1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 18/2018 ಕಲಂ. 380 ಐ.ಪಿ.ಸಿ.
ದಿನಾಂಕ:
08-01-2018 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ಚೇತನ
ತಂದೆ ನಾರಾಯಣ ಪಾಸ್ತೆ ಸಾ:
ದೇವರಾಜ ಅರಸ ಕಾಲೋನಿ ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ಹಾಜರು
ಪಡಿಸಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ,
ತಾನು ಸುಮಾರು ಎರಡುವರೆ ವರ್ಷಗಳಿಂದ
ನಗರದ ತಿರುಮಲ ರೆಸಿಡೇನ್ಸಿಯಲ್ಲಿ ಕೆಲಸ
ಮಾಡಿಕೊಂಡಿರುತ್ತಾರೆ. ದಿನಾಂಕ: 28-12-2017 ರಂದು ಮದ್ಯಾಹ್ನ 1-55 ಗಂಟೆಯಿಂದ
ದಿನಾಂಕ: 31-12-2017 ರಂದು ರಾತ್ರಿ 9-30 ಗಂಟೆಯ
ಅವಧಿಯಲ್ಲಿ ವಾಸುದೇವ ಸಾ: ದಾಸರಳ್ಳಿ
ಬೆಂಗಳೂರ ಇತನು ತಿರುಮಲ ಲಾಡ್ಜ್
ನಲ್ಲಿ ರೂಂ ನಂ 106- ಮತ್ತು
108 ಗಳನ್ನ ಪಡೆದುಕೊಂಡು ಆ ರೂಂಗಳಲ್ಲಿ ವಾಸ್ತವ್ಯ
ಇದ್ದು, ರೂಂ ನಂ 106 ನೇದ್ದರಲ್ಲಿದ್ದ
ಒಂದು ಎಲ್.ಜಿ ಕಂಪನಿಯ
ಟಿವಿ ಮತ್ತು 108 ರೂಂ ನಲ್ಲಿದ್ದ ಒಂದು
ಎಲ್.ಜಿ ಕಮಪನಿಯ ಟಿವಿಗಳನ್ನ
ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ
ಲಾಡ್ಜ್ ನಲ್ಲಿ ಎರಡು ಟಿವಿಗಳನ್ನ
ಕಳ್ಳತನ ಮಾಡಿಕೊಂಡು ಹೋದ ವಾಸುದೇವ ಸಾ:
ದಾಸರಳ್ಳಿ ಬೆಂಗಳೂರ ಇತನನ್ನು ಪತ್ತೇ
ಮಾಡಿ ಸೂಕ್ತ ಕಾನೂನು ಕ್ರಮ
ಜರುಗಿಸಬೇಕೆಂದು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 19/2018 ಕಲಂ. 380 ಐ.ಪಿ.ಸಿ.
ದಿನಾಂಕ:
08-01-2018 ರಂದು ಮದ್ಯಾಹ್ನ 01-00 ಗಂಟೆಗೆ ಫಿರ್ಯಾದಿದಾರರಾದ ಪ್ರಕಾಶ ತಂದೆ ಶ್ರೀಕಾಂತ ಅಣಗಿ ಸಾ:
ಪಾಂಡುರಂಗ ಗುಡಿ ಹತ್ತಿರ ಭಾಗ್ಯನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ದೂರಿನ
ಸಾರಾಂಶವೇನೆಂದರೆ, ತಾನು ಸುಮಾರು ಐದು ತಿಂಗಳಿನಿಂದ ನಗರದ
ಹೊಟೇಲ್ ಗ್ರ್ಯಾಂಡ್ ಪ್ಯಾಲೇಸ್ ಲಾಡ್ಜ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:
28-12-2017 ರಂದು ಮದ್ಯಾಹ್ನ 3-15 ಗಂಟೆಯಿಂದ ದಿನಾಂಕ: 31-12-2017 ರಂದು ಮದ್ಯಾಹ್ನ 14-00 ಗಂಟೆಯ
ಅವಧಿಯಲ್ಲಿ ವಾಸುದೇವ ಸಾ: ದಾಸರಳ್ಳಿ ಬೆಂಗಳೂರ ಇತನು ಹೊಟೇಲ್ ಗ್ರ್ಯಾಂಡ್ ಪ್ಯಾಲೇಸ್ ನಲ್ಲಿ ರೂಂ
ನಂ 103- ಮತ್ತು 108 ಗಳನ್ನ ಪಡೆದುಕೊಂಡು ಆ ರೂಂಗಳಲ್ಲಿ ವಾಸ್ತವ್ಯ ಇದ್ದು, ರೂಂ ನಂ 103 ನೇದ್ದರಲ್ಲಿದ್ದ
ಒಂದು ಐಯರ್ ಕಂಪನಿಯ ಟಿವಿ ಮತ್ತು 108 ರೂಂ ನಲ್ಲಿದ್ದ ಒಂದು ಐಯರ್ ಕಂಪನಿಯ ಟಿವಿಗಳನ್ನ ಕಳ್ಳತನ ಮಾಡಿಕೊಂಡು
ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ ಲಾಡ್ಜ್ ನಲ್ಲಿ ಎರಡು ಟಿವಿಗಳನ್ನ ಕಳ್ಳತನ ಮಾಡಿಕೊಂಡು
ಹೋದ ವಾಸುದೇವ ಸಾ: ದಾಸರಳ್ಳಿ ಬೆಂಗಳೂರ ಇತನನ್ನು ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು
ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 20/2018 ಕಲಂ. 457, 380 ಐ.ಪಿ.ಸಿ.
ದಿನಾಂಕ: 08-01-2018 ರಂದು
ರಾತ್ರಿ 9-30 ಗಂಟೆಗೆ ಬಸಯ್ಯ ತಂದೆ ಶಿವಯ್ಯ ಹಿರೇಮಠ ಸಾಛ ಗಣೇಶ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ
ಹಾಜರು ಪಡಿಸಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕಛ 04-01-2018 ರಂದು ರಾತ್ರಿ 7-00 ಗಂಟೆಯಿಂದ
ಮಧ್ಯ ರಾತ್ರಿ 12-00 ಗಂಟೆಯವ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಕುಟುಂಬದೊಂದಿಗೆ ಗವಿಸಿದ್ದೇಶ್ವರ
ಜಾತ್ರೆಗೆ ಹೋಗಿದ್ದು ಹೋಗುವಾಗ ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಆ ಸಮಯದಲ್ಲಿ ಯಾರೋ ಕಳ್ಳರು
ಫಿರ್ಯಾದಿದಾರರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 1] ಒಂದು ಬಂಗಾರದ ನಕ್ಲೇಸ್ 2] ಒಂದು ಬಂಗಾರದ ಬೋರಮಳ
ಸರ 3] ಒಂದು ಜೋತೆ ಬಂಗಾರದ ಬೆಂಡಾಲಿ ಜುಮಕಿ 4] ಒಂದು ಜೋತೆ ಕಿವಿ ರಿಂಗ್ ಎಲ್ಲಾ ಸೇರಿ ಒಟ್ಟು ಅಂ.ಕಿ,ರೂ:
24000-00 ಬೆಲೆಬಾಳುವುಗಳನ್ನ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ
ಮನೆಯಲ್ಲಿ ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಸೂಕ್ತ ಕಾನೂನು ಜರುಗಿಸಲು ವಿನಂತಿ. ಅಂತಾ ಮುಂತಾಗಿ
ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಢಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment