Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 20, 2017

1] ಕುಕನೂರ  ಪೊಲೀಸ್  ಠಾಣೆ  ಗುನ್ನೆ ನಂ. 167/2017 ಕಲಂ. 143, 147, 148, 323, 324, 354, 504, 506 ಸಹಿತ 149  ಐ.ಪಿ.ಸಿ:

ದಿನಾಂಕ: 19-11-2017 ರಂದು ಮುಂಜಾನೆ 10 ಗಂಟೆಗೆ ಆರೋಪಿ ನಂ. 02 ರಿಂದ 05 ನೇದವರು ತಮ್ಮ ಮನೆಯ ಹತ್ತಿರ ಶೌಚಾಲಯ ಕಟ್ಟುತ್ತಿರುವಾಗ ಪಿರ್ಯಾದಿದಾರಳು ಅವರಿಗೆ ತಮಗೂ ಮತ್ತು ತನ್ನ ಮಾವ ವಿರುಪಾಕ್ಷಪ್ಪ ಇವರ ನಡುವೆ ಇರುವ ಮನೆಯ ಸಮಸ್ಯೆಯನ್ನು ಬಗೆಹರಿಸಿ ಪಾಯಿಖಾನೆ(ಶಾಚಾಲಯ) ಕಟ್ಟಿಕೊಳ್ಳಿ ಅಂತಾ ಅಂದಿದ್ದು ಇರುತ್ತದೆ. ಆಗ ಆರೋಪಿತರೆಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರಳ ಮೈ ಕೈ ಮುಟ್ಟಿ ಎಳೆದಾಡಿ ಕೈಯಿಂದ ಬಡಿದಿರುತ್ತಾರೆ. ನಂತರ ಪಿರ್ಯಾದಿದಾರಳು ತನ್ನ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ನಂತರ ಮುಂಜಾನೆ 11 ಗಂಟೆ ಸುಮಾರಿಗೆ ಪಿರ್ಯಾದಿದಾರಳ ಮಗ ಮುತ್ತಣ್ಣ @ ಕೆರಿಯಪ್ಪ ಇತನು ಆರೋಪಿತರಿಗೆ ವಿಚಾರಿಸಲು ಹೋದಾಗ ಆರೋಪಿ ನಂ. 07 ನೇದವನು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಆತನ ಬೆನ್ನಿಗೆ ಹಿಂದಿನಿಂದ ಒದ್ದಿದ್ದು, ಆರೋಪಿ ನಂ. 03 ನೇದವನು ಆತನೊಂಧಿಗೆ ತೆಕ್ಕಿಮುಕ್ಕಿ ಬಿದ್ದಿದ್ದು, ಆರೋಪಿ ನಂ. 01 ನೇದವನು ತನ್ನ ಕೈಯಲ್ಲಿದ್ದ ಉರುಗೋಲಿನಿಂದ ಆತನ ಬೆನ್ನಿಗೆ ಬಡಿದಿದ್ದು, ಆರೋಪಿತರೆಲ್ಲರೂ ಪಿರ್ಯಾದಿದಾರರಿಗೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.

0 comments:

 
Will Smith Visitors
Since 01/02/2008