This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
1]
ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ 78(3) Karnataka
Police Act.
ದಿನಾಂಕ 30-01-2017 ರಂದು ಸಂಜೆ 7-00 ಗಂಟೆಗೆ ಶ್ರೀ ವೀರಾರೆಡ್ಡಿ
ಪಿ.ಎಸ್.ಐ. ಕನಕಗಿರಿ ಠಾಣೆ ರವರು ಠಾಣೆಗೆ ಬಂದು ವರದಿ, ಹಾಗೂ ಪಂಚನಾಮೆ ಹಾಗೂ ಆರೋಪಿತರನ್ನು ಮತ್ತು
ಮಟಕಾ ಸಂಬಂಧಿಸಿದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದು, ಸದರ ವರದಿಯ ಸಾರಾಂಶವೇನೆಂದರೆ, ದಿನಾಂಕ
30-01-2017 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಕನಕಗಿರಿ ಗ್ರಾಮದ ಅಗಸಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ಮತ್ತು 2 ರವರು ಸಾರ್ವಜನಿಕರಿಂದ
ಹಣ ಪಡೆದು ಅವರಿಗೆ ನಸೀಬದ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು
ಮತ್ತು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ.605=00 ಹಾಗೂ ಅದಕ್ಕೆ ಸಂಬಂದಿಸಿದ
ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಆರೋಪಿ ಮತ್ತು ಮಟಕಾ ಸಾಮಾಗ್ರಿಗಳೊಂದಿಗೆ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 12/2017 ಕಲಂ 379 ಐಪಿಸಿ.
ದಿನಾಂಕ 30-01-2017 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರರಾದ ಸುರೇಶ ತಂಧೆ ವೀರಣ್ಣ ಗದಗ ಲಿಖಿತ ಫಿರ್ಯಾದಿ ನೀಡಿದ್ದು ಫೀರ್ಯಾದಿದಾರರು ದಿನಾಂಕ 16-01-2017
ರಂದು ಸಾಯಂಕಾಲ 4-30 ಗಂಟೆಗೆ ತಮ್ಮ ದೊಡ್ಡಪ್ಪನಾದ ವೀರಭದ್ರಪ್ಪ ಗದಗ
ರವರ ಹಿರೋ ಹೋಂಡಾ ಪ್ಯಾಶನ್ ಪ್ರೋ ಮೋ ಸೈ ನಂ ಕೆಎ 37 ಆರ್ 1121 ನೇದ್ದನ್ನು ತನ್ನ ವೈಕ್ತಿಕ ಕೆಲಸದ
ನಿಮಿತ್ತ ಕೊಪ್ಪಳಕ್ಕೆ ಬಂದು ಬಸ್ ನಿಲ್ದಾಣದ ಮುಂದೆ ಮೋ/ಸೈ ನ್ನೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ
ಚಹಾ ಕುಡಿಯಲು ಹೋಗಿ ವಾಪಾಸ್ ಸಂಜೆ 05-30 ಗಂಟೆಗೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ ಕೂಡಲೇ ತಾನು ಅಲ್ಲಿ ಸುತ್ತಾಮುತ್ತ ಹುಡುಕಾಡಲು
ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 23/2017 ಕಲಂ
323,
504, 506 ರೆಡ್
ವಿತ್ 34 ಐ.ಪಿ.ಸಿ. ಮತ್ತು 3(1)(x) SC/ST. P.A. Act. 1989
ದಿನಾಂಕ:- 28-01-2017 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ಬಸವರಾಜ ತಂದೆ ರಾಜಪ್ಪ ನಾಯಕ, ವಯಸ್ಸು: 37 ವರ್ಷ ಜಾತಿ: ನಾಯಕ, ಉ: ಒಕ್ಕಲತನ ಸಾ: ಡಣಾಪೂರ, ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು,
ಅದರ ಸಾರಾಂಶ ಈ ಪ್ರಕಾರ
ಇದೆ." ಮೊನ್ನೆ ದಿನಾಂಕ: 26-01-2017 ರಂದು ನಮ್ಮೂರಲ್ಲಿ ನಾಟಕ ಇದ್ದುದರಿಂದ ನಾನು ಸಹ ನಾಟಕದಲ್ಲಿ ಪಾತ್ರ ಮಾಡಿದ್ದೆನು. ಅದರಂತೆ ನಮ್ಮೂರ ಕೆ.ಉಡುಚಪ್ಪ ಇವರ ತಮ್ನನಾದ ವಿರೇಶನು ಸಹ ಪಾತ್ರ ಮಾಡಿದ್ದನು. ಆದರೆ ನಾಟಕದ ಖಚರ್ು ವೆಚ್ಚಿನ ಹಣವನ್ನು ನಿನ್ನೆ ದಿನಾಂಕ: 27-01-2017 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ವಿರೇಶನಿಗೆ ಕೇಳಿದಾಗ ಉಡುಚಪ್ಪ ಹಾಗೂ ಇತರರೂ ಕೂಡಿ ಬಾಯಿ ಮಾಡಿದಾಗ ಅಲ್ಲಿಯೇ ಇದ್ದ ನಮ್ಮೂರ ದೊಡ್ಡನಗೌಡ ತಂದೆ ಶಿವಪ್ಪ 36 ವರ್ಷ ಹಾಗೂ ಬಸವ ತಂದೆ ತಿಮ್ಮ ನಾಯಕ 37 ವರ್ಷ ಇವರುಗಳು ಅವರಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ಪುನ: ಸಂಜೆ 6:00 ಗಂಟೆಯ ಸುಮಾರಿಗೆ ನಾನು ನಮ್ಮೂರ ವಿ.ಎಸ್.ಎಸ್. ಬ್ಯಾಂಕ್ ಮುಂಭಾಗ ನಿಂತಿರುವಾಗ 1] ಕೆ. ಉಡುಚಪ್ಪ ತಂದೆ ಹೊನ್ನೂರಪ್ಪ ವರ್ಷ ಜಾತಿ: ಕುರುಬರ, 2] ಹೊನ್ನೂರಪ್ಪ ವಯಸ್ಸು: 50 ವರ್ಷ ಜಾತಿ: ಕುರುಬರ, 3] ಅಕ್ಕಮ್ಮ ಶರಣಪ್ಪ ವಯಸ್ಸು: 36 ವರ್ಷ ಜಾತಿ: ಕುರುಬರ, 4] ಅಕ್ಕಮ ಹನುಮೇಶ ವಯಸ್ಸು: 35 ವರ್ಷ ಜಾತಿ: ಕುರುಬರ, ಎಲ್ಲರೂ ಸೇರಿಕೊಂಡು ಬಂದು ನನಗೆ ಏಕಾಏಕಿಯಾಗಿ ಲೇ ಬ್ಯಾಡರ ಸೂಳೇ ಮಗನೇ ನೀನು ನಮ್ಮ ಹುಡುಗನಿಗೆ ನಾಟಕದ ಖರ್ಚು ಕೇಳುತ್ತೀಯಾ ದೇಣಿಗೆ ಹಣದಲ್ಲಿ ಎಷ್ಟು ಹಣ ತಿಂದಿದಿಯಾ ಹಣದ ಲೆಕ್ಕ ಕೊಡು ಅಂತಾ ಜಗಳ ತೆಗೆದು ಕೈಯಿಂದ
ಹೊಡಿಬಡಿ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಕಾರಣ ಮಾನ್ಯರು ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಗಣಕೀಕರಣ ಮಾಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 24/2017 ಕಲಂ
323, 324, 504, 506 ರೆ/ವಿ 34 ಐಪಿಸಿ.
ದಿನಾಂಕ. 28-01-2017 ರಂದು
05-30 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶರಣಪ್ಪ ತಂ/ ಸಂಗಪ್ಪ ವಯಾ 35, ಜಾ. ಕುರುಬರು ಉ. ಒಕ್ಕಲುತನ
ಸಾ. ಡಣಾಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಫಿರ್ಯಾದಿ ಹಾಜರಾ ಪಡಿಸಿದ್ದು ಸಾರಾಂಶವೆನಂದರೆ.
ನಿನ್ನೆ ದಿನಾಂಕ. 27-01-2017 ರಂದು ಸಾಯಂಕಾಲ 06-00 ಗಂಟೆ ಸುಮಾರಿಗೆ ಡಣಾಪುರ ಗ್ರಾಮದ ವಿ.ಎಸ್.ಎಸ್.ಎನ್
ಸೋಸೈಟಿ ಹತ್ತಿರ ಆರೋಪಿತರಾದ ಬಸವರಾಜ ಮತ್ತು ದೊಡ್ಡನಗೌಡ ಇವರು ಇದ್ದು ಫಿರ್ಯಾದಿದಾರನು ಮತ್ತು ಮಹೇಶ
ಇವರು ಕೂಡಿಕೊಂಡು ಬಸವರಾಜ ಮತ್ತು ದೊಡ್ಡನಗೌಡ ಇವರಿಗೆ ನಾಟಕ ಮಾಡಿದ ಖರ್ಚು ಕೇಳಿದ್ದರಿಂದ ಬಸವರಾಜ
ಮತ್ತು ದೊಡ್ಡನಗೌಡ ಇವರು ಫಿರ್ಯಾದಿಗೆ ಸೂಳೆ ಮಗನೆ ಎಂದು ಅವಾಚ್ಯ ಬೈದು ಕೊಲೆ ಮಾಡುತ್ತೆವೆ ಎಂದು
ಜೀವದ ಬೆದರಿಕೆ ಹಾಕುತ್ತಾ ಬಸವರಾಜನು ಫಿರ್ಯಾದಿಗೆ ಬಂಡಿಗೂಟ(ಕಟ್ಟಿಗೆ)ದಿಂದ ಬೆನ್ನೆಗೆ ಹೊಡೆದಿರುತ್ತಾನೆ.
ಮತ್ತು ದೊಡ್ಡನಗೌಡನು ಇನ್ನೊಂದು ಕಟ್ಟಿಗೆಯಿಂದ ಹೊಡೆದಿರುತ್ತಾನೆ. ಅಲ್ಲಿಯೇ ಇದ್ದ ಬಸವರಾಜನ ಮಗ ಮಂಜುನಾಥನು
ಮನೆಯಲ್ಲಿ ಚಾಕು ತಂದು ಫಿರ್ಯಾದಿಗೆ ಹೊಡೆಯಲು ಹೋಗಿರುತ್ತಾನೆ. ದೊಡ್ಡನಗೌಡ ಇವರ ತಂದೆಯಾದ ಶಿವಪ್ಪ
ಬಕಾರ ಈತನು ಕೊಡಲಿಯಿಂದ ಫಿರ್ಯಾದಿಗೆ ಹೊಡೆಯಲು ಹೋಗಿರುತ್ತಾನೆ. ಅಲ್ಲದೆ ಬಸವರಾಜ, ದೊಡ್ಡನಗೌಡ ಮತ್ತು
ಮಂಜುನಾಥ, ಶಿವಪ್ಪ ನಾಲ್ಕು ಜನರು ಕೂಡಿಕೊಂಡು ಫಿರ್ಯಾದಿ ಜೊತೆಗೆ ಇದ್ದ ಮಹೇಶನಿಗೆ ಕೈಯಿಂದ ಹೊಡೆದು
ಕಾಲಿನಿಂದ ಒದ್ದಿರುತ್ತಾರೆ. ನಂತರ ಇವತ್ತು ಉಳಿದುಕೊಂಡಿರಿ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ
ಕೊಲೆ ಮಾಡುತ್ತೆವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ : 279, 337 ಐ.ಪಿ.ಸಿ:.
ದಿ:27-01-2017 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ
ಸಾರಾಂಶವೇನೆಂದರೇ, ಇಂದು ದಿ:27-01-17 ರಂದು ಬೆಳಗಿನಜಾವ 05-00 ಗಂಟೆಗೆ ಆರೋಪಿ ಭೀಮಾಶಂಕರ ಇತನು ಕೊಪ್ಪಳದ ಕಡೆಯಿಂದ ತನ್ನ ಟಾಟಾ ನಂ: ಕೆಎ-49/2192 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಗದಗ
ಕಡೆಗೆ ಹೊರಟಿದ್ದಾಗ ಹಲಿಗೇರಿ ಸಮೀಪದ ವೇಯಿಂಗ ಮಷಿನ್ ಹತ್ತಿರ ವಾಹನವನ್ನು ನಿಯಂತ್ರಿಸದೇ ರಸ್ತೆಯ
ಬಲ ತಗ್ಗಿನಲ್ಲಿ ಪಲ್ಟಿ ಮಾಡಿದ್ದು ಇರುತ್ತದೆ. ಅಪಘಾತ ಮಾಡಿದ ಚಾಲಕನಿಗೆ ಸಾಧಾ ಗಾಯಗಳಾಗಿದ್ದು
ಇರುತ್ತದೆ. ಕಾರಣ ಅಪಘಾತ ಮಾಡಿದ ಟಾಟಾ ವಾಹನದ ಚಾಲಕ ಭೀಮಾಶಂಕರ ಇತನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 18/2017 ಕಲಂ : 279, 337 ಐ.ಪಿ.ಸಿ ಮತ್ತು
187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-01-2017 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಪಿರ್ಯಾದುದಾರರು ಮತ್ತು ಅವರ ಸ್ನೆಹಿತರಾದ ರೇಣುಕಪ್ಪ ಮತ್ತು ಚನ್ನಬಸಯ್ಯ ಇವರು ಕೂಡಿಕೊಂಡು ಹುಲಿಗೆಮ್ಮದೇವಸ್ಥಾನಕ್ಕೆ ಹೋಗಿ ವಾಪಾಸ್ ಊರಿಗೆ ಹೋಗುತ್ತಿರುವಾಗ ಪಿರ್ಯಾದುದಾರರ ಮತ್ತು ರೇಣುಕಪ್ಪ ಒಂದು ಮೋ.ಸೈ,ನಲ್ಲಿ ಹೋಗುತಿದ್ದು ಮತ್ತು ಚನ್ನಬಸಯ್ಯ ಇವರು ತಮ್ಮ ಮೋ.ಸೈ.ನಂ.ಕೆ.ಎ.34/ಇ-6242 ನೇದ್ದರಲ್ಲಿ ಮುದ್ಲಾಪೂರ -ಹುಲಗಿ ರಸ್ತೆಯ ಮೇಲೆ ಹೋಗುತ್ತಿರುವಾಗ ಅವರ ಮುಂದೆ ನೀರಿನ ಟ್ಯಾಂಕರ ಟ್ರಾಕ್ಟರ್ ನಂ.ಕೆ.ಎ.37/ಟಿ.ಎ.2597 ನೇದ್ದರ ಚಾಲಕನು ಅಲಕ್ಷತನದಿಂದ ಹೋಗುತ್ತಿರುವಾಗ ಯಾವುದೇ ಮುನ್ಸೂಚನೆಯನ್ನು ನೀಡದೆ ಒಮ್ಮಲೆ ಟ್ರಾಕ್ಟಗೆ ಬ್ರೇಕನ್ನು ಹಾಕಿದ್ದರಿಂದ ಹಿಂದೆಹೋಗುತ್ತಿದ್ದ ಚನ್ನಬಸಯ್ಯ ಇವರು ಟ್ರಾಕ್ಟರಗೆ ಡಿಕ್ಕಿಕೊಟ್ಟಿದ್ದರಿಂದ ಚನ್ನಬಸಯ್ಯ ಇವರಿಗೆ ಗಾಯ ಪೆಟ್ಟಗಳಾಗಿರುತ್ತವೆ ಮತ್ತು ಟ್ರಾಕ್ಟರ್ ಚಾಲಕನು ಓಡಿಹೋಗಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ : 341, 353, 504, 506 ಸಹಿತ
34 ಐ.ಪಿ.ಸಿ:.
ದಿನಾಂಕ: 27-01-2017 ರಂದು ಮದ್ಯಾನ 3-30 ಗಂಟೆಗೆ ಫಿರ್ಯಾಧಿ ಬಸಪ್ಪ ಪರಿಚಾರಕರು ಜಿಲ್ಲಾಧಿಕಾರಿಗಳ ಕಛೇರಿ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-01-2017 ರಂದು ಮಧ್ಯಾಹ್ನ 12-15 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಮಾನ್ಯ ಜಿಲ್ಲಾಧಿಕಾರಿಗಳ ಚೇಂಬರದಲ್ಲಿ ಮಾನ್ಯ ಕೊಪ್ಪಳ ಸಂಸದರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾಗ ನಾನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಬಾಗಿಲದಲ್ಲಿ ಪರಿಚಾರಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನು. ಆಗ ಸದರಿ ಆರೋಪಿತರಾದ ವೀರಣ್ಣ ಹಂಚಿನಾಳ ಮತ್ತು ಗುಲಾಮಹುಸೇನ ಎಂಬುವವರು ಬಂದು ನಮಗೆ ಒಳಗಡೆ ಬಿಡು ಅಂತಾ ಒತ್ತಾಯ ಮಾಡಿ ನಾನು ಅವರಿಗೆ ತಿಳಿ ಹೇಳಿದರೂ ಸಹ ನನ್ನ ಮಾತಿಗೆ ಒಗ್ಗೊಡದೇ ನನಗೆ ತಡೆದು ನಿಲ್ಲಿಸಿ ಚೇಂಬರ್ ಒಳಗೆ ನುಗ್ಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಅವಾಚ್ಯವಾಗಿ ಬೈದಾಡಿ ನನ್ನ ಮತ್ತು ಜಿಲ್ಲಾಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪರಿಸಿದ್ದು ಅಲ್ಲದೆ ಜೀವದ ದಮಿಕಿ ಹಾಕಿ ಹೋಗಿರುತ್ತಾರೆ, ಪ್ರಕರಣ ದಾಖಲಿಸಿ ತನಖೆ ಕೈಗೊಂಡಿದ್ದು ಇರುತ್ತದೆ.
1] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 06/2017 ಕಲಂ : 279, 338 ಐ.ಪಿ.ಸಿ:.
ದಿನಾಂಕ 26-01-2017
ರಂದು ರಾತ್ರಿ 9-26 ಗಂಟೆಗೆಯ
ಸುಮಾರಿಗೆ ಕೊಪ್ಪಳದ ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವಿನ ಹೆಂಡತಿ ಶ್ರೀಮತಿ ಶ್ಯಾಲಿನಿ ಇವರಿಂದ ಲಿಖಿತ
ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ. 26-01-2017 ರಂದು ರಾತ್ರಿ 9-10 ಗಂಟೆಯ ಸುಮಾರಿಗೆ ಪಿರ್ಯಾದಿಯ ಗಂಡ ಪಕೀರಪ್ಪ @ ಪ್ರಕಾಶ ಇವರು ಸಂಜೆ ಹೊರಗಡೆ ಹೋಗಿ ಬರುತ್ತೇನೆಂದು ನಮ್ಮ ಟಿ.ವಿ.ಎಸ್. ಎಕ್ಸ್ .ಎಲ್ ಗಾಡಿ ನಂ. ಕೆಎ-37/ಎಸ್-1039 ನೇದ್ದನ್ನು ಭಾಗ್ಯನಗರದಿಂದ ಕೊಪ್ಪಳದ ಕಡೆಗೆ ಬಂದಿದ್ದು ರಾತ್ರಿ 9-45 ಗಂಟೆ ಸುಮಾರಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ನನ್ನ ಗಂಡನ ಮೋಬೈಲಿನಿಂದ ನನ್ನ ಗಂಡನು
ಜವಾಹರ ರಸ್ತೆಯಿಂದ ಅಶೋಕ ಸರ್ಕಲ್ ಮುಖಾಂತರ ಭಾಗ್ಯನಗರಕ್ಕೆ ಬರುವಾಗ ಅಶೋಕ ಸರ್ಕಲ್ ದಲ್ಲಿ ಗದಗ
ರಸ್ತೆ ಕಡೆಯಿಂದ ಒಂದು ಟ್ಯಾಂಕರ್ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡನಿಗೆ ಟಕ್ಕರಮಾಡಿ ಅಪಘಾತಮಾಡಿದ್ದು ಇದರಿಂದ ಪಕೀರಪ್ಪ @ ಪ್ರಕಾಶ
ಇತನಿಗೆ ತಲೆಗೆ ಒಳಪೆಟ್ಟಾಗಿ ಎಡಮೊಣಕೈಗೆ, ಬಲಭುಜಕ್ಕೆ ಹಾಗೂ ತುಟಿಗೆ ತೆರಚಿದ ಗಾಯವಾಗಿರುತ್ತದೆ ಮತ್ತು ಅಪಘಾತದಿಂದ ನನ್ನ ಗಂಡನಿಗೆ
ಪ್ರಜ್ಞೆ ತಪ್ಪಿರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ : 323, 324, 504, 506 ಸಹಿತ
34 ಐ.ಪಿ.ಸಿ:.
ದಿನಾಂಕ 26-01-2017 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ
ಪಿರ್ಯಾದುದಾರರು ಹಳೆಕುಮಟಾ ಗ್ರಾಮದಲ್ಲಿ ವಾಲ್ಮಿಕಿ ಸರ್ಕಲ್ ಹತ್ತಿರ ನಿಂತಾಗ ಅಲ್ಲಿ ಸುದೀಪ ಇವರ
ಚಿತ್ರಪಟವನ್ನು ಹಾಕಿದ್ದು ಅದನ್ನು ನೋಡಿದ ಆರೋಪಿತರು ಪಿರ್ಯಾದುದಾರನಿಗೆ ಅವಾಚ್ಯವಾಗಿ ಬೈದು
ಕಯಯಿಂದ ಹಾಗೂ ಕೊಡಲಿಯಿಂದ ಹೊಡೆದು ಜೀವದಬೆರಿಕೆ ಹಾಕಿರುತ್ತಾರೆ ಎಂದು ಮುಂತಾಗಿದ್ದ
ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತದೆ.