Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, November 5, 2017

1] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ. 166/2017  ಕಲಂ. 20(ಬಿ)NDPS Act.
ದಿ: 04-11-2017 ರಂದು ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಶ್ರೀ. ಶರಣಪ್ಪ. .ಎಸ್. ಖಚಿತ ಬಾತ್ಮಿ ಬಂದಿದ್ದೇನೆಂದರೆ, ಕೊಪ್ಪಳ ನಗರದ ಸಜ್ಜಿಹೊಲದಲ್ಲಿ ಒಬ್ಬ ವ್ಯಕ್ತಿ ಮುರಾರಿ ಹರಣಿಶಿಕಾರಿ ಈತನು ತನ್ನ ಮನೆಯಲ್ಲಿ ಗಾಂಜಾ ಮಾರಾಟ ಮಾಡುವದಾಗಿ ತಿಳಿದುಬಂದ ಮೇರೆಗೆ ಕೂಡಲೇ ನಾನು ಮೇಲಾಧಿಕಾರಿಗಳಿಗೆ ತಿಳಿಸಿ ಶೋಧನೆ ಮಾಡಲು ಅನುಮತಿ ಪಡೆದುಕೊಂಡು ಇಬ್ಬರು ಪಂಚರು ಹಾಗೂ ಸಿಬ್ಬಂದಿಗಳ ಸಮೇತ ಠಾಣೆಯಿಂದ 12-00 ಗಂಟೆಗೆ ಸರ್ಕಾರಿ ಜೀಪಿನಲ್ಲಿ ಹೋಗಿ ಖಚಿತ ಬಾತ್ಮಿ ಪ್ರಕಾರ ಪಂಚರ ಸಮಕ್ಷಮ ದಾಳಿ ಮಾಡಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಮುರಾರಿ ತಂದೆ ಗೊಪತ್ತೆಪ್ಪ ಹರಣಶಿಕಾರಿ ಸಾ: ಸಜ್ಜಿಓಣಿ ಕೊಪ್ಪಳ  ಇತನನ್ನು ಹಿಡಿದುಕೊಂಡು ಇತನಿಂದ ಒಟ್ಟು 220 ಗ್ರಾಂ ಗಾಂಜಾ ಅಂ.ಕಿ. ರೂ. 3500=00 ಬೆಲೆಬಾಳುವದನ್ನು ಹಾಗೂ ಗಾಂಜಾ ಮಾರಾಟದಿಂದಾ ಬಂದಂತಹ ನಗದು ಹಣ 450=00 ರೂ ಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಅದೆ.  
2] ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ. 160/2017  ಕಲಂ. 32, 34 Karnataka Exice Act.

ದಿನಾಂಕ 04-11-2017 ರಂದು ಸಂಜೆ ಫಿರ್ಯಾದಿದಾರಿಗೆ ಕನಕಗಿರಿ ಗ್ರಾಮದ ಹೊರವಲಯದಲ್ಲಿ ಇರುವ ಸೋಮಸಾಗರ ಕ್ರಾಸ್ ನಂತರ ಬಸರಿಹಾಳ ರಸ್ತೆಯಲ್ಲಿ ಶಂಕ್ರಪ್ಪ ಸಜ್ಜನ್ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಇಬ್ಬರೂ ಒಂದು ಬೈಕ್ ಮೇಲೆ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರಿಗೆ ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಕನಕಗಿರಿ ಪೊಲೀಸ್ ಠಾಣೆಯಿಂದ ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಶಂಕ್ರಪ್ಪ ಸಜ್ಜನ್ ಇವರ ಇಟ್ಟಂಗಿ ಭಟ್ಟಿಯ ಹತ್ತಿರ ದು ಬೈಕ್ ಮೇಲೆ ಇಬ್ಬರು ಕುಳಿತುಕೊಂಡು ಇಬ್ಬರ ಮಧ್ಯದಲ್ಲಿ ಇಟ್ಟುಕೊಂಡಿದ್ದ ಚೀಲದಲ್ಲಿಂದ ಮಧ್ಯದ ಪಾಕೀಟುಗಳನ್ನು ತೆಗೆದು ಸಾರ್ವಜನಿಕರಿಂದ ಹಣವನ್ನು ಪಡೆದು ನೀಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಧಾಳಿ ಮಾಡಿ ಇಬ್ಬರೂ ಆರೋಪಿತರಿಗೆ ಹಿಡಿದು ಚೀಲವನ್ನು ವಶಕ್ಕೆ ಪಡೆದು ಆರೋಪಿತರಿಗೆ ಅದರ ಬಗ್ಗೆ ವಿಚಾರಿಸಿ ಪರಿಶೀಲೀಸಲು ಅದರಲ್ಲಿ  90 ಓರಿಜೀನಲ್ ಚಾಯ್ಸ ಕಂಪನಿಯ 90 ಎಂ.ಎಲ್ ಅಳತೆಯ ಟೆಟ್ರಾ ಪಾಕೀಟುಗಳಿದ್ದು ಪ್ರತಿಯೊಂದರ ಮೇಲೆ ಬೆಲೆ ರೂ, 28.13 ಅಂತಾ ನಮೂದಿಸಿರುತ್ತದೆ. ಒಟ್ಟು ಅಳತೆ 8100 ಎಂ.ಎಲ್ ಮತ್ತು ಒಟ್ಟು ಮೌಲ್ಯ ರೂ, 2531=70 ರೂಪಾಯಿ. ಬೆಲೆಯುಳ್ಳ ಮದ್ಯದ ಟೆಟ್ರಾ ಪಾಕೇಟಗಳನ್ನು ಹಾಗೂ ಒಂದು ಕೆಂಪು ಬಣ್ಣದ ಕೆ.ಎ-37 ಇ.ಬಿ-3196 ಹಿರೋ ಹೋಂಡಾ ಸ್ಪ್ಲೆಂಡರ್ ಪ್ರೋ ಕಂಪನಿಯ ಮೋಟಾರ್ ಸೈಕಲ ಅಂ.ಕಿ.ರೂ 35,000=00 ನೇದ್ದನ್ನು ಪಂಚರ ಸಮಕ್ಷಮದಲ್ಲಿ ಆರೋಪಿತನಿಂದ ಜಫ್ತ ಮಾಡಿ ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

Saturday, November 4, 2017

1] ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 226/2017  ಕಲಂ. 78(3) Karnataka Police Act.
ದಿನಾಂಕ:-03-11-2017 ರಂದು ಸಂಜೆ 7-15 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ನೇದ್ದವನು ಕಾರಟಗಿ ಗ್ರಾಮದ ಇಂದಿರಾನಗರದ ಗಾಳೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ ಮೊನಯ್ಯ .ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು   ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ  ಕಡೆಯಿಂದ 670=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2] ಯಲಬರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 145/2017  ಕಲಂ. 78(3) Karnataka Police Act.
ದಿನಾಂಕ: 03-11-2017 ರಂದು ಸಂಜೆ 6-45 ಗಂಟೆಯ ಸುಮಾರಿಗೆ ಆರೋಪಿ ಮಂಜುನಾಥ ತಂದೆ ಯಲ್ಲಪ್ಪ ಮಡಿವಾಳರ, ಈತನು ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 260/-ರೂ. ಹಾಗೂ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಅ.ಕಿ ಇಲ್ಲ. ಮತ್ತು ಒಂದು ಎಲ್.ವಾಯ. ಎಫ್ ಕಂಪನಿಯ ಮೊಬೈಲ ನೇದ್ದುವುಗಳೊಂದಿಗೆ ಸಿಕ್ಕಿಬಿದ್ದಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 249/2017  ಕಲಂ. 78(3) Karnataka Police Act.

ದಿನಾಂಕ 03-11-2017 ರಂದು 7-30 ಪಿ.ಎಮ್ ಗಂಟೆಯ ಸುಮಾರಿಗೆ ರಾಜಾಸಾಬ ತಂದೆ ಸಾಯಬಣ್ಣ ವಯಾ: 60 ವರ್ಷ, ಜಾ: ನದಾಫ್, ಉ: ತರಕಾರಿ ವ್ಯಾಪಾರ, ಸಾ: ಮೆಹಬೂಬ ನಗರ ಗಂಗಾವತಿ ಇವನು ಗಂಗಾವತಿ ನಗರದ ಸಂತೇಬಯಲಿನ ಆಂಜಿನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 200-00. 02] ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Friday, November 3, 2017

1] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 244/2017  ಕಲಂ. 78(3) Karnataka Police Act.
ದಿನಾಂಕ 02-11-2017 ರಂದು 11-15 .ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ದುರುಗಪ್ಪ ತಂದೆ ಲಗಪ್ಪ ಕುರಿ ವಯ : 60 ವರ್ಷ ಜಾ: ಛಲುವಾದಿ ಉ : ಕೂಲಿಕೆಲಸ ಸಾ : ಪೋಸ್ಟ್ ಆಫೀಸ್ ಹತ್ತಿರ ಹಿರೇಜಂತಕಲ್ ಗಂಗಾವತಿ ಇವನು ಗಂಗಾವತಿ ನಗರದ ಹಿರೇಜಂತಕಲ್ ದ ಝಂಡಾ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ ಮೇಲೆ ಪಂಚರ ಸಮಕ್ಷಮ ಶ್ರೀ. ಉದಯರವಿ ಪಿ.ಐ. ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 260-00. 02] ಮಟಕಾ ನಂಬರ ಬರೆದ 1 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.                                       
2] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 245/2017  ಕಲಂ. 78(3) Karnataka Police Act.
ದಿನಾಂಕ 02-11-2017 ರಂದು 1-30 ಪಿ.ಎಮ್ ಗಂಟೆಯ ಸುಮಾರಿಗೆ ಖಾಜಾಹುಸೇನ್ ತಂದೆ ಖಾಜಾಸಾಬ ಕೋಳಿ, ವಯ :40 ವರ್ಷ ಜಾ: ಮುಸ್ಲಿಂ, ಉ : ಕೂಲಿಕೆಲಸ ಸಾ : ಗಾಳೆಮ್ಮ ಕ್ಯಾಂಪ್ ಗಂಗಾವತಿ ಇವನು ಗಂಗಾವತಿ ನಗರದ ಹಿರೇಜಂತಕಲ್ದ ಬಸವಣ್ಣ ದೇವಸ್ಥಾನದ ಹತ್ತಿರ ಸಾರ್ವಜನಿಕ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ ಮೇಲೆ ಶ್ರೀ. ಉದಯರವಿ ಪಿ.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 200-00. 02] ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 246/2017  ಕಲಂ. 78(3) Karnataka Police Act.
ದಿನಾಂಕ 02-11-2017 ರಂದು 4-00 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಖಾಸಿಂ ಅಲಿ ತಂದೆ ಬುಡನ್ ಸಾಬ ಕಡದಾಲ್ @ ತೌಡ್ ವಯಾ: 48 ವರ್ಷ, ಜಾ: ಮುಸ್ಲಿಂ, ಉ: ತೌಡ ವ್ಯಾಪಾರ, ಸಾ: ಗುಂಡಮ್ಮ ಕ್ಯಾಂಪ್ ಗಂಗಾವತಿ ಈತನು ಗಂಗಾವತಿ ನಗರದ ಗುಂಡಮ್ಮ ಕ್ಯಾಂಪಿನ ಆಂಜಿನೇಯ ದೇವಸ್ಥಾನದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 360-00. 02] ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 247/2017  ಕಲಂ. 78(3) Karnataka Police Act.
ದಿನಾಂಕ 02-11-2017 ರಂದು 6-15 ಪಿ.ಎಮ್ ಗಂಟೆಯ ಸುಮಾರಿಗೆ ಶಕ್ಷಾವಲಿ ತಂದೆ ಚಂದುಸಾಬ ಇವನು ಗಂಗಾವತಿ ನಗರದ ಸಂತೇಬಯಲಿನ ಚರ್ಚ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 490-00. 02] ಮಟಕಾ ನಂಬರ ಬರೆದ 1 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 248/2017  ಕಲಂ. 78(3) Karnataka Police Act.
ದಿನಾಂಕ 02-11-2017 ರಂದು 8-15 ಪಿ.ಎಮ್ ಗಂಟೆಯ ಸುಮಾರಿಗೆ ಸಾಬಣ್ಣ ತಂದೆ ಶಾಮೀದಸಾಬ ವಯಾ: 45 ವರ್ಷ, ಜಾ: ಮುಸ್ಲಿಂ, ಉ: ಅಕ್ಕಿ ವ್ಯಾಪಾರ, ಸಾ: ಸಂತೇಬಯಲು ಗಂಗಾವತಿ ಇವನು ಗಂಗಾವತಿ ನಗರದ ಸಂತೇಬಯಲಿನ ಎಸ್.ಬಿ.ಐ ಬ್ಯಾಂಕ್ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 515-00. 02] ಮಟಕಾ ನಂಬರ ಬರೆದ 2 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6] ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 281/2017  ಕಲಂ. 78(3) Karnataka Police Act.
ದಿನಾಂಕ: 02-11-2017 ರಂದು 06-15 ಪಿ.ಎಂ. ಸುಮಾರಿಗೆ ಹುಲಗಿ ಗ್ರಾಮದ ಮುದ್ದಮ್ಮನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 810-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
7] ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 282/2017  ಕಲಂ. 78(3) Karnataka Police Act.
ದಿನಾಂಕ: 02-11-2017 ರಂದು 09-15 ಪಿ.ಎಂ. ಸುಮಾರಿಗೆ ನಿಂಗಾಪೂರ ಗ್ರಾಮದ ಅಂಡರ್ ಪಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 1630-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. 
8] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 300/2017  ಕಲಂ. 87 Karnataka Police Act.
ದಿನಾಂಕ : 03-11-2017 ರಂದು 1-20 .ಎಂ. ಕ್ಕೆ ಶ್ರೀ ಸುರೇಶ ತಳವಾರ ಸಿಪಿಐ ಸಾಹೇಬರು ಕುಷ್ಠಗಿ ವೃತ್ತ ರವರು ಠಾಣೆಗೆ ಬಂದು ಮೂಲ ಪಂಚನಾಮೆಯನ್ನು 15 ಜನ ಹಾಜರು ಅರೋಪಿತರನ್ನು ಹಾಜರು ಪಡಿಸಿ ಕಾನೂನು ಕ್ರಮ ಜರುಗಿಸುವಂತೆ ವರದಿಯನ್ನು ನೀಡಿದ್ದು ಸಾರಾಂಶವೆನಂದರೆ ನಗರದ ಮುಲ್ಲಾರ ಓಣಿಯಲ್ಲಿರುವ ಚೀಕನ ಫಾರುಖ್ ಇವರ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ 15 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 31,060-00 ರೂಪಾಯಿ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು 15 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


Thursday, November 2, 2017

1] ಗಂಗಾವತಿ ನಗರ ಪೊಲೀಸ್  ಠಾಣೆ  ಗುನ್ನೆ ನಂ. 242/2017  ಕಲಂ. 78(3) Karnataka Police Act.
ದಿನಾಂಕ 01-11-2017 ರಂದು 6-30 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಮೇಹರಾಜ ತಂದೆ ಪಾಷಾಸಾಬ ವಯ : 45 ವರ್ಷ ಜಾ : ಮುಸ್ಲಿಂ ಉ : ಎಲೆಕ್ಟ್ರಿಕಲ್ ಕೆಲಸ ಸಾ : ಕಿಲ್ಲಾ ಏರಿಯಾ ಗಂಗಾವತಿ ಈತನು ಗಂಗಾವತಿ ನಗರದ ಕಿಲ್ಲಾ ಏರಿಯಾದ ಅಂಬಾಭವಾನಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ಉದಯರವಿ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 200-00. 02] ಮಟಕಾ ನಂಬರ ಬರೆದ 2 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 144/2017. ಕಲಂ: 279, 304 [ಎ] ಐಪಿಸಿ ಹಾಗೂ 187 ಐ.ಎಂ.ವಿ. ಕಾಯ್ದೆ:.

ದಿನಾಂಕ: 01-11-2017 ರಂದು ರಾತ್ರಿ 8-40 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆಎ-37 ಎಕ್ಸ-7298 ನೇದ್ದರ ಸವಾರನು ತಾನು ನಡೆಸುತ್ತಿದ್ದ ಸದರಿ ಮೋಟಾರ್ ಸೈಕಲ್ ನ್ನು ವಜ್ರಬಂಡಿ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ರಸ್ತೆಯ ಬದಿಗೆ ಕುದರಿಕೊಟಗಿ ಕಡೆಯಿಂದ ನಡೆದುಕೊಂಡು ಬರುತ್ತಿದ್ದ ಶಿವಪ್ಪ ತಂದೆ ಗೋಸಪ್ಪ ಹಳ್ಳಿಗುಡಿ ಈತನಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿ, ಮೋಟಾರ್ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಈ ಅಫಘಾತದಿಂದ ಶಿವಪ್ಪನಿಗೆ ಎಡ ಮೋಣಕಾಲ ಕೆಳ ಭಾಗದಲ್ಲಿ ಭಾರಿ ಸ್ವರೂಪದ ಪೆಟ್ಟಾಗಿ ಕಾಲು ಮುರಿದ್ದಿದ್ದು, ಬಲಗಡೆ ಕಪಾಳಕ್ಕೆ ರಕ್ತಗಾಯವಾಗಿದ್ದು, ಅಲಲ್ಲಿ ತೆರೆಚಿದ ಗಾಯಗಳಾಗಿದ್ದು ಇರುತ್ತದೆ. ಅಲ್ಲದೇ ಮೂಗಿನಲ್ಲಿ ರಕ್ತ ಬಂದಿದ್ದು, ಚಿಕಿತ್ಸೆಗಾಗಿ  ಸರ್ಕಾರಿ ಆಸ್ಪತ್ರೆ ಯಲಬುರ್ಗಾಕ್ಕೆ ಸೇರಿಕೆ ಮಾಡುವಷ್ಟರಲ್ಲಿ ಮಾರ್ಗ ಮಧ್ಯ ಮೃತ ಪಟ್ಟಿರುತ್ತಾನೆ. ಕಾರಣ ಶಿವಪ್ಪ ಹಳ್ಳಿಗುಡಿ ಈತನಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿ, ಭಾರಿ ಸ್ವರೂಪದ ಗಾಯವಾಗಿ ಆತನ ಸಾವಿಗೆ ಕಾರಣನಾದ ಮೋಟಾರ್ ಸೈಕಲ್ ಚಾಲಕನಿಗೆ ಪತ್ತೆ ಮಾಡಿ. ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, November 1, 2017

1] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 298/2017  ಕಲಂ. 379 ಐ.ಪಿ.ಸಿ.
ದಿನಾಂಕ: 31-10-2017  ರಂದು ಸಂಜೆ 06-45 ಗಂಟೆಗೆ  ಪಿರ್ಯಾದಿದಾರರಾದ ಮಹೇಂದ್ರ ತಂದೆ ಸಿದ್ದಪ್ಪ ಹಡಗಲಿ ವಯಾ: 34 ವರ್ಷ ಜಾತಿ: ಈಳಗೇರ ಉ: ಪೋಟೋ ಗ್ರಾಫರ್ ಸಾ: ಬಿ.ಬಿ ನಗರ ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರರು ನಾನು ಈಗ್ಗೆ 4 ವರ್ಷಗಳ ಹಿಂದೆ ಒಂದು ಟಿ.ವ್ಹಿ.ಎಸ್. ಎಕ್ಷ. ಎಲ್. ಸೂಪರ ಹಸಿರು ಬಣ್ಣದ್ದು ಇದ್ದು ಮೊ.ಸೈ ನಂ: ಕೆ.ಎ-37/ಡಬ್ಯೂ-5471 ನೇದ್ದನ್ನು ಖರೀದಿ ಮಾಡಿದ್ದು, ಸದರಿ ಮೋ.ಸೈನ್ನು ನಾನು ನಮ್ಮದು ಉಮಾ ಪೋಟೋ ಸ್ಟುಡಿಯೋ ಅಂತಾ ಬಸ್ ಸ್ಟ್ಯಾಂಡ ಎದುರುಗಡೆ ಇದ್ದು ನಾನು ದಿನಾಲು ನನ್ನ ಮೋಟಾರ ಸೈಕಲನ್ನು ತೆಗೆದುಕೊಂಡು ಬೆಳಿಗ್ಗೆ 09-00 ಗಂಟೆಗೆ ಪೋಟೋ ಸ್ಟುಡಿಯೋಕ್ಕೆ ಹೋಗಿ ನಂತರ ರಾತ್ರಿ 09-00 ಗಂಟೆಯ ವರೆಗೆ  ಸ್ಟುಡಿಯೋದಲ್ಲಿ ಕೆಲಸ ಮಾಡಿ ವಾಪಸ ಮನೆಗೆ ಬರುತ್ತಿದ್ದೇನೆ. ದಿನಾಂಕ:13-08-2017 ರಂದು ಬೆಳಿಗ್ಗೆ 09-00 ಗಂಟೆಗೆಯ ಸುಮಾರಿಗೆ ಪೋಟೋ ಸ್ಟುಡಿಯೋಕ್ಕೆ ಹೋಗಿ ರಾತ್ರಿ 09-00 ಗಂಟೆಯವರೆಗೆ ಕೆಲಸ ಮಾಡಿ ನಂತರ ಮನೆಗೆ ರಾತ್ರಿ 09-30 ಗಂಟೆಯ ಸುಮಾರಿಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟಾರ ಸೈಕಲನ್ನು ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿದ್ದೇನೆ. ನಂತರ ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿ ರಾತ್ರಿ 11-00 ಗಂಟೆಯ ಸುಮಾರಿಗೆ ಮನೆಯ ಬಾಗೀಲು ಹಾಕುವಾಗ ನಮ್ಮ ಮೋಟಾರ ಸೈಕಲ್ ಮನೆಯ ಮುಂದೆ ಇತ್ತು ನಂತರ ರಾತ್ರಿ ಮಲಗಿದ್ದಾಗ  ಮರುದಿವಸ ದಿನಾಂಕ:14-08-2017 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದು ನನ್ನ ಮೋಟಾರ ಸೈಕಲನ್ನು ನೋಡಲು ನನ್ನ ಮೋಟರ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ನಾನು ಸದರಿ ನನ್ನ ಮೋ.ಸೈ ನ್ನು ಕುಷ್ಟಗಿಯ ಬಸ್ ನಿಲ್ದಾಣ, ಮಲ್ಲಯ್ಯ ಸರ್ಕಲ್, ಮಾರುತಿ ಟಾಕೀಜ್, ಬಸವರಾಜ ಟಾಕೀಜ್ ಎಲ್ಲಾ ಕಡೆಗಳಲ್ಲಿ ಸುತ್ತಾ ಮುತ್ತಾ ಹಳ್ಳಿಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೂ ಸಿಕ್ಕಿರುವದಿಲ್ಲ. ನನ್ನ ಟಿ.ವ್ಹಿ.ಎಸ್. ಎಕ್ಷ.ಎಲ್. ಸೂಪರ ಹಸಿರು ಬಣ್ಣದ್ದು ಮೊ.ಸೈ ನಂ: ಕೆ.ಎ-37/ಡಬ್ಯೂ-5471 ಇದ್ದು  ಸದರಿ ನನ್ನ ಮೋ.ಸೈ ನ ಅಂದಾಜು ಕಿಮ್ಮತ್ತು 8,000=00 ರೂ:ಗಳಷ್ಟು ಆಗಬಹುದು. ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 245/2017. ಕಲಂ: 279, 338, 304 [ಎ] ಐಪಿಸಿ,
ದಿ:31-10-2017 ರಂದು ಸಂಜೆ 4-00 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಹನುಮಂತಪ್ಪ ಮಡಿವಾಳರ, ಸಾ: ತಳಕಲ್ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:31-10-2017 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರು ತನ್ನ ಅಣ್ಣ ಪರಶುರಾಮ ಮಡಿವಾಳರ ಇವರ ಆಟೋ ನಂ: ಕೆಎ-37/ಎ-2348 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಿಂದಾ ವಾಪಾಸ್ ತಳಕಲ್ ಗೆ ಅಂತಾ ಹೋಗುವಾಗ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಮಿಲೇನಿಯಮ್ ಸ್ಕೂಲ್ ದಾಟಿ ಸ್ವಲ್ಪ ಮುಂದೆ ಸದರಿ ಆಟೋ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗುವಾಗ ತನ್ನ ವಾಹನವನ್ನು ನಿಯಂತ್ರಿಸದೇ ಅಪಘಾತ ಮಾಡಿ ರಸ್ತೆಯ ಎಡಬಾಜು ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿದಾರರಿಗೆ ಮತ್ತು ಆರೋಪಿತ ಆಟೋ ಚಾಲಕನಿಗೆ ತೀವ್ರ ಪೆಟ್ಟಾಗಿದ್ದರಿಂದ, ಕೂಡಲೇ 108 ಅಂಬುಲೆನ್ಸ ದಲ್ಲಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗ ಬಂದು ಚಿಕಿತ್ಸೆಗೆ ದಾಖಲಾಗಿದ್ದು ಇರುತ್ತದೆ. ನಂತರ ಇಂದೇ ಮದ್ಯಾಹ್ನ 3-55 ಗಂಟೆಗೆ ಆರೋಪಿ ಪರಶುರಾಮ ಇತನು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಆಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು, ವಾಪಾಸ್ ಠಾಣೆಗೆ ಸಂಜೆ 5-30 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008