Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, February 19, 2018


1] ಕೊಪ್ಪಳ ನಗರ ಪೊಲೀಸ್ ಠಾಣೆ  ಗುನ್ನೆ ನಂ. 45/2018 ಕಲಂ. 96 (B) & (C) KP Act.
ದಿನಾಂಕ; 18-02-2018 ರಂದು ರಾತ್ರಿ 7-30 ಗಂಟೆಗೆ ರಾಜಶೇಖರ ಪಿಸಿ 382 ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 18-02-2018 ರಂದು ರಾತ್ರಿ 7-00 ಗಂಟೆಗೆ ಕೊಪ್ಪಳ ನಗರದ ಗವಿ ಮಠದ ಮೈದಾನದಲ್ಲಿ ತಾನು ಮತ್ತು ಪಿಸಿ-172 ರವರು ಪೆಟ್ರೊಲಿಂಗ್ ಗಸ್ತು ಕರ್ತವ್ಯದಲ್ಲಿದ್ದಾಗ ಅಲ್ಲಿ ಮೂರು ಗುಂಡುಗಳ ಹತ್ತಿರ ಓರ್ವ ವ್ಯಕ್ತಿ ಪೊಲೀಸರನ್ನ ನೋಡಿ ಮುಖ ಮುಚ್ಚಿಕೊಂಡು ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ಕತ್ತಲಲ್ಲಿ ಅವಿತುಕೊಂಡಿರುವುದು ಕಂಡುಬಂದಿದ್ದು, ನಮಗೆ ಅವನ ಮೇಲೆ ಸಂಶಯ ಬಂದು ಹಿಡಿದುಕೊಳ್ಳಲು ಹೋದಾಗ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಅವನನ್ನು ಹಿಡಿದು ವಿಚಾರಿಸಿದಾಗ ಅವನು ಸದರಿ ಸ್ಥಳದಲ್ಲಿದ್ದ ಬಗ್ಗೆ ವಿಚಾರಿಸಲು ಸದರಿಯವನು ಸಮರ್ಪಕ ಉತ್ತರ ಕೊಡದೇ ಇದ್ದುದ್ದರಿಂದ ಮತ್ತು ಸದರಿಯವನನ್ನ ಹಾಗೇ ಬಿಟ್ಟಲ್ಲಿ ರಾತ್ರಿ ವೇಳೆಯಲ್ಲಿ ಏನಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿಯವನ ಮೇಲೆ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 45/2018 ಕಲಂ: 96 [ಬಿ] [ಸಿ] ಕೆ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಠಗಿ ಪೊಲೀಸ್ ಠಾಣೆ  ಗುನ್ನೆ ನಂ.  43/2018 ಕಲಂ: 279,337,338 ಐಪಿಸಿ
ದಿನಾಂಕ: 18-02-2018 ರಂದು ಸಾಯಂಕಾಲ 4-00  ಗಂಟೆಗೆ ಫಿರ್ಯಾದಿದಾರರಾದ ಬಸನಗೌಡ ತಂದೆ ಪಂಪನಗೌಡ ಪೊ.ಪಾ. ಸಾ: ಕೊಕಿಲ ಸರ್ಕಲ್ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೆನೆಂದರೆ  ಫಿರ್ಯಾದಿದಾರರ ಗೆಳೆಯನಾದ ಗಂಗಾಧರ ಆರ್.  ತಂದೆ ರಾಜಣ್ಣ ಹಾಗೂ ಅವರ ಹೆಂಡತಿಯಾದ ರಾಣಿ ಎಂ.ಪಿ. ಸಾ: ಸಿರಿಗೊಂಡನಹಳ್ಳಿ ಜಿ: ಚಿತ್ರದುರ್ಗಾ ರವರು ದಿನಾಂಕ: 14-02-2018 ರಂದು ತಮ್ಮೂರಿಗೆ ಹೋಗಿ ವಾಪಾಸ್ ಕುಷ್ಟಗಿಯ ಬಸ್ ನಿಲ್ದಾಣದಿಂದ ತಮ್ಮ ಮೊ.ಸೈ ನಂ: ಕೆ.ಎ-16/ಆರ್-6420 ನೇದ್ದರಲ್ಲಿ ರಾತ್ರಿ 7-45 ಗಂಟೆಯ ಸುಮಾರಿಗೆ ಹನಮನಾಳ ಗ್ರಾಮಕ್ಕೆ ಹೋಗುತ್ತಿರುವಾಗ ಕುಷ್ಟಗಿಯ ಕೊರ್ಟ ಮುಂದೆ ಇರುವ ರಸ್ತೆಯಲ್ಲಿ ಹೋಗುತ್ತಿರುವಾಗ ಬಸವೇಶ್ವರ ವೃತ್ತದಿಂದ ಕ್ರಷರ್ ನಂ: ಕೆ.ಎ-37/ಎ-2228 ನೇದ್ದರ ಚಾಲಕನು ತನ್ನ ಕ್ರಷರ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಒಮ್ಮಿದ್ದೊಮ್ಮೆಲೇ ಮತ್ತೆ ಬಸವೇಶ್ವರ ವೃತ್ತದ ಕಡೆಗೆ ಹೋಗುವ ರಸ್ತೆಗೆ ತಿರುಗಿಸಿದಾಗ ಸದರಿ ಮೊ.ಸೈ ಸವಾರರಿಗೆ ಟಕ್ಕರ ಆಗಿದ್ದು ಇದರಿಂದ ಮೊ.ಸೈ ಮೇಲಿದ್ದ  ಗಂಗಾಧರ ಆರ್ ಮತ್ತು ಅವರ ಹೆಂಡತಿಯಾದ ರಾಣಿ ಎಂ.ಪಿ. ರವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದು ಸದರಿಯವರು ಚಿಕಿತ್ಸೆಗಾಗಿ ಕುಷ್ಟಗಿಯಿಂದ ಇಲಕಲ್ ಜೆ.ಬಿ. ಆಸ್ಪತ್ರೆ ನಂತರ ಬಾಗಲಕೋಟ ಕಟ್ಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮಾಡಿಸಿ ಇಂದು ತಡವಾಗಿ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 43/2018 ಕಲಂ: 279,337,338 ಐಪಿಸಿ ನೇದ್ದರಲ್ಲಿ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮಿಣ ಪೊಲೀಸ್ ಠಾಣೆ  ಗುನ್ನೆ ನಂ. 44/2018 ಕಲಂ 87 ಕೆ.ಪಿ. ಕಾಯ್ದೆ
ದಿನಾಂಕ. 18-02-2018 ರಂದು 4:30 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆರವರು ಆರೋಪಿತರೊಂದಿಗೆ ಮೂಲ ಪಂಚನಾಮೆ, ವರದಿ ಹಾಗೂ ಮುದ್ದೆಮಾಲು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ:- 18-02-2018 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮರಳಿ ಗ್ರಾಮದ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಹಾರ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಅಧಿಕಾರಿ/ಸಿಬ್ಬಂದಿಯವರಾದ ಶ್ರೀ ಮುದ್ದುರಂಗಸ್ವಾಮಿ ಪ್ರೊಬೇಷನರಿ ಪಿ.ಎಸ್.ಐ., ಪಿ.ಸಿ. 328, 180, 110,363, 263 ಎ.ಪಿ.ಸಿ. 15 ರವರನ್ನು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಮಧ್ಯಾಹ್ನ 2:00 ಗಂಟೆಗೆ ಠಾಣೆಯಿಂದ ಹೊರಟು ಮರಳಿ ಗ್ರಾಮದ ಹೊಸಕೇರಾ ರಸ್ತೆಯಲ್ಲಿ ಹೋಗಿ   ವಾಹನವನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ ಮಧ್ಯಾಹ್ನ 3:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿ ಬಿದ್ದಿದ್ದುವಿಚಾರಿಸಲು ಅವರು ತಮ್ಮ ಹೆಸರುಗಳು (1) ಚಂದ್ರಪ್ಪ ತಂದೆ ಪಂಪಣ್ಣ ನೀರಗಂಟಿ, ವಯಸ್ಸು 52 ವರ್ಷ, ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹೊಸಕೇರಾ (2) ವೆಂಕಟೇಶ ತಂದೆ ಹನುಮಂತರಾವ್, ವಯಸ್ಸು 42 ವರ್ಷ, ಜಾತಿ: ಬ್ರಾಹ್ಮಣ ಉ: ಒಕ್ಕಲುತನ ಸಾ: ಮರಳಿ (3) ಶರಣಪ್ಪ ತಂದೆ ಅಯ್ಯಪ್ಪ ಹೂಗಾರ, ವಯಸ್ಸು 35 ವರ್ಷ, ಜಾತಿ: ಹೂಗಾರ ಉ: ಒಕ್ಕಲುತನ ಸಾ: ಹುಲಿಗೆಮ್ಮನ ಗುಡಿಯ ಹತ್ತಿರ -ಮರಳಿ (4) ಸೋಮನಾಥ ತಂದೆ ಯಂಕಪ್ಪ ಜಾತಿ: ಉಪ್ಪಾರ, ವಯಸ್ಸು 33 ವರ್ಷ ಉ: ಒಕ್ಕಲುತನ ಸಾ: ಮಸೀದಿ ಹತ್ತಿರ- ಮರಳಿ (5) ದೇವಪ್ಪ ತಂದೆ ಬಸಪ್ಪ ಕರಿಶೆಟ್ಟಿ, ವಯಸ್ಸು 57 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಮಸೀದಿ ಹತ್ತಿರ - ಮರಳಿ ಅಂತಾ ತಿಳಿಸಿದ್ದು ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ  ರೂ. 3,230/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಮಧ್ಯಾಹ್ನ 3:00 ಗಂಟೆಯಿಂದ 4:00 ಗಂಟೆಯವರೆಗೆ ದಾಳಿ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ವಾಪಸ್ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ಧ ಕಲಂ 87 ಕೆ.ಪಿ. ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ”  ಅಂತಾ ಸಾರಾಂಶ ಇರುತ್ತದೆ. ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಂಜೆ 5:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 44/2018 ಕಲಂ 87 ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕನಕಗಿರಿ ಪೊಲೀಸ್ ಠಾಣೆ  ಗುನ್ನೆ ನಂ. 19/18 ಕಲಂ 279. 338. 304 (ಎ) ಐಪಿಸಿ
ದಿನಾಂಕ: 18-02-2018 ರಂದು ಬೆಳಗಿನ ಜಾವ 1-30 ಗಂಟೆ ಸುಮಾರಿಗೆ ಶ್ರೀ ಶಾಂತಪ್ಪ ಬೆಲ್ಲದ್ ಎ.ಎಸ್.ಐ ಕನಕಗಿರಿ ಠಾಣೆ ಇವರು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ್ ಗಯಾಳು ಲಾಲಸಾಬ ತಂದೆ ಬಾಬು ಸಾಬ ಮಕ್ಕಂದಾರ್ ಸಾ. ಕನಕಗಿರಿ ಇವನ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕುರಿತು ಹಾಜರ್ ಪಡೆಸಿದ್ದು ಲಾಲಸಾಬ್ ಇವರ ಹೇಳಿಕೆ ಸಾರಾಂಶವೆನೆಂದರೆ ನಿನ್ನೇ ದಿನಾಂಕ. 17-02-2018 ರಂದು ಮದ್ಯಾಹ್ನ ಫಿರ್ಯಾದಿ ಲಾಲಸಾಬ್ ಇತನು ತನ್ನ ಅಪಾಚಿ ಮೋ.ಸೈ. ತೆಗೆದುಕೊಂಡು ತನ್ನ ಸ್ಹೇಹಿತ ಹನುಮಂತಪ್ಪ ಪೂಜಾರ್ ಇತನನ್ನು ಕರೆದುಕೊಂಡು ಕೆಲಸದ ಗಂಗಾವತಿಗೆ ಹೋಗಿ  ವಾಪಸ್ ಕೆಲಸ ಮುಗಿಸಿಕೊಂಡು ರಾತ್ರಿ ಗಂಗಾವತಿಯಿಂದ  ಕನಕಗಿರಿಕಡೆ ಬರುತ್ತಿರುವಾಗ ರಾತ್ರಿ 9-30 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಕೆ.ಎಸ್.ಆರ್.ಟಿಸಿ.ಬಸ್ ಸಂ. ಕೆ.ಎ-32 ಎಫ್-2003 ನೇದ್ದರ ಚಾಲಕನು ತನ್ನ ಬಸ್ ನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಜೋರಾಗಿ ನಡೆಸಿಕೊಂಡು ತನ್ನ ಮುಂದೆ ಹೊರಟಿದ್ದ ದು ವಾಹನವನ್ನು ವರ್ ಟೇಕ್ ಮಾಡಲು ಹೋಗಿ ತನ್ನ ಬಸ್ ನ್ನು ರಸ್ತೆಯ ಬಲಗಡೆಗೆ ತೆಗೆದುಕೊಂಡಾಗ ಫಿರ್ಯಾದಿ ಮೋಟಾರ್ ಸೈಕಲ್ ಹಿಂದೆ ಕುಳಿತ ಹನುಮಂತಪ್ಪ ಪೂಜಾರ ತನ ತಲೆಗೆ ಎಮರ್ಜೆನ್ಸಿಡೋರ್ ನ  ಲಾಕ್ ಬಡಿದು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಾಗೂ ಫಿರ್ಯಾದಿ ಲಾಲಸಾಬ ಈತನಿಗ ಬಲಗಾಲು ಮುರಿದಂತಾಗಿ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಇರುತ್ತದೆ.ಕಾರಣ ಕೆ.ಎಸ್.ಆರ್.ಟಿಸಿ.ಬಸ್ ಸಂ. ಕೆ.ಎ-32 ಎಫ್-2003 ನೇದ್ದರ ಚಾಲಕ ಬಸವರಾಜ ಸಾ. ಹನಕುಂಟಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆ ಫಿರ್ಯುಆದಿ ಮೇಲಿನಿಂದ ಠಾಣಾ ಗು.ಸಂ. 19/18 ಕಲಂ 279. 338. 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Sunday, February 18, 2018

1] ಮುನಿರಾಬಾದ ಪೊಲೀಸ್ ಠಾಣೆ  ಗುನ್ನೆ ನಂ. 28/2018 ಕಲಂ 279, 337, 304(ಎ) ಐ.ಪಿ.ಸಿ.ಮತ್ತು 187 ಐ.ಎಂ.ವಿ ಆಕ್ಟ
ದಿನಾಂಕ: 18-02-2018 ರಂದು ರಾತ್ರಿ 12-00 ಗಂಟೆ ಸುಮಾರಿಗೆ ಬೂದಗುಂಪಾ ಕ್ರಾಸನಲ್ಲಿ ರಸ್ತೆ ಅಪಗಾತವಾಗಿರುತ್ತದೆ ಎಂದು ಠಾಣೆಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಅಲ್ಲಿ ಗಾಯಾಳು ಮಂಜಪ್ಪ ಇವರ ಹೇಳಿಕೆ ಪಡೆದಿದ್ದು ಸಾರಾಂಶವೆನೆಂದರೆ,ದಿನಾಂಕ 17-02-2018 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಪಿರ್ಯಾದಿ ಮಂಜಪ್ಪ ತಂದೆ ಬಾಲಪ್ಪ ಇವರು ಕೊಪ್ಪಳ –ಗಂಗಾವತಿ ರಸ್ತೆಯ ಮೇಲೆ ತಮ್ಮ ಮೋ.ಸೈ.ನಂ.ಕೆ.ಎ.37/ಯು.7384 ಹೊಲಕ್ಕೆ ಹೋಗುತ್ತಿರುವಾಗ ಅವರ ಸಂಬಂದಿಕರಾದ ಮಂಜಪ್ಪ ತಂದೆ ಬೀರಪ್ಪ ಇವರಿಗೆ ಮಾತನಾಡಿಸುತ್ತಾ ನಿಂತಿರುವಾಗ ಅದೆ ರಸ್ತೆಯ ಮೇಲೆ ನಡೆದುಕೊಂಡು ಮಹೇಶ ತಂದೆ ರಾಮಲಾಲ್ ಸಾ: ಉತ್ತರ ಪ್ರದೇಶ ಹಾ;ವ: ಬೂದಗುಂಪಾ ಕ್ರಾಸ್ ಇವರು ಹೋಗುತ್ತಿರುವಾಗ ಕೊಪ್ಪಳದ ಕಡೆಯಿಂದ ಯಾವುದೋ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಹೇಶನಿಗೆ ಮತ್ತು ನಮಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಮಹೇಶ ಇವನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪಿರ್ಯಾದುದಾರಿಗೆ ಮತ್ತು ಮಂಜಪ್ಪನಿಗೆ ಗಾಯ ಪೆಟ್ಟುಗಳಾಗಿರುತ್ತವೆ,ಮತ್ತು ಲಾರಿ ಚಾಲಕನು ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿರುತ್ತಾನೆ ಆದ್ದರಿಂದ ಲಾರಿಯ ನಂಬರ್ ಮತ್ತು ಚಾಲಕನ ವಿಳಾಸ ತಿಳಿದಿರುವದಿಲ್ಲಾ. ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 28/2018 ಕಲಂ 279, 337, 304(ಎ) ಐ.ಪಿ.ಸಿ.ಮತ್ತು 187 ಐ.ಎಂ.ವಿ ಆಕ್ಟ ರಿತ್ಯ ಪ್ರಕರಣ ದಾಖಲಿಸಿಕೊಂಡಿರುತ್ತದೆ.
2] ಕೂಕನೂರು ಪೊಲೀಸ್ ಠಾಣೆ  ಗುನ್ನೆ ನಂ.  38/2018  ಕಲಂ: 32, 34, K.E. Act 
ದಿನಾಂಕ: 17-02-2018 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಬಟಪನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಿಬ್ಬರೂ ಒಂದು  ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ.ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಂದ  2531/-ರೂ. ಮೌಲ್ಯದ 90 M.L.HAYWARDS CHEERS WHISKY ಕಂಪನಿಯ ಒಟ್ಟು 90  ಮದ್ಯದ ಟೇಟ್ರಾ ಪ್ಯಾಕ್(ಪಾಕೇಟ್)ಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 200 /- ರೂ. ಗಳನ್ನು ಜಪ್ತ ಮಾಡಿಕೊಂಡು ಮದ್ಯ ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಆರೋಪಿತರು & ಮುದ್ದೆಮಾಲನ್ನು ಹಾಜರಪಡಿಸಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ದೂರು ನೀಡಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2018  ಕಲಂ: 32, 34, K.E. Act  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ  ಗುನ್ನೆ ನಂ. 32/2018  ಕಲಂ. 279, 304 (A) IPC  & 187 IMV Act.
ದಿನಾಂಕ:-18-02-2018 ರಂದು ಬೆಳಗಿನ ಜಾವ 00-25 ಗಂಟೆಗೆ ಪಿರ್ಯಾದಿದಾರರಾದ ದೇವೇಂದ್ರಗೌಡ ತಂದೆ ಭೀಮನಗೌಡ ಮಾಲೀಗೌಡ್ರ ವಯ 32 ವರ್ಷ ಜಾತಿ ಲಿಂಗಾಯತ ಉ. ಹೊಟೆಲ್ ಕೆಲಸ ಸಾ. ರಾಜೀವ್ ಗಾಂಧಿ ನಗರ ಕಾರಟಗಿ ತಾ. ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರ ತಂಗಿಯ ಗಂಡನಾದ ವಿರೇಶ ತಂದೆ ಶಿವಪ್ಪ ಸೂಳೇಕಲ್ ವಯ 27 ವರ್ಷ ಈತನು  ದಿನಾಂಕ:17-02-2018 ರಂದು ರಾತ್ರಿ 7-00 ಗಂಟೆಯಿಂದ 7-30 ಗಂಟೆ ಅವಧಿಯಲ್ಲಿ ಕಾರಟಗಿ ಚಳ್ಳೂರು ರಸ್ತೆಯ ಮೇಲೆ ಕಾರಟಗಿಯ ಕಾಮಗುಂಡಮ್ಮ ಕ್ಯಾಂಪ್ ದ 31 ನೇ ಕೇನಾಲ್ ಹತ್ತಿರ ತನ್ನ ಕೆಲಸದ ನಿಮಿತ್ಯ ಹೋಗಿದ್ದಾಗ ಯಾವುದೋ ವಾಹನದ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವಿರೇಶ ಈತನಿಗೆ ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಆತನ ತಲೆಗೆ ಮತ್ತು ಬಲಗೈಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ನಾನು ನನ್ನ ಅಳಿಯನ ತಾಯಿ ಮತ್ತು ನನ್ನ ತಂಗಿಗೆ ಹಾಗೂ ಊರಿನ ಹಿರಿಯರಿಗೆ ವಿಷಯ ತಿಳಿಸಿ ವಿರೇಶ ಈತನ ಶವವನ್ನು ಕಾರಟಗಿ ಸರಕಾರಿ ಆಸ್ಪತ್ರೆಯ ಶವಾಗಾರದ ಕೊಣೆಯಲ್ಲಿ ಹಾಕಿ ಈಗ ಬಂದು ದೂರು ಸಲ್ಲಿಸಿದ್ದುಸದರಿ  ನನ್ನ ಅಳಿಯನಿಗೆ ಠಕ್ಕರ್ ಕೊಟ್ಟು ಅಪಘಾತಪಡಿಸಿದ ಯಾವುದೋ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, February 17, 2018


1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ. 77/2018  ಕಲಂ.  279, 337, 338, 304(ಎ) IPC ಮತ್ತು 187 IMV Act.
ದಿ: 16-02-2018 ರಂದು ಸಂಜೆ 7-30 ಗಂಟೆಗೆ ಫಿರ್ಯಾದಿದಾರರು ಒಣಬಳ್ಳಾರಿ ಗ್ರಾಮದಿಂದಾ ತಮ್ಮ ಅಣ್ಣ ಗವಿಸಿದ್ದಪ್ಪ ಹಡಪದ ಇವರ ಹೆಂಡತಿ ಶೃತಿ ಇವರಿಗೆ ಹೊಸತಾಗಿ ಮೊದಲು ತಮ್ಮ [ಗಂಡನ] ಮನೆಗೆ ನಡೆಯಲು ಅಂತಾ ಕರೆದುಕೊಂಡು ಚಾಲಕ ಮೈಲಾರಿ ಸಾ: ಸಂಗಾಪೂರ ಇವರ ಹೊಸ ಅಪ್ಪೆ ಗೂಡ್ಸ ದಲ್ಲಿ ಕುಳಿತುಕೊಂಡು ಮಾರ್ಗದ ಕೊಪ್ಪಳ-ಕುಷ್ಟಗಿ ರಸ್ತೆಯ ಇರಕಲಗಡಾ ದಾಟಿ ಹಟ್ಟಿ ಕ್ರಾಸ್ ಸಮೀಪ ತಮ್ಮ ವಾಹನದ ಚಾಲಕನು ರಸ್ತೆಯ ಬದಿಯಲ್ಲಿ ಓಡಿಸಿಕೊಂಡು ಹೊರಟಿದ್ದಾಗ, ಅದೇ ಸಮಯಕ್ಕೆ ಹಿಂದಿನಿಂದ ಬೊಲೆರೋ ಪಿಕಪ್ ನಂ: ಕೆಎ-37/ಎ-8222 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಫಿರ್ಯಾದಿತರ ವಾಹನದ ನಿಗದಿತ ಅಂತರ ಕಾಪಾಡದೇ ಓವರ್ ಟೇಕ್ ಮಾಡಿಕೊಂಡು ಬಂದು ಫಿರ್ಯಾದಿಯ ಅಪ್ಪೆ ವಾಹನಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕನು ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ 14 ಜನರು ಗಾಯಗೊಂಡಿದ್ದು  ಅಪ್ಪೆ ವಾಹನದಲ್ಲಿದ್ದ ಪಾಲಿಕೆಮ್ಮ ತಂದೆ ಗವಿಸಿದ್ದಪ್ಪ ಹಡಪದ. ವಯ: 6 ವರ್ಷ, ಸಾ: ಒಣಬಳ್ಳಾರಿ. ಇವಳಿಗೆ ತಲೆಗೆ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ.  40/2018  ಕಲಂ. 143, 147, 395, 323, 504 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989.
ದಿನಾಂಕ:- 16-02-2018 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ  ಲಕ್ಷ್ಮಣ ತಂದೆ ಯಮನಪ್ಪ ಭೋವಿ ವಯಸ್ಸು 33, ಜಾ. ಬೋವಿ ಸಾ. ಕೆಸರಹಟ್ಟಿ, ಇವರು ದೂರು ನೀಡಿದ್ದು ಮುಂಜಾನೆ ಸುಮಾರು 10-00 ಗಂಟೆಗೆ ನಮ್ಮ ಊರು ಕೆಸರಹಟ್ಟಿ ಗ್ರಾಮದ ರೋಡಿನಲ್ಲಿ ನಿಂತುಕೊಂಡಿದ್ದಾಗ, ಆಗ ನನ್ನ ಹತ್ತಿರ ಬಂದ ಲಿಂಗಾಯತ ಜನಾಂಗದ (1) ಮಂಜುನಾಥ ತಂದೆ ಮಲ್ಲಿಕಾರ್ಜುನ ಗುಡೂರ ಎಂಬಾತ ಎನಲೇ ವಿಡಿಯೋ ಮಾಡುತ್ತಿಯಾ ವಡ್ಡ ಸೂಳೇಮಗ ನಿನ್ನನ್ನು ಒದ್ದು ಬಿಡತಿನಿ ಎಂದು ಕೈಯಿಂದ ನನ್ನ ಮುಖಕ್ಕೆ ಹೊಡೆದನು. ಇತರೆ 10 ಜನರು ಅವನೊಂದಿಗೆ ಸೇರಿ ನನಗೆ ಹೊಡೆ ಬಡಿ ಮಾಡಿದರು, ಆಗ ಜಗಳ ಬಿಡಿಸಲು ಬಂದ ನನ್ನ ತಂದೆ ಯಮನಪ್ಪ ಇವರಿಗೆ ಹೊಡೆದರು. ಮೇಲೆ ತೋರಿಸಿರುವ ಆರೋಪಿತರೆಲ್ಲರೂ ಲೇ ವಡ್ಡ ಸೂಳೆ ಮಕ್ಕಳ ನಿಮ್ಮನ್ನು ಊರು ಬಿಟ್ಟು ಓಡಿಸುತ್ತೇವೆ, ಎಂದು ಜಾತಿ ನಿಂದನೇ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
3] ಗಂಗಾವತಿ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ. 41/2018  ಕಲಂ. 143, 147, 148, 341, 395, 323, 504, 506 ಸಹಿತ 149  ಐ.ಪಿ.ಸಿ:
ದಿನಾಂಕ:- 16-02-2018 ರಂದು ರಾತ್ರಿ 10:45 ಗಂಟೆಗೆ ಫಿರ್ಯಾದಿದಾರರಾದ  ಶರಣಪ್ಪ ತಂದೆ ಮಲ್ಲಿಕಾರ್ಜುನ ಗುಡೂರು, 42 ವರ್ಷ, ಇವರು ದೂರು ನೀಡಿದ್ದು ಮುಂಜಾನೆ ಸುಮಾರು   10-00 ಗಂಟೆಯ ಸುಮಾರಿಗೆ ನಾನು ಕೆಸರಹಟ್ಟಿ ಗ್ರಾಮದ ಶಾಲೆಯ ಮುಂದುಗಡೆ ನಿಂತುಕೊಂಡಿದ್ದಾಗ, ನಮ್ಮ ಗ್ರಾಮದ ಮೆಹಬೂಬ ಸಾಬ ಹಾಗೂ ಭೀಮ ತಂದೆ ಯಂಕರೆಡ್ಡಿ ಲಾಯದುಣಸಿ ಇಬ್ಬರೂ ಹಣಕಾಸಿನ ವಿಷಯಕ್ಕೆ ಜಗಳ ಮಾಡುತ್ತಿದ್ದಾಗ ನಮ್ಮ ಗ್ರಾಮದ (1) ವಡ್ಡರ ಲಕ್ಷ್ಮಣ ತಂದೆ ಯಮನಪ್ಪ ಈತನು ಅಲ್ಲಿಗೆ ಬಂದು ಲೇ ಲಿಂಗಾಯತ ಸೂಳೇ ಮಕ್ಕಳದು ಜಾಸ್ತಿಯಾಗಿದೆ ಇನ್ನು ಮೇಲೆ ಕೇಸರಹಟ್ಟಿ ಗ್ರಾಮದಲ್ಲಿ ಈ ಸುಳೇಮಕ್ಕಳದು ನಡೆಯಲು ಬಿಡಬಾರದು ನಮ್ಮ ಜಾತಿಯ ತಂಗಡಗಿ ಹಾಗೂ ನಮ್ಮ ಜಾತಿಯ ಅನ್ಸಾರಿ ಶಾಸಕರಿದ್ದು ಎಲ್ಲಾ ಅಧಿಕಾರ ನಮ್ಮಲ್ಲಿ ಇದ್ದು, ಹಿಂದೂ ಮುಸ್ಲೀಂರ ಜಗಳ ಹಚ್ಚಿ ಊರಲ್ಲಿ ಬಣ ಮಾಡಿದರೆ ಈ ಸೂಳೇಮಕ್ಕಳ ಸೊಕ್ಕು ಮುರಿಯಬಹುದು ಅಂತಾ ಮಹಿಬೂಬಸಾಬನಿಗೆ ಹೇಳುತ್ತಿದ್ದಾಗ ಮತ್ತು ಅವರ ಜಗಳ ಮಾಡುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿಯಲು ಪ್ರಯತ್ನಿಸಿದಾಗ ನಾನು ನಮ್ಮ ಗ್ರಾಮದಲ್ಲಿ ಶಾಂತಿಯಿಂದ ನಾವು ಬಾಳುವೆ ಮಾಡುತ್ತಿದ್ದು, ನೀನು ಯಾಕೆ ಈ ರೀತಿ ಜಗಳ ಹಚ್ಚುವ ಮಾತುಗಳನ್ನು ಆಡುತ್ತೀಯಾ ಎಂದು ಲಕ್ಷ್ಮಣನಿಗೆ ಹೇಳಿದಾಗ ಆತನು ನನಗೆ ಲೇ ಸೂಳೇ ಮಗನೇ ನೀನು ಆ ಕಡೆ ಬಣದ ವ್ಯಕ್ತಿಯಾಗಿ ಮಾತಾಡುತ್ತೀಯಾ ಎಂದು ನನಗೆ ಬೈಯ್ದು ನನ್ನನ್ನು ಹೊಡೆಯಲು ಬಂದಾಗ ನಾನು ಸುಮ್ಮನಗೆ ನನ್ನ ಮನೆಯ ಕಡೆಗೆ ಹೊರಟಾಗ ದಾರಿಯಲ್ಲಿ ಬಾವಿಯ ಹತ್ತಿರ ಬಂದಾಗ ಲಕ್ಷ್ಮಣ ಈತನು ತನ್ನ ಿತರೆ 15 ಸಹಚರರೊಂದಿಗೆ ಬಾಯಿ ಮಾಡುತ್ತಾ ಬೈಯ್ಯುತ್ತಾ ಏಕಾಏಕಿಯಾಗಿ ನನ್ನ ಹತ್ತಿರ ಓಡೋಡಿ ಬಂದು ನನ್ನನ್ನು ಹಿಡಿದುಕೊಂಡು ಕೈಗಳಿಂದ ಹೊಡಿ-ಬಡಿ ಮಾಡಿದ್ದು, ಇದರಿಂದ ನನ್ನ ಬಲಗಾಲಿಗೆ ಗಾಯವಾಗಿದ್ದು, ಅವರು ಲೇ ಸೂಳೇ ಮಗನೇ ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಬಾಯಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಲಕ್ಷ್ಮಣ ಈತನು ನನ್ನ ಕೊರಳಲ್ಲಿ ಇದ್ದ 3 ತೊಲೆ ಬಂಗಾರದ ಸರವನ್ನು ಕಿತ್ತುಕೊಂಡನು.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Friday, February 16, 2018

ಕೊಪ್ಪಳ ಜಿಲ್ಲಾ ಪೊಲೀಸ್ ನೂತನ ವೆಬ್ ಸೈಟ್ ಉದ್ಘಾಟನೆ




ಇಂದು ಕೊಪ್ಪಳ ಜಿಲ್ಲಾ ಪೊಲೀಸ್ ನೂತನ ವೆಬ್ ಸೈಟ್ (website) ನ ಉದ್ಘಾಟನೆಯನ್ನು ಶ್ರೀ ವೆಂಕಟ್ ರಾಜಾ, ಸಿಇಒ, ಜಿಲ್ಲಾ ಪಂಚಾಯತ್ ರವರು ನೆರವೇರಿಸಿದರು. ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
PLEASE VISIT WWW.KOPPALPOLICE.IN 

Thursday, February 15, 2018

Wednesday, February 14, 2018

APC Physical Exam on 15-02-2018 and 16-02-2018




1] ಕೊಪ್ಪಳ ನಗರ ಪೊಲೀಸ್ ಠಾಣೆ  ಗುನ್ನೆ ನಂ. 37/2018  ಕಲಂ. 392 IPC.
ದಿನಾಂಕ: 13-02-2018 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀದೇವಿ ಪೂಜಾರ ಗಂಡ ಹನುಮಪ್ಪ ಮತ್ತು ತನ್ನ ಗಂಡ ಹನುಮಪ್ಪ ಜಂತ್ಲಿ ಕೂಡಿಕೊಂಡು ಇಂದು ಮಹಾಶಿವರಾತ್ರಿ ಹಬ್ಬ ಇದ್ದುದ್ದರಿಂದ ತಾವಿಬ್ಬರೂ ಕೂಡಿಕೊಂಡು ತಮ್ಮ ಮನೆಯಿಂದ ಸಮೀಪದ ರಸ್ತೆಯಲ್ಲಿ ಜಾಗಿರದಾರ ಲೇಔಟ್ನಲ್ಲಿ ಮುಳ್ಳುಕಂಟಿಯಲ್ಲಿ, ಕತ್ತಲಲ್ಲಿ ನಡೆದುಕೊಂಡು ನಗರದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದೆವು. ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ನಾವು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಗುಡಿಯಿಂದ ಅದೇ ರಸ್ತೆಯಲ್ಲಿ ನಾವು ನಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದಾಗ. ಜಾಗಿರದಾರ ಲೇಔಟ್ನಲ್ಲಿ ನನ್ನ ಗಂಡ ಸ್ವಲ್ಪ ಮುಂದೆ ನಾನು ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ಕತ್ತಲು ಅಲ್ಲದೆ ಮುಳ್ಳುಕಂಟಿ ಇತ್ತು. ನಾವು ಅಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಲಗಡೆಗೆ ಹಿಂದಿನಿಂದ ಯಾರೋ ಒಬ್ಬ ಅಪರಿಚಿತ ದುಷ್ಕರ್ಮಿಯು ಬಂದು ನನ್ನ ಕೊರಳಲ್ಲಿದ್ದ ಬಂಗಾರದ ಮಂಗಳ ಸೂತ್ರ ಅಂ.ತೂ: 45 ಗ್ರಾಂ ನೇದ್ದನ್ನು ಬಲವಂತವಾಗಿ ಕಿತ್ತುಕೊಂಡು ನನ್ನ ಹಿಂದಿನಿಂದ ಓಡಿ ಹೋದನು. ನಾನು ಕಳ್ಳ-ಕಳ್ಳ ಅಂತಾ ಕೂಗಾಡಿದೆನು. ಆಗ ನನ್ನ ಗಂಡ ಅವನನ್ನ ಹಿಡಿಯಲು ಸ್ವಲ್ಪ ಹಿಂದೆ ಬೆನ್ನತ್ತಿ ಹೋಗಿ ವಾಪಸು ಬಂದರು. ನನ್ನ ಕೊರಳಲ್ಲಿದ್ದ ಸರವನ್ನು ಕಿತ್ತುಕೊಂಡು ನನ್ನ ಹಿಂದಿನಿಂದ ಹೋಗಿದ್ದು, ಅಲ್ಲದೆ ಅಲ್ಲಿ ಕತ್ತಲು ಮುಳ್ಳುಕಂಟಿಯಿಂದ ಕೂಡಿದ್ದರಿಂದ ನಾನು ಅವನನ್ನ ಸರಿಯಾಗಿ ನೋಡಿರುವುದಿಲ್ಲಾ. ಕಾರಣ ಮಾನ್ಯರವರು ನನ್ನ ಕೊರಳಲ್ಲಿದ್ದ ಬಂಗಾರದ ಮಂಗಳ ಸೂತ್ರ ಅಂದಾಜು ತೂಕ 45 ಗ್ರಾಂ ಒಟ್ಟು ಅಂ.ಕಿ.ರೂ: 1,15,000=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.  
2] ಬೇವೂರ ಪೊಲೀಸ್ ಠಾಣೆ  ಗುನ್ನೆ ನಂ.  15/2018  ಕಲಂ. 323, 504, 506, 109 ಐ.ಪಿ.ಸಿ ಮತ್ತು 3(1)(R), 3(1)(S) SC/ST PA Amendment Act-2015.
ದಿನಾಂಕ 11.02.2018 ರಂದು ಮುಂಜಾನೆ 10:45 ಗಂಟೆಗೆ ಫಿರ್ಯಾದಿದಾರರು ಬಸವರಾಜಪ್ಪನ ಮನೆಯ ಹತ್ತಿರ ನಿಂತಿದ್ದು ಆಗ ಆರೋಪಿ ನಂ 01 ಇತನು ಏಕಾ ಏಕಿಯಾಗಿ ಬಂದು ಫಿರ್ಯಾದಿದಾರರ ಕಪಾಳಕ್ಕೆ ಮತ್ತು ಹೊಟ್ಟೆಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಮಾರಣಾಂತಿಕವಾಗಿ ಕೈಯಿಂದ ಹೊಡೆದು ಹಲ್ಲೇ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಇರುತ್ತದೆ. ರ್ಯಾದಿದಾರರು ಆರೋಪಿ ನಂ: 02 ಇತನಿಗೆ ಒಂದು ಕೋಟಿ ರೂಪಾಯಿ ಹಗರಣವಾಗಿದ್ದು ಅದನ್ನು ಪಂಚಾಯತ ಸಭೆಯಲ್ಲಿ ಮತ್ತು ಲಿಖಿತವಾಗಿ ಕೇಳಿದರೂ ಕೊಡದೇ ಹಲ್ಲೆ ಮಾಡಿಸಿದ್ದು ಇರುತ್ತದೆ. ಆರೋಪಿ ನಂ: 02 ರಿಂದ 05 ನೇದ್ದವರ ಕುಮ್ಮಕ್ಕಿನಿಂದ ಮತ್ತು ಪ್ರಚೋದನೆ ನೀಡಿ ಆರೋಪಿ ನಂ: 01 ಇತನಿಂದ ರ್ಯಾದಿದಾರರಿಗೆ ಹಲ್ಲೆ ಮಾಡಿಸಿ ಕೊಲೆ ಬೇದರಿಕೆ ಮಾಡಿಸಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ  ಗುನ್ನೆ ನಂ. 14/2018  ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 13-02-2018 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಗಾಯಾಳು ಶರಣಪ್ಪ ತಂದೆ ಫಕೀರಪ್ಪ ಪೂಜಾರ, ವಯ: 32 ವರ್ಷ ಸಾ: ಗೊಬ್ಬರಗುಂಪಿ ಹಾ:ವ: ಸಂಗನಾಳ ತಾ: ಯಲಬುರ್ಗಾ ಈತನು ಬಹಿರ್ದೇಸೆಗೆಂದು ಯಲಬುರ್ಗಾ-ಕುಕನೂರು ರಸ್ತೆಯನ್ನು ದಾಟಿ, ರಸ್ತೆಯ ಬದಿಗೆ ರಾಮಪ್ಪ ಗುರಿಕಾರ ಇವರ ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ತಾನು ನಡೆಸುತ್ತಿದ್ದ ಕಾರನ್ನು ಯಲಬುರ್ಗಾ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಶರಣಪ್ಪನಿಗೆ ಹಿಂದಿನಿಂದ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ಶರಣಪ್ಪನಿಗೆ ತಲೆಯ ಹಿಂದೆ ಭಾರಿ ಸ್ವರೂಪದ ರಕ್ತಗಾಯ ವಾಗಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, February 8, 2018

ನಾಲ್ಕು ಜನ ಬ್ಯಾಗ ಕಳ್ಳರ ಬಂಧನ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಾಪರಸ್ಥರು ವ್ಯಾಪಾರ ಮುಗಿಸಿಕೊಂಡು  ಮನೆಗೆ ಹೋಗುವಾಗ ಅವರ ವ್ಯಾಪಾರದ ಹಣ ಇರುವ ಬ್ಯಾಗಗಳ ಕಳ್ಳತನ ಮಾಡುವ ಪ್ರಕರಣಗಳು ದಾಖಲಾಗಿದ್ದು ಸದರಿ ಪ್ರಕರಣಗಳ ಪತ್ತೆಗಾಗಿ ಮಾನ್ಯ ಎಸ್ ಪಿ ಕೊಪ್ಪಳ ರವರಾದ ಶ್ರೀ ಡಾ:: ಅನೂಪ ಶೆಟ್ಟಿ ಐ.ಪಿ ಎಸ್,ಮಾನ್ಯ ಡಿ.ಎಸ್.ಪಿ ಗಂಗಾವತಿ ರವರಾದ ಶ್ರೀ ಸಂತೋಷ ಬಿ ಬನ್ನಟ್ಟಿ ರವರ ಮಾರ್ಗದರ್ಶದನಲ್ಲಿ ಗಂಗಾವತಿ ನಗರ ಠಾಣೆಯ ಇನ್ಸಪೆಕ್ಟರವರಾದ ಶ್ರೀ ರಾಜಕುಮಾರ ವಾಜಂತ್ರಿ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಎ.ಎಸ್.ಐ ಕಾಮಣ್ಣ, ಅನೀಲಕುಮಾರ,ಚಿರಂಜೀವಿ, ಮಂಜುನಾಥ, ವಿಶ್ವನಾಥ, ರಾಘವೇಂದ್ರ, ಭೋಜಪ್ಪ, ಮಲ್ಲಪ್ಪ ಹಾಗೂ ಸಿಡಿಆರ್ ಘಟಕದ ಸಿಬ್ಬಂದಿಯಾದ ಪ್ರಸಾದ್ , ಕೋಟೇಶ ರವರ ತಂಡದೊಂದಿಗೆ ಇಂದು ದಿನಾಂಕ 08-02-2018 ರಂದು ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಫಿತರಾದ 01] ಮಂಜಪ್ಪ ತಂದೆ ದುರುಗಪ್ಪ ವಯಾ: 50 ವರ್ಷ ಜಾ: ಕೊರಮರು ಉ: ಕೂಲಿ ಕೆಲಸ ಸಾ: ಈದ್ಗಾ ನಗರ ,ಕಡೂರು ಜಿಲ್ಲೆ: ಚಿಕ್ಕಮಂಗಳೂರು 02]  ನಾಗರಾಜ ತಂದೆ ಗೋವಿಂದಪ್ಪ ವಯಾ: 27  ವರ್ಷ ಜಾ: ಕೊರಮರು ಉ: ಡ್ರೈವರ ಕೆಲಸ ಸಾ: ರಾಜೀವಗಾಂಧಿ ನಗರ, ಕಡೂರು ಜಿ: ಚಿಕ್ಕಮಂಗಳೂರು 03]  ಯಲ್ಲಮ್ಮ ಗಂಡ ಗೋವಿಂದಪ್ಪ ವಯಾ: 50 ವರ್ಷ ಜಾ: ಕೊರಮರು ಉ: ಗಾರೆ ಕೆಲಸ ಸಾ: ಕಡೂರು  ಜಿ: ಚಿಕ್ಕ ಮಂಗಳೂರು.04]  ಸಾಕಮ್ಮ ಗಂಡ ಮಂಜಪ್ಪ ವಯಾ: 30 ವರ್ಷ ಜಾ: ಕೊರಮರು, ಉ: ಕೂಲಿ ಕೆಲಸ ಸಾ: ಕಡೂರು  ಜಿ: ಚಿಕ್ಕ ಮಂಗಳೂರು.ರವರಿಗೆ ದಸ್ತಗಿರಿ ಮಾಡಿ ಸದರಿಯವರಿಗೆ ವಿಚಾರಣೆಗೆ ಒಳಪಡಿಸಿ ಸದರಿಯವರ ಹೇಳಿಕೆಗಳ ಆಧಾರದ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ನಂ 18/2018 ಕಲಂ: 379 ಐಪಿಸಿ ಪ್ರಕರಣಕ್ಕೆ ಸಂಭಂದಿಸಿದಂತೆ 90,000/-, ಗುನ್ನೆ ನಂ 24/2017 ಕಲಂ: 392 ಐಪಿಸಿ ಪ್ರಕರಣಕ್ಕೆ ಸಂಭಂದಿಸಿದಂತೆ ನಗದು ಹಣ 10,000-00 ರೂ ಹಾಗೂ ಆರೋಫಿತರು ಕೃತ್ಯ ಕ್ಕೆ ಬಳಸಿದ್ದ ಒಂದು ನೋಕಿಯಾ ಮೊಬೈಲ್ ಅಂ. ಕಿ 1500-00 ರೂ , ಒಂದು ಟಾಟಾ ಸುಮೋ ನಂ ಕೆ.ಎ.02/ಎನ್.-6837 ಅಂ. ಕಿಂ 2,00,000-00 ರೂ ಒಟ್ಟು 3,01,500-00 ಬೆಲೆ ಬಾಳುವವುಗಳನ್ನು  ಜಪ್ತಿ ಪಡಿಸಿದ್ದು ಇರುತ್ತದೆ. ಸದರಿ ಆರೋಫಿತರು ಮಹರಾಷ್ಟ್ರ ಹಾಗೂ ಆಂದ್ರಪ್ರದೇಶದಲ್ಲಿಯೂ ಕೂಡಾ ಕಳ್ಳತನ ಮಾಡುವವರಾಗಿದ್ದ ಬಗ್ಗೆ ತಿಳಿದಿರುತ್ತದೆ. ಸದರಿ ಪತ್ತೆ ಕಾರ್ಯ ಮಾಡಿದ ತಂಡಕ್ಕೆ   ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

1] ಕುಷ್ಟಗಿ  ಪೊಲೀಸ್ ಠಾಣೆ  ಗುನ್ನೆ ನಂ.  37/2018  ಕಲಂ. 78(3) Karnataka Police Act & 420 IPC.
ಕುಷ್ಟಗಿ ಪಟ್ಟಣದ ಉಮಾ ವೈನ್ ಶಾಪ್ ಹತ್ತಿರ ಒಂದು ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಆರೋಪಿತನನ್ನು ಹಾಗೂ ಅವನಿಂದ ಜೂಜಾಟದ ಒಟ್ಟು ಹಣ 1660=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿ  ಜಪ್ತಿ ಮಾಡಿಕೊಂಡಿದ್ದು ಸದರಿ ಆರೋಪಿತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಚೀಟಿ ಬರೆದುಕೊಟ್ಟು ಅವರಿಂದ ಹಣ ಪಡೆದು ಮೋಸ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  22/2018  ಕಲಂ. 143, 147, 148, 341, 504, 307, 506  ಸಹಿತ 149 ಐ.ಪಿ.ಸಿ ಮತ್ತು 3(2)(5)5(ಎ) ಎಸ್.ಸಿ/ಎಸ್.ಟಿ. ಕಾಯ್ದೆ:
ಆರೋಪಿತರು ದಿ:07-02-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಳಿಯ ಗಣೇಶನು ಗಿಣಿಗೇರಿ ಗ್ರಾಮದ ಜಾನಾ ಇವರ ಮೊಬೈಲ್ ಶಾಪ್ ಮುಂದೆ ಕರೆನ್ಸಿ ಹಾಕಿಸಲು ಹೊರಟಿದ್ದಾಗ, ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ ರಾಡು ಹಿಡಿದುಕೊಂಡು ಬಂದು ಗಣೇಶನಿಗೆ ತಡೆದು ನಿಲ್ಲಿಸಿ ಏಕಾಏಕೀ ಕಬ್ಬಿಣದ ರಾಡು ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಅಲ್ಲದೇ ಲೇ ಕನಕಾಪೂರ ತಾಂಡಾದ ಸೂಳೇಮಕ್ಕಳೆ ನೀವೇಲ್ಲಾ ಕಬಡ್ಡಿಯಲ್ಲಿ ನಮಗೆ ಸೋಲಿಸಿ ಅವಮಾನ ಮಾಡಿದ್ದಿರಿ ಅಲ್ಲದೇ ಈಗ ಬರೊಬ್ಬರಿ ಸಿಕ್ಕಿರಿ ನಿಮ್ಮನ್ನೆಲ್ಲಾ ಹೊಡೆದು ಸಾಯಿಸಿದರೆ ನಾವೇ ಮುಂದೆ ಕಬಡ್ಡಿಯಲ್ಲಿ ಡಾನ್ ಎಂದವರೇ, ಅಲ್ಲದೇ ಈ ಸೂಳೇಮಗನಿಗೆ ತಮ್ಮ ತೋಟಕ್ಕೆ ತೆಗೆದುಕೊಂಡು ಹೋಗಿ ಮುಗಿಸಿಬಿಡೋಣ ಎಂದು ತಮ್ಮ ಮೋಟಾರ ಸೈಕಲ್ ದಲ್ಲಿ ಕರೆದುಕೊಂಡು ಭೀಮನೂರ ರಸ್ತೆಯ ಬಾಜು ಇರುವ ತಮ್ಮ ತೋಟದ ಹತ್ತಿರ ಹೋಗಿ ರಾಡು, ಮತ್ತು ಕಟ್ಟಿಗೆಯಿಂದ ಗಣೇಶನ ಕೈಗಳಿಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಗಣೇಶನ ಎರಡೂ ಮೊಣಕೈ ಗಳ ಮೇಲೆ ಭಾರಿ ಪೆಟ್ಟಾಗಿ ಮೂಳೆ ಮುರಿದಿರುತ್ತವೆ. ಮತ್ತು ಬಲಕಾಲ ಪಾದದ ಹತ್ತಿರ ಭಾರಿ ಒಳಪೆಟ್ಟಾಗಿ ಬಾವು ಬಂದಿದೆ. ಮತ್ತು ತಲೆಯಲ್ಲಿ ರಕ್ತಗಾಯ ವಾಗಿದೆ. ಮತ್ತು ಮೈ ಕೈ ಗೆ ಒಳಪೆಟ್ಟಾಗಿದ್ದು ಇರುತ್ತದೆ. ಈ ಸೂಳೇಮಗ ಒಬ್ಬನೇ ಸಿಕ್ಕಿದ್ದಾನೆ ಅವನು ಸತ್ತನಲೇ ಇದು ನಮ್ಮ ಮೇಲೆ ಬರಬಾರದೆಂದು ತಮ್ಮ ತಮ್ಮಲ್ಲಿ ಮಾತನಾಡುತ್ತಾ ತಮ್ಮ ಗಾಡಿಯ ನಡುವೆ ಗಣೇಶನಿಗೆ ಹಾಕಿಕೊಂಡು ತೋಟದಿಂದಾ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಮುಂದೆ ಬಂದು ಮೇನ ರೋಡ ಬಾಜು ಗಣೇಶನಿಗೆ ಕೆಡವಿದ್ದು ಅಲ್ಲದೇ ಗಣೇಶನಿಗೆ ಹೊಡೆದು ಸಾಯಿಸಿದ ಬಗ್ಗೆ ಯಾರ ಮುಂದೆ ಹೇಳಬಾರದೆಂದು ಮಾತನಾಡಿಕೊಂಡು, ಅಲ್ಲಿಂದ ಎಲ್ಲರೂ ವಾಪಾಸ್ ಗಿಣಿಗೇರಿ ಕಡೆಗೆ ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ  ಗುನ್ನೆ ನಂ.  29/2018  ಕಲಂ. 379 ಐ.ಪಿ.ಸಿ:

ಪಿರ್ಯಾಧಿದಾರರು ಹಾಗೂ ಇನ್ನೊಬ್ಬ ಲಾರಿ ಚಾಲಕನು ದಿನಾಂಕ 03-02-2018 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಲಾರಿ ನಂ:ಕೆಎ 25 / ಸಿ 8882 ನೇದ್ದರಲ್ಲಿ  ನೇದ್ದರಲ್ಲಿ ಅಹ್ಮದಬಾದನಿಂದ ಗಂಗಾವತಿಗೆ ಸರಕುಗಳನ್ನು ಲೋಡ್ ಮಾಡಿಕೊಂಡು ಹೊರಟಿದ್ದು ದಿನಾಂಕ: 04-02-2018 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 05-02-2018 ರ ಮದ್ಯಾಹ್ನ 12-54 ಗಂಟೆಯ ಮಧ್ಯದ  ಅವಧಿಯಲ್ಲಿ  ಮಹರಾಷ್ಟ್ರದ ಕರಾಡನಿಂದ ಗಂಗಾವತಿಗೆ ಬರುವ ಮಾರ್ಗದ ಮಧ್ಯದಲ್ಲಿ ಯಾರೋ ಕಳ್ಳರು ಲಾರಿ ಮೇಲೆ ಹತ್ತಿ ಲಾರಿಗೆ ಹೊದಿಸಿದ್ದ ತಾಡಪತ್ರಿ ಹಾಗೂ ತಂತಿಯ ಜಾಳಿ ಕಟ್ ಮಾಡಿ ಲಾರಿಯಲ್ಲಿದ್ದ ಅಂದಾಜು 1,04,142-00 ರೂ ಬೆಲೆ ಬಾಳುವ ಎಲ್ ಆರ್ ನಂ : 1018059768 ನೇದ್ದರಲ್ಲಿ ಒಂದು ಬಟ್ಟೆಯ ಗಂಟು , ಎಲ್ ಆರ್ ನಂ : 1018060023 ನೇದ್ದರಲ್ಲಿ ಒಂದು ಬಟ್ಟೆಯ ಗಂಟು ಒಟ್ಟು ಎರಡು ಬಟ್ಟೆಯ  ಗಂಟುಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Friday, February 2, 2018

1] ಯಲಬುರ್ಗಾ ಪೊಲೀಸ್ ಠಾಣೆ  ಗುನ್ನೆ ನಂ.  11/2018  ಕಲಂ. 78(3) Karnataka Police Act.
ದಿನಾಂಕ: 01-02-2018 ರಂದು ಸಂಜೆ 8-10 ಗಂಟೆಗೆ ಠಾಣಾ ವ್ಯಾಪ್ತಿಯ ವಜ್ರಬಂಡಿ ಗ್ರಾಮದ ಶ್ರೀಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 510/-ರೂ. ಒಂದು ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಅ.ಕಿ ಇಲ್ಲ. ನೇದ್ದುವುಗಳೊಂದಿಗೆ ಸಿಕ್ಕಿಬಿದ್ದಿದ್ದು  ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ  ಪೊಲೀಸ್ ಠಾಣೆ  ಗುನ್ನೆ ನಂ.  26/2018  ಕಲಂ. 78(3) Karnataka Police Act.
ದಿನಾಂಕ 01-02-2018 ರಂದು ರಾತ್ರಿ 8-30 ಗಂಟೆಗೆ ಆರೋಪಿತರಾ(01) ವೀರಭದ್ರಗೌಡ ತಂದೆ ಕಿನ್ನಾರೇಶಪ್ಪ ಕಂಪ್ಲಿ ವಯಸ್ಸು 31 ವರ್ಷ ಜಾ: ಲಿಂಗಾಯತ ಸಾ: ಮುಸ್ಟೂರ ಹಾ:ವ:- ಲೇಡಿಸ್ ಹಾಸ್ಟೇಲ್ ಹತ್ತಿರ ಹಿರೇಜಂತಕಲ್, ಗಂಗಾವತಿ. ಮತ್ತು (02) ಮೌನೇಶ ತಂದೆ ಪ್ರಾಣೇಶ ಪಂಚಾಳ ವಯಸ್ಸು 31 ವರ್ಷ ಜಾ: ಬಡಿಗೇರ ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ ಇವರು ಗಂಗಾವತಿ ನಗರದ ಎಕ್ಸಿಸ್ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 9,430-00. (02) ಮಟಕಾ ನಂಬರ ಬರೆದ 04 ಪಟ್ಟಿಗಳು. ಹಾಗೂ (03) 02 ಬಾಲ್ ಪೆನ್ನು ಜಪ್ತಿ ಪಡಿಸಿದ್ದು, ಸದರಿ ಮಟಕಾ ಪಟ್ಟಿಗಳನ್ನು ಬಕ್ಕಿಯಾದ ಯಮನೂರ ಸಾ: ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿಸಿದ್ದು,ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.     
3] ಗಂಗಾವತಿ ಗ್ರಾಮೀಣ  ಪೊಲೀಸ್ ಠಾಣೆ  ಗುನ್ನೆ ನಂ.  30/2018  ಕಲಂ. 87 Karnataka Police Act.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪೂರ ಸೀಮಾದ ವಾನಭದ್ರೇಶ್ವರ ಗುಡ್ಡದಲ್ಲಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಹಾರ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ರವರಿಗೆ ಬಂದ ಮೇರೆಗೆ ಸಿಬ್ಬಂದಿಯವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 16 ಜನರು ಸಿಕ್ಕಿ ಬಿದ್ದಿದ್ದುಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ  ರೂ. 6,730/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

 
Will Smith Visitors
Since 01/02/2008