Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 7, 2017

1]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ: 306/2017 ಕಲಂ: 504, 506 ಸಹಿತ 34 ಐ.ಪಿ.ಸಿ. ಮತ್ತು 3(1)(10) ಎಸ್.ಸಿ.ಎಸ್.ಟಿ. ಪಿ.ಎ. ಕಾಯ್ದೆ 1989
ದಿನಾಂಕ 06-12-2017 ರಂದು 1400 ಗಂಟೆಗೆ ಎಂ.ಎಲ್.ಸಿ. ಸ್ವೀಕೃತಗೊಂಡಿದ್ದು, ಕೂಡಲೇ ಸರ್ಕಾರಿ ಆಸ್ಪತ್ರೆ, ಗಂಗಾವತಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ  ಶ್ರೀ ಶ್ರೀನಿವಾಸ ತಂದೆ ನೀಲನಗೌಡ ಗೌಡ್ರ, 44 ವರ್ಷ, ಜಾ: ವಾಲ್ಮೀಕಿ, ಉ: ಕೂಲಿಕೆಲಸ, ಸಾ: 1ನೇ ವಾರ್ಡ, ಮಾರೆಮ್ಮಗುಡಿ ಹತ್ತಿರ, ವಡ್ಡರಹಟ್ಟಿ, ಗಂಗಾವತಿ ಇವರನ್ನು ವಿಚಾರಿಸಲಾಗಿ ನಂತರ ಫಿರ್ಯಾದಿ ಕೊಡುವುದಾಗಿ ಹೇಳಿದ್ದರಿಂದ 18-00 ಗಂಟೆಗೆ ಪುನಃ ಆಸ್ಪತ್ರೆಗೆ ಭೇಟಿ ನೀಡಿ ನುಡಿ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ,  ನಾನು, ಗಂಗಾವತಿಯ ಶರಣಪ್ಪ ಸಿಂಗನಾಳ ಇವರ ಜ್ಯೋತಿ ಟ್ರೇಡರ್ಸ್ ಹಾಗೂ ಅವರ ಅಳಿಯನಾದ ಅಜಯ್ ಪಾಟೀಲ ಇವರ ಮಾಲೀಕತ್ವದ ಗಂಗಾಬಾರ್ ಎರಡರಲ್ಲಿಯೂ ಮೇಂಟೆನನ್ಸ್ ಕೆಲಸ ಮಾಡಿಕೊಂಡಿರುತ್ತೇನೆ.   ನನಗೆ ಮಾಸಿಕ ರೂ. 6,000-00 ಹಾಗೂ ವರ್ಷಕ್ಕೆ ರೂ. 1 ಲಕ್ಷ ಕೊಡಬೇಕೆಂದು ಕರಾರು ಮಾಡಿ ಕೆಲಸಕ್ಕೆ ತೆಗೆದುಕೊಂಡಿದ್ದರು.  ನಾನು ಈಗ್ಗೆ 9 ವರ್ಷಗಳಿಂದ ಶರಣಪ್ಪ ಸಿಂಗನಾಳ ಇವರಲ್ಲಿ ಕೆಲಸ ಮಾಡಿಕೊಂಡಿದ್ದು, ಸದ್ಯ ಮುಂಬರುವ ಫೆಬ್ರುವರಿ ತಿಂಗಳಲ್ಲಿ ನನ್ನ ಮಗಳ ಮದುವೆ ಮಾಡಬೇಕಾಗಿದ್ದು, ಕಾರಣ ನಾನು ಇಂದು ದಿನಾಂಕ 06-12-2017 ರಂದು ಮಧ್ಯಾಹ್ನ ಜ್ಯೋತಿ ಟ್ರೇಡರ್ಸ್ ಅಂಗಡಿಗೆ ಹೋಗಿದ್ದು ಅಲ್ಲಿದ್ದ ಶರಣಪ್ಪ ಸಿಂಗನಾಳ, ಅವರ ಮಗ ಪ್ರಕಾಶ ಸಿಂಗನಾಳ ಹಾಗೂ ವೆಂಕಟೇಶಪ್ಪ ತಂದೆ ದೇವೆಂದ್ರಪ್ಪ ಸಿಂಗನಾಳ ಇವರಿಗೆ ಹಣವನ್ನು ಕೊಡುವಂತೆ ಕೇಳಿದೆನು.  ಅದಕ್ಕೆ ಅವರೆಲ್ಲರೂ “ಲೇ ಸೂಳೇಮಗನ ನಿಂಗ ಕೊಡಬೇಕಾದ ಪಗಾರ ಕೊಟ್ಟಿವಿ, ನಿಂಗ ವರ್ಷಕ್ಕ ಲಕ್ಷ ರೂಪಾಯಿ ಕೊಡ್ತಿವಂತ ಹೇಳಿಲ್ಲ” ಅಂತಾ ಅಂದರು.  ಕಾರಣ ನಾನು “ನಿಮ್ಮ ಕಾಲ ಬಿಳ್ತೀನಿ ಧಣಿ, ನನ್ನ ಮಗಳ ಮದುವಿ ಐತಿ, ರೊಕ್ಕಾ ಕೊಡ್ರಿ”  ಅಂತಾ ಕೇಳಿದೆನು.  ಅದಕ್ಕೆ ಅವರೆಲ್ಲರೂ ಒಮ್ಮೇಲೆ ಸಿಟ್ಟಿಗೆದ್ದು  “ಲೇ ನಾಯಕ ಸೂಳೇ ಮಗನ, ನಿಂಗ ರೊಕ್ಕಾ ಕೊಡ್ತಿನಿ ಅಂತ ಯಾ ಸೂಳೇ ಮಗಾ ಹೇಳ್ಯಾನ್ ಲೇ, ನೀ ಏನರ ನಮ್ಮ ತಂಟೆಕ ಬಂದ್ರ ನಿನ್ನ ಜೀವಂತ ಉಳಸಂಗಿಲ್ಲ, ನೀ ಸತ್ರ ನಮ್ಮದೇನ್ ಹಾಳಾಂಗಂಗಿಲ್ಲ ಸುಮ್ನ ಹೋಗ್”  ಅಂತಾ ಹೇಳಿದರು.  ಇದರಿಂದ ನನ್ನ ಮನಸ್ಸಿಗೆ ಬೇಸರವಾಗಿ ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಜ್ಯೋತಿ ಟ್ರೇಡರ್ಸ್ ಅಂಗಡಿಯಲ್ಲಿದ್ದ ಡಿಸೈಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅಲ್ಲಿಗೆ ಬಂದ ನನ್ನ ಸ್ನೇಹಿತರು ನನ್ನನ್ನು ಚಿಕಿತ್ಸೆ ಕುರಿತು ಸರ್ಕಾರಿ  ಆಸ್ಪತ್ರೆ, ಗಂಗಾವತಿಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ಕಾರಣ ನನಗೆ ಕೊಡಬೇಕಾದ ಹಣವನ್ನು ಕೇಳಲು ಹೋದಾಗ ಜಾತಿ ಎತ್ತಿ ಬೈದು, ಜೀವದ ಬೆದರಿಕೆ ಹಾಕಿದ ಶರಣಪ್ಪ ಸಿಂಗನಾಳ, ಪ್ರಕಾಶ ಸಿಂಗನಾಳ ಹಾಗೂ ವೆಂಕಟೇಶಪ್ಪ ಸಿಂಗನಾಳ ಈ ಮೂವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ನೀಡಿದ ಫಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ..
2]  ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ: 307/2017 ಕಲಂ: 323, 355, 504, 506 ಐ.ಪಿ.ಸಿ
ದಿನಾಂಕ 06-12-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವೆಂಕಟೇಶ ತಂದೆ ದೇವೆಂದ್ರಪ್ಪ ಸಿಂಗನಾಳ, ವಯಸ್ಸು 47 ವರ್ಷ, ಜಾ: ಲಿಂಗಾಯತ, ಉ: ವ್ಯಾಪಾರ, ಸಾ: ಬನ್ನಿಗಿಡದ ಕ್ಯಾಂಪ್ ರಸ್ತೆ, ಸಿ.ಬಿ.ಎಸ್. ನಗರ, ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ನಾನು ಎ.ಪಿ.ಎಂ.ಸಿ.,1ನೇ ಗೇಟ್ ಹತ್ತಿರ, ಜ್ಯೋತಿ ಟ್ರೇಡರ್ಸ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ.  ನನ್ನ ಅಳಿಯ ಅಜಯ ಪಾಟೀಲ ಇವರ ಹೆಸರಿನಲ್ಲಿರುವ ಗಂಗಾಬಾರ್ ದಲ್ಲಿ ಶ್ರೀನಿವಾಸ ತಂದೆ ನೀಲನಗೌಡ ಗೌಡ್ರ ಸಾ: ವಡ್ಡರಹಟ್ಟಿ, ಗಂಗಾವತಿ  ಇವನು ಈಗ್ಗೆ 9 ವರ್ಷಗಳಿಂದ ದಿನಗೂಲಿ ಕೆಲಸ ಮಾಡಿಕೊಂಡಿದ್ದನು.  ನಾವು ಅವನಿಗೆ ಮೊದಲೇ ತಿಳಿಸಿದಂತೆ ತಿಂಗಳಿಗೆ ರೂ. 6,000-00 ಗಳನ್ನು ಸಂಬಳವಾಗಿ ಕೊಡುತ್ತಿದ್ದುದು ಇದೆ.  ಇಂದು ದಿನಾಂಕ 06-12-2017 ರಂದು ನಾನು ಮತ್ತು ನಮ್ಮ ಚಿಕ್ಕಪ್ಪನಾದ ಶರಣಪ್ಪ ಸಿಂಗನಾಳ ಇಬ್ಬರೂ ಸೇರಿ ನಮ್ಮ ಜ್ಯೋತಿ ಟ್ರೇಡರ್ಸ್ ಅಂಗಡಿಯಲ್ಲಿ ಕುಳಿತುಕೊಂಡಿದ್ದೆವು.  ಆಗ ಶ್ರೀನಿವಾಸ ಇವನು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ನಮ್ಮ ಅಂಗಡಿಗೆ ಬಂದು ತನ್ನ ಪಗಾರ ಕೊಡುವಂತೆ ಕೇಳಿದನು.   ನಾನು ಕೂಡಲೇ ಅವನಿಗೆ ತಿಂಗಳ ಪಗಾರ ರೂ. 6,000-00 ಗಳನ್ನು ಕೊಟ್ಟೆನು.  ನಂತರ ಅವನು “ನಂಗ್ ಕೊಡ್ಬೇಕಾದ ರೂ. 7 ಲಕ್ಷ ಕೊಡ್ರಿ”  ಅಂತಾ ಕೇಳಿದನು.  ಆಗ ನಾವು “ನಿಂಗ ತಿಂಗಳ ಪಗಾರ ಕೊಡದಲ್ದ 2,80,000-00 ರೂಪಾಯಿ ರೊಕ್ಕಾ ನಿನ್ ಪರಿಸ್ಥಿತಿ ಕೆಟ್ಟ ಇದ್ದಾಗ ಕೊಟ್ಟಿವಿ, ಇನ್ನೇನ್ ಕೊಡಬೇಕ್ ನಿನಗ” ಅಂತಾ ಕೇಳಿದೆವು.  ಅದಕ್ಕೆ ಅವನು “ನಾ ನಿಮ್ಮ ಹತ್ರ ಕೆಲ್ಸಾ ಕೇಳ್ಕೊಂಡ ಬಂದಾಗ ನೀವ್ ನಂಗ ವರ್ಷಕ್ಕ ಲಕ್ಷ ರೂಪಾಯಿ ಕೊಡ್ತಿವಿಂತ ಹೇಳಿದ್ರಿ, ಈಗ್ ನನ್ನ ರೊಕ್ಕಾ ಕೊಡ್ರಿ” ಅಂತಾ ಕೇಳಿದನು.  ಅವನಿಗೆ ನಾವು “ಇಲ್ಲಪ್ಪ ನಾವ್ಯಾರು ನಿಂಗ ಒಂದ ಲಕ್ಷ ಕೊಡ್ತಿವಿ ಅಂತ ಹೇಳಿಲ್ಲ” ಎಂದು ಹೇಳಿದಾಗ ಅವನು ಕೇಳದೇ “ಏನ್ರಲೇ ಸೂಳೇಮಕ್ಕಳ, ರೊಕ್ಕಾ ಕೊಡ್ತಿವಿ ಅಂತ ಹೇಳಿ, ಈಗ ಕೊಡಲ್ಲ ಅಂತಿರೇನ್ ಲೇ” ಅಂತಾ ಒಮ್ಮಿಂದೊಮ್ಮೇಲೆ ಸಿಟ್ಟಿಗೆದ್ದು ಬೈದಾಡ ಹತ್ತಿದನು.   ಆಗ ನಾವು ಅವನಿಗೆ ತಿಳಿಸಿ ಹೇಳಲು ಹೋದಾಗ “ಲೇ ಸೂಳೇಮಕ್ಕಳ ನಿಮ್ಮ ಮ್ಯಾಲೆ ಅಟ್ರಾಸಿಟಿ ಕೇಸ್ ಮಾಡ್ತಿನಿ“ ಅಂತಾ ಅನ್ನುತ್ತಾ ಕೈಯಿಂದ ಕಪಾಳಕ್ಕೆ ಹೊಡೆದು, ತನ್ನ ಕಾಲಿನ ಚಪ್ಪಲಿ ಕಿತ್ತಿ ನನಗೆ ಹೊಡೆದನು.  ಆಗ ನಮ್ಮ ಚಿಕ್ಕಪ್ಪ ನನಗೆ ಬಿಡಿಸಿಕೊಳ್ಳಲು ಬಂದಾಗ ಅವರಿಗೆ ಕೈಯಿಂದ ಕಪಾಳಕ್ಕೆ ಹೊಡೆದು, ಬೆನ್ನಿಗೆ ಗುದ್ದಿದನು.  ಅಲ್ಲದೇ “ಲೇ ನಿಮ್ಮೌರ್ ಗಂಗಾವತ್ಯಾಗ ಇದ್ದ ಬಾಳೆ ಮಾಡ್ರಿ ಮಕ್ಳ, ನಿಮ್ಮನ್ ಜೀವಂತ್ ಹುಗದಬಿಡ್ತಿನಿ” ಅಂತಾ ಅನ್ನುತ್ತಾ ಅಲ್ಲಿಂದ ಹೊರಟು ಹೋದನು.   ಕಾರಣ ಸದರಿ ಶ್ರೀನಿವಾಸನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ: 180/2017. ಕಲಂ: 32, 34, K.E. Act 
ದಿನಾಂಕ: 06-12-2017 ರಂದು ಮದ್ಯಾಹ್ನ 12:30 ಪಿ.ಎಂ.ಕ್ಕೆ ಕವಳಕೇರಿ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ.ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 959:54/- ರೂ. ಮೌಲ್ಯದ 180 M.L.  Old Tavern WHISKY  ಕಂಪನಿಯ ಒಟ್ಟು 14 ಮದ್ಯದ ಟೇಟ್ರಾ ಪ್ಯಾಕ್ (ಪಾಕೇಟ್)ಗಳು & 1,828:45 /- ರೂ. ಮೌಲ್ಯದ 90 M.L.  HAYWARDS CHEERS WHISKY  ಕಂಪನಿಯ ಒಟ್ಟು 65 ಮದ್ಯದ ಟೇಟ್ರಾ ಪ್ಯಾಕ್ (ಪಾಕೇಟ್)ಗಳು ಹಾಗೂ itel’ ಕಂಪನಿಯ ಮೊಬೈಲ್ ನೊಂದಿಗೆ ಸಿಕ್ಕಿಬಿದ್ದಿದ್ದು, ಪಿ.ಎಸ್.ಐ. ರವರು ಮದ್ಯ ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಆರೋಪಿತ & ಮುದ್ದೆಮಾಲನ್ನು ಹಾಜರಪಡಿಸಿ ಆರೋಪಿತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ದೂರು ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4]  ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ: 157/2017, 366, 504. -ವಾ 34 ಐಪಿಸಿ ಮತ್ತು 3 (2) [Va] ಎಸ್.ಎಟಿ ಕಾಯ್ದೆ-1989
ದಿನಾಂಕ:06-12-2017 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ಫಕೀರಪ್ಪ ಭಜೆಂತ್ರಿ, ವಯ:35, ಜಾತಿ:ಭಜೆಂತ್ರಿ, :ವ್ಯಾಪಾರ, ಸಾ:ಮೆಣೆದಾಳ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವೆನೆಂದರೆ ಪಿರ್ಯಾದಿದಾರರ ತಮ್ಮ ಮುದಿಯಪ್ಪ ಈತನು ತಾವು ಲೀಸ್ ಮಾಡಿದ ಮೇಣೆದಾಳ ಸೀಮಾದ ಹೊಲದಿಂದ ನಿನ್ನೆ ಸಾಯಂಕಾಲ 16-00 ಗಂಟೆಗೆ ಟಾಟಾ ಎಸ್. ನಂ:ಕೆಎ.25/ ಸಿ-6886 ರಲ್ಲಿ ಲೋಡಮಾಡಿಕೊಂಡು ಟಾಟಾ ಎಸ್ ಚಾಲಕ ಆಸೀಪ್ ನಿಜಾಮುದ್ದಿನ್ ಹೊನ್ನಳ್ಳಿ ಸಾ:ಧಾರವಾಡ ಇಬ್ಬರೂ ಕೂಡಿ ಹೋಗಿ ಬಳ್ಳಾರಿಯಲ್ಲಿ ಮಾರಾಟ ಮಾಡಿ ವಾಪಸ್ ಮೆಣೆದಾಳ ಕಡೆಗೆ ಬರುತ್ತಿರುವಾಗ ಗಂಗಾವತಿಯ ಕಂಪ್ಲಿ ಕ್ರಾಸನಲ್ಲಿ ವಾಪಸ್ ಗಾಡಿಯ ಹತ್ತಿರ ಬರುವಾಗ 3 ಜನ ಆಪಾದಿತರು ಕೂಡಿಬಂದು ಮುದಿಯಪ್ಪನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಡುತಗೊಳ್ಳುವ ವ್ಯವಹಾರವನ್ನು ಮುಗಿಸಿಹೋಗು ಅಂತಾ ಒತ್ತಾಯ ಪೂರ್ವಕವಾಗಿ ಆರೋಪಿತರಲ್ಲಿ ಒಬ್ಬ ಕಟಗಿಬಾಬು @ಪ್ರುಟಬಾಬು ಎನ್ನುವವನು ತನ್ನ ಸೈಕಲ್ ಮೋಟಾರ ಮೇಲೆ ಕರೆದುಕೊಂಡು ಹೋಗಿದ್ದು ಅಂತಾ ಮುಂತಾಗಿ ವಗೈರೆ ಪಿರ್ಯಾದಿಯಿಂದ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008