Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 30, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 268/2016 ಕಲಂ: 143, 147, 323, 395, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 14-00 ಗಂಟೆಗೆ ಶ್ರೀ ವಿರೇಶ ಬಳ್ಳಾರಿ ತಂದೆ ಬಳ್ಳಾರಿ ಚನ್ನಪ್ಪ ವಯಸ್ಸು 55 ವರ್ಷ ಜಾ:ಲಿಂಗಾಯತ ಉ: ವಿಶ್ವವಾಣಿ ದಿನಪತ್ರಿಕೆ ವರದಿಗಾರರು ಫಿರ್ಯಾದಿ ನೀಡಿದ್ದು, ದಿನಾಂಕ 26-11-2016 ರ ವಿಶ್ವವಾಣಿ ದಿನಪತ್ರಿಕೆಯಲ್ಲಿ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ನಾಮಫಲಕ ಮತ್ತು ವೃತ್ತಕ್ಕೆ ಸಂಬಂಧಿಸಿದಂತೆ ವರದಿಯನ್ನು ಮಾಡಿದ್ದು, ದಿನಾಂಕ 29-11-2016 ರಂದು ಮಧ್ಯಾಹ್ನ 12-15 ಗಂಟೆಗೆ ಫಿರ್ಯಾದಿದಾರರು ತಮ್ಮ ಬಳ್ಳಾರಿ ಬುಕ್ ಡಿಪೋದ ಹತ್ತಿರ ಇರುವ ಕಚೇರಿಯಲ್ಲಿ ಸುದ್ದಿ ಟೈಪ್ ಮಾಡುತ್ತಾ ಕುಳಿತಿರುವಾಗ ಅಲ್ಲಿಗೆ  ಆರೋಪಿತರಾದ 01] ಹೊಸಳ್ಳಿ ಶಂಕರಗೌಡ. (02) ಹೊಸಳ್ಳಿ ಚಂದ್ರಗೌಡ. (03) ಹೊಸಳ್ಳಿ ನಾಗರಾಜ ಗೌಡ ಹಾಗೂ ಅವರ ಹಿಂಬಾಲಕರು ಸುಮಾರು 200 ಜನರು ಅಕ್ರಮಕೂಟ ರಚಿಸಿಕೊಂಡು ಬಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಲಾಳಗೊಂಡ ಸಮಾಜದ ಬಗ್ಗೆ ಸುಳ್ಳು ಸುದ್ದಿಯನ್ನು ಬರೆದಿದ್ದೀಯೇನಲೇ ಸೂಳೇಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಕೊರಳ ಪಟ್ಟಿ ಹಿಡಿದು ಅಂಗಿಯನ್ನು ಹಿಡಿದು ಎಳೆದಾಡಿ ಹೊಡಿ-ಬಡಿ ಮಾಡಿ, ಇನ್ನೊಮ್ಮೆ ಏನಾದರೂ ಈ ರೀತಿ ಬರೆದರೆ ನಿನಗೆ ಜೀವ ಸಹಿತ ಉಳಿಸುವುದಿಲ್ಲಲೇ ಸೂಳೇಮಗನೆ ಎಂದು ಜೀವದ ಬೆದರಿಕೆ ಹಾಕಿದ್ದು ಅಲ್ಲದೇ ಘಟನೆ ನಡೆಯುವ ಸಮಯದಲ್ಲಿ ಫಿರ್ಯಾದಿದಾರರ ಕೊರಳಲ್ಲಿದ್ದ 20 ಗ್ರಾಂ ಚೈನ್, ರೂ. 10,000-00 ಅಪಹರಣ ಮಾಡಿಕೊಂಡು ಓಡಿ ಹೋಗಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 269/2016 ಕಲಂ: 143, 147, 323, 395, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಆರ್. ಮರೇಗೌಡ ತಂದೆ ಸಿದ್ದರಾಮಪ್ಪ, ವಯಸ್ಸು 52 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಹೊಸಳ್ಳಿ, ತಾ: ಗಂಗಾವತಿ ಇವರು ಫಿರ್ಯಾದಿ ಹಾಜರುಪಡಿಸಿದ್ದು,  ದಿನಾಂಕ 26-11-2016 ರಂದು ವಿಶ್ವವಾಣಿ ದಿನಪತ್ರಿಕೆಯಲ್ಲಿ ಲಾಳಗೊಂಡ ಸಮಾಜದ ಬಗ್ಗೆ ಕೀಳುಮಟ್ಟದ ಶಬ್ದವನ್ನು ಬಳಸಿ ವರದಿಯನ್ನು ಮಾಡಿದ್ದು, ಕೆಲವು ದಿನಗಳ ಹಿಂದೆ ಹೊಸಳ್ಳಿ ಗ್ರಾಮದಲ್ಲಿ ನಾಮಫಲಕವನ್ನು ಈ ಬಗ್ಗೆ ಸಮಾಜದ ಮುಖಂಡರಾದ ಮುರಡಬಸಪ್ಪ, ಬಸವರಾಜಪ್ಪ ಪೊ.ಪಾ. ಯರಡೋಣಾ, ಶರಣೇಗೌಡ ಸಿಂಗಾಪೂರ ಸಾ: ಗಂಗಾವತಿ ಎಲ್ಲರೂ ಸೇರಿಕೊಂಡು ಇಂದು ದಿನಾಂಕ 29-11-2016 ರಂದು ಮಧ್ಯಾಹ್ನ 12-15 ಗಂಟೆ ಸುಮಾರಿಗೆ ವಿಚಾರಿಸಲು ಹೋದಾಗ ಬಳ್ಳಾರಿ ವೀರೇಶ ಹಾಗೂ ಬಳ್ಳಾರಿ ನಂದೀಶ ಮತ್ತಿತರ 8-10 ಜನರು ಕೂಡಿಕೊಂಡು ನನ್ನ ಮೇಲೆ ಏಕಾಏಕಿ ಬಂದು ನನ್ನ ಮೈಮೇಲಿನ ಅಂಗಿಯನ್ನು ಎಳೆದಾಡಿ ಕುತ್ತಿಗೆಗೆ ಕೈಹಾಕಿ ನನ್ನ ಕೊರಳಲ್ಲಿನ 20 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಜೇಬಿನಲ್ಲಿದ್ದ ರೂ. 10,000-00 ಹಣವನ್ನು ಕಸಿದುಕೊಂಡಿರುತ್ತಾರೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮೇಲೆ ಹಲ್ಲೆ ಮಾಡಿ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ.  ಅಲ್ಲದೇ ನಾನು ಪತ್ರಿಕಾ ವರದಿಗಾರನಿದ್ದು ನಿಮ್ಮ ಸಮಾಜದವರು ನನ್ನ ಸೆಂಟ ಕಿತ್ತುಕೊಳ್ಳಲು ಆಗುವುದಿಲ್ಲ, ನನ್ನ ಮೇಲೆ ಫಿರ್ಯಾದಿ ಕೊಟ್ಟರೇ ಜೀವಂತ ಇರಲು ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆ.  ಘಟನಾ ಕಾಲಕ್ಕೆ ನನ್ನ ಕೊರಳಲ್ಲಿದ್ದ ಬಂಗಾರದ ಸರ ಮತ್ತು ಮುರಡಬಸಪ್ಪ ಇವರ ವಾಚನ್ನು ಕಿತ್ತುಕೊಂಡಿರುತ್ತಾರೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 270/2016 ಕಲಂ: 143, 147, 148, 447, 323, 354, 355, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 29-11-2016 ರಂದು 2030 ಗಂಟೆಗೆ ಫಿರ್ಯಾದಿ ರಜೀಯಾಬೇಗಂ ಗಂಡ ಬಾಬಾ ಫ್ರುಟ್ಸ್ ವಯಸ್ಸು 26 ವರ್ಷ ಉ: ಮನೆಗೆಲಸ ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು, ದಿನಾಂಕ 28-11-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತರಾದ 01] ಶರಣ 2] ಅಯ್ಯನಗೌಡ ಹೇರೂರ, 3] ಟಾಟಾ ಎಸಿ ಶಿವು, 4] ನಾಗರಾಜ 5] ಚಂದ್ರು 6] ಇಡ್ಲಿ ಪಂಪ ಸಾ:ಮಹಿಬೂಬ ನಗರ 07] ಸೂಣದಾರ ಶಿವು ಸಾ: ಲಿಂಗರಾಜ್ ಕ್ಯಾಂಪ ಗಂಗಾವತಿ 08] ವಿಕ್ರಮ ಸಂತೆ ಬಯಲು 15 ನೇ ವಾರ್ಡ ಗಂಗಾವತಿ, 9] ಚಕ್ಲಿ ವಿಜಯ ಸಾ: ಸಂತೆ ಬಯಲು 15 ನೇ ವಾರ್ಡ ಗಂಗಾವತಿ ರವರು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿದಾರರ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಮನೆಯಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದ ಫಿರ್ಯಾದಿ ಹಾಗೂ ಆಕೆಯ ಗಂಡ ಮತ್ತು ಗಂಡನ ಸ್ನೇಹಿತ ರಾಜ ಇವರಿಗೆ ಈ ಮುಸಲ್ಮಾನ ಸೂಳೆ ಮಕ್ಕಳದು ಬಹಳವಾಯಿತು ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿದ್ದು ಈ ಬಗ್ಗೆ ವಿಚಾರಿಸಿದ್ದಕ್ಕೆ ಆರೋಪಿತರು ರಾಜ ಇವನನ್ನು ಎಳೆದು ಕೈಗಳಿಂದ, ಕಾಲಿನಿಂದ ಒದ್ದಿದ್ದು ಅಲ್ಲಿಯೇ ಬಿದ್ದ ಒಂದು ಸೈಜು ಕಲ್ಲನ್ನು ತೆಗೆದುಕೊಂಡು ಆರೋಪಿ ಅಯ್ಯನಗೌಡ ಹೇರೂರು ಇತನು ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಹಾಕುವವನಿದ್ದು, ಇನ್ನುಳಿದ ಆರೋಪಿತರು ಲೇ ಸೂಳೆ ನಿನ್ನದು ಬಹಳವಾಯಿತೆಂದು ಫಿರ್ಯಾದಿಯ ಸೀರೆ ಎಳೆದು, ಫಿರ್ಯಾದಿದಾರಳನ್ನು ಎಳೆದಾಡಿ ಕೈಗಳಿಂದ ಹೊಡೆದು, ಚಪ್ಪಲಿಯಿಂದ ಹೊಡೆದಿರುತ್ತಾರೆಂದು ವಗೈರೆ ಆಗಿ ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 134/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 29-11-2016 ರಂದು 8-15 ಪಿಎಂಕ್ಕೆ ಆರೋಪಿ ನಂ. 01 ನೇದವನು ನೊಂದಣಿ ಸಂಖ್ಯೆ ಇರದ ಚೆಸ್ಸಿ ನಂ. HD2A18126GWL07915 ನೇದ್ದನ್ನು ಯಲಬುರ್ಗಾ ಕಡೆಯಿಂದ ಕುಕನೂರು ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದಿದ್ದು, ಅದೇರೀತಿ ಆರೋಪಿ ನಂ. 02 ನೇದವನು ನೊಂದಣಿ ಸಂಖ್ಯೆ ಇರದ ಚೆಸ್ಸಿ ನಂ. MBLHA10BSGHE71279  ನೇದ್ದನ್ನು ಕುಕನೂರು ಕಡೆಯಿಂದ ಯಲಬುರ್ಗಾ ಕಡೆಗೆ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗಿದ್ದು ಎರು ವಾಹನದ ಚಾಲಕರು ಒಬ್ಬರಿಗೋಬ್ಬರು ಸೈಡ್ ಕೊಡದೇ ಪರಸ್ಪರ ಮುಖಾಮುಖಿಯಾಗಿ ಟಕ್ಕರ್ ಕೊಟ್ಟು ಅಪಘಾತಪಡಿಸಿರುತ್ತಾರೆ. ಇದರಿಂದಾಗಿ ಆರೋಪಿ ನಂ. 01 ನೇದವನಿಗೆ ಸಾದಾ ಸ್ವರೂಪದ ಗಾಯ ಮತ್ತು ಭಾರಿ ಸ್ವರೂಪದ ಒಳಪೆಟ್ಟಾಗಿದ್ದು, ಆರೋಪಿ ನಂ. 02 ನೇದವನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಎರಡು ಮೋಟಾರ್ ಸೈಕಲ್ ಸವಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

Tuesday, November 29, 2016

1] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 123/2016 ಕಲಂ: 302 ಐ.ಪಿ.ಸಿ ಮತ್ತು 3 (2)(5) ಎಸ್.ಸಿ/ಎಸ್.ಟಿ. ಕಾಯ್ದೆ:
ಆರೋಪಿತನಾದ ಗುರುಬಸಪ್ಪ ಕಂಬಳಿ ಸಾ:ಎಮ್. ಗುಡದೂರ ಈತನು ಮೃತಳಾದ ನೀಲವ್ವ ಚಲುವಾದಿ ಸಾ:ಮುದೋಳ ಇವಳೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡು, ದಿನಾಂಕ. 27-11-2016 ರಂದು ಸಾಯಾಂಕಾಲ 05-30 ಗಂಟೆ ಸುಮಾರಿಗೆ ಫಿರ್ಯಾದಿದಾರರ ಹೊಲಕ್ಕೆ ಕರೆದುಕೊಂಡು ಬಂದು ನಂತರ ಫಿರ್ಯಾದಿದಾರರಿಗೆ ಮೃತಳನ್ನು ಪರಿಚಯಿಸಿ ನಾವು ರಾತ್ರಿ ಇಲ್ಲಿಯೇ ಮಲಗಿಕೊಳ್ಳುತ್ತೇವೆ ಬುತ್ತಿ ತೆಗೆದುಕಕೊಂಡು ಬರುವಂತೆ ತಿಳಿಸಿ, ನಂತರ ಫಿರ್ಯಾದಿದಾರರು ಬುತ್ತಿಯನ್ನು ತೆಗೆದುಕೊಂಡು ಬರುವಷ್ಟರಲ್ಲಿ ರಾತ್ರಿ 07-00 ಗಂಟೆಯಿಂದ ರಾತ್ರಿ 09-30 ಅವದಿಯೊಳಗೆ ಮೃತಳು ಪರಿಶಿಷ್ಟ ಜಾತಿಯವಳು ಅಂತಾ ಗೋತ್ತಿದ್ದರೂ ಕೂಡಾ ಯಾವುದೋ ದುರುದ್ದೇಶದಿಂದ ಅವಳೊಂದಿಗೆ ಜಗಳ ಮಾಡಿಕೊಂಡು ಅವಳ ಮುಖಕ್ಕೆ ಹಾಗೂ ತಲೆಗೆ ಕಲ್ಲಿನಿಂದ ಜಜ್ಜಿ ಭಾರಿ ಗಾಯಗೊಳಿಸಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 237/2016 ಕಲಂ: 504, 307, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಹಾಗೂ 3(2)(5) ಎಸ್.ಸಿ/ಎಸ್.ಟಿ. ಕಾಯ್ದೆ:
ಫಿರ್ಯಾದಿದಾರರು ತಮ್ಮ ಗಳೇವು ಸಾಮಾನುಗಳನ್ನು ದದೇಗಲ್ ಗ್ರಾಮದ ತಮ್ಮ ಮನೆಯ ಸಮೀಪದ ಆರೋಪಿತರ ಸಂಬಂಧಿ ಮಲ್ಲಮ್ಮ ಇವರ ಮನೆಯ ಹತ್ತಿರ ಇಟ್ಟಿದ್ದು ಸದರಿ ಗಳೇವು ಸಾಮಾನುಗಳನ್ನು ಫಿರ್ಯಾದಿದಾರರು ತೆಗೆದುಕೊಳ್ಳದೇ ಇದ್ದುದರಿಂದ ಫಿರ್ಯಾದಿಗೆ ನಿಮ್ಮ ದೌರ್ಜನ್ಯದಿಂದಾ ಅಲ್ಲಿಯೇ ಬಿಟ್ಟಿದ್ದಿರೆಂದು ಮತ್ತು ನಿನ್ನೆ ಸಂಜೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೊಪ್ಪಳದ ಲೇಬರ ಕ್ರಾಸ್ ಹತ್ತಿರ ಕೋಳೂರ ಗೌಡ ಇದ್ದಾಗ ಅಲ್ಲಿಯೇ ಇದ್ದ ಆರೋಪಿ ಹನುಮಂತಪ್ಪನು ತನಗೆ ಸೂಳೇಮಕ್ಕಳು ಎಲ್ಲಾ ಮಾಂಸ ತಿಂದು ನಮಗೆ ರೇಟ್ ಜಾಸ್ತಿ ಆಗಿದೆ ಅಂತಾ ನೆಪ ಮಾಡಿ ಬೈಯ್ದಿಯಲ್ಲಲೇ ಎಂದು ಸಿಟ್ಟು ಇಟ್ಟುಕೊಂಡು, ಅದೇ ಸಿಟ್ಟಿನಿಂದ ಆರೋಪಿ ಭೀಮನಗೌಡನಿಗೆ ಗೊತ್ತಾಗಿ, ದಿ:28-11-16 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿತರ ಮನೆಯ ಮುಂದೆ ಬಂದು ಫಿರ್ಯಾದಿಗೆ ಲೇ ಬ್ಯಾಡ ಸೂಳೆಮಗನೇ ಎಂದು ಜಾತಿ ನಿಂದನೆ ಮಾಡಿ ತನ್ನ ಮಗನಿಗೆ ಕೊಪ್ಪಳದಲ್ಲಿ ಅಸಹ್ಯ ಮಾಡಿಯಲಲೇ ಎಂದು ಜಗಳ ತೆಗೆದಾಗ, ಅದೇ ಸಮಯಕ್ಕೆ ಆರೋಪಿ ಹನುಮಂತಪ್ಪನು ಸಮೀಪದ ತಮ್ಮ ಕಕ್ಕಿ ಮಲ್ಲಮ್ಮಳ ಮನೆಯಿಂದ ಚಾಕು ತೆಗೆದುಕೊಂಡು ಬಂದು ಫಿರ್ಯಾದಿತನಿಗೆ ಸಾಯಿಸುವ ಉದ್ದೇಶದಿಂದಾ ಲೇ ಬ್ಯಾಡ ಸೂಳೇ ಮಗನೇ ಗಳೇವು ಸಾಮಾನು ತೆಗೆದುಕೊಳ್ಳಿರೆಂದು ಬಹಳ ಸಕಲ ಹೇಳಿದರು ಕೇಳದೇ ದೌರ್ಜನ್ಯದಿಂದಾ ಅಲ್ಲೇ ಬಿಟ್ಟು ಮತ್ತೆ ಇವತ್ತು ಸಂಜೆ 7-00 ಗಂಟೆಗೆ ಕೊಪ್ಪಳದಲ್ಲಿ ನೆಪ ಮಾಡಿ ನನಗೆ ಬೈಯ್ದು ಅಸಹ್ಯ ಮಾಡಿಯಲ್ಲಲೇ ಅಂದವನೇ ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಚಾಕುವಿನಿಂದ ಫಿರ್ಯಾದಿಗೆ ತಿವಿದಾಗ ಫಿರ್ಯಾದಿತನು ತಪ್ಪಿಸಿಕೊಳ್ಳಲು ಹೊರಳಿದಾಗ ಚಾಕು ಹೊಟ್ಟೆಯ ಎಡಭಾಗದಲ್ಲಿ ಚುಚ್ಚಿಕೊಂಡು ರಕ್ತಗಾಯವಾಗಿ ಕೆಳಗಡೆ ಕುಸಿದು ಕುಳಿತಿದ್ದು, ಆಗ ಆರೋಪಿ ಭೀಮನಗೌಡನು ಸಹ ಫಿರ್ಯಾದಿಗೆ ಅಲ್ಲಿಯೇ ಇದ್ದ ಸರ್ಕಾರಿ ಜಾಲಿ ಕಟ್ಟಿಗೆ ತೆಗೆದುಕೊಂಡು ಈ ಸೂಳೇಮಗನಿಗೆ ಹೊಡೆದು ಸಾಯಿಸಬೇಕು ಎಂದು ಹೊಡೆಯಲು ಬಂದಾಗ ಜನರು ಬಿಡಿಸಿಕೊಂಡಿದ್ದು ಇರುತ್ತದೆ. ಆಗ ಆರೋಪಿತರು ಫಿರ್ಯಾದಿಗೆ ಲೇ ಸೂಳೆಮಗನೇ ಜನರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿದಿಯಲೇ ಇಲ್ಲದಿದ್ದರೆ ನಿನಗೆ ಹೊಡೆದು ಸಾಯಿಸುತ್ತಿದ್ದೆವು, ಎಂದು ಪ್ರಾಣದ ಬೆದರಿಕೆ ಹಾಕಿ ಹೋಗಿರುತ್ತಾರೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 173/2016 ಕಲಂ: 279, 304(ಎ) ಐ.ಪಿ.ಸಿ:.  
ದಿನಾಂಕ 28-11-2016 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನನ್ನ ಅಣ್ಣ ವಾಸು ತಂದೆ ಶರಣಪ ಆಗೋಲಿ ಈತನು ನಮ್ಮ  ಹಿರೋ ಹೊಂಡಾ ಪ್ಯಾಶನ್ ಪ್ರೊ ಮೋ.ಸೈ. ನಂ.ಕೆ-37/ಎಸ್-6441 ತೆಗೆದುಕೊಂಡು ಕನಕಗಿರಿ ಯಾವುದೋ ಕೆಲಸಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋಗಿದ್ದು ರಾತ್ರಿ 8-15 ಗಂಟೆಯ ಸುಮಾರಿಗೆ ನನ್ನ ಅಣ್ಣ ವಾಸು ಈತನು ತಾನು ತೆಗೆದುಕೊಂಡು ಹೋಗಿದ್ದ ಮೋ.ಸೈ ನಡೆಸಿಕೊಂಡು ಕನಕಗಿರಿ ಕಡೆಯಿಂದ ಅತೀ ವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಗಂಗಾವತಿ ರಸ್ತೆಯ ಮೇಲೆ ನಮ್ಮೂರ ಕಡೆ ಬರುತ್ತಾ ತಿಪ್ಪನಾಳ ಸೀಮಾದ ಶಿವಪ್ಪ ದಂಡಿನ ರವರ ಹೊಲದ ಹತ್ತಿರ ತಾನು ನಡೆಸುತ್ತಿದ್ದ ಮೊ.ಸೈ. ನಿಯಂತ್ರಣ ಮಾಡಲಾಗದೇ ಸ್ಕೀಡ್ ಆಗಿ ನೆಲಕ್ಕೆ ಬಿದ್ದು ಅಪಘಾತವಾಗಿದ್ದು ಅಪಘಾತದಿಂದ ಅವನ ಎಡಗಡೆ ಪಕ್ಕಡಿಗೆ ಮುಖಕ್ಕೆ ತಲೆಗೆ, ಮಲಕಿಗೆ, ಎಡಗಡೆ ಕಾಲಿಗೆ ಭಾರಿ ರಕ್ತ ಗಾಯವಾಗಿದ್ದು 2 ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರುತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 215/2016 ಕಲಂ: 323, 504, 506, 498(ಎ) 34 ಐ.ಪಿ.ಸಿ ಸಹಿತ ಕಲಂ. 3 ಮತ್ತು 4 ವರದಕ್ಷಿಣೆ ಕಾಯ್ದೆ:.

ದಿನಾಂಕ: 28.11.2016 ರಂದು ಸಾಯಂಕಾಲ 7:30 ಗಂಟೆಗೆ ಫಿರ್ಯಾದಿ ಶ್ರೀಮತಿ ಆಫ್ರೀನ್ ಬೇಗಂ ಸೈಲಾನಪೂರ ಓಣಿ ಕೊಪ್ಪಳ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 19.10.2013 ರಂದು ಗದಗ ನಗರದ ಜಾವೇದ್ ಮಕಾನ್ದಾರ ಇತನಿಗೆ ಕೊಪ್ಪಳದಲ್ಲಿ ಮದುವೆ ಮಾಡಿಕೊಟ್ಟಿದ್ದರು.  ಮದುವೆ ಕಾಲಕ್ಕೆ ನನ್ನ ಗಂಡನಿಗೆ ವರದಕ್ಷಿಣೆಯಾಗಿ 51 ಸಾವಿರ ನಗದು ಹಣ, 1 1/2 ತೊಲೆ ಬಂಗಾರ, ಬಾಂಡೆ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ಮದುವೆ ಮಾಡಿ ಕೊಂಡು ಗಂಡನ ಮನೆಗೆ ನೆಡೆಯಲು ಹೋಗಿದ್ದು ಅಲ್ಲಿ ನನ್ನ ಗಂಡ ಜಾವೇದ್ ಮಕಾನ್ದಾರ, ಅತ್ತೆ ಮಹಿಮೂದಾ ಗಂಡ ಮಾಸೂಮ್ ಮಕಾನ್ದಾರ, ಮೈದುನ ರಿಯಾಜ್ ಮಕಾನ್ದಾರ, ನಾದಿನಿ ರಿಹಾನ್ ಮಕಾನ್ದಾರ ಇವರು 03 ತಿಂಗಳ ವರೆಗೆ ಸರಿಯಾಗಿ ನೋಡಿಕೊಂಡು ನಂತರ ಬರ ಬರುತ್ತಾ ಇವರೇಲ್ಲರೂ ಕೂಡಿಕೊಂಡು ನನಗೆ ನಿನ್ನ ತವರು ಮನೆಯವರು ನಮಗೆ ವರದಕ್ಷಿಣೆ ಹಣ ಹಾಗೂ ಬಂಗಾರ ಕಡಿಮೆ ಕೊಟ್ಟಿರುತ್ತಾರೆ, ನಮಗೆ ಇನ್ನೂ ಹೆಚ್ಚಿಗೆ 1 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೇಳುತ್ತಾ ಮತ್ತು ಅದೇ ನೆಪ ಮಾಡಿಕೊಂಡು ದಿನಾನು ನನಗೆ ನೀನು ಸರಿಯಾಗಿ ಮನೆಯಲ್ಲಿ ಕೆಲಸ ಮಾಡುವುದಿಲ್ಲಾ ಅಂತಾ ಮಾನಸೀಕ ಮತ್ತು ದೈಹಿಕ ಕಿರುಕುಳು ನೀಡುತ್ತಿದ್ದರು. ನಾನು ಅವರಿಗೆ ನಾವು ಬಡವರಿದ್ದೇವೆ ಅಷ್ಟೋಂದು ಹಣವನ್ನು ನಾವು ಎಲ್ಲಿಂದ ತರೋದು ಅಂತಾ ಅವರಿಗೆ ಸಮಾಧಾನವಾಗಿ ತಿಳಿಸಿ ಹೇಳಿದ್ದೇನು. ಅದರೂ ಸಹ ಅವರು ನನಗೆ ತವರು ಮನೆಯಿಂದ ಹಣವನ್ನು ತರುವಂತೆ ಒತ್ತಾಯ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಈಗ್ಗೆ 10 ತಿಂಗಳ ಹಿಂದೆ ಗಂಡ ಜಾವೇದ್ ಅತ್ತೆ ಮಹಿಮೂದಾ , ಮೈದುನ ರಿಯಾಜ್ , ನಾದಿನಿ ರಿಹಾನ್ ಇವರು 1 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬಂದರೆ ಮಾತ್ರ ನೀನು ನಮ್ಮ ಮನಯಲ್ಲಿ ಇರು ಇಲ್ಲವಾದರೆ ನೀನು ನಿನ್ನ ತವರು ಮನೆಗೆ ಹೋಗು ಅಂತಾ ಗಂಡನ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅವಾಗಿನಿಂದ ನಾನು ನನ್ನ ತವರುಮನೆಯಲ್ಲಿಯೇ ಇರುತ್ತೇನೆ.ಮೊನ್ನೆ ದಿನಾಂಕ: 25.11.2016 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ನನ್ನ ಗಂಡ ಜಾವೇದ್ , ಅತ್ತೆ ಮಹಿಮೂದಾ , ಮೈದುನ ರಿಯಾಜ್ , ನಾದಿನಿ ರಿಹಾನ್ ಇವರೇಲ್ಲರೂ ನಮ್ಮ ಮನೆಗೆ ಬಂದು ನನ್ನ ತಂದೆ-ತಾಯಿಗೆ ನಿಮ್ಮ ಮಗಳು ಗಂಡನ ಮನೆ ಬಿಟ್ಟು ಬಂದಿರುತ್ತಾಳೆ ಅವಳಿಗೆ 1 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಅಂತಾ ಹೇಳಿದ್ದೇವು ಅವಳು ಇನ್ನೂ ನಿಮ್ಮ ಮನೆಯಲ್ಲಿಯೇ ಇದ್ದಾಳೆ ಅವಳನ್ನು ನಮ್ಮ ಮನಗೆ ಕಳುಹಿಸಿರಿ ಅಂತಾ ಹೇಳಿದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Monday, November 28, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 131/2016 ಕಲಂ: 87 Karnataka Police Act.
ದಿನಾಂಕ:27-11-2016 ರಂದು 9.30 ಪಿಎಂಕ್ಕೆ ಗಾವರಾಳ ಗ್ರಾಮದ ಮಾರುತೇಶ್ವರ ಗುಡಿ ಮುಂದಿನ ಬಯಲು ಜಾಗೆಯಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕುಕನೂರ ರವರು ಸಿಬ್ಬಂದಿ ಸಮೇತ ಇಬ್ಬರೂ ಪಂಚರ ಸಮಕ್ಷಮ ಗಾವರಾಳ ಗ್ರಾಮದ ಮಾರುತೇಶ್ವರ ಗುಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2500=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 132/2016 ಕಲಂ: 87 Karnataka Police Act.
ದಿನಾಂಕ:27-11-2016 ರಂದು 11.30 ಪಿಎಂಕ್ಕೆ ಗಾವರಾಳ ಗ್ರಾಮದ ಮಸೀದಿ ಮುಂದಿನ ಬಯಲು ಜಾಗೆಯಲ್ಲಿ ಇಸ್ಪೀಟ್ ಜೂಜಾಟ ನಡೆದ ಮಾಹಿತಿ ಬಂದ ಪ್ರಕಾರ ಪಿ.ಎಸ್.ಐ. ಕುಕನೂರ ರವರು ಸಿಬ್ಬಂದಿ ಸಮೇತ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಿನಾಂಕ:28-11-2016 ರಂದು 00-30 ಪಿಎಂಕ್ಕೆ ಗಾವರಾಳ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2300=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 327/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 27-11-2016 ರಂದು 05-00 ಪಿ.ಎಂ.ಕ್ಕೆ ಫಿರ್ಯಾದಿದಾರ ಅಂಬರೇಶ ತಂ/ ಸಾಬಯ್ಯ ಸಂದೇರ ವಯಾ 33, ಉ. ಹೇಮಗುಡ್ಡ ಟೊಲಗೇಟದಲ್ಲಿ ಸೆಕ್ಯೂರಿಟಿ ಕೆಲಸ ಸಾ. ಸೌಳಅರವಿ ಕ್ಯಾಂಪ ಹಾ.ವ. ಹೇಮಗುಡ್ಡ ಇವರು ಫಿರ್ಯಾದಿ ನೀಡಿದ್ದು ಸಾರಾಂಶ ಈ ರೀತಿ ಇರುತ್ತದೆ. ದಿನಾಂಕ. 27-11-2016 ರಂದು ಮದ್ಯಾನ್ಹ 02-30 ಗಂಟೆ ಸುಮಾರಿಗೆ ಹೇಮಗುಡ್ಡ ಗ್ರಾಮದ ಮಂಜುನಾಥ ಭೊವಿ ಮತ್ತು ತಿರುಮಲ ಇರಬಗೇರಾ ಇವರು ಗಂಗಾವತಿಗೆ ಸಂತೆಗೆ ತಮ್ಮ ಮೋಟಾರ ಸೈಕಲ್ ನಂ. ಕೆ.ಎ.37/ಡಬ್ಲು.7333 ನೇದ್ದರಲ್ಲಿ ಹೋಗಿದ್ದು ಸಂತೆ ಮಾಡಿಕೊಂಡು ವಾಪಸ ಹೇಮಗುಡ್ಡಕ್ಕೆ ಬರುತ್ತಿರುವಾಗ ಗುಡ್ಡದ ಕ್ಯಾಂಪ ಹತ್ತಿರ ಹೇಮಗುಡ್ಡ ಗ್ರಾಮದ ಬಸವರಾಜ ಇರಬಗೇರಾ ಇವನು ಮೋಟಾರ ಸೈಕಲ್ ಕೆಟ್ಟು ನಿಂತಿದ್ದರಿಂದ ಮಂಜುನಾಥ ಮತ್ತು ತಿರುಮಲ ಇಬ್ಬರು ಬಸವರಾಜನಿಗೆ ನೋಡಿ ಗಂಗಾವತಿಯಿಂದ ಕೊಪ್ಪಳಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಮೋಟಾರ ಸೈಕಲ್ ನಿಲ್ಲಿಸಿ ಮಂಜುನಾಥ ಮತ್ತು ತಿರುಮಲ ಇವರು ಮೋಟಾರ ಸೈಕಲ್ ಮೇಲೆ ಕುಳಿತಿದ್ದು, ಬಸವರಾಜನಿಗೆ ಕರೆದು ಏನಾಯಿತು ಅಂತಾ ಮಾತನಾಡುತ್ತಾ  ನಿಂತಿರುವಾಗ ಕೊಪ್ಪಳ ಕಡೆಯಿಂದ ಲಾರಿ ನಂ. ಕೆ.ಎ.35/ಬಿ.1113 ನೇದ್ದರ ಚಾಲಕನು ಲಾರಿಯನ್ನು ಅತಿವೇಗವಾಗಿ ಮತ್ತು ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಬರುತ್ತಿದ್ದ ಒಂದು ಗಾಡಿಗೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿಗೆ ಬಂದು ಮೂರು ಜನರಿಗೆ ಹಾಗೂ ಮೋಟಾರ ಸೈಕಲ್ ಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಮೂರು ಜನರಿಗೆ ತೀವ್ರ ಸ್ವರೂಪದ ರಕ್ತಗಾಯ ಒಳಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 264/2016 ಕಲಂ: 143, 147, 148, 323, 324, 307, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ 27-11-2016 ರಂದು ರಾತ್ರಿ 8-15 ಗಂಟೆಗೆ  ಸೈಯದ್ ಗಫೂರ್ ತಂದೆ ಮೆಹಬೂಬ ಸಾಬ ಬಳ್ಳಾರಿ, ವಯಾ: 22 ವರ್ಷ, ಜಾ: ಮುಸ್ಲಿಂ, ಉ:ಮೇಷನ್ ಕೆಲಸ, ಸಾ: ಹಮಾಲರ ಕಾಲೋನಿ ಗಂಗಾವತಿ ಇವರು ಗಾಯಗೊಂಡು ಠಾಣೆಗೆ ಬಂದಿದ್ದು ಸದರಿಯವನಿಗೆ ಇಲಾಜು ಕುರಿತು ಸರಕಾರಿ ಆಸ್ಪತ್ರೆ ಗಂಗಾವತಿಗೆ ಕಳುಹಿಸಿಕೊಟ್ಟಿದ್ದು, ದಿನಾಂಕ: 27-11-2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿ ವೀರೇಶ ಈತನು ತನ್ನ ಮೋಟರ್ ಸೈಕಲ್ ನ್ನು ಫಿರ್ಯಾದಿಯ ಓಣಿಯಲ್ಲಿ ಜೋರಾಗಿ ಓಡಾಡಿಸಿದ್ದರಿಂದ ಅದಕ್ಕೆ ಫಿರ್ಯಾದಿಯು ಈರೀತಿ ಓಣಿಯಲ್ಲಿ ಜೋರಾಗಿ ಗಾಡಿಯನ್ನು ಓಡಿಸಿದರೆ ಹೇಗೆ ಸಣ್ಣ ಮಕ್ಕಳು ಆಟ ಅಡುತ್ತಿರಿತ್ತಾರೆ ಅಂತಾ ಹೇಳಿದ್ದಕ್ಕೆ ಆರೋಪಿ ವೀರೇಶನು ಫಿರ್ಯಾದಿಯ ಜೋತೆ ಬಾಯಿ ಮಾಡಿಕೊಂಡು ಹೋಗಿದ್ದು ಸದರಿ ಈ ವಿಷಯವನ್ನು ಆರೋಪಿತನ ಅಣ್ಣನಿಗೆ ತಿಳಿಸಲು ರಾತ್ರಿ 7-00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಅವನ ಸ್ನೇಹಿತ ಲಾಲಸಾಬ ಇಬ್ಬರೂ ಹೋದಾಗ ಅರೋಪಿ ವೀರೇಶನು ಲೇ ಲಂಗಾ ಸುಳೇಮಗನೆ ನಮ್ಮ ಕ್ಯಾಂಪಗೆ ಯಾಕ ಬಂದೀಯಾ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಲ್ಲಿನಿಂದ ಫಿರ್ಯಾದಿಯ ಬಲಗಣ್ಣಿನ ಹತ್ತಿರ ಹಾಗೂ ಮೂಗಿಗೆ ಜೋರಾಗಿ ಹೊಡಿದ್ದು ಅಲ್ಲದೆ ಮಲ್ಲಿಕಾರ್ಜುನನು ಸಹ ಹಾಕ್ರಿ ಈ ಸೂಳೇಮಗನ್ನ ಬಾಳಾ ಆಗೈತಿ  ಅನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ತನ್ನ ಹತ್ತಿರ ಇದ್ದ ಚಾಕುವಿನಿಂದ ಬಲಗಣ್ಣ ಹತ್ತಿರ ತಿವಿದನು ಹಾಗೂ ಸದರಿ ಜಗಳವನ್ನು ಬಿಡಿಸಲು ಬಂದು ಲಾಲಾ ಸಾಬ ನಿಗೆ ಎರಡೂ ಕೈಗೆ ಚಾಕುವಿನಿಂದ ಎಳೆದುದನು ಆಗ ಅಲ್ಲಿಯೇ ಇದ್ದ ಉಳಿದ ಆರೋಪಿತರಾದ ರವಿ, ಪ್ರಕಾಶ, ನವೀನ ಎಲ್ಲರೂ ಸೇರಿ ಫಿರ್ಯಾದಿಗೆ ಕೈಯಿಂದ ಮೈ ಕೈಗೆ, ಹೊಡೆ ಬಡೆ ಮಾಡಿ ಜೀವ ಬೆರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Saturday, November 26, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 196/2016 ಕಲಂ: 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 25-11-2016 ರಂದು ಸಾಯಂಕಾಲ 06-30 ಗಂಟೆ ಸುಮಾರಿಗೆ ಕೆರೆಹಳ್ಳಿ ಸೀಮಾದಲ್ಲಿರುವ ಎಸ.ಎನ್.ಜಿ.ಪೆಟ್ರೊಲ್ ಬಂಕ್ ಹತ್ತಿರ ಕುಷ್ಟಗಿ-ಹೊಸಪೆಟೆ ಎನ್.ಹೆಚ್.50 ಏಕಮುಕ ರಸ್ತೆಯ ಪೂರ್ವದ ಭಾಗದಲ್ಲಿ ಕೆಟ್ಟು ನಿಂತ ಕ್ರೇನ್ ನಂ.ಕೆ.ಎ.373635 ನೇದ್ದನ್ನು ಪಿರ್ಯಾದಿದಾರ ಮತ್ತು ಅದರ ಮಾಲಿಕರಾದ ಅಜೀಮ,ಆಪರೇಟರುಗಳಾದ ಅಬ್ದುಲ್ ಅನ್ಸಾರಿ,ವಿಜಯ ತಂ/ ಹರೆರಾಮ ಮತ್ತು ಹೆಲ್ಪರ್ ಸಾದಿಕ ಎಲ್ಲರು ಕ್ರೆನ ರಿಪೇರಿ ಮಾಡುತ್ತಿದ್ದಾಗ ಅದೇ ವೇಳೆಗೆ ಕುಷ್ಟಗಿ ಕಡೆಯಿಂದ ಒಂದು ಲಾರಿ ನಂ.ಕೆ.ಎ.29 / ಬಿ.1113 ನೇದ್ದರ ಚಾಲಕನು ಸದರ ಲಾರಿಯನ್ನು ಅತೀ ವೇಗದಿಂದ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ನಮ್ಮ ಕ್ರೇನಿನ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದರಿಂದ ಕ್ರೇನ್ ಆಪರೇಟರ್ ಅಬ್ದುಲ್ ಮತ್ತು ವಿಜಯ ಹಾಗೂ ಮಾಲಿಕ ಅಜೀಮ ಇವರಿಗೆ ತಲೆಗೆ ,ಮತ್ತು ಮೈ.ಕೈಗಳಿಗೆ ರಕ್ತಗಾಯಗಳಾಗಿದ್ದು ಇರುತ್ತದೆ,ಅಪಘಾತ ಪಡಿಸಿದ ಲಾರಿ ಚಾಲಕನು ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ಅವನಿಗೆ ನೋಡಿದಲ್ಲಿ ಗುರುತಿಸುತ್ತೇನೆ ಕಾರಣ ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 235/2016 ಕಲಂ: 279, 338 .ಪಿ.ಸಿ.

ದಿ:25-11-16 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು ತಮ್ಮ ಕುಲಸ್ಥರೊಂದಿಗೆ ಶ್ರೀನಿಧಿ ಖಾನಾವಳಿ ಮುಂದೆ ಮಾತನಾಡುತ್ತಾ ನಿಂತುಕೊಂಡಿದ್ದಾಗ, ಕೊಪ್ಪಳದ ಕಡೆಯಿಂದ ಲಾರಿ ನಂ: ಎಪಿ-21/ಟಿ.ವಾಯ್-2260 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೇ ತನ್ನ ಮುಂದೆ ಬರುತ್ತಿದ್ದ ಮೋಟಾರ ಸೈಕಲ್ ನಂ:ಕೆಎ-35/ಆರ್-4681 ನೇದ್ದನ್ನು ಗಮನಿಸದೇ ಮತ್ತು ಅಂತರ ಕಾಯ್ದುಕೊಳ್ಳದೇ ಬಂದು ಮೋಟರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಪ್ರಭಾಕರ ಎಂಬುವವರ ಬಲಗೈ ಮೊಣಕೈಯಿಂದ ಬೆರಳುಗಳವರೆಗೆ ಭಾರಿ ರಕ್ತಗಾಯಗ, ಮತ್ತು ಬೆನ್ನಿಗೆ, ಸೊಂಟಕ್ಕೆ ಪೆಟ್ಟಾಗಿದ್ದು, ಮತ್ತು ಗುದದ್ವಾರಕ್ಕೆ ಭಾರಿ ರಕ್ತಗಾಯವಾಗಿದೆ. ಕಾರಣ ಅಪಘಾತ ಮಾಡಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Friday, November 25, 2016

Gangavati town Ps crime detected



1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 208/2016 ಕಲಂ: 143, 147, 341, 323, 324, 504, 506 ಸಹಿತ 149  ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 24.11.2016 ರಂದು ರಾತ್ರಿ 11:30 ಗಂಟೆಗೆ ಫಿರ್ಯಾದಿ  ವೆಂಕಟೇಶ ಇಟಂಗಿ ಸಾ: ಭಾಗ್ಯನಗರ ಕೊಪ್ಪಳ. ಇವರು ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಗ ಸಾಂಕೇತ ವಯಾ: 16 ವರ್ಷ ಹಾಗೂ ಪ್ರಕಾಶ ಜೋಶಿ ಇವರ ಮಗನಾದ ಪ್ರವೀಣ ಜೋಶಿ ಇವರ ನಡುವೆ ಭಾಗ್ಯನಗರದ ಟ್ಯೂಷನ್ ಕ್ಲಾಸನಲ್ಲಿ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗಿತ್ತು. ಅದನ್ನೆ ನೆಪ ಮಾಡಿಕೊಂಡು ರಾತ್ರಿ 8:00 ಗಂಟೆಗೆ ಪ್ರವೀಣ ಜೋಶಿ ಇತನು 10 ರಿಂದ 15 ಜನರನ್ನು ತನ್ನ ಸಂಗಡ ನಮ್ಮ ಮನೆಗೆ ಕರೆದುಕೊಂಡು ಬಂದು ನಿಮ್ಮ ಅಣ್ಣನ  ಸಾಂಕೇತ ಇತನು ನನ್ನೊಂದಿಗೆ ಟ್ಯೂಷನ್ ಕ್ಲಾಸನಲ್ಲಿ ಜಗಳ ಮಾಡಿದ್ದಾನೆ ಅವನನ್ನು ಮನೆಯಿಂದ ಹೊರಗೆ ಕಳುಹಿಸಿರಿ ನೋಡಿಕೊಳ್ಳುತ್ತೇವೆ ಅಂತಾ ಹೇಳಿದ್ದರಿಂದ ನಮ್ಮ ಮನೆಯಲ್ಲಿದ್ದ ನಾನು ಹಾಗೂ ಓಣಿಯ ಜನರು ಅವರಿಗೆ ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದೇವು. ನಂತರ ಇಂದು ದಿನಾಂಕ: 24.11.2016 ರಂದು ಸಾಯಂಕಾಲ 7:00 ಗಂಟೆಗೆ  ಮಂಜುನಾಥ ಮಸ್ಕಿ ಸಾ: ಬಿ.ಟಿ ಪಾಟೀಲ್ ನಗರ ಕೊಪ್ಪಳ ಇತನು ತನ್ನೊಂದಿಗೆ 10-15 ಜನರನ್ನು ಕರೆದುಕೊಂಡು ಭಾಗ್ಯನಗರದ ನಮ್ಮ ಮನೆಗೆ ಬಂದು ನೀವು ಗಂಡಸರಾಗಿದ್ದರೆ ನೀವು ನಮ್ಮ ಬಿ.ಟಿ ಪಾಟೀಲ್ ನಗರಕ್ಕೆ ಬನ್ನಿರಿ ಅಂತಾ ಬೆದರಿಕೆ ಹಾಕಿ ಹೋಗಿದ್ದರು. ನಂತರ 8:30 ಗಂಟೆಗೆ ನಾನು ಹಾಗೂ ನಮ್ಮ ಓಣಿಯ ಜನರಾದ ಮುದಿಯಪ್ಪ ಹರಿಜನ, ನಿಂಗಪ್ಪ ಹರಿಜನ, ಆನಂದ ಮೇಗರಾಜ, ಶರಣಪ್ಪ ಸಜ್ಜನ್, ಪೀರಸಾಬ ಹಿರೇಮಸೂತಿ, ಇವರೊಂದಿಗೆ ಬಿ.ಟಿ.ಪಾಟೀಲ್ ನಗರದ ಹರಿಹಂತ ಕಂಪ್ಯೂಟರ್ಸ ಹತ್ತಿರ ಇರುವ ವಾಟರ್ ಪೀಲ್ಟರ್ ಹತ್ತಿರ ನಿಂತುಕೊಂಡಿದ್ದಾಗ ಏಕಾಏಕೀ ಮಂಜುನಾಥ ಮಸ್ಕಿ ಇತನು ತನ್ನೊಂದಿಗೆ 10-15 ಜನರನ್ನು ಕರೆದುಕೊಂಡು  ಬಂದು ನನಗೆ ತಡೆದು ನಿಲ್ಲಿಸಿ ಎನಲೇ ಚಲುವಾದಿ ಸೂಳೆ ಮಗನೆ ನಿನ್ನದು ಬಹಳ ಆಗೈತಿ ಅಂತಾ ಜಾತಿ ಎತ್ತಿ ಬೈದು ಏಕಾಏಕೀ ಮಂಜುನಾಥ ಮಸ್ಕಿ ಇತನು ತನ್ನ ಕೈಯನ್ನು ಗಟ್ಟಿಯಾಗಿ ಮುಷ್ಟಿಮಾಡಿ ನನ್ನ ಮುಖಕ್ಕೆ ಜೋರಾಗಿ ಗುದ್ದಿದನು ಆಗ ನೋವಿನಿಂದ ಜೋರಾಗಿ ಕೂಗಾಡಲು ನಮ್ಮೊಡನೆ ಬಂದ ಇತರೆ ಜನರು ಅವರಿಗೆ ಯಾಕೆ ಸುಮ್ಮನೆ ನಮಗೆ ಹೊಡೆಯುತ್ತೀರಿ ನಮಗೂ ನಿಮಗೂ ಯವುದೇ ಸಂಭಂದ ಇರುವುದಿಲ್ಲಾ ಅಂತಾ ಎಷ್ಟು ಹೇಳಿದರೂ ಕೇಳದೆ ಎನಲೇ ಸೂಳೆ ಮಕ್ಕಳಾ ನಮಗೆ ಬುದ್ದಿ ಹೇಳುತ್ತೀರೆನಲೇ ಅಂತಾ ಅಂದವರೆ ನಮಗೂ ಹಾಗೂ ನನ್ನ ಜೊತೆ ಬಂದವರಿಗೆ ಮಂಜುನಾಥ ಮಸ್ಕಿ ಇತನು ಹಾಗೂ ಆತನ ಸಂಗಡ ಇದ್ದ 10-15 ಜನರು ತಮ್ಮ ಕೈಗಳಿಂದ  ಹೊಡೆಯ ಹತ್ತಿದರು ಆಗ ನಾವು ಕೂಗಾಡಲು ಆಗ ದಾರಿಯಲ್ಲಿ ಹೋಗುತ್ತಿದ್ದ ಜನರು ಸೇರಲು ಮಂಜುನಾಥ ಮಸ್ಕಿ ಹಾಗೂ ಆತನೊಂದಿಗೆ ಬಂದ ಜನರು ಅಲ್ಲಿಂದ ಹೋದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 129/2016 ಕಲಂ: 306 ಸಹಿತ 34 .ಪಿ.ಸಿ.
ದಿನಾಂಕ:24-11-2016 ರಂದು 1.30 ಪಿಎಂಕ್ಕೆ ಫಿರ್ಯಾದಿದಾರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನ್ನ ಅಣ್ಣನು ಈ ಮೊದಲು ಎರಡು ಮದುವೆಯಾಗಿದ್ದು, ತನ್ನ ಇಬ್ಬರೂ ಅತ್ತಿಗೆಯವರು ನಿಧನವಾಗಿದ್ದು, ನಂತರ ನಿಟ್ಟಾಲಿಯಲ್ಲಿ ಉಮಾ ಎಂದುವವಳನ್ನು ಮದುವೆಯಾಗಿದ್ದು, ನಂತರದಲ್ಲಿ ಒಂದು ಮಗು ಜನಿಸಿದ ಮೇಲೆ ಮತ್ತೆ ತನ್ನ ಅಣ್ಣನಿಗೆ ಮತ್ತು ಅತ್ತಿಗೆ ಉಮಾಳಿಗೆ ಸಂಸಾರ ಸರಿಯಾಗಿ ನಡೆಯದೇ ಇದ್ದುದರಿಂದ ತನ್ನ ಅಣ್ಣನ ಹೆಂಡತಿ ಉಮಾಳು ನ್ಯಾಯಾಲಯದಲ್ಲಿ ಆಸ್ತಿ ಮತ್ತು ಜೀವನಾಂಶ ಪಡೆಯುವ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿಕೊಂಡಿದ್ದರಿಂದ ಮತ್ತು ಆಗಾಗ ತನ್ನ ಅಣ್ಣನು ಮನೆಗೆ ಹೋದಾಗ ತನ್ನ ಮಾವ, ಅತ್ತೆ, ಅಳಿಯ ಹಾಗೂ ತನ್ನ ಹೆಂಡತಿ ಸೇರಿ ಅವನಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಹೊಡೆಬಡೆ ಮಾಡಿದ್ದರಿಂದ ಮಾನಸಿಕವಾಗಿ ನೊಂದು ನನ್ನ ಅಣ್ಣನಿಗೆ ಅವಮಾನ ಮಾಡಿದ್ದರಿಂದ ತನ್ನ ಅಣ್ಣನು ದಿನಾಂಕ:23-11-2016 ರಂದು ರಾತ್ರಿ 9.00 ಗಂಟೆಗೆ ನಿಟ್ಟಾಲಿ ಸೀಮಾದಲ್ಲಿಯ ತನ್ನ ಮಾವನ ತೋಟದಲ್ಲಿ ವಿಷ ಸೇವನೆ ಮಾಡಿದಾಗ 108 ವಾಹನದಲ್ಲಿ ಕರೆದುಕೊಂಡು ಬಂದು ಕುಕನೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  

3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 288/2016 ಕಲಂ: 279, 337, 338 ಐ.ಪಿ.ಸಿ.ದಿನಾಂಕ: 24-11-2016 ರಂದು ಮದ್ಯಾಹ್ನ 02-15 ಗಂಟೆಗೆ ಎಸ್.ಮಲ್ಲಿಕಾರ್ಜುನ ತಂದೆ ಮಲ್ಲಿನಾಥಪ್ಪ ಶೆಟ್ಟಿ ವಯಾ: 59 ಪಿರ್ಯಾದಿಯನ್ನು ನೀಡಿದ್ದು ಮುಂಜಾನೆ 5-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತಮ್ಮ ಬುಲೆರೋ ವಾಹನ ನಂ: ಕೆ.ಎ-37/ಎಂ-5347 ನೇದ್ದರಲ್ಲಿ ತಮ್ಮ ಚಾಲಕ ಪ್ರಕಾಶ ಹಾವರಗಿ ಇವರೊಂದಿಗೆ ಅನಧಿಕೃತವಾಗಿ ಕೃಷಿ ಉತ್ಪನ್ನಗಳ ಸಾಗಾಣಿಕೆ ಮಾಡುವ ವಾಹನಗಳನ್ನು ತಪಾಷಣೆ ಕುರಿತು ಹೋದವರು ವಣಗೇರಿ ಟೋಲ ನಾಕಾದ ಕಡೆಯಿಂದ ವಾಪಾಸ್ ಕುಷ್ಟಗಿ ಕಡೆಗೆ ಬರುತ್ತಿರುವಾಗ ಟೋಲ್ ಗೇಟ್ ದಾಟಿ ಸುಮಾರು 1 ಕಿ.ಮೀ. ಅಂತರದಲ್ಲಿ ರಸ್ತೆಯ ಎಡಗಡೆ ರಸ್ತೆಯಲ್ಲಿ ಬರುತ್ತಿರುವಾಗ ನಮ್ಮ ಹಿಂದೆ ಒಂದು ಲಾರಿ ನಂ: ಎಂ.ಹೆಚ್.-25/ಯು-130 ನೇದ್ದರ ಚಾಲಕನಾದ ಸೈಫನ್ ತಂದೆ ಉಸ್ಮಾನ ಹಂದೇವಾಡಿ ವಯಾ: 49 ಜಾ: ಮುಸ್ಲಿಂ ಸಾ: ನೈಜಿಂದಿಗಿ ತಾ: ಜಿ: ಸೊಲ್ಲಾಪೂರ ಇತನು ಬರುತ್ತಿದ್ದು ಸದರಿ ಲಾರಿಯ ಹಿಂದೆ ಇನ್ನೊಂದು ಲಾರಿ  ನಂ: ಆರ್.ಜೆ-11/ಜಿ.ಎ-7279 ನೇದ್ದು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಾಹನದ ಅಂತರವನ್ನು ಕಾಪಾಡದೇ ಮುಂದಿನ ಲಾರಿಗೆ ಕಟ್ಟರ ಕೊಟ್ಟಿದ್ದು ಸದರಿ ಲಾರಿ ಚಾಲಕ ವಿಕ್ರಮಸಿಂಗ್ ತಂದೆ ಅಶೋಕಕುಮಾರ ಉಘಾರಪೂರ ವ: 24 ವರ್ಷ ಜಾತಿ: ರಜಪೂತ ಉ: ಚಾಲಕ ಸಾ: ಬಾಡಿ ತಾ: ವಿಶಾರಪೂರ ಜಿ: ವಿಶಾರಪೂರ ಪಂಜಾಬ ರಾಜ್ಯ ಅಂತಾ ಇದ್ದು ಸದರಿ ಲಾರಿಯಲ್ಲಿದ್ದ ಇನ್ನೊಬ್ಬ ರಾಜೇಂದ್ರಸಿಂಗ್ ತಂದೆ ಶ್ರೀಪಥ ವಯಾ: 31 ವರ್ಷ ಇತನಿಗೆ ಬಲಗಾಲ ತೊಡೆಗೆ ಒಳಪೆಟ್ಟು, ಬಲಗಾಲ ಮೊಣಕಾಲ ಕೆಳಗೆ ಒಳಪೆಟ್ಟು ಹಾಗೂ ತಲೆಗೆ ಭಾರಿ ಒಳಪೆಟ್ಟಾಗಿದ್ದು ಇತ್ತು. ಸದರಿ ಎರಡು ಲಾರಿಯ ಹಿಂದೆ ಮತ್ತು ಮುಂದಿನ ಭಾಗ ಜಖಂಗೊಂಡಿದ್ದು ಮತ್ತು ನಮ್ಮ ಬುಲೆರೋ ನಂ: ಕೆ.ಎ-37/ಎಂ-5347 ನೇದ್ದರ ಬಲಗಡೆ ಮದ್ಯದ ಡೋರ್ ಬೆಂಡಾಗಿದ್ದು ಹಾಗೂ ಬಲಗಡೆ ಹಿಂದಿನ ಇಂಡಿಕೆಟರ್ ಹೊಡೆದಿದ್ದು ಇರುತ್ತದೆ. ನಮಗೆ ಹಾಗೂ ಇನ್ನೂಳಿದ ಲಾರಿ ಚಾಲಕರಿಗೆ ಯಾವುದೇ ಗಾಯವಾಗಿರಲಿಲ್ಲ ಗಾಯವಾದ ರಾಜೇಂದ್ರಸಿಂಗ್ ಇವರನ್ನು ಇಲಕಲ್ ನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಂಬುಲೆನ್ಸ ನಲ್ಲಿ ಕಳುಹಿಸಿಕೊಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.

 
Will Smith Visitors
Since 01/02/2008