್ಮ ಮೊಟಾರ್ ಸೈಕಲ್ ಚಲಾಯಿಸಿಕೊಂಡು ಹೊರಟ್ಟಿದ್ದ ನಮ್ಮ ಮಾವ ವೀರನಗೌಡ ಇವರ ಮೋಟಾರ್
ಸೈಕಲ್ ಗೆ ಎದರುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲನ್ನು ವೇಗವಾಗಿ ನಿರ್ಲಕ್ಷತನದಿಂದ
ಚಲಾಯಿಸಿಕೊಂಡು ಬಂದು ವೀರನಗೌಡನ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಮೋಟಾರ್ ಸೈಕಲ್ ನಿಲ್ಲಿಸಿದೇ ಹಾಗೆ
ಹೋಗಿದ್ದು ಆತನ ಮೋಟಾರ್ ಸೈಕಲ್ ನೋಡಿದ್ದು ಅದರ ನಂಬರ್ ಕೆ.ಎ-37ಇಡಿ-3898 ಅಂತಾ ಇತ್ತು ನಂತರ ಅಪಘಾತವಾಗಿ
ರಸ್ತೆಗೆ ಬಿದ್ದಿದ್ದ ವಿರುನಗೌಡನಿಗೆ ತಲೆಯ ಹಿಂಭಾಗದಲ್ಲಿ ಗಂಭೀರ ರಕ್ತಗಾಯ ಮತ್ತು ಬಲಗಾಲ ಪಾದಕ್ಕೆ
ಹರಿತವಾದ ಗಾಯವಾಗಿ ಮಾತನಾಡದಂತ ಸ್ಥಿತಿಯಲ್ಲಿದ್ದು ಹಿಂದೆ ಕುಳಿತುಕೊಂಡಿದ್ದ ಹನುಮೇಶನಿಗೆ ಚಿಕಿತ್ಸೆ
ಮಾಡಿಸುವಂತಹ ಗಾಯಗಳು ಆಗಿರಲಿಲ್ಲಾ ಈ ಅಪಘಾತವನ್ನು ಯರಡೋಣ ಗ್ರಾಮದ ಅಂಬರೇಶ ತಾಯಿ ಅನ್ನಮ್ಮ, ಚನ್ನಬಸವ
ತಂದೆ ಬಸಪ್ಪ ಕೊಲ್ಕಾರ ಇವರುಗಳು ನೊಡಿರುತ್ತಾರೆ. ವಿರುನಗೌಡನಿಗೆ ನಾನು ಹನುಮೇಶ ಕೂಡಿ ಚಿಕಿತ್ಸೆ
ಕೊಡಿಸಲು ಕಾರಟಗಿ ಆಸ್ಪತ್ರೆಗೆ ಬಂದು ವಿರುನಗೌಡ ಚಿಂತಾಜನಕ ಸ್ಥಿತಿಯಲ್ಲಿದ್ದುದರಿಂದ ಕಾರಟಗಿ ಆಸ್ಪತ್ರೆಯಲ್ಲಿ
ತಡಮಾಡದೇ ವಿರುನಗೌಡ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ ಹೋಗಿ ತತ್ವ ದರ್ಶ ಆಸ್ಪತ್ರೆಯಲ್ಲಿ
ದಾಖಲು ಮಾಡಿ ನಾನು ಹನುಮೇಶ ಮತ್ತು ವಿರುನಗೌಡನ ಹೆಂಡತಿ ಶ್ರೀಮತಿ ಅನ್ನಮ್ಮ ನಾವು ಆತನೊಂದಿಗೆ ಆಸ್ಪತ್ರೆಯಲ್ಲಿದ್ದು
ವಿರುನಗೌಡನಿಗೆ ಚಿಕಿತ್ಸೆ ಕೊಡಿಸಿರುತ್ತೇವೆ ಅಂತಾ ಮುಂತಾಗಿ ನಮೂದು ಮಾಡಿ ನೀಡಿದ ದೂರಿನ ಸಾರಾಂಶದ
ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment