Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, May 31, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 87 Karnaaka Police Act.
ದಿನಾಂಕ:-30-05-2016 ರಂದು ಸಾಯಂಕಾಲ 6-40 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 30-05-2016 ರಂದು ಸಾಯಂಕಾಲ 5-00  ಗಂಟೆಯ ಸುಮಾರಿಗೆ ಯರಡೋಣ ಡಗ್ಗಿ ಕ್ಯಾಂಪಿನ ನಾಗಪ್ಪ ಹಡಪದ ರವರ ಶೆಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತನ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 1,960=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 14/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾಧಿದಾರನಾದ ಬೆಟ್ಟಪ್ಪ ತಂದೆ ಲಿಂಗಪ್ಪ ಜೋಗಿನ ಸಾ: ಜಂಗಮರ ಕಲ್ಗುಡಿ ಇತನು ಠಾಣೆಗೆ  ಹಾಜರಾಗಿ ನೀಡಿದ ಗಣಿಕಿಕೃತ ಫಿರ್ಯಾಧಿವೇನೆಂದರೆ  ತನ್ನ ತಾಯಿಯಾದ ಅಯ್ಯಮ್ಮ ವಯಸ್ಸು 80 ಇವಳು ಇಂದು ದಿನಾಂಕ 30-05-2016 ರಂದು ಬೆಳಗ್ಗೆ 10-00 ಗಂಟೆಗೆ ಸೋಮವಾರ ಇರುವುದರಿಂದ ಗಂಗಾವತಿ ಯಲ್ಲಿ ಪಡ್ಲಗಿ ಹಿಡಿದುಕೊಂಡು ಗಂಗಾವತಿಗೆ ಹೋಗಿ ಬಿಕ್ಷೆಯನ್ನು ಬೇಡಿ ಕೊಂಡು ಬರುತ್ತೇನೆಂದು ಹೇಳಿ ಹೋದಳು.  ನಂತರ ಸಂಜೆ 4-00 ಗಂಟೆಗೆ ನಾನು ಮನೆಯಲ್ಲಿರುವಾಗ ನಮ್ಮೂರಿನ ಹನುಮಂತ ಕುರುಬರು ಇತನು ಬಂದು ನಿಮ್ಮ ತಾಯಿಗೆ ಗಂಗಾವತಿಯಲ್ಲಿ ಆಕ್ಸಿಡೆಂಟ್ ಆಗಿದೆ  ಸರಕಾರಿ ಆಸ್ಪತ್ರೆಯಲ್ಲಿ ಇದ್ದಾಳೆ ಕೂಡಲೇ ಬಾ ಅಂತಾ ಹೇಳಿದನು ನಾನು ಕೂಡಲೇ ಗಂಗಾವತಿಗೆ ಸಂಜೆಗೆ ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ನನ್ನ ತಾಯಿಗೆ ವಿಚಾರಿಸಲಾಗಿ ಮಹಾವೀರ ಸರ್ಕಲ್ ಹತ್ತಿರದ ಓ ಎಸ್ ಬಿ ರಸ್ತೆಯ ಅನ್ಮೂಲ ಗಾರ್ನಮೆಂಟ್  ಎದುರುಗಡೆ ಮದ್ಯಾನ್ನ 1-30 ಗಂಟೆ ಸುಮಾರು ಯಾವುದೋ ಒಂದು ಮೋಟಾರು ಸೈಕಲ್ಲ ಸವಾರನು ತನ್ನ ಮೋ/ಸೈ ನ್ನು ಮಹಾವೀರ ಸರ್ಕಲ್ ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು  ನನ್ನಗೆ ಹಿಂದುಗಡೆ ಟಕ್ಕರ ಕೊಟ್ಟು ಅಪಘಾತ ಮಾಡಿದನು ಆಗ ನಾನು ರಸ್ತೆ ಮೇಲೆ ಬಿದ್ದಾಗ ಸದರಿ ಮೋಟಾರು ಸೈಕಲ್ಲ ಸವಾರನು ಗಾಡಿಯನ್ನು ನಿಲ್ಲಿಸಿ ನನಗೆ ವಿಚಾರಿಸಿದನು ನನಗೆ ಬಲಕೈಗೆ ತೆರೆಚಿದೆ ಮತ್ತು ಎಡಕಾಲ ಚಪ್ಪೆಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಸದರಿ ಮೋಟಾರು ಸೈಕಲ್ಲ ಸವಾರನು ನನ್ನನ್ನು ಯಾವುದೋ ಒಂದು ಅಟೋದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಇಲ್ಲೇ ಇರುತ್ತೇನೆಂದು ಹೇಳಿ ನನ್ನನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದನು ಅಂತಾ ತಿಳಿಸಿದಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ,
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ: 279, 337, 338 ಐ.ಪಿ.ಸಿ:.

ದಿ:30-05-2016 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶೇಖರಪ್ಪ ತಂದೆ ನಿಂಗಪ್ಪ ಕಂಬಗಲ್. ಸಾ: ವಟಪರವಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇ, ಇಂದು ದಿ:30-05-16 ರಂದು ಮಧ್ಯಾಹ್ನ ನಾನು ಮತ್ತು ನಮ್ಮೂರಿನ ಲಕ್ಷ್ಮಣ ಹರಿಜನ ಇಬ್ಬರೂ ಕೂಡಿ ಕೊಪ್ಪಳದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ವಾಪಾಸ್ ನಮ್ಮ ಊರಿಗೆ ಹೋಗಲು ಅಂತಾ ಕ್ರೂಷರ್ ನಂ: ಕೆಎ-37/ಎ-3850 ನೇದ್ದರಲ್ಲಿ ಕುಳಿತು ಹೋಗುವಾಗ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಕೊಡದಾಳ ಕ್ರಾಸ್ ಹತ್ತಿರ ನಾವು ಕುಳಿತಿದ್ದ ಕ್ರೂಷರ್ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ವಾಹನವನ್ನು ನಿಯಂತ್ರಿಸದೇ ರಸ್ತೆ ಬದಿ ಪಲ್ಟಿ ಮಾಡಿದ್ದರಿಂದ ಈ ಅಪಘಾತದಲ್ಲಿ ನನಗೆ ಭಾರಿ ಪೆಟ್ಟುಗಳಾಗಿದ್ದು, ಲಕ್ಷ್ಮಣ ನಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Monday, May 30, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 53/2016 ಕಲಂ: 302, 201 ಐ.ಪಿ.ಸಿ:.
ಮೃತ ಗಂಗಮ್ಮಳು ದಿನಾಂಕ- 28-05-2016 ರಂದು ರಾತ್ರಿ 7 ಗಂಟೆಯಿಂದ 9 ಗಂಟೆಯ ಮಧ್ಯದ ಅವಧಿಯಲ್ಲಿ ಕಲಕಬಂಡಿ ಸೀಮಾದಲ್ಲಿಯ ತಮ್ಮ ಹೋಲದಿಂದ ಮನೆಗೆ ನಡೆದುಕೊಂಡು ಶಿವಪ್ಪ ಶೇಟ್ಟರ ಇವರ ಹೋಲದಲ್ಲಿ ಹೋಗುವಾಗ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಬಡಿಗೆಯಿಂದ ಆಕೆಯ ತಲೆಗೆ ಬಲವಾಗಿ ಬಡಿದು ಕೊಲೆ ಮಾಡಿ ಹೋಗಿದ್ದು ಇರುತ್ತದೆ. ಸದರಿ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ  ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 57/2016 ಕಲಂ: 279, 337, 338 ಐ.ಪಿ.ಸಿ:.
 ಪಿರ್ಯಾದಿಯ ಅಕ್ಕ ಮತ್ತು ಅಳಿಯ ಹಾಗೂ ಅಳಿಯನ ಹೆಂಡತಿ, ಮಕ್ಕಳು ಸೇರಿ ತನ್ನ ಕಾರ ನಂ. ಕೆ.ಎ.35 ಎನ್.883 ನೇದ್ದರಲ್ಲಿ ಬೆಳಿಗ್ಗೆ 6.00 ಗಂಟೆಗೆ ಅಹ್ಮದಾಬಾದ್ ನಿಂದ ಹೊಸಪೇಟೆಗೆ ಬರುವಾಗ ಆರೋಪಿ ಪ್ರಕಾಶನು ತಾನು ನಡೆಸುತ್ತಿದ್ದ ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸುತ್ತಾ ಬರುವಾಗ ಭಾನಾಪೂರ ದಾಟಿ ಕೊಪ್ಪಳ ಕಡೆಗೆ ಬರುತ್ತಿರುವಾಗ ಬೆಳಗಿನ ಜಾವ 1.20 ಗಂಟೆ ಸುಮಾರಿಗೆ ರಸ್ತೆಯ ತಿರುವನ್ನು ಗಮನಿಸದೇ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಕೊಪ್ಪಳ ಕಡೆಗೆ ಬರುವಾಗ ಎದುರಿಗೆ ಒಂದು ಲಾರಿ ಬರುವದನ್ನು ಲೆಕ್ಕಿಸದೇ ಅತೀವೇಗವಾಗಿ ನಡೆಸಿ ಒಮ್ಮೇಲೇ ರಸ್ತೆಯ ಎಡಕ್ಕೆ ತನ್ನ ಕಾರನ್ನು ತಿರುಗಿಸಿದ್ದರಿಂದ ಕಾರು ರಸ್ತೆಯ ಎಡಗಡೆ ತಗ್ಗಿಗೆ ಬಿದ್ದು ಅಪಘಾತವಾಗಿದ್ದು, ಇದರಿಂದ  ಕಾರಿನಲ್ಲಿದ್ದ ಫಿರ್ಯಾದಿಯ ಅಕ್ಕ, ಆರೋಪಿ ಪ್ರಕಾಶನ ಹೆಂಡತಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು, ಪ್ರಕಾಶನಿಗೆ, ಮತ್ತು ತನ್ನ ಮಕ್ಕಳಾದ ಆದಿತ್ಯ, ರಕ್ಷಿತಾಳಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 58/2016 ಕಲಂ: 279, 337 ಐ.ಪಿ.ಸಿ:.

ಪಿರ್ಯಾದಿದಾರನು ತನ್ನ ತಮ್ಮನ ಹೆಸರಿನಲ್ಲಿರುವ ವಾಹನ ಸಂ;ಕೆಎ-23 ಎ-0135 ನೇದ್ದರಲ್ಲಿ ಬಾರ್ ಮತ್ತು ಪೌಂಡೇಷನ್ ನಟ್ ಗಳನ್ನು ಲೋಡ್ ಮಾಡಿಕೊಂಡು ಚಾಲಕ ಬಸವರಾಜ ತಂದೆ ನಾಗಪ್ಪ ನಾಗನೂರ ಸಾ: ಬೈಲಹೊಂಗಲ ಈತನೊಂದಿಗೆ ಬೆಳಗಾವಿಯಿಂದ ಹೊಸಪೇಟೆಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮುಖಾಂತರವಾಗಿ ತಳಕಲ್ ಮೊರಾರ್ಜಿ ಶಾಲೆಯ ಮುಂದಿನ ರಸ್ತೆಯಿಂದ ಹೊರಟಿರುವಾಗ ಸದರ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ವಾಹನ ಟೈರ್ ಬಸ್ಟ್ರ ಆಗಿ ವಾಹನ ಪಲ್ಟಿಯಾಗಿ ಅದರಲ್ಲಿದ್ದ ಪಿರ್ಯಾದಿ ಮತ್ತು ಆರೋಪಿತನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

Sunday, May 29, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 117/2016 ಕಲಂ: 87 Karnataka Police Act.
28-05-2016 ರಂದು ಸಾಯಂಕಾಲ 5-15  ಗಂಟೆಯ ಸುಮಾರಿಗೆ ರಾಮನಗರದ ಗಿರಣಿ ಮಲ್ಲಪ್ಪ ರವರ ಗೋಡಾನ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಶ್ರೀ. ನಿಂಗಪ್ಪ ಪಿ.ಎಸ್.ಐ ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತನ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 17960=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 87/2016 ಕಲಂ: 87 Karnataka Police Act.
ದಿನಾಂಕ:28.05.2016 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ಬೇವೂರ ಗ್ರಾಮದ ಆಶ್ರಮದ ಹಿಂದುಗಡೆ ಇರುವ ಬಯಲು ಜಾಗೆಯಲ್ಲಿ ಇಸ್ಪಟ್ ಜೂಜಾಟ ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿ 7 ಜನ ಆರೋಪಿತರಿಂದ 1530/-ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ  
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 92/2016 ಕಲಂ:  323, 341, 504, 506 ಐ.ಪಿ.ಸಿ:.
ದಿನಾಂಕ: 28-05-2016 ರಂದು 02-10 ಪಿ.ಎಮ್. ಕ್ಕೆ ಫಿರ್ಯಾದಿ ರಣಧೀರಕುಮಾರ ತಂದೆ ರಾಮ್ ನಿರಂಜನ್ ಮಿಶ್ರಾ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-05-2016 ರಂದು ರಾತ್ರಿ 9-25 ಗಂಟೆ ಸುಮಾರಿಗೆ ಕೊಪ್ಪಳ ನಗರದ ಶಾರಾದಾ ಟಾಕೀಜ ಹತ್ತಿರ ನನ್ನ ಕೆಲಸಕ್ಕೆ ಹೋಗುವ ಸಲುವಾಗಿ ಬಸ್ ಗಾಗಿ ಕಾಯುತ್ತಿದ್ದಾಗ ಸೈಯ್ಯದ ಮರ್ತೂಜಾ ಖಾದ್ರಿ ಸಾ: ಕೊಪ್ಪಳ ಈತನು ನನ್ನ ಹಿಂದಿನಿಂದ ಬಂದು ನನ್ನ ಮೇಲೆ ಹಲ್ಲೆ ಮಾಡಿದನು ನಾನು ಯಾಕೆ ಅಂತಾ ಕೇಳಲು ನನಗೆ ಗಟ್ಟಿಯಾಗಿ ಹಿಡಿದು ತಲೆ ಮೂಗು ಮತ್ತು ಬೆನ್ನಿಗೆ ಹೊಡೆದಿತ್ತಾನೆ. ನಂತರ ನನಗೆ ಮಾಕಿ, ಬೇಹನಕೀ ಎಂಬ ಅವಾಚ್ಯವಾಗಿ ಬೈದಾಡಿ ಇದನ್ನು ಪೊಲೀಸರಿಗೆ ಹೇಳಿದರೆ ನಿನಗೆ ಜೀವಂತವಾಗಿ ಉಳಿಸುವುದಿಲ್ಲ ಅಂತಾ ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ ಕಾರಣ ಸೈಯದ್ ಮುರ್ತುಜಾ ಖಾದ್ರಿ ಸಾ: ಕೊಪ್ಪಳ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 93/2016 ಕಲಂ:  323, 341, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ: 28-05-2016 ರಂದು 08-30 ಪಿ.ಎಮ್. ಕ್ಕೆ ಫಿರ್ಯಾದಿ ಸೈಯ್ಯದ ಮುರ್ತುಜಾ ತಂದೆ ಸೈ. ಅಬ್ದುಲ ರಹಮಾನ ಖಾದ್ರಿ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-05-2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಕೊಪ್ಪಳ ನಗರದ ಶಾರಾದಾ ಟಾಕೀಜ ಹತ್ತಿರ ನಾನು ಕೆಲಸ ಮುಗಿಸಿಕೊಂಡು ಬರುವಾಗ ಹಿರೇಬಗನಾಳದಲ್ಲಿರುವ ಹರೇಕೃಷ್ಣ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಣದೀರ, ಮಿಶ್ರಾ, ಫಹೀಮ್, ವಿವೇಕ, ಕಿರಣ, ಪಾಟೀಲಗೌಡ, ರಾಕೇಶ ಇವರು ನನ್ನನ್ನು ನೋಡಿ ನಗುತ್ತಾ ನನಗೆ ಅಡ್ಡಗಟ್ಟಿ, ಅವಾಚ್ಯವಾಗಿ ಬೈಯುತ್ಆ ಕಿರುಕುಳ ನೀಡಿದರು. ಆಗ ನಾನು ನನ್ನ ರಕ್ಷಣೆಗೆ ಆಕ್ಷೇಪಣೆ ಮಾಡಿದಾಗ ಅವರೆಲ್ಲರೂ ಸೇರಿಕೊಂಡು ನನಗೆ ಪ್ರಾಣ ಬೆದರಿಕೆ ಹಾಕಿ ಕೈಯಿಂದ ನನ್ನ ಮೇಲೆ ಮೇಲೆ ಹಲ್ಲೆ ಮಾಡಿದರು. ರಣಧೀರ ಮತ್ತು ಮಿಶ್ರಾ ಇವರು ನನಗೆ ಕಲ್ಲಿನಿಂದ ಹೊಡೆಯಲಿಕ್ಕೆ ಬಂದಾಗ ಅಲ್ಲಿದ್ದ ಜನರು ಬಿಡಿಸಿಕೊಂಡಿದ್ದು ಇರುತ್ತದೆ. ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Saturday, May 28, 2016

Crimes of 27-05-2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(6) Karnataka Police Act.
ದಿನಾಂಕ. 27-05-2016 ರಂದು 4-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮುನಿರಾಬಾದ ಸೀಮಾ ಎನ್.ಹೆಚ್. 50 ರಸ್ತೆಯ ಪಕ್ಕದಲ್ಲಿ ಚಾಂದಸಾಬ ಇವರಿಗೆ ಸೇರಿದ ಶಡ್ಡಿನಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ದಾಳಿ ಮಾಡಿ 21 ಜನ ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ಆರೋಪಿತರಿಂದ ಜೂಜಾಟದ ಸಾಮಗ್ರಿಗಳಾದ 52 ಇಸ್ಪೇಟ ಎಲೆಗಳು, ಒಂದು ಜಮಖಾನ, ಜೂಜಾಟದ ನಗದು ಹಣ. 1,67,000=00 ರೂ. ಹಾಗೂ 16 ಮೋಟಾರ ಸೈಕಲಗಳು, ಒಂದು ಇಂಡಿಕಾ ಕಾರು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 52/2016 ಕಲಂ: 87 Karnataka Police Act.
ದಿನಾಂಕ: 27-05-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಬರುವ ಸರಕಾರಿ ಪ್ರಾಥಮಿಕ ಶಾಲೆ ಮುಂದುಗಡೆ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ಸಾಯಂಕಾಲ 6-05 ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 7 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,720=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಚೀಲ  ಸಿಕ್ಕಿದ್ದು ಇರುತ್ತದೆ.  ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 149/2016 ಕಲಂ:  379 ಐ.ಪಿ.ಸಿ:.
ದಿನಾಂಕ:27-05-2016 ರಂದು ಸಂಜೆ 05-15 ಗಂಟೆಗೆ ಪಿರ್ಯಾದಿದಾರರಾದ ಮೈಲಾರಲಿಂಗೇಶ ತಂದಿ ಮಲ್ಲಿಕಾರ್ಜುನ ಕಲ್ಲಗೋನಾಳ ವಯಾ: 28 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ಶ್ಯಾಡಲಗೇರಿ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಸಲ್ಲಿಸಿದ್ದು ಸಾರಾಮಶವೆನೆಂದರೆ ಫಿರ್ಯಾದಿದಾರರು ತಮ್ಮ ವ್ಯಯಕ್ತಿಕ ಕೆಲಸದ ನಿಮಿತ್ಯ ಒಂದು ಹೊರೋ ಸ್ಪ್ಲೆಂಡರ್ ಎಲೆ ಹಸಿರು ಬಣ್ಣದ  ಮೋ.ಸೈ ನಂ: ಕೆ.ಎ-37/ಎಕ್ಸ-6064 ನೇದ್ದನ್ನು ಈಗ್ಗೆ ಸುಮಾರು 1 ½ ವರ್ಷದ ಹಿಂದೆ ಖರೀದಿ ಮಾಡಿದ್ದು ಸದರಿ ಮೋ.ಸೈ. ನ್ನು ಅವರು ದಿನಾಂಕ: 23-05-2016 ರಂದು ಬೆಳಿಗ್ಗೆ ಕುಷ್ಟಗಿಯ ತಹಶಿಲ್ ಕಾರ್ಯಾಲಯದಲ್ಲಿ ಕೆಲಸವಿದ್ದ ಕಾರಣ ಬೆಳಿಗ್ಗೆ 11-30 ಗಂಟೆಗೆ ತಹಶಿಲ ಕಛೇರಿಯ ಪಕ್ಕದಲ್ಲಿ ನಿಲ್ಲಿಸಿ ವಾಪಾಸ್ ಕೆಲಸ ಮುಗಿಸಿಕೊಂಡು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಸದರಿ ಮೋ.ಸೈ. ಇರಲಿಲ್ಲ. ನಂತರ ಅವರು ತಹಶಿಲ ಕಾರ್ಯಾಲಯದ ಆವರಣದ ಸುತ್ತಲೂ ನೋಡಲಾಗಿ ಎಲ್ಲಿಯೂ ಅವರ ವಾಹನ ಸಿಕ್ಕಿರುವದಿಲ್ಲ ನಂತರ ಅವರು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಅವರ ವಾಹನ ಸಿಗಲಾರದ್ದಕ್ಕೆ ಇಂದು ದಿನಾಂಕ: 27-05-2016 ರಂದು ಅಲ್ಲಿ ಇಲ್ಲಿ ಹುಡುಕಾಡಿ ಈಗ ತಡವಾಗಿ ಬಂದು ಸುಮಾರು 38,000=00 ರೂ. ಕಿಮ್ಮತ್ತಿನ ನನ್ನ ಮೋ.ಸೈ. ನಂ: ಕೆ.ಎ-37/ಎಕ್ಸ-6064 ಇಂಜಿನ್ ನಂ: HA10ELEHG21327  ಮತ್ತು ಚೆಸ್ಸಿ ನಂ: MBLHA10A9EHG02918 ನೇದ್ದು ಕಳ್ಲತನವಾದ ಬಗ್ಗೆ ಬಂದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ:  379 ಐ.ಪಿ.ಸಿ:.

ಫಿರ್ಯಾದಿದಾರರಾದ ನಾಗರಾಜ ತಂದೆ ರಾಮಚಂದ್ರಪ್ಪ ಚುಕ್ಕನಕಲ್ ಸಾ: ಮುದ್ದಾಬಳ್ಳಿ ಇವರು ಪೀರ್ಯಾದಿಯನ್ನು ನೀಡಿದ್ದು, ದಿ:08-05-2016 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ : 09-05-2016 ರಂದು ಬೆಳಗಿನ ಜಾವ 04.00 ಗಂಟೆಯ ಅವಧಿಯಲ್ಲಿ ಮುದ್ದಾಬಳ್ಳಿ ಸೀಮಾದಲ್ಲಿ ಪಿರ್ಯಾಧಿದಾರರ ಹೊಲದಲ್ಲಿಯ ರೂಮಿನ ಮುಂದೆ ಕಟ್ಟಿದ್ದ ಸುಮಾರು ರೂ, 32,000=00 ಬೆಲೆ ಬಾಳುವ 8 ಟಗರುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಮಾಡಿದ ಕಳ್ಳರನ್ನು ಹಾಗೂ ಟಗರುಗಳನ್ನು ಪತ್ತೆ ಮಾಡಲು ಕೋರಿದ ವಗೈರಾ ಫಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

Friday, May 27, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(3) Karnataka Police Act.
ಶ್ರೀ. ನಿಂಗಪ್ಪ ಪಿ.ಎಸ್. ಕಾರಟಗಿ ರವರಿಗೆ ದಿನಾಂಕ 25-05-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಬಸವಣ್ಣ ಕ್ಯಾಂಪಿನ  ಉಣ್ಣಿಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಮೇರೆಗೆ  ಆರೋಪಿ  1) ವೆಂಕಟೇಶ್ವರರಾವ್ ತಂದಿ ರಾಮಮುರ್ತಿ  ಈಡಿಗೇರ ವಯಾ- 60 ವರ್ಷ ಜಾ- ಈಡಿಗೇರ  ಸಾ- ಬಸವಣ್ಣಕ್ಯಾಂಪ್  ಇವರ ಮೇಲೆ ದಾಳಿ ಮಾಡಲು ಹಿಡಿದು  ಈತನಿಂದ ರೂ. 1350=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 104/2016 ಕಲಂ: 78(3) Karnataka Police Act.
ದಿನಾಂಕ 26-05-2016 ರಂದು 19-30 ಗಂಟೆಯ ಸುಮಾರಿಗೆ ಆರೋಪಿತನಾದ ಶಕ್ಷಾವಲಿ ತಂದೆ ಶೇಖ್ ಅಜೀಮಸಾಬ ವಯಸ್ಸು 45 ವರ್ಷ ಜಾ:ಮುಸ್ಲಿಂ ಉ:  ರಗ್ಜಿನ್ ಕೆಲಸ ಸಾ: ಝಂಡಾಕಟ್ಟಿ ಮಹಿಬೂಬು ನಗರ, ಗಂಗಾವತಿ ಈತನು ಗಂಗಾವತಿ ನಗರದ ಬಿಲಾಲ್ ಮಸೀದಿ ರಸ್ತೆಯಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ಕಾಮಣ್ಣ ಎ.ಎಸ್.ಐ. (ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ಮಟಕಾ ಜೂಜಾಟದ ಹಣ ನಗದು ಹಣ ರೂ. 1,430-00. [02] ಒಂದು ನೋಕಿಯಾ ಮೊಬೈಲ್. [03] ಒಂದು ಮಟಕ ನಂಬರ ಬರೆದ ಪಟ್ಟಿ.  [04] 01 ಬಾಲ್ ಪೆನ್ ಜಪ್ತಿ ಪಡಿಸಿದ್ದು ಇರುತ್ತದೆ.  ಆರೋಪಿತನಿಂದ ಜಪ್ತಿ ಪಡಿಸಿದ ಮುದ್ದೆಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 56/2016 ಕಲಂ:  323, 324, 504, 506 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:.
ಪಿರ್ಯಾದಿದಾರನ ತಾಯಿಯ ಹೆಸರಿನಲ್ಲಿ ಹಾಗೂ ಇತರ 82 ಜನ ಫಲಾನುಭವಿಗಳಿಗೆ ಬಸವ ಯೋಜನೆ ಅಡಿಯಲ್ಲಿ ಮನೆ ಮಂಜೂರಾಗಿದ್ದು, ಅದಕ್ಕೆ ಆರೋಪಿತನು ತಕರಾರು ಸಲ್ಲಿಸಿದ್ದಕ್ಕೆ ಪಿರ್ಯಾದಿದಾರನು ಈ ಮೊದಲು ಇತರರೊಂದಿಗೆ ಹೋಗಿ ಶಂಕರೆಡ್ಡಿ ಈತನಿಗೆ ಬೇಡಿಕೊಂಡಿದ್ದು, ಅದರಂತೆ, ಇಂದು ದಿನಾಂಕ:26-05-2016 ರಂದು ಶಂಕರೆಡ್ಡಿ ಈತನು ಊರಿಗೆ ಬಂದಿದ್ದು ಕೇಳಿ 5-00 ಪಿಎಂಕ್ಕೆ ಪಿರ್ಯಾದಿ ಮತ್ತು ಸೋಮಪ್ಪ ಅಳವುಂಡಿ, ಗಾಳೆಪ್ಪ ತಾಯಮ್ಮನವರ್, ಮುದಿಯಪ್ಪ ಚಲವಾದಿ ಇವರೊಂದಿಗೆ ಶಂಕರೆಡ್ಡಿ ಇವರ ಗೋದಾಮಿನ ಹತ್ತಿರ ಹೋಗಿ, ಬಡವರಿಗೆ ಮನೆಗಳು ಮಂಜೂರಾಗಿವೆ ತಕರಾರು ಮಾಡಬೇಡಿರಿ, ನಮ್ಮಂತ ಬಡವರಿಗೆ ತೊಂದರೆಯಾಗುತ್ತದೆ ಅಂತಾ ಕೇಳಿದಾಗ ಆರೋಪಿತನು ಪಿರ್ಯಾದಿಗೆ ಮತ್ತು ಆತನ ಜೊತೆಗಿದ್ದವರಿಗೆ ಜಾತಿ ನಿಂದನೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 37/2016 ಕಲಂ:  504, 326, 506 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:.

ದಿನಾಂಕ: 24.05.2016 ರಂದು ಸಾಯಂಕಾಲ 6.00  ಗಂಟೆ ಸುಮಾರಿಗೆ ಪಿರ್ಯಾದಿದಾರನು ಆರೋಪಿತನ ಕಿರಾಣಿ ಅಂಗಡಿಗೆ ಹೋಗಿ ತನೆಗೆ ಎಲೆ ಅಡಿಕೆ ಮತ್ತು ಒಂದು ಸೊಂಡಿಗೆ ಪಾಕೇಟ್ನ್ನು ತೆಗೆದುಕೊಂಡು ಅದರ ರೊಕ್ಕ ಕೊಡಲು ತನ್ನಲ್ಲಿದ್ದ  500 ರೂಪಾಯಿ ನೋಟನ್ನು ಕೊಟ್ಟಾಗ ಆರೋಪಿತನು ಪಿರ್ಯಾದಿದಾರನಗೆ ಚಿಲ್ಲರೆ ಕೊಡು ಅಂತಾ ಅಂದಾಗ ಪಿರ್ಯಾದಿದಾರನು ನನ್ನ ಹತ್ತಿರ ಚಿಲ್ಲರೆ ಇರುವದಿಲ್ಲ ಅಂತಾ ಹೇಳಿದಾಗ ಆರೋಪಿತನು ಪಿರ್ಯಾದಿದಾರನೊಂದಿಗೆ ವಿನಾ ಕಾರಣ ಜಗಳ ತೆಗೆಯುವ ಉದ್ದೇಶದಿಂದ ಒಮ್ಮಿಂದೊಮ್ಮಲೆ ಸಿಟ್ಟಿಗೆದ್ದು ತನ್ನ ಅಂಗಡಿಯಿಂದ ಹೊರಗೆ ಬಂದವನೆ ಪಿಯರ್ಾದಿದಾರನಿಗೆ ಏನಲೇ ದಾಸ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ ಬೈದಾಡಿ ಬೆಕಂತಲೆ ಚಿಲ್ಲರೆ ಇಲ್ಲಾ ಅಂತಿದಿ ನೀನು ನನ್ನ ಅಂಗಡಿಗೆ ಉದ್ರಿ ಸಾಮಾನು ತೆಗೆದುಕೊಳ್ಳಾಕೆ ಬಂದಿದಿ ಮಗನೇ ಅಂತಾ ಬೈದಾಡಿ ಅಲ್ಲೆ ಇದ್ದ ಒಂದು ಬಿದುರು ಬಡಿಗೆಯಿಂದ ಪಿರ್ಯಾದಿದಾರನ ಬಲ ಮೊಣಕಾಲಿಗೆಎರಡು ಸಲ ಹೊಡೆದು ಅವನಿಗೆ ಭಾರಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ.

 
Will Smith Visitors
Since 01/02/2008