Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, December 8, 2017

1]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ: 309/2017 ಕಲಂ: 78 (3) ಕೆ.ಪಿ.ಆ್ಯಕ್ಟ್ & 420 ಐ.ಪಿ.ಸಿ.
ದಿನಾಂಕ 07-12-2017 ರಂದು ಮಧ್ಯಾಹ್ನ 12-00 ಗಂಟೆಗೆ ಆರೋಪಿ ಸದಾನಂದ ತಂದೆ ರಾಮಚಂದ್ರಪ್ಪ ಸಿಂಗ್ರಿ ವಯಸ್ಸು 55 ವರ್ಷ ಜಾ: ಕ್ಷತ್ರೀಯ ಪಟೇಗಾರ ಸಾ:ಸಂತಯೇಬಯಲು, ಗಂಗಾವತಿ ಇವನು ಗಂಗಾವತಿ ನಗರದ ಸಂತೇಬಯಲಿನಲ್ಲಿ ಸಂಗೀತಾ ಹೋಟಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು  ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅಲ್ಲಿ ತಿರುಗಾಡುತ್ತಿರುವಂತಹ ಸಾರ್ವಜನಿಕರಿಗೆ ಮಟಕ ಜೂಜಾಟದಿಂದ ದಿಢೀರ ಶ್ರೀಮಂತರಾಗಬಹುದೆಂದು ನಂಬಿಸುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಾ ಸಾರ್ವಜನಿಕರಿಂದ ಮೋಸತನದಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ಉದಯರವಿ, ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ನಗದು ಹಣ ರೂ. 555-00. 02] 01 ಮಟ್ಕಾ ನಂಬರ ಬರೆದ ಒಂದು ಚೀಟಿ ಮತ್ತು  (03) ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ: 172/2017 ಕಲಂ: ಹೆಣ್ಣುಮಗಳು ಕಾಣೆ.
ಫಿರ್ಯಾದಿದಾರ ಅಡಿವೆಪ್ಪ ತಂದೆ ಶಾಂತಪ್ಪ ತಳವಾರ ವಯಾ: 48 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಮಾಲಗಿತ್ತಿ ತಾ: ಕುಷ್ಟಗಿ ರವರು ತಮ್ಮ ಮಗಳು ಯಮನವ್ವಳು ತನ್ನ ಗಂಡನ ಮನೆಯಿಂದ ದಿನಾಂಕ: 04-12-2017 ರಂದು ಮದ್ಯಾಹ್ನ 12-30 ಗಂಟೆಗೆ ಹನಮಸಾಗರ ಸಂತೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಸಂತೆಗೆ ಹೋದವಳು ಸಂಜೆ 7-00 ಗಂಟೆತಯಾದರು ವಾಪಾಸ್ ಮನೆಗೆ ಬರಲಾರದಕ್ಕೆ. ಸಂಬಂದಿಕರಲ್ಲಿ ಹಾಗೂ ಪರಿಚಯದವರಕಡೆಗೂ ಕೇಳಿ ಹುಡಕಾಡಿದರು. ಸಿಗದೇ ಇರುವದರಿಂದ ಇಂದು ತಡವಾಗಿ ಠಾಣೆಗೆ ಬಂದು ತಮ್ಮ ಮಗಳನ್ನು ಹುಡುಕಿ ಕೊಡಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅರ್ಜಿ ನೀಡಿದ್ದು ಇರುತ್ತದೆ. ಕಾಣೆಯಾದ ತಮ್ಮ ಮಗಳು ತಾನು ಹೋಗುವಾಗ ಮೋಬೈಲ ನಂ: 9686481769 ಸಿಮ್ ಇರುವ ಮೋಬೈಲ ತೆಗೆದುಕೊಂಡು ಹೋಗಿರುತ್ತಾಳೆ. ಕಾಣೆಯಾದ ಮಹಿಳೆಯ ಚರಹೆ ಪಟ್ಟಿ ಈ ಕೆಳಗಿನಂತೆ ಇರುತ್ತದೆ.
ಕಾಣೆಯಾದ ಮಹಿಳೆಯ ಚಹರೆ ಪಟ್ಟಿ.
1
ಹೆಸರು
ಯಮನವ್ವ
2
ಗಂಡನ ಹೆಸರು
ಸಂಗಪ್ಪ ಗಾಣದಾಳ
3
ವಯಸ್ಸು
25 ವರ್ಷ
4
ಎತ್ತರ
4 ಫೀಟ್ 2 ಇಂಚ
5
ಬಣ್ಣ
ಗೋದಿ ಮೈಬಣ್ಣ
6
ದೇಹದಾರ್ಡತೆ
ಸಾಧಾರಣ ಮೈಕಟ್ಟು, ತಲೆಯಲ್ಲಿ 1,1/2 ಫೀಟ ಕರಿ ಕೂದಲು
7
ಬಟ್ಟೆಗಳು
ಹಳದಿ ಬಣ್ಣದ ಪ್ಲೇನ್ ಸೀರೆ ಆಕಾಶ ಬಣ್ಣದ ಜಂಪರ, ಆಕಾಶ ಬಣ್ಣ ಲಂಗ ಧರಿಸಿದ್ದು.
8
ಭಾಷೆ
ಕನ್ನಡ,
3]  ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ: 323/2017 ಕಲಂ : 279, 337, 338 ಐಪಿಸಿ
ದಿನಾಂಕ : 07-12-2017 ರಂದು ಬೆಳಿಗ್ಗೆ 11-30 ಗಂಟೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಸರ್ಕಾರಿ ಆಸ್ಪತ್ರೆ ಕುಷ್ಟಗಿಗೆ ಭೇಟಿ ನೀಡಿ ಗಾಯಾಳು ಹನಮೇಶ ಶೆಡಜಿ ಸಾ: ಲಾಯದುಣಸಿ ಇತನ ಹೇಳಿಕೆ ಪಡೆದುಕೊಂಡು ವಾಪಾಸ್ ಮದ್ಯಾಹ್ನ 1-00 ಗಂಟೆಗೆ ಬಂದಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ಮತ್ತು ಆತನ ಗೆಳೆಯನಾದ ಮಂಜುನಾಥ ಹಿರೇಮಠ ಇಬ್ಬರೂ ಮಂಜುನಾಥನ ಮೊ.ಸೈ ನಂ: ಕೆ.-37/ಎಕ್ಷ-3603 ನೇದ್ದರಲ್ಲಿ ತಮ್ಮೂರಿನಿಂದ ಹಿರೇವಂಕಲಕುಂಟಾ ಮಾರ್ಗವಾಗಿ ಕುಷ್ಟಗಿಗೆ ಬರುತ್ತಿರುವಾಗ ಕುಷ್ಟಗಿ ಸಮೀಪ ಅಶೋಕ ಲೈಲ್ಯಾಂಡ್ ಟ್ರಕ್ ಲಬೈ ಹತ್ತಿರ ಎದುರುಗಡೆಯಿಂದ ಹೊಸಪೇಟೆ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗದೇ ಫಿರ್ಯಾದಿದಾರರು ಕುಷ್ಟಗಿ ಕಡೆಗೆ ಬರುತ್ತಿರುವ ರಸ್ತೆಯ ಮೇಲೆ ರಾಂಗ್ ಸೈಡ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದ ಕಾರ ನಂ: ಕೆ.-37/ಎನ್-0937 ನೇದ್ದರ ಚಾಲಕನು ಸದರಿಯವರ ಮೋ.ಸೈ ಗೆ ಟಕ್ಕರ ಮಾಡಿದ್ದರಿಂದ ಮೊ.ಸೈ ಸವಾರ ಮಂಜುನಾಥ ಹಾಗೂ ಹಿಂದೆ ಕುಳಿತ ಫಿರ್ಯಾದಿದಾರನಾದ ಹನಮೇಶನಿಗೆ ಟಕ್ಕರ ಮಾಡಿದ್ದರಿಂದ ಸದರಿಯವರಿಗೆ ಸಾದಾ ಮತ್ತು ಭಾರಿ ಸ್ವರೂಪದ  ಗಾಯವಾಗಿದ್ದರಿಂದ ಕಾರ ನಂ: ಕೆ.-37/ಎನ್-0937 ನೇದ್ದರ ಚಾಲಕನಾದ ಮುತ್ತಣ್ಣ ಗೋನಾಳ ಸಾ: ಕೃಷ್ಣಗಿರಿ ಕಾಲೋನಿ ಕುಷ್ಟಗಿ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008