Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, December 9, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ: 264/2017. ಕಲಂ: 498[ಎ],504,323,307,506  ಐಪಿಸಿ.
ದಿ:08-12-2017 ರಂದು ರಾತ್ರಿ 08-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿ ಶ್ರೀಮತಿ ಹಮೀದಾ ಗಂಡ ಅನ್ವರಪಾಷಾ ಆಡೂರ ವಯ: 36 ಜಾ: ಮುಸ್ಲಿಂ ಸಾ: ಹಾಲವರ್ತಿ ಇವರಿಗೆ ಕಳೆದ 06 ತಿಂಗಳಿನಿಂದ ತನ್ನ ಗಂಡನು ಮದ್ಯಸೇವನೆ ಮಾಡಿದ ಅಮಲಿನಲ್ಲಿ ಮನೆಗೆ ಬಂದು ಕೂಲಿಕೆಲಸಕ್ಕೆ ಹೋಗಬೇಡ ಆ ಗಂಡಸರೊಂದಿಗೆ ಏಕೆ ಮಾತನಾಡುತ್ತೀಯಾ ಮತ್ತು ಈ ಗಂಡಸರ ಜೊತೆ ಏಕೆ ಮಾತನಾಡುತ್ತೀಯಾ ಎಂದು ಸಂಶಯ ಮಾಡುತ್ತಾ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದು, ಹೀಗಾಗಿ ತನ್ನ ಗಂಡನ ಕಿರುಕುಳದ ಬಗ್ಗೆ ಫಿರ್ಯಾದಿದಾರಳ ತಮ್ಮ ಮತ್ತು ಊರಿನವರು ಬುದ್ದಿ ಮಾತು ಹೇಳಿದ್ದಕ್ಕೆ ಅದನ್ನೆ ಸಿಟ್ಟುಕೊಂಡು, ಇಂದು ದಿ:08-12-2017 ರಂದು ಮದ್ಯಾಹ್ನ 3-30 ಗಂಟೆಗೆ ಮದ್ಯಸೇವನೆ ಮಾಡಿದ ಅಮಲಿನಲ್ಲಿ ಬಂದು ಫಿರ್ಯಾದಿದಾರಳಿಗೆ ಲೇ ಸೂಳೇ ಭೋಸೂಡಿ, ನೀನು ನಮ್ಮ ಮನೆಯ ಸಂಸಾರದ ವಿಷಯ ಬೇರೆಯವರ ಮುಂದೆ ಏಕೇ ಹೇಳಿ ನನ್ನ ಮರ್ಯಾದೆ ಕಳೆಯುತ್ತೀಯಲ್ಲಲೇ ಎಂದು ಒಮ್ಮೆಲೆ ಜಡೆ ಹಿಡಿದು ಎಳೆದಾಡಿ ಕೈಯಿಂದ ಮುಖಕ್ಕೆ, ಕೈಗಳಿಗೆ ಬಡಿದುಕೊಂಡಿದ್ದು, ಅಲ್ಲದೇ ಫಿರ್ಯಾದಿಗೆ ನಿನ್ನವ್ನ ನಿನ್ನ ಸಾಯಬಡಿದರೆ ನಾನು ಇನ್ನೊಬ್ಬಳ ಜೊತೆ ಅರಾಮ ಇರಬಹುದೆಂದು ಸಾಯಿಸುವ ಉದ್ದೇಶದಿಂದಾ ಮನೆಯ ಪಕ್ಕದಲ್ಲಿದ್ದ ಸೈಜು ಕಲ್ಲು ತೆಗೆದುಕೊಂಡು ಬಂದು ಫಿರ್ಯಾದಿಯ ಮೇಲೆ ಎತ್ತಿ ಹಾಕಿದಾಗ ಕಾಪಾಡಿರಿ ಎಂದು ಚೀರಾಡಿದಾಗ ಫಿರ್ಯಾದಿಯ ತಮ್ಮ ಮತ್ತು ಇತರರು ಬಂದು ಬಿಡಿಸಿಕೊಂಡಿದ್ದು ಆಗ ಆರೋಪಿತನು ಬಿಡಿಸಿಕೊಂಡವರಿಗೆ ಈ ಸೂಳೇಮಕ್ಕಳು ಬಂದು ಬಿಡಿಸದಿದ್ದರೆ ಕೆಳಗಡೆ ಬಿದ್ದ ಇದೇ ಕಲ್ಲಿನಿಂದ ನಿನ್ನ ಮೇಲೆ ಎತ್ತಿ ಹಾಕಿ ಸಾಯಿಸುತ್ತಿದ್ದೆನು. ಅಂದಿದ್ದು ಅಲ್ಲದೇ ಮುಂದೆ ಎಂದಾದರೂ ಒಂದು ದಿನ ನಿನ್ನ ಸಾವು ನನ್ನ ಕೈಯಲ್ಲಿ ಇದೆ ಎಂದು ಪ್ರಾಣದ ಬೆದರಿಕೆ ಹಾಕಿ ಓಡಿ ಹೋದನು. ಕಾರಣ ತನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಡವಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ: 173/2017 ಕಲಂ 78 (iii) ಕೆ.ಪಿ. ಕಾಯ್ದೆ.
ಹನಮಸಾಗರದ ಕುಷ್ಟಗಿ ಸರ್ಕಲ ಹತ್ತಿರ ಬರುವಾಗ ಯರಗೇರಾ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಇಬ್ಬರು ಪಂಚರೊಂದಿಗೆ ಸರಕಾರಿ ಜೀಪ್ ನಂ: ಕೆ.-37/ಜಿ-777 ನೇದ್ದರಲ್ಲಿ ಹೊರಟು 18-30 ಗಂಟೆಗೆ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಅಯ್ಯಪ್ಪ ತಂದೆ ಶರಣಪ್ಪ ನಿಡಗುಂದಿ, ವಯಾ: 29 ವರ್ಷ, ಜಾತಿ: ಲಿಂಗಾಯತ, ಉ: ಒಕ್ಕಲುತನ, ಸಾ: ಯರಗೇರಾ, ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1060=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು ನಂತರ ಸದರಿ ಆರೋಪಿ ಅಯ್ಯಪ್ಪನಿಗೆ ಈ ಮಟಕಾ ಚೀಟಿಯನ್ನು ಯಾರಿಗೆ ಕೊಡುವದಾಗಿ ಕೇಳಿದಾಗ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು. ವಿವರವಾದ ದಾಳಿ ಪಂಚನಾಮೆ ಇಂದು 18-30 ಗಂಟೆಯಿಂದ 19-40 ಗಂಟೆಯವರಗೆ ಸ್ಥಳದಲ್ಲಿಯೇ ಬರೆದು ಮುಗಿಸಿಕೊಂಡು ಆರೋಪಿ ಹಾಗೂ ದಾಳಿ ಪಂಚನಾಮೆ ಹಾಗೂ ಮುದ್ದೇಮಾಲು ಸಮೇತ ವಾಪಾಸ್ ಠಾಣೆಗೆ ಬಂದು ಸರ್ಕಾರಿ ತರ್ಫೆ ಕ್ರಮ ಜರುಗಿಸಿದ್ದು ಇರುತ್ತದೆ
3]  ಕುಕನೂರು ಪೊಲೀಸ್  ಠಾಣೆ  ಗುನ್ನೆ ನಂ: 184/2017 ಕಲಂ: 379 ಐಪಿಸಿ R/W  44(A)  KMMC Rule 1994 
ದಿನಾಂಕ: 08-12-2017 ರಂದು ರಾತ್ರಿ 8:00  ಗಂಟೆ ಸುಮಾರಿಗೆ ಯಡಿಯಾಪೂರ ಗ್ರಾಮದ ಕನಕದಾಸ್ ಸರ್ಕಲ್  ಹತ್ತಿರ  ಯಡಿಯಾಪೂರ ಸರ್ಕಾರಿ ಹಿರೇ ಹಳ್ಳದ ಕಡೆಯಿಂದ ಯಡಿಯಾಪೂರ ಗ್ರಾಮದ  ಕಡೆಗೆ ಆರೋಪಿತನು ತನ್ನ ಟ್ರ್ಯಾಕ್ಟರ್ ನಂಬರ  KA 37 TB 4658 ಟ್ರೇಲರ್ ನಂಬರ KA 37 TB 4659  ನೇದ್ದರಲ್ಲಿ ಸರ್ಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಅನಧೀಕೃತವಾಗಿ ಕಳ್ಳತನದಿಂದ ಮರಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಬಾತ್ಮೀ ಬಂದ ಮೇರೆಗೆ ಪಿಎಸ್‍ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಗೆ ದಾಳಿ ಮಾಡಿ ಸದರಿ ಟ್ರ್ಯಾಕ್ಟರ್ ನ್ನು ಮತ್ತು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಹಾಜರಪಡಿಸಿ ಸದರಿಯವನ  ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆ ಯೊಂದಿಗೆ ತಮ್ಮ ದೂರು ನೀಡಿದ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ: 184/2017 ಕಲಂ: 379 ಐಪಿಸಿ R/W  44(A)  KMMC Rule 1994  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008