Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, December 17, 2017

1] ಮುನಿರಾಬಾದ  ಪೊಲೀಸ್ ಠಾಣೆ  ಗುನ್ನೆ ನಂ: 306/2017. ಕಲಂ: 323, 324, 504, 506 ಐ.ಪಿ.ಸಿ:
ದಿನಾಂಕ 16-12-2017 ರಂಧು 4-00 ಪಿ.ಎಂ,.ಸುಮಾರಿಗೆ ಪಿರ್ಯಾದುದಾರರು ಮತ್ತು ಬಾಳಪ್ಪ ಹಾಗೂ ಅವರ ಸಂಬಂದಿಕರು ಕೂಡಿಕೊಂಡು ದನಗಳನ್ನು ಮೇತಯಿಸಿಕೊಂಡು ವಾಪಾಸ್ ಮನೆಗೆ ಶಿವಪೂರ -ಅಚಲಾಪೂರ ಗ್ರಾಮದ ರಸ್ತೆಯ ಮೇಲೆ ಶಂಕ್ರಪ್ಪ ದಮ್ಮೂರ ಇವರ ಹೊಲದ ಹತ್ತಿರ ಬರುತ್ತಿರುವಾಗ ಶಂಕ್ರಪ್ಪ ದಮ್ಮೂರು ಮತ್ತು ಆತನ ಹೆಂಡತಿ ಯಮನಮ್ಮ ದಮ್ಮೂರು ಇಬ್ಬರು ಪಿರ್ಯಾದುದಾರರಿಗೆ ಮತ್ತು ಅವರೊಂದಿಗೆ ದನ ಕಾಯಲು ಹೋಗಿದ್ದವರಿಗೆ ಅವಾಚ್ಯವಾಗಿ ಬೈದಾಡಿ ಪಿರ್ಯಾದುದಾರರಿಗೆ ಮತ್ತು ಬಾಳಪ್ಪನಿಗೆ ಕೈಯಿಂದ ಮತ್ತು ಕಟ್ಟಿಗೆ ಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಕಾರಟಗಿ  ಪೊಲೀಸ್ ಠಾಣೆ  ಗುನ್ನೆ ನಂ: 283/2017. ಕಲಂ: 279, 304(ಎ) ಐ.ಪಿ.ಸಿ:

ದಿನಾಂಕ:-16-12-2017 ರಂದು ಸಾಯಂಕಾಲ 5-10 ಗಂಟೆಯ ಸುಮಾರಿಗೆ ನಾನು ಜಮೀನಿನಲ್ಲಿ ಇದ್ದಾಗ್ಗೆ ನಮ್ಮೂರಿನ ಮಂಜುನಾಥ ಕಟ್ಟಾ ಇತನು ನನಗೆ ಫೋನ್ ಮಾಡಿ ನಿಮ್ಮ ಮಗನಿಗೆ ಕಾರಟಗಿ-ಪನ್ನಾಪೂರ ರೋಡಿನಲ್ಲಿ ಟ್ರ್ಯಾಕ್ಟರ್ ಅಪಘಾತವಾಗಿರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನಮ್ಮ ತಮ್ಮ ಮುತ್ಯಾಲಪ್ಪ ಕೂಡಿ ಸ್ಥಳಕ್ಕೆ ಬಂದು ನೋಡಲು ನನ್ನ ಮಗನಿಗೆ ಸೊಂಟಕ್ಕೆ ತೊಡೆಗೆ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು ಈ ಬಗ್ಗೆ ನಮ್ಮೂರಿನ ನನ್ನ ಮಗನ ಗೆಳೆಯ ನರಹರಿ ಮತ್ತು ಮಂಜುನಾಥ  ಇವರಿಗೆ ವಿಚಾರಿಸಿಲು ಸದ್ರಿ ನನ್ನ ಮಗ ಮತ್ತು ನರಹರಿ ಇಬ್ಬರು ಕೂಡಿ ಶಾಲೆ ಮುಗಿಸಿಕೊಂಡು ಪೊನ್ನಾಪೂರ ಕಡೆಗೆ ಕಾರಟಗಿ-ಪನ್ನಾಪೂರ ರಸ್ತೆಯ ಮೇಲೆ ಕಾರಟಗಿಯ ಪರಕಿ ಮರಿಯಪ್ಪ ಇವರ ಜಮೀನನ ಹತ್ತಿರ ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಡೆದುಕೊಂಡು ಬರುತ್ತಿದ್ದಾಗ್ಗೆ ಸ್ಥಳದಲ್ಲಿ ಇದ್ದ ಟ್ರ್ಯಾಕ್ಟರ್ ತೊರಿಸಿ ಈ ಟ್ರ್ಯಾಕ್ಟರ್ ಚಾಲಕನನ್ನು ತೊರಿಸಿ ಇತನು ಈ ಟ್ರ್ಯಾಕ್ಟರ್ ನ್ನು ಕಾರಟಗಿ ಕಡೆಯಿಂದ ವೇಗವಾಗಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷತನದಿಂದ ಟ್ರ್ಯಾಕ್ಟರ್ ಓಡಿಸಿಕೊಂಡು ಬಂದು ನಡೆದುಕೊಂಡು ರಸ್ತೆಯ ಪಕ್ಕದಲ್ಲಿ ಹೊರಟಿದ್ದ ಹರಿಕೃಷ್ಣಾ ಈತನಿಗೆ ಟಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಹರಿಕೃಷ್ಣಾ ಇತನಿಗೆ ಹೊಟ್ಟೆಗೆ ಬಲಗಡೆ ತೊಡೆಗೆ ಸೊಂಟಕ್ಕೆ ಗಂಭಿರ ಸ್ವರೂಪದ ಗಾಯವಾಗಿರುತ್ತದೆ ಅಂತಾ ಹೇಳಿ ತೊರಿಸಿದರು ನಾನು ಟ್ರ್ಯಾಕ್ಟರ್ ನಂಬರ್ ನೋಡಲು ಕೆ.-36ಟಿಬಿ-1582 ಟ್ರ್ಯಾಲಿ ನಂ ಕೆ.-36ಟಿಬಿ5500 ಅಂತಾ ಇತ್ತು ಅಲ್ಲಿ ಇದ್ದ ಅದರ ಚಾಲನ ಹೆಸರು ಹನುಮಂತ ತಂದೆ ತಿಮ್ಮಣ್ಣ ವಯಾ-28ವರ್ಷ ಜಾ. ನಾಯಕ ಸಾ.ಕಾರಟಗಿ ಅಂತಾ ತಿಳಿಸಿದನು ನಂತರ  ಆ ಸಮಯಕ್ಕೆ ರಸ್ತೆಯ ಮೇಲೆ ಬರುತ್ತಿದ್ದ ಒಂದು ಖಾಸಗಿ ವಾಹನದಲ್ಲಿ ನಾನು ನಮ್ಮೂರಿನ ಮಂಜುನಾಥ, ಮತ್ತು ಟ್ರ್ಯಾಕ್ಟರ್ ಚಾಲಕ ಕೂಡಿ ಕಾರಟಗಿ ಆಸ್ಪತ್ರೆಗೆ ನನ್ನ ಮಗನಿಗೆ ಕರೆದುಕೊಂಡು ಬಂದು ದಾಖಲು ಮಾಡಿದೇವು ನನ್ನ ಮಗನಿಗೆ ತಿವ್ರವಾಗಿ ಗಾಯವಾಗಿದ್ದರಿಂದ  ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಕಾರಟಗಿ ಆಸ್ಪತ್ರೆಯಲ್ಲಿ ತಡ ಮಾಡದೇ ನನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಗೆ ಕರೆದುಕೊಂಡು ಹೋಗಿ ಬಳ್ಳಾರಿಯ ಒಪಿಡಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡುವಷ್ಟರಲ್ಲಿ ದಿನಾಂಕ:-16-12-2017 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು,

0 comments:

 
Will Smith Visitors
Since 01/02/2008