Our Commitment For Safe And Secure Society

This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Wednesday, February 15, 2017
1] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 28/2017 ಕಲಂ: 78(3) Karnataka Police Act.
ದಿ:14.02.2017 ರಂದು ಸಂಜೆ 05.10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ
ವ್ಯಾಪ್ತಿಯ, ಗಿಣಗೇರಿ ಗ್ರಾಮದ ಅಂಚೆ ಕಚೇರಿಯ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ ರಮೇಶ ತಂದೆ ಈರಪ್ಪ ಮುಚಿಗೇರ ಈತನು ರಸ್ತೆಯಲ್ಲಿ ಹೋಗು ಬರುವ
ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00
ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಜನರಿಂದ ಹಣ ಪಡೆದು
ಮಟ್ಕಾ ನಂಬರ್ ಚೀಟಿ ಬರೆದು ಕೊಡುತ್ತಿದ್ದಾಗ ಶ್ರೀ ಗುರುರಾಜ. ಕಟ್ಟಿಮನಿ, ಪಿ.ಎಸ್.ಐ
ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 730=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು
ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 45/2017 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ಗಾಯಾಳು ಶ್ರೀ ಶರಣಪ್ಪ ತಂದೆ ಯಮನಪ್ಪ ವಾಲೆಕಾರ, ವಯಸ್ಸು: 35 ವರ್ಷ ಜಾತಿ: ಕುರುಬರ, ಉ:
ಒಕ್ಕತಲನ ಸಾ: ಡಣಾಪೂರ, ತಾ: ಗಂಗಾವತಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ದಿನಾಂಕ:
14-02-2017 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಲಕ್ಷ್ಮಣ ತಂದೆ ಕಲ್ಲಪ್ಪ
ಹಡಪದ, ವಯಸ್ಸು: 40 ವರ್ಷ ಹಾಗೂ ಮಹರಾಜ ತಂದೆ ವಿರೇಶಪ್ಪ 35 ವರ್ಷ ಮೂರು ಜನರು ಕೂಡಿಕೊಂಡು ಮೂರು
ಗಾಲಿಯ ನಂಬರ್ ಇರಲಾರದ ಹೊಸ ಪ್ಯಾಸೆಂಜರ್ ಮಹೀಂದ್ರ ಅಲ್ಪಾ ಅಟೋ ನೇದ್ದರಲ್ಲಿ ಶ್ರೀರಾಮನಗರ ಕಡೆಯಿಂದ
ಡಣಾಪೂರ ಕ್ರಾಸ ಕಡೆಗೆ ತಾಯಮ್ಮನ ಗುಡಿ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ
ನಾವು ಕುಳಿತ ಅಟೋ ಓಡಿಸುತ್ತಿದ್ದ ಮಹಾರಾಜ ಈತನು ಅಟೋವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ
ನಡೆಯಿಸಿಕೊಂಡು ಮತ್ತು ಗಂಗಾವತಿ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಸಹ ತನ್ನ ಹಿಂಭಾಗದಲ್ಲಿ ಒಬ್ಬ
ಮಹಿಳೆಯನ್ನು ಕೂಡಿಸಿಕೊಂಡು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಇಬ್ಬರು
ಒಬ್ಬರಿಗೊಬ್ಬರು ಪರಸ್ಪರ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಇದರಿಂದಾಗಿ ನನಗೆ ಹೊಟ್ಟೆಗೆ
ಒಳಪೆಟ್ಟಾಗಿ ಹಾಗೂ ಬಲ ಮೊಣಕಾಲಿಗೆ ಗಾಯವಾಗಿದ್ದು ಲಕ್ಷ್ಮಣ ಈತನಿಗೆ ಮೂಗಿನ ಹತ್ತಿರ ಎಲಬು ಮುರಿದು
ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೋಟಾರ ಸೈಕಲ ನಡೆಸುತ್ತಿದ್ದ ವ್ಯಕ್ತಿಯ
ಹೆಸರನ್ನು ವಿಚಾರಿಸಲು ಹುಸೇನಬಾಷಾ ತಂದೆ ಮೌಲಸಾಬ ವಯಸ್ಸು: 40 ವರ್ಷ ಸಾ: ಲಿಂಗರಾಜ ಕ್ಯಾಂಪ್ ಗಂಗಾವತಿ
ಅಂತಾ ತಿಳಿಸಿದ್ದು ಆತನಿಗೆ ಹಣೆಗೆ ಬಲಗೈ ರಟ್ಟೆಗೆ ತೀವ್ರ ರಕ್ತಗಾಯವಾಗಿದ್ದು ಹಿಂಭಾಗ ಕುಳಿತುಕೊಂಡಿದ್ದವಳ
ಹೆಸರು ಮೌಲಾಬೀ ಗಂಡ ಮೌಲಸಾಬ 30 ವರ್ಷ ಸಾ: ಮಹಿಬೂಬನಗರ ಗಂಗಾವತಿ ಅಂತಾ ತಿಳಿಸಿದ್ದು ಅವಳಿಗೆ ಬಲಗೈ
ರಟ್ಟೆಗೆ ತೀವ್ರ ಒಳಪೆಟ್ಟಾಗಿ ಅಲ್ಲಲ್ಲಿ ರಕ್ತ ಗಾಯಗಳಾಗಿದ್ದು ಇತ್ತು. ಅಪಘಾತದ ನಂತರ ಮಹಾರಾಜ ಈತನು
ಅಲ್ಲಿಂದ ಓಡಿ ಹೋಗಿದ್ದನು. ಮೋಟಾರ ಸೈಕಲ ನೋಡಲು ಹಿರೋ ಹೊಂಡಾ ಸಿಡಿ ಡೀಲಕ್ಸ್ ನಂಬರ್ ಕೆ.ಎ-37/ಎಲ್-8365
ಅಂತಾ ಇದ್ದು ಕೂಡಲೇ ಮರಳಿ ಟೋಲ ಅಂಬ್ಯುಲೆನ್ಸ್ ವಾಹನದಲ್ಲಿ ನಮಗೆ ಮೂರು ಜನರನ್ನು ಚಿಕಿತ್ಸೆ ಕುರಿತು
ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದಾಗ ತೀವ್ರವಾಗಿ ಗಾಯಗೊಂಡಿದ್ದ
ಹುಸೇನಬಾಷಾ ಎಂಬಾತನು ಸಹ ಸಂಜೆ 7:00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು
ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ
ಗುನ್ನೆ ನಂ: 09/2017 ಕಲಂ: 279, 338 ಐ.ಪಿ.ಸಿ:.
ದಿನಾಂಕ 14-02-2017
ರಂದು ಬೆಳಿಗ್ಗೆ 5-05 ಗಂಟೆಗೆಯ ಸುಮಾರಿಗೆ ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ
ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿ ಶ್ರೀ ಮುದುಕಪ್ಪ ಹದ್ದಿನ ಇವರ ಹೇಳಿಕೆಯನ್ನು
ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:11-02-2017
ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿಯ ತಾಯಿ ಕರಕಮ್ಮ ಹದ್ದಿನ ಇವರು ಕಲ್ಲಣ್ಣವರ ಓಣಿಗೆ ಹೋಗಲು ಕೊಪ್ಪಳ ನಗರದ
ಅಜಾದ ಸರ್ಕಲ್ ಸಮೀಪ ಜವಾಹರ ರಸ್ತೆಯನ್ನು ದಾಟುತ್ತಿರುವಾಗ ಅಜಾದ ಸರ್ಕಲ್ ಕಡೆಯಿಂದ ಮೋಟಾರ್ ಸೈಕಲ್ ನಂ. KA-37/EC-4550 ನೆದ್ದರ ಸವಾರನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು
ಫಿರ್ಯಾದಿಯ ತಾಯಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಕರಕಮ್ಮ ಈಕೆಗೆ ತಲೆಗೆ ತೆರಚಿದಗಾಯ ಹಾಗೂ
ಒಳಪೆಟ್ಟು ಆಗಿ ಮೂಗಿನಿಂದ & ಕಿವಿಯಿಂದ ರಕ್ತ
ಬಂದಿದ್ದು ಸರಿಯಾಗಿ ಮಾತನಾಡಲು ಬರುತ್ತಿಲ್ಲ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ
ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 08/2017 ಕಲಂ: 143, 147, 323, 326, 504, 506 ಸಹಿತ 149 ಐ.ಪಿ.ಸಿ.
ದಿನಾಂಕ:
14-02-2017 ರಂದು
ಬೆಳಿಗ್ಗೆ 10-00
ಗಂಟೆಗೆ
ಶರಣಪ್ಪ ಕುರಿ ಸಾ:
ಹನಮನಾಳ
ರವರು ಠಾಣೆಗೆ ಹಾಜರಾಗಿ ತಮ್ಮ ಬೆರಳಚ್ಚು ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ
ಊರಿನ ಫಿರ್ಯಾದಿಯ ಜನಾಂಗದವರಾದ 1] ಮಂಜಪ್ಪ, 2] ಸಿಂಧೂರಪ್ಪ, ರವರು
ಫಿರ್ಯಾದಿಗೆ ಊರಲ್ಲಿ ಆವಾಗವಾಗ ನೀ ಏನ್ ದೊಡ್ಡ ಹಿರಿಯ ಏನಲೇ ಅಂತಾ ತಕರಾರು ಮಾಡಿ ಆತನ ಮೇಲೆ
ದ್ವೇಷ ಇಟ್ಟು,
ನಂತರ
ದಿನಾಂಕ:
13-02-2017 ರಾತ್ರಿ
09-30
ಗಂಟೆಗೆ
ರಂಗಾಪೂರ ಕ್ರಾಸ್ ಹತ್ತಿರದ ಲಾಲಸಾಬ ಡಾಬಾದಲ್ಲಿ ಊಟ ಮಾಡಿ ಹೊರಗಡೆ ಬಂದು ಚೇರಿನ ಮೇಲೆ ಕೂಡಲು
ಹೋದಾಗ ಆರೋಪಿ 1]
ಮಂಜಪ್ಪ, 2] ಸಿಂಧೂರಪ್ಪ 3] ಪವಾಡೆಪ್ಪ, 4] ರಾಮಪ್ಪ, 5] ರಂಗಪ್ಪ
ರವರು ಕೂಡಿ ಫಿರ್ಯಾದಿಗೆ ಏನ್ ಲೇ ಶರಣ ಊರಾಗ ಏನ್ ದೊಡ್ಡ ಹಿರಿಯ ಆಗಿ ಯನಲೇ ಮಗನೆ ನಾವು ಐದು ಜನ
ಅದೀವಿ ನಿನ್ನ ಒಂದು ಗತಿ ಕಾಣಸ್ತೀವಿ ಮಗನೇ ಅಂತಾ ನನಗೆ ಅವಾಚ್ಯವಾಗಿ ಬೈದಾಡಿದರು. ಆಗ ನಾನೇನು
ದೊಡ್ಡವನಲ್ಲ ನಾನು ನಿಮಗೆ ಏನು ಅಂದಿಲ್ಲ ನನಗ್ಯಾಕ್ ಬೈತೀರಿ ಅಂತಾ ಕೇಳಿದಾಗ ಮಂಜಪ್ಪನು ನನ್ನ
ತೆಕ್ಕೆ ಬಿದ್ದನು.
ಆತನ
ತಮ್ಮ ಸಿಂಧೂರ ಅಲ್ಲಿಯೇ ಇದ್ದ ಒಡಗಟ್ಟಿಗೆ ತೆಗೆದುಕೊಂಡು ತಲೆಗೆ ಹೊಡೆದನು. ನಾನು
ಸತ್ನೆಪ್ಪೊ ಅಂತಾ ಕೆಳಗೆ ಕುಸಿದಾಗ ಪವಾಡೆಪ್ಪ ಮತ್ತು ರಾಮಪ್ಪ ರವರು ಕಾಲಿನಿಂದ ಒದ್ದರು. ರಂಗಪ್ಪ
ಮೇಟಿ ಈತನು ಶರಣ ಹೆಂಗ ಸೋಗು ಮಾಡತಾನ ನೋಡು ಅಂತಾ ಅಂದವನೆ ಕೈಯಿಂದ ಬೆನ್ನಿಗೆ ಗುದ್ದಿ ಕಾಲಿನಿಂದ
ಒದ್ದು,
ಇವತ್ತ
ಇವನ್ನ ಜೀವ ಸಹಿತ ಬಿಡುವುದು ಬ್ಯಾಡ್ ಅಂತಾ ಅಂದಾಗ. ಅಲ್ಲಿಯೇ
ಇದ್ದ ಅಮರೇಶ ತಿಮ್ಮನಟ್ಟಿ, ಮತ್ತು ಬಸನಗೌಡ ತಂದೆ ಗೌಡಪ್ಪ ಕೊಟ್ನಳ್ಳಿ, ಲಕ್ಷ್ಮಪ್ಪ
ತಂದೆ ಶಾಸಪ್ಪ ಕುರಿ ರವರು ಜಗಳ ಬಿಡಿಸಿದರು. ಆಗ ಡಾಬಾದ ಮಾಲೀಕ
ಲಾಲಸಾಬನು ಈ ರೀತಿ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿ ಕಳುಹಿಸಿದರು. ಜಗಳದಲ್ಲಿ
ನನ್ನ ತಲೆಗೆ ಭಾರಿ ರಕ್ತಗಾಯವಾಯಿತು. ನಂತರ ಒಂದು ಖಾಸಗಿ ವಾಹನದಲ್ಲಿ ನಮ್ಮೂರಿಗೆ
ಬಂದು ರಾತ್ರಿಯಾಗಿದ್ದರಿಂದ ಮನೆಯಲ್ಲಿದ್ದು ನಾನೇ ಉಪಚಾರ ಮಾಡಿಕೊಂಡು ಇಂದು ಹಿರಿಯರನ್ನು ವಿಚಾರಿಸಿ
ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ.
5] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 09/2017 ಕಲಂ: 143, 147, 148, 323, 324, 109, 354, 504,506 ಸಹಿತ 149 ಐ.ಪಿ.ಸಿ.
ದಿನಾಂಕ:
14-02-2017 ರಂದು
ಸಾಯಂಕಾಲ 18-50 ಗಂಟೆಗೆ
ಫಿರ್ಯಾದಿದಾರರಾದ ದ್ರಾಕ್ಷಾಯಣಿ ಗಂಡ ಮಹಾಂತಗೌಡ ಪಾಟೀಲ ಸಾ: ಬಂಡ್ರಗಲ್ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿ ಫಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶವೇನೆಂದರೆ. ಫಿರ್ಯಾದಿದಾರರು ತಮ್ಮ ಮಕ್ಕಳೊಂದಿಗೆ ತಮ್ಮ ತವರುಮನೆಯಾದ ಹುನಗುಂದ ತಾಲೂಕ ಇಂಗಳಗಿ ಗ್ರಾಮದಲ್ಲಿ ಹಾಗೂ ಗಂಡನ ಮನೆಯಾದ ಕುಷ್ಟಗಿ ತಾಲೂಕ ಬಂಡರಗಲ ಗ್ರಾಮದಲ್ಲಿ ವಾಸವಿದ್ದು ಬಂಡರಗಲ ಗ್ರಾಮದಲ್ಲಿಯ ತನ್ನ ಪಾಲಿಗೆ ಬಂದಿದ್ದ ಮನೆಯನ್ನು ಕಟ್ಟಿಸಲು ಕೂಲಿಕಾರರಿಂದ ಸ್ವಚ್ಚ ಮಾಡಿಸುವಾಗ ಆರೋಪಿತರಾದ 1]ದೊಡ್ಡಬಸಪ್ಪ
ಸಜ್ಜಲಗುಡ್ಡ
2] ವಿದ್ಯಾ
ಸಜ್ಜಲಗುಡ್ಡ
3] ಸೋಮನಗೌಡ
ಪಾಟೀಲ
4] ಶಿವವ್ವ
ಪಾಟೀಲ ಹಾಗೂ ಇತರರು ಸೇರಿ ದಿನಾಂಕ: 10-02-2017 ರಂದು ಮುಂಜಾನೆ 10-00 ಗಂಟೆಗೆ ಬಾಯಿ
ಮಾತಿನಿಂದ ಜಗಳ ವಾಡಿ ನಂತರ ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಫಿರ್ಯಾದಿ
ಪುನಃ ಮನೆ ಸ್ವಚ್ಚ ಮಾಡುವಾಗ ರೋಪಿತರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಆರೋಪಿ ಶಿವವ್ವ
ಮತ್ತು ವಿದ್ಯಾ ಫಿರ್ಯಾದಿ ಮೇಲೆ ಏಕಾಏಕಿ ಬಂದು ಕೈಯಿಂದ ಕಪಾಳಕ್ಕೆ ಹಾಗೂ ಕಲ್ಲುಗಳಿಂದ ಬೆನ್ನಿಗೆ
ಹೊಡೆದು ದುಖಃಪಾತ ಗೊಳಿಸಿದ್ದು, ಆರೋಪಿ ದೊಡ್ಡಬಸಪ್ಪ ಮತ್ತು ಸೋಮನಗೌಡ ರವರು ಫಿರ್ಯಾದಿಗೆ
ಆ ಬೋಸೂಡಿದೇನ ಕೇಳತೀರಿ ಹೊಡಿರಿ ಅಂತಾ ಪ್ರಚೋದನೆ ನೀಡಿ, ಸದರಿ ದೊಡ್ಡಬಸಪ್ಪ
ಮತ್ತು ಭೀಮನಗೌಡ ರವರು ಫಿರ್ಯಾದಿಯ ಸೀರೆಯನ್ನು
ಜಗ್ಗಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಅದೆ. ಆಗ ಅಲ್ಲಿಯೇ ಇದ್ದ ಸೋಮನಗೌಡ
ತಂದೆ ಮುದಕನಗೌಡ ಪಾಟೀಲ ಮತ್ತು ಆಂಜನೇಯ ತಂದೆ ಮಾರೆಪ್ಪ ಗಟ್ಟಿಗುಂಡು ರವರು ಜಗಳ ಬಿಡಿಸಿ ತಿಳಿಹೇಳಿದ್ದು
ನಂತರ ಆರೋಪಿತರು ಫಿರ್ಯಾದಿಗೆ ಈ ದಿವಸನೀನು ಉಳಿದುಕೊಂಡಿ ಮುಂದೆ ನಿನ್ನ ಜೀವಸಹಿತ ಉಳಿಸುವದಿಲ್ಲಾ
ಅಂತಾ ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ ಫಿರ್ಯಾದಿ ಊರಲ್ಲಿಯ ಹಿರಿಯರು ಯಾರು ಪೊಲೀಸ್ ಠಾಣೆಗೆ
ಹೋಗಿ ದೂರು ದಾಖಲಿಸಬೇಡಿರಿ ಅಂತಾ ಹೇಳಿ ಇಲ್ಲಿಯೇ ಊರಲ್ಲಿ ಬಗಹರಿಸೋಣ ಅಂತಾ ಹೇಳಿದ್ದರಿಂದ ಹಾಗೂ ಆರೋಫಿತರು
ಊರಲ್ಲಿ ಗುರು ಹಿರಿಯರು ಮಾತುಕೇಳದೆ ಇದ್ದುದ್ದರಿಂದ ಫಿರ್ಯಾದಿ ಇಂದು ತಡವಾಗಿ ಠಾಣೆಗೆ ಬಂದು ಆರೋಪಿತರ
ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ನೀಡಿದ್ದು ಇರುತ್ತದೆ.
Posted by Koppal District Police at 10:29 AM 0 comments
Tuesday, February 14, 2017
1] ಯಲಬುರ್ಗಾ ಪೊಲೀಸ್ ಠಾಣೆ
ಗುನ್ನೆ ನಂ: 12/2017 ಕಲಂ: 87 Karnataka Police Act.
ದಿನಾಂಕ: 13-02-2017 ರಂದು
ಸಾಯಂಕಾಲ 05-30 ಗಂಟೆಯ ಸುಮಾರಿಗೆ ಮುಧೋಳ ಗ್ರಾಮದ ಮುಧೋಳ-ಚಿಕ್ಕೊಪ್ಪ
ರಸ್ತೆಯ ಮೇಲೆ ದಕ್ಷಿಣ ಭಾಗದ ನಟರಾಜ ದೇಸಾಯಿ ಇವರ ಹೊಲದಿಂದ ಸ್ವಲ್ವ ದೂರದಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ
ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 5 ಜನರು ಸಿಕ್ಕಿ ಬಿದ್ದಿದ್ದು
03 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ
ಒಟ್ಟು 4700=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ.
ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 12/2017 ರಲ್ಲಿ ದಾಖಲಿಸಿಕೊಳ್ಳಲಾಗಿದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ: 78(3) Karnataka Police Act.
ದಿನಾಂಕ:-13-02-2017 ರಂದು ಮದ್ಯಾಹ್ನ 7-00 ಗಂಟೆಯ ಸುಮಾರಿಗೆ
ಕಾರಟಗಿಯ ಎ.ಪಿ.ಎಂ.ಸುಇ 2 ನೇ ಗೇಟ್ ಹತ್ತಿರ ಆರೋಪಿ ನಂ 1 ರಾಮು @ ರಮೇಶ ತಂದೆ ಹನುಮಂತಪ್ಪ @ ಕಾಳಿಂಗಪ್ಪಈಳಿಗೇರ ಆರೋಪಿ ನಂ 2 ಶರಣಪ್ಪ ತಂದೆ ಬಸಪ್ಪ ಗದ್ದಿ ಸಾ.ಇಬ್ಬರೂ ಕಾರಟಗಿ ರವರು ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು
ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತರ ಕಡೆಯಿಂದ ರೂ.4520=00 ನಗದು ಹಣ ಮತ್ತು ಮಟ್ಕಾ ಜೂಜಾಟದ
ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರ್ ಆರೋಫಿತರು ಪಟ್ಟಿಯನ್ನು ಯಾರಿಗೆ ಕೊಡುತ್ತಿರಿ
ಅಂತಾ ಕೇಳಲಾಗಿ ಪಟ್ಟಿಯನ್ನು ಶರಣಪ್ಪ ಬೂದುಗುಂಪಾ ಈತನ ತಗೆದುಕೊಂಡು ತಾನೇ ಇಟ್ಟುಕೊಳ್ಳುತ್ತಾನೆ
ಅಂತಾ ತಿಳಿಸಿದ್ದು ಸದರಿ ಮಟಕಾ ಜೂಜಾಟದ ನಗದು ಹಣ ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ
ಮಾಡಿಕೊಂಡು ಆರೋಪಿತರನ್ನು ತಾಭಾಕ್ಕೆ ತಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ ನಂ: 18/2017 ಕಲಂ: 379 ಐ.ಪಿ.ಸಿ:.
ದಿನಾಂಕ 13-02-2017 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರರಾದ ಸಿದ್ದೇಶ ಜೆಬಿ ತಂದೆ ಬಸವರಾಜ ಸಾ: ಬಂಡ್ರಿ
ಬಸವೇಶ್ವರ ನೀಲಯ ಗಣೇಶ ನಗರ ಕೊಪ್ಪಳ ಇವರು ಲಿಖಿತ ಫಿರ್ಯಾದಿಯನ್ನು ನೀಡಿದ್ದು, ಫಿರ್ಯದಿದಾರರು ತಮ್ಮ ಹೆಸರಿನಲ್ಲಿರುವ ತಮ್ಮ ಟಿ.ವಿ.ಎಸ್ ಎಕ್ಸ್ ಎಲ್ ಮೋಟಾರ ಸೈಕಲ್ ನಂ
ಕೆ.ಎ 37 ಕ್ಯೂ 6999 ನೇದ್ದನ್ನು ತಮ್ಮ ಸ್ವಂತ ಕೆಲಸಕ್ಕೆ ಉಪಯೋಗಿಸುತ್ತಿದ್ದು ಇದನ್ನ, ದಿನಾಂಕ 11-02-2017 ರಂದು ರಾತ್ರಿ 10-00 ಗಂಟೆಗೆ ಗಣೇಶನಗರದಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿ ತಾವು ತಮ್ಮ ಮನೆಯೋಳಗೆ ಹೋಗಿ
ನಂತರ ಮುಂಜಾನೆ 6-00 ಗಂಟೆಯ ಸುಮಾರಿಗೆ ಮನೆಯ
ಹೊರಗಡೆ ಬಂಧು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ ತಾವು ಸುತ್ತಾಮುತ್ತಾ ಹುಡುಕಾಢಿದರೂ
ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ. ಆ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು
ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
Posted by Koppal District Police at 10:32 AM 0 comments
Monday, February 13, 2017
1] ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 41/2017 ಕಲಂ: 87 Karnataka Police Act.
ದಿನಾಂಕ:- 12-02-2017 ರಂದು ಮಧ್ಯಾಹ್ನ 1:30 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ವ್ಯಾಪ್ತಿಯ ಜೀರಾಳ ಕಲ್ಗುಡಿ ಸೀಮಾದಲ್ಲಿ ಶರಣೇಗೌಡ ಎಂಬುವವರ ಜಮೀನಿನ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ
ರವರಿಗೆ ಬಂದ ಮೇರೆಗೆ ದಾಳಿ ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಪಿ.ಸಿ. ನಂ:
237, 363, 110, 120, ಹೆಚ್.ಸಿ. 44 ಹಾಗೂ ಚೀಪ ಚಾಲಕ ಎ.ಹೆಚ್.ಸಿ. ಕನಕಪ್ಪ ಇವರನ್ನು ಸಂಗಡ
ಕರೆದುಕೊಂಡು ಜೀರಾಳ ಕಲ್ಗುಡಿ ಗ್ರಾಮದ ಊರ ಮುಂದೆ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿಕೊಂಡು
ನಡೆದುಕೊಂಡು ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಶರಣೇಗೌಡ ಎಂಬುವವರ ಜಮೀನ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಮೂವರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ
ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು,
ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 03 ಜನರು ಸಿಕ್ಕಿಬಿದ್ದಿದ್ದು.
ವಿಚಾರಿಸಲು ಅವರು ತಮ್ಮ ಹೆಸರುಗಳು (1) ವಾಸಪ್ಪ ತಂದೆ ಕೆರೆಯಪ್ಪ ವಯಸ್ಸು 30 ವರ್ಷ, ಜಾತಿ: ಭಜಂತ್ರಿ
ಉ: ಆಟೋ ಚಾಲಕ ಸಾ: ಹಳೇ ಜೀರಾಳ ಕಲ್ಗುಡಿ (2) ಕನಕಪ್ಪ ತಂದೆ ಬಸಪ್ಪ, ವಯಸ್ಸು 32 ವರ್ಷ, ಜಾತಿ: ಉಪ್ಪಾರ
ಉ: ಕುರಿ ಕಾಯುವುದು ಸಾ: ಹೊಸ ಜೀರಾಳ ಕಲ್ಗುಡಿ (3) ನಾಗರಾಜ ತಂದೆ ಪಂಪನಗೌಡ, ವಯಸ್ಸು 28 ವರ್ಷ,
ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಳೇ ಜೀರಾಳ ಕಲ್ಗುಡಿ ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ
ಸ್ಥಳದಿಂದ ಜೂಜಾಟದ ನಗದು ಹಣ ರೂ. 990-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ
ಒಂದು ಟಾವೆಲ್ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ
ಗುನ್ನೆ ನಂ: 27/2017 ಕಲಂ: 379 ಐ.ಪಿ.ಸಿ:.
ದಿನಾಂಕ:
06-02-2017 ರಂದು ಪಿರ್ಯಾದಿದಾರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿಸಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು
ಅದರ ಸಾರಾಂಶವೇನಂದರೆ, ದಿನಾಂಕ: 25-01-2017 ರಂದು ರಾತ್ರಿ 09-00 ಗಂಟೆ ಸುಮಾರಿಗೆ ಹುಲಗಿಯ ಎಸ್.ಆರ್.ಲಾಡ್ಜನ
ಮುಂದೆ ತಮ್ಮ ಬಜಾಜ ಮೋಟರ ಸೈಕಲ್ ನಂ.ಕೆ.ಎ.35/ಇ.ಎ.0877 ನೇದ್ದನ್ನು ಹ್ಯಾಂಡಲ್ ಲಾಕ ಮಾಡಿ ನಿಲ್ಲಿಸಿ
ಲಾಡ್ಜನಲ್ಲಿ ಮಲಗಿದ್ದು ಬೆಳಿಗ್ಗೆ 06-00 ಎ.ಎಂ.ಸುಮಾರಿಗೆ ಎದ್ದು ನೋಡಲಾಗಿ ಮೋ.ಸೈ.ಇರುವದಿಲ್ಲಾ
ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಮುಂತಾಗಿದ್ದ ಪಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
Posted by Koppal District Police at 10:15 AM 0 comments
Sunday, February 12, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 24/2017 ಕಲಂ: 379 ಐ.ಪಿ.ಸಿ:.
ದಿನಾಂಕ:-11-02-2017 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪುಲಕೇಶಿ ತಂದಿ ಸಿದ್ದಲಿಂಗಪ್ಪ ದಮ್ಮೂರ
ವಯಾ-31 ವರ್ಷ ಜಾ. ಕುರಬರ ಉ-ಶಿಕ್ಷಕರು ಸಾ. ಸಾ.ಎಲ್.ವಿ.ಟಿ ಕಾಲೋನಿ ಗಂಗಾವತಿ ಹಾ.ವ ಸಾಲೋಣಿ ಕಾರಟಗಿ
ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರು ತಮ್ಮ
ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂ ಕೆ.ಎ-35 ಎಸ್-0765 ಅಂ.ಕಿ 25000=00 ನೇದ್ದನ್ನು ದಿನಾಂಕ:-30-01-2017 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ:-31-01-2017 ಬೆಳಿಗ್ಗೆ
7-00 ಗಂಟೆಯ ಮದ್ಯದ ಅವಧಿಯಲ್ಲಿ ಕಾರಟಗಿ ಸಾಲೋಣಿಯ ತಮ್ಮ ವಾಸದ ಮನೆಯ ಮುಂದೆ ಬಿಟ್ಟಿದ್ದಾಗ್ಗೆ ಯಾರೋ
ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇಷ್ಟು ದಿವಸ ಸಿಂಧನೂರು, ಗಂಗಾವತಿ ಇತರೆ ಕಡೆ ಹುಡುಕಾಡಿದರೂ
ಸಿಗದ ಕಾರಣಕ್ಕೆ ಇಂದು ಬಂದು ದೂರು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
Posted by Koppal District Police at 11:02 AM 0 comments
Saturday, February 11, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 22/2017 ಕಲಂ: 78(3) Karnataka Police Act.
ದಿನಾಂಕ:-10-02-2017 ರಂದು ಸಂಜೆ
05-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ, ಮಾನ್ಯ ನ್ಯಾಯಾಲಯದ
ಪರವಾನಿಗೆ ಪತ್ರ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 10-02-2017 ರಂದು
ಸಾಯಂಕಾಲ 4-00 ಗಂಟೆಯ ಸುಮಾರಿಗೆ ಬೇವಿನಾಳ ಗ್ರಾಮದ ಅಗಸಿಮುಂದೆ ಸಾರ್ವಜನಿಕರ
ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು
ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದ ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ. 21500=00 ಗಳನ್ನು
ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ
ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 24/2017 ಕಲಂ: 279, 338. ಐಪಿಸಿ
ದಿ:10-02-2017 ರಂದು ಸಂಜೆ 6-45 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕರಿಯಪ್ಪ
ಕಂಬಳಿ. ಸಾ: ಗುತ್ತೂರ. ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:09-02-2017 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ
ಫಿರ್ಯಾದಿದಾರರು ಇತರೆ ಸಂಗಡಿಗರೊಂದಿಗೆ ಹುಣ್ಣಿಮೆಯ ಪ್ರಯುಕ್ತ ಶ್ರೀ ಹುಲಿಗೆಮ್ಮ ದೇವಿಯ
ದರ್ಶನಕ್ಕೆ ಹುಲಿಗಿಗೆ ಅಂತಾ ಕಾಲ್ನಡಿಗೆಯಲ್ಲಿ ಕೊಪ್ಪಳ-ಬೇವೂರ ರಸ್ತೆಯ ಶ್ರೀ ಮಾರುತಿ ದೇವಾಲಯದ
ಹತ್ತಿರ ನಡೆದುಕೊಂಡು ಬರುತ್ತಿದ್ದಾಗ, ಅದೇ ಸಮಯಕ್ಕೆ ತಮ್ಮ ಹಿಂದಿನಿಂದ ಅಂದರೆ ಬೇವೂರ ಕಡೆಯಿಂದ ಟ್ರ್ಯಾಕ್ಸ ನಂ: ಕೆಎ-37/ಎ-4976 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು
ಬಂದು ಫಿರ್ಯಾದಿದಾರರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ತಲೆಗೆ ಭಾರಿ ರಕ್ತಗಾಯ, ಹಾಗೂ ಬಲಗೈ ಮೊಣಕೈ ಹತ್ತಿರ ಹಾಗೂ ಎಡಕಾಲ ಚಪ್ಪೆಗೆ ಒಳಪೆಟ್ಟಾಗಿದ್ದು
ಇರುತ್ತದೆ. ಕಾರಣ ಅಪಘಾತ ಮಾಡಿದ ಟ್ರ್ಯಾಕ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ತಡವಾಗಿ
ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
Posted by Koppal District Police at 10:34 AM 0 comments
Friday, February 10, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 21/2017 ಕಲಂ: 78(3) Karnataka Police Act.
ದಿನಾಂಕ:-09-02-2017 ರಂದು
ರಾತ್ರಿ 9-40 ಗಂಟೆಗೆ ಪಿ.ಎಸ್.ಐ ಸಾಹೇಭರು ಒಂದು ಮಟ್ಕಾ ದಾಳಿ ಮೂಲ ಪಂಚನಾಮೆ, ವರದಿ ಮತ್ತು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಆರೋಪಿಯನ್ನು ಹಾಜರುಪಡಿಸಿದ್ದು
ಸದ್ರಿ ಸಾರಾಂಶದಲ್ಲಿ ಇಂದು ದಿನಾಂಕ:-09-02-2017 ರಂದು ರಾತ್ರಿ 8-25 ಗಂಟೆಯ ಸುಮಾರಿಗೆ
ಕಾರಟಗಿ ಎ.ಪಿ.ಎಮ್.ಸಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ತಾಯಪ್ಪ ತಂದಿ ದುರಗಪ್ಪ
ಕ್ವಾಸಗಿ ವಯಾ-28 ವರ್ಷ ಸಾ. 1 ನೇ ವಾರ್ಡ ಕಾರಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ
ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನಿಂದ ನಗದು
ಹಣ 710=00 ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 06/2017 ಕಲಂ: 279, 338. ಐಪಿಸಿ
ದಿನಾಂಕ: 09-02-2017 ರಂದು ರಾತ್ರಿ 8-45 ಗಂಟೆ ಸುಮಾರಿಗೆ ಗಾಯಾಳಯ ಹನುಮಂತನು ತನ್ನ ಮೋಟಾರ್
ಸೈಕಲ್ ನಂ. ಕೆಎ-37/ಈಬಿ-7833 ನೇದ್ದನ್ನು ಬನ್ನಿಕೊಪ್ಪದಲ್ಲಿಯ ತನ್ನ ಮಾವನ ಮನೆಯಿಂದ (ಪಿರ್ಯಾದಿದಾರ)
ಪೆಟ್ರೋಲ್ ಹಾಕಿಸಿಕೊಂಡು ಬರಲು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಪಕ್ಕದಲ್ಲಿರುವ ಪೆಟ್ರೋಲ್ ಬಂಕಿಗೆ
ಹೋಗಿದ್ದು, ರಾತ್ರಿ 9-00 ಗಂಟೆ ಸುಮಾರಿಗೆ ಹನುಮಂತನು ತನ್ನ ಮೋಟಾರ್ ಸೈಕಲ್ ಇಂಡಿಕೇಟರ್ ಹಾಕಿ ಪೆಟ್ರೋಲ್
ಬಂಕ್ ಕಡೆಗೆ ಟರ್ನ ಮಾಡುತ್ತಿರುವಾಗ ಆರೋಪಿತನು ಕಾರ್ ನಂ. ಕೆಎ-35/ಎನ್-2333 ನೇದ್ದನ್ನು ಗದಗ ಕಡೆಯಿಂದ
ಕೊಪ್ಪಳ ಕಡೆಗೆ ಅತಿಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ
ಹೊಡೆಸಿ ಅಪಘಾತಪಡಿಸಿರುತ್ತಾನೆ. ಇದರಿಂದಾಗಿ ಹನುಮಂತನಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿರುತ್ತವೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 33/2017 ಕಲಂ: 279, 337, 338, 304[A] IPC & 187 IMV Act
ದಿನಾಂಕ : 09-02-2017 ರಂದು ಕುಷ್ಟಗಿ ತಾಲೂಕಿನ ಬ್ಯಾಲಿಹಾಳ ಗ್ರಾಮದ ನಮ್ಮ ದೊಡ್ಡಮ್ಮನ
ಮಗನಾದ ಸೋಮಪ್ಪ ತಂದೆ ನಾಗಪ್ಪ ಡೊಳ್ಳಿನ ವಯಾ : 28 ವರ್ಷ ಇತನ ನಿಶ್ಚಿತಾರ್ಥ ಕಾರ್ಯಕ್ರಮವಿದ್ದ
ಕಾರಣ ನಾನು ಮತ್ತು ನಮ್ಮ ತಾಯಿಯಾದ ಶಾಂತಮ್ಮ ವಯಾ : 40 ವರ್ಷ ಇಬ್ಬರೂ ಇಂದು ಬೆಳಿಗ್ಗೆ ಬ್ಯಾಲಿಹಾಳ
ಗ್ರಾಮಕ್ಕೆ ಬಂದು ಸದರಿ ನಮ್ಮ ದೊಡ್ಡಮ್ಮನ ಮಗನಾದ ಸೋಮಪ್ಪ ಇವರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿಸಿಕೊಂಡು
ನಂತರ ನನ್ನನ್ನು ಮತ್ತು ನನ್ನ ತಾಯಿಯಾದ ಶಾಂತಮ್ಮ ರವರನ್ನು ನಮ್ಮೂರಿಗೆ ಬಿಟ್ಟು ಬರುವ ಸಲುವಾಗಿ
ಸದರಿ ನಮ್ಮ ದೊಡ್ಡಮ್ಮನ ಮಗನಾದ ಸೋಮಪ್ಪ ಇತನು ತನ್ನ ಹಿರೋ ಸ್ಪ್ಲೆಂಡರ್ ಪ್ರೋ ಮೋ.ಸೈ ನಂ :
ಕೆ.ಎ-37/ಇಬಿ-8205 ನೇದ್ದನ್ನು ತೆಗೆದುಕೊಂಡು ನಮ್ಮನ್ನು ಮೋ.ಸೈ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದು
ನಂತರ ರಾತ್ರಿ 7-00 ಗಂಟೆಯ ಸುಮಾರಿಗೆ ನಾವು ಬ್ಯಾಲಿಹಾಳ ದಾಟಿ ಚಿಕ್ಕನಂದಿಹಾಳ ಕ್ರಾಸ್ ಹತ್ತಿರ ಸೋಮಪ್ಪ
ಇತನು ರಸ್ತೆಯ ಪಕ್ಕದಲ್ಲಿ ತನ್ನ ಮೋ.ಸೈ ನ್ನು ನಡೆಸಿಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಯಾವುದೋ
ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು
ನಮ್ಮ ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಿಂದ ನಾವು ಮೋ.ಸೈ ಸಮೇತ ಕೆಳಗೆ ಬಿದ್ದಿದ್ದು ಆಗ ನಮಗೆ ಟಕ್ಕರ
ಕೊಟ್ಟ ವಾಹನದ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ನಂತರ ನೋಡಿಕೊಳ್ಳಲಾಗಿ
ಸದರಿ ಅಪಘಾತದಿಂದ ನನಗೆ ಎಡಗಾಲು ಮೊಣಕಾಲಿಗೆ ಭಾರಿ ರಕ್ತ ಗಾಯ, ಎಡಗಾಲು ಹಿಮ್ಮಡಿಗೆ ರಕ್ತ ಗಾಯ ಹಾಗೂ
ಬಲಗಡೆ ಸೊಂಟಕ್ಕೆ ತೆರಚಿದ ಗಾಯವಾಗಿದ್ದು ನಮ್ಮ ತಾಯಿಯಾದ ಶಾಂತಮ್ಮ ಇವರಿಗೆ ಬಲಗಾಲು ಮೊಣಕಾಲಿಗೆ ಭಾರಿ
ರಕ್ತ ಗಾಯ, ಎಡಗಾಲು ಮೊಣಕಾಲಿಗೆ ತೆರಚಿದ ಗಾಯ, ಎಡಗಡೆ ಭುಜಕ್ಕೆ ಎಡಗಡೆ ಕಿವಿಗೆ ತೆರಚಿದ ಗಾಯವಾಗಿದ್ದು,
ಮೋ.ಸೈ ನಡೆಸುತ್ತಿದ್ದ ಸೋಮಪ್ಪನಿಗೆ ಬಲಗಾಲು ಮೊಣಕಾಲಿಗೆ ಹಾಗೂ ಬೆರಳುಗಳಿಗೆ ತೆರಚಿದ ಗಾಯ ಎಡಗಾಲು
ಮೊಣಕಾಲಿಗೆ ತೆರಚಿದ ಗಾಯ ಬಲಗೈ ಮೊಣಕೈಗೆ ತೆರಚಿದ ಗಾಯ, ಎಡ ಗೈ ಮುಂಗೈ ಹತ್ತಿರ ಒಳಪೆಟ್ಟಾಗಿದ್ದು
ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Posted by Koppal District Police at 11:16 AM 0 comments
Thursday, February 9, 2017
1] ತಾವರಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 10/2017 ಕಲಂ:279,304 [ಎ] ಐಪಿಸಿ.
ದಿನಾಂಕ:08-02-2017 ರಂದು ಕುಷ್ಟಗಿ ಸರಕಾರಿ
ಆಸ್ಪತ್ರೆಯಿಂದ ಅಪಘಾತದ ಬಗ್ಗೆ ಎಂ.ಎಲ್.ಸಿ.ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ
ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರರ ಕುಲಸ್ಥರಾದ ಯಂಕಪ್ಪ ಮಾದರ ಇವರ 3 ವರ್ಷದ ಮಗು
ನೀಲಮ್ಮ ತಂದೆ ಯಂಕಪ್ಪ ಇವಳು ಇಂದು ಮದ್ಯಾಹ್ನ16-00 ಗಂಟೆಯ ಸುಮಾರು ಎಂ, ಗೂಡದೂರ ಗ್ರಾಮದಲ್ಲಿ ಆಟ
ಆಡಿ ತಗ್ಗಿಹಾಳ-ಎಂ.ಗುಡದೂರ ರಸ್ತೆಯ ಮೇಲೆ ಆಚೆ ಕಡೆಯಿಂದ ಇಚೆ ಕಡಗೆ ಮನೆಗೆ ಬರುತ್ತಿರುವಾಗ ತೆಗ್ಗಿಹಾಳ
ಕಡೆಯಿಂದ ನಮೂದಾದ ಆರೋಪಿತನಾದ ಯಲ್ಲಾಲಿಂಗ ತಂದೆ ಕುಂಟೆಪ್ಪ ತೋಗರಿ ಸಾ:ಗೌರಿಪುರ ತಾ:ಕುಷ್ಟಗಿ ಈತನು
ಹಿಂದುಗಡೆ ವಿರೇಶ ರಾಮದುರ್ಗ ಈತನನ್ನು ಕೂಡಿಸಿಕೊಂಡು ಒಂದು ನಂಬರ್ ಇಲ್ಲದ ನಂಬರ ಇಲ್ಲದ ಹಿರೋ ಹೊಂಡಾ
ಸ್ಲೆಂಡರ್ ಮೊಟಾರ್ ಸೈಕಲನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಮನೆಗೆ ಹೊರಟಿದ್ದ
ನೀಲಮ್ಮಳಿಗೆ ಟಕ್ಕರುಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಿಂದ ಮಗುವಿಗೆ ಹಣೆಗೆ, ಕೆನ್ನೆಗೆ, ಎಡಹುಬ್ಬಿಗೆ,
ತೆರಚಿದ ಭಾರಿ ರಕ್ತಗಾಯವಾಗಿದ್ದು ನಾನು ಹಾಗೂ ಮನೆಯ ಮುಂದೆ ಕುಳಿತ ಘಟನೆ ನೋಡಿದ ಆಕೆಯ ತಾಯಿ ಶರಣಮ್ಮ
ಹಾಗೂ ಅಜ್ಜಿ ದುರಗಮ್ಮ ಸೇರಿ ಯಾರೋ 108 ವಾಹನಕ್ಕೆ ಫೊನ್ ಮಾಡಿದ್ದರಿಂದ ಸ್ಥಳಕ್ಕೆ ಬಂದ 108 ವಾಹನದಲ್ಲಿ
ಗಾಯಗೊಂಡ ಮಗು ನೀಲಮ್ಮಳನ್ನು ಇಲಾಜು ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ತಂದು ಸಾಯಂಕಾಲ
17-30 ಗಂಟೆಯ ಸುಮಾರು ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಮಗುವನ್ನು ಪರಿಕ್ಷಿಸಿದ ವ್ಶೆದ್ಯರು ಮಗು
ಮೃತಪಟ್ಟ ಬಗ್ಗೆ ತಿಳಿಸಿದ್ದು ಇರುತ್ತದೆ. ಸದರಿ ಅಪಘಾತ ಮಾಡಿದ ನಂಬರ್ ಇಲ್ಲದ ಹಿರೋ ಹೊಂಡಾ ಸ್ಲೆಂಡರ್
ಮೊಟಾರ್ ಸೈಕಲನ ಚಾಲಕ ಯಲ್ಲಾಲಿಂಗ ತಂದೆ ಕುಂಟೆಪ್ಪ ತೋಗರಿ ಸಾ:ಗೌರಿಪುರ ಈತನ ವಿರುದ್ದ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿಯ ಸಾರಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು
ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 11/2017 ಕಲಂ: 279,283,337,338. ಐಪಿಸಿ
ದಿನಾಂಕ:07-02-2017 ರಂದು ರಾತ್ರಿ 23-30 ಗಂಟೆಗೆ
ಬಾಗಲಕೋಟ ಕೆರುಡಿ ಆಸ್ಪತ್ರೆಯಿಂದ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ವಿಚಾರಣೆ ಕುರಿತು
ಬಾಗಲಕೋಟೆಗೆ ಹೋಗಿ ಗಾಯಾಳು ಫಿರ್ಯಾಧಿದಾರರಾದ ಸಂತೋಷ ತಂದೆ ಓಂ ಪ್ರಕಾಶ ಸಹಾನಿಯಾ ವಯ:33 ಉ:ಪೇಂಟರ್
ಸಾ:ಲಾಸಡಿ ಜಿ:ತಾ:ಘೋರಮಪುರ ರಾ:ಉತ್ತರ ಪ್ರದೇಶ ಹಾ/ವ:ಇಲಕಲ್ಲ ರವರ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು
ಸಾರಾಂಶವೇನೆಂದರೆ, ಪಿರ್ಯಾದಿದಾರರು ಹಾಗೂ ಆರೋಪಿ ನಂ:1 ಲಾಲದಾರಿ ತಂದೆ ರಾಮಬೀಸ್ ಸಹಾನಿ ವಯ:39,
ಉ:ಪೇಂಟರ್ , ರವರು ಸುಮಾರು 2 ವರ್ಷದಿಂದ ತಮ್ಮ
ತಮ್ಮ ವೃತಿಯನ್ನು ಮಾಡಿಕೊಂಡು ಇಲಕಲ್ಲದಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ:07-01-2017 ರಂದು
ಫಿರ್ಯಾಧಿದಾರರು ಹಾಗೂ ಲಾಲಾದಾರಿ ಇಬ್ಬರೂ ಸೇರಿ ಪೆಟಿಂಗ್ ಕೆಲಸದ ನಿಮಿತ್ತ ನಮ್ಮ ಗೆಳೆಯ ಕನ್ಯಾಸಿಂಗ್
ಈತನ ನಂಬರ್ ಇಲ್ಲದ ಹೊಸ ಬಿಳಿ ಬಣ್ಣದ ಹೊಸ ಹಿರೋ ಮ್ಯಾಸ್ಟರೋ ಕಂಪನಿ. ಸ್ಕುಟಿ ಚಾಸ್ಸಿ ನಂ: MBLJF33AAG4G12030 ಇರುವ ಬೈಕನ್ನು ತೆಗೆದುಕೊಂಡು ರಾತ್ರಿ
20-30 ಗಂಟೆಯ ಸುಮಾರು ತಾವರಗೇರಾ-ಕುಷ್ಟಗಿ ರಾಜ್ಯ ಹೆದ್ದಾರಿಯ ಮೇಲೆ ಅತಿವೇಗ ಹಾಗೂ ಅಲಕ್ಷ್ಯತನದಿಂದ
ನಡೆಯಿಸಿದ್ದು ಹಾಗೂ ಅಲ್ಲಿ ಸಾರ್ವಜನಿಕರು ಓಡಾಡುವ ರಾಜ್ಯ ರಸ್ತೆಯಲ್ಲಿ ಅಲಕ್ಷ್ಯತೆಯಿಂದ ನಿಲ್ಲಿಸಿ
ಹೋಗಿದ್ದ ಒಂದು ಟ್ರಾಕ್ಟರ್ಗೆ ಹಿಂದಿನಿಂದ ಟಕ್ಕರು ಕೊಟ್ಟಿದ್ದರಿಂದ ಅಪಘಾತವಾಗಿ ಇಬ್ಬರೂ ಆಸ್ಪತ್ರೆಗೆ
ದಾಖಲಾಗಿದ್ದು ಇರುತ್ತದೆ. ಕಾರಣ ಅಫಘಾತ ಮಾಡಿದ ನಮ್ಮ ಬೈಕ ಚಾಲಕ ಲಾಲದಾರಿ ಸಹಾನಿ ಹಾಗೂ ರಾಜ್ಯ ಹೆದ್ದಾರಿಯ
ಮೇಲೆ ಅಲಕ್ಷಯತೆಯಿಂದ ಟ್ರ್ಯಾಕ್ಟರ್ ನಂ: ಕೆ.ಎ-37-ಟಿಎ-5056 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಹಿಂದಿ ಭಾಷೆಯಲ್ಲಿ ಹೇಳಿದ ಹೇಳಿಕೆಯನ್ನು ಕನ್ನಡಕ್ಕೆ ಅನುವಾದ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 20/2017 ಕಲಂ: 279, 338, 304[A], IPC & 187 IMV Act
ದಿನಾಂಕ : 08-02-2017 ರಂದು ರಾತ್ರಿ
10-05 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕರಿಯಪ್ಪ ತಂದಿ ವಿರೇಶಪ್ಪ ಯರಡೋಣ ವಯಾ-45 ವರ್ಷ ಜಾ. ಕುರಬರು
ಸಾ. ಗೊಬ್ಬರಕಲ್ ತಾ. ಸಿಂಧನೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ
ಸಾರಾಂಶವೆನೆಂದರೆ, ದಿನಾಂಕ:-08-02-2017 ರಂದು ನಾನು ಮತ್ತು ನಮ್ಮೂರಿನ ಆದೇಪ್ಪ ಒಂದು ಮೋಟಾರ್ ಸೈಕಲ್
ಮೇಲೆ ಮತ್ತು ಕಳಸಪ್ಪ ತಂದಿ ಯಮನೂರಪ್ಪ ಗಡದರ ವಯಾ-30ವರ್ಷ ಮತ್ತು ಹನುಮಂತಪ್ಪ ತಂದಿ ಸೋಮಣ್ಣ ಇವರು
ಒಂದು ಮೋಟಾರ್ ಸೈಕಲ್ ಮೇಲೆ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಬರಲೆಂದು ಕಂಪ್ಲಿ ಬಳಾಪೂರಕ್ಕೆ
ಹೋಗಿ ವಾಪಸ ನಮ್ಮ ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮೂರಿಗೆ ಹೋರಟಿದ್ದಾಗ್ಗೆ ಕಳಸಪ್ಪ ಇತನು ತನ್ನ ಮೋಟಾರ್
ಸೈಕಲ್ ನಂ ಕೆ.ಎ-36ಡಬ್ಲ್ಯೂ 2216 ನೆದ್ದರ ಮೇಲೆ ಹನುಮಂತಪ್ಪನನ್ನು ಕೂಡಿಸಿಕೊಂಡು ಚನ್ನಳ್ಳಿ ಕ್ರಾಸ್
ದಿಂದ ಚನ್ನಳ್ಳಿ ರಸ್ತೆಯ ಮೇಲೆ ಎಸ್.ಎನ್.ಸಿ ರೈಸ್ ಮೀಲ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು
ಹೋರಟಿದ್ದಾಗ್ಗೆ ಸಾಯಂಕಾಲ 7-00 ಗಂಟೆಯ ಸುಮಾರಿಗೆ ಎದರುಗಡೆಯಿಂದ ಟ್ರ್ಯಾಕ್ಟರ್ ನಂ ಕೆ.ಎ-36/ಟಿ.ಎ-4957
ಟ್ರೇಲರ್ ನಂ ಕೆ.ಎ-36 ಟಿ.ಎ 22 ನೆದ್ದರ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ಅತೀ ವೇಗ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಕಳಸಪ್ಪನ ಮೋಟಾರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಕಳಸಪ್ಪ
ಮತ್ತುಹನುಮಂತಪ್ಪ ಇವರು ಮೋಟಾರ್ ಸಮೇತ ಕೆಳಗಡೆ ಬಿದ್ದು ಕಳಸಪ್ಪನಿಗೆ ತಲೆಗೆ ಮುಖಕ್ಕೆ ಗಂಭೀರ ಸ್ವರೂಪದ
ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಹನುಮಂತಪ್ಪನಿಗೆ ಗಂಭೀರ ಸ್ವರೂಪದ ಗಾಯಗಳಾಗಿರುತ್ತವೆ ಟ್ರ್ಯಾಕ್ಟರ್
ಚಾಲಕ ಟ್ರ್ಯಾಕ್ಟರ್ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿ ಕೊಟ್ಟ ದೂರಿನ ಸಾರಾಂಶದ
ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಠಗಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 31/2017 ಕಲಂ.143,147,148,323,324,504,506 ಸಹಿತ 149 ಐಪಿಸಿ ದಿನಾಂಕ
: 08-02-2017 ರಂದು ಮದ್ಯಾಹ್ನ 01-15 ಗಂಟೆಗೆ ಪಿರ್ಯಾದಿದಾರರಾದ ಶಿವಕುಮಾರ ತಂದೆ ವಾಲಪ್ಪ ರಾಠೋಡ ವಯಾ 27 ವರ್ಷ ಉ : ಒಕ್ಕಲುತನ ಸಾ : ಚಿಕ್ಕಕೊಡಗಲಿತಾಂಡಾ
ರವರು ಠಾಣೆಗೆ ಬಂದು ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಪಿರ್ಯಾದಿಯ
ಸಾರಾಂಶವೆನೆಂದರೆ, ಮಿಯ್ಯಾಪೂರ
ಗ್ರಾಮದ ಸೀಮಾದಲ್ಲಿ ನಮ್ಮ ಜಮೀನು ಸರ್ವೇ ನಂ.47 ಇದ್ದು ಈ ಹೊಲದಲ್ಲಿ ಮರಳು ಇದ್ದು ಅದನ್ನು ತೆಗೆಯಲು ಆರೋಪಿತರು
ಅಕ್ರಮಕೂಟ ರಚಿಸಿಕೊಂಡು ದಿನಾಂಕ :07-02-2017
ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ಬಂದಿದ್ದು ಆಗ ಫಿರ್ಯಾದಿದಾರರು ಸದರಿ ಹೊಲವು
ಸರಿಯಾಗಿ ಸರ್ವೆ ಆಗದ ಕಾರಣ ಅದರಲ್ಲಿ ಮರಳನ್ನು ತೆಗೆಯಬೇಡಿರಿ ಅಂತಾ ಹೇಳಿ ಕಳುಹಿಸಿದ್ದು ನಂತರ
ನಮ್ಮ ಮಾತನ್ನು ಕೇಳದೇ ರಾತ್ರಿ 12-00 ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು
ಫಿರ್ಯಾದಿದಾರರಿಗೆ ಹಾಗೂ ಇತರರಿಗೆ ಕೈಯಿಂದ ಕಟ್ಟಿಗೆಯಿಂದ ಹಾಗೂ ಕಲ್ಲಿನಿಂದ ಹೊಡಿ ಬಡಿ
ಮಾಡಿದ್ದು, ನಮ್ಮೆಲ್ಲರನ್ನು
ಮುಗಿಸಿಬಿಡುತ್ತೇವೆ ಅಂತಾ ಅವ್ಯಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ
ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
5] ಕುಷ್ಠಗಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 32/2017 ಕಲಂ.143,147,148,323,324,504,506,ಸಹಿತ 149 ಐಪಿಸಿ.
ದಿನಾಂಕ
:-
08-02-2017 ರಂದು ಮದ್ಯಾಹ್ನ 2-30 ಗಂಟೆಗೆ ಫಿರ್ಯಾದಿದಾರರಾದ ಶರಣಪ್ಪ ತಂದೆ ಹನುಮಪ್ಪ ಮಾದರ ವಯಾ 36 ವರ್ಷ ಜಾ : ಹಿಂದೂ ಮಾದರ ಉ : ಒಕ್ಕಲುತನ ಸಾ : ಮಿಯ್ಯಾಪೂರ ರವರು ಠಾಣೆಗೆ ಬಂದು ಒಂದು ಗಣಕೀಕೃತ ಪಿರ್ಯಾದಿಯನ್ನು
ಹಾಜರಪಡಿಸದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ನಮ್ಮ ಗ್ರಾಮದ ಚಂದಪ್ಪ ತಂದೆ ಯಮನಪ್ಪ ತಮ್ಮಣ್ಣವರ ರವರು ತಮ್ಮ
ಹೊಲದಲ್ಲಿ ಬೋರ ಹಾಕಿಸಿದ್ದು, ಅವರು ಬೋರ ಪೂಜಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದು ನನಗೆ ಮತ್ತು ನಮ್ಮೂರಿನ ಹಿರಿಯರಿಗೆ
ಪೂಜಾ ಕಾರ್ಯಕ್ರಮಕ್ಕೆ ಬರಲು ತಿಳಿಸಿದ್ದರಿಂದ ನಾವೆಲ್ಲರೂ ಕೂಡಿ ನಿನ್ನೆ ದಿನಾಂಕ : 07-02-2017 ರಂದು
ಮದ್ಯಾಹ್ನ 01-00 ಗಂಟೆಯ
ಸುಮಾರಿಗೆ ಪೂಜಾ ಕಾರ್ಯಕ್ರಮಕ್ಕೆ ಬಂದು ಪೂಜಾ ಕಾರ್ಯಕ್ರಮವನ್ನು ಮುಗಿಸಿದ್ದು ನಂತರ ನಮಗೆ
ರಾತ್ರಿ ಊಟದ ವ್ಯವಸ್ಥೆ ಇದೆ ಊಟ ಮಾಡಿಕೊಂಡು ಹೋಗಿರಿ ಅಂತಾ ತಿಳಿಸಿದ್ದರಿಂದ ನಮ್ಮಂತೆ ಚಂದಪ್ಪ
ತಮ್ಮಣ್ಣನವರ ರವರ ಪರಿಚಸ್ಥರಾದ ಹಾಗೂ ಊರ ಮಗ್ಗಲು ಇರುವ ಚಿಕ್ಕಕೊಡಗಲಿ ತಾಂಡಾ ಎಲ್.ಟಿ ಗ್ರಾಮದವರಾದ 1) ಕಮಲೆಪ್ಪ ತಂದೆ
ವಿಠ್ಠಪ್ಪ ರಾಠೋಡ 2) ರಂಗಪ್ಪ ತಂದೆ
ಬಂದೆಪ್ಪ ರಾಠೋಡ ರವರು ಸಹ ಬಂದಿದ್ದರು. ನಂತರ ರಾತ್ರಿ 11-30 ಗಂಟೆಯ ಸುಮಾರಿಗೆ ಚಿಕ್ಕಕೊಡಗಲಿ ತಾಂಡಾದ ಆರೋಪಿತರೆಲ್ಲರಿಗೂ ಹಾಗೂ
ಕಮಲೆಪ್ಪ ರಾಠೋಡ ಮತ್ತು ರಂಗಪ್ಪ ರಾಠೋಡ ಇವರೊಂದಿಗೆ ಮಿಯ್ಯಾಪೂರ ಸೀಮಾದಲ್ಲಿರುವ ಮರಳನ್ನು
ತುಂಬುವ ವಿಷಯವಾಗಿ ವಯಕ್ತಿಕ ದ್ವೇಶ ಇದ್ದು. ಇವರಿಬ್ಬರದು ಊರಲ್ಲಿ ಬಹಳ ಆಗೈತಿ ಅಂತಾ ಮಹಾಂತೇಶ ರಾಠೋಡ ಮತ್ತು
ಕುಮಾರ ರಾಠೋಡ ರವರು ಇವತ್ತು ಅವರಿಗೆ ಸರಿಯಾಗಿ ಬುದ್ದಿ ಕಲಿಸೋಣ ನಮ್ಮ ತಂಟೆಗೆ ಬಾರದಂತೆ ಮಾಡೋಣ
ಅಂತಾ ಸುಮಾರು 10-15 ಜನರನ್ನು ಮೋಟಾರ
ಸೈಕಲ್ ಮೇಲೆ ಕರೆದುಕೊಂಡು ಬಂದು ಕಮಲೆಪ್ಪ ಮತ್ತ ರಂಗಪ್ಪ ರವರು ಹೊಲದಲ್ಲಿ ಊಟ ಮಾಡುತ್ತಿರುವಾಗ
ಲೇ ಕಮಲ್ಯಾ ಮತ್ತು ರಂಗ್ಯಾ ನಿಮ್ಮನ್ನು ಎಷ್ಟು ದಿವಸ ಅಂತಾ ನೋಡೋದು ನಾವು ಮಾಡುವ ದಂದೆಯನ್ನು
ಹಾಳು ಮಾಡುತ್ತಿಯಾ ಅಂತಾ ಜಗಳ ತೆಗೆದರು. ಆಗ ನಾನು ಮತ್ತು ನಮ್ಮ ಗ್ರಾಮದ ಜನರು ಅವರಿಗೆ ಇವತ್ತು ಜಗಳ
ಮಾಡಬೇಡಿರಿ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಂತಾ ಬುದ್ದಿ ಹೇಳಲು ಹೋದ ನನಗೆ ಮತ್ತು ಬಾಲನಗೌಡ ಇಬ್ಬರಿಗೆ ಲೇ ಸೂಳೇ
ಮಕ್ಕಳೇ ನೀವು ಯಾರೂ ಇವತ್ತು ಅವನ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಎಲ್ಲರೂ
ಗುಂಪಗೂಡಿಕೊಂಡು ಕೈಯಿಂದ ಬಡಿದರು ಮತ್ತು ಕಾಲಿನಿಂದ ಒದ್ದು ನಮಗೆ ಕಟ್ಟಿಗೆಯಿಂದ ಬೆನ್ನಿಗೆ ಹೊಡೆದರು ಮತ್ತು ಕಲ್ಲಿನಿಂದ ಬಲಬುಜಕ್ಕೆ
ಗುದ್ದಿದರು, ಬಿಡಿಸಲು ಬಂದ ವಿರುಪಾಕ್ಷಗೌಡ ಮ್ಯಾಗೇರಿ, ಶರಣಗೌಡ ಪಾಟೀಲ, ಬಸವರಾಜ ತಂದೆ ಶಿವಪ್ಪ ಹೊಸೂರ, ಚಂದಪ್ಪ ತಂದೆ ಶಿವಪ್ಪ ಉಪ್ಪೇರಿ ಇವರಿಗೂ ಸಹ ಎಳೆದಾಡಿ ನೂಕಾಡಿ
ಅವಾಚ್ಯವಾಗಿ ಬೈದು ನಿಮಗೂ ಹೊಡಿತಿವಿ ಬಡಿತಿವಿ ಅಂತಾ ಹೆದರಿಸಿ ನೀವು ಸರಿರಿ ಅವರಿಬ್ಬರ
ಜೀವವನ್ನು ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Posted by Koppal District Police at 11:09 AM 0 comments
Wednesday, February 8, 2017
1]
ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 17/2017 ಕಲಂ 78(3)
Karnataka Police Act.
ದಿನಾಂಕ- 07-02-2017 ರಂದು ಸಾಯಂಕಾಲ 6-15 ಪಿ.ಎಮ್.
ಕ್ಕೆ ಮಾನ್ಯ ಪಿ.ಎಸ್.ಐ. ಸಾಹೇಬರು ಪೆಟ್ರೋಲಿಂಗ್ ಮತ್ತು ಮಟ್ಕಾ ಜೂಜಾಟದ ದಾಳಿ ಮುಗಿಸಿಕೊಂಡು
ಠಾಣೆಗೆ ಬಂದು ಆರೋಪಿ ಸಮೇತ ಮಟ್ಕಾ ಮುದ್ದೇಮಾಲು ಮತ್ತು ಮೂಲ ಪಂಚನಾಮೆ ಹಾಗೂ ವರದಿಯನ್ನು
ಕೊಟ್ಟಿದ್ದು ಸಾರಾಂಶವೆನಂದರೆ ಇಂದು ದಿನಾಂಕ:-07-02-2017 ರಂದು ಸಾಯಂಕಾಲ 04-45 ಗಂಟೆಯ ಸುಮಾರಿಗೆ ಮೈಲಾಪೂರ ಗ್ರಾಮದ ಹಳೆ ಸೊಸೈಟಿ ಸಮೀಪ ಆರೋಪಿ ನಂ 1 ಶಂಬಣ್ಣ ತಂದಿ ಶೇಖರಪ್ಪ ಆಧಾಪೂರ ಸಾ: ಮೈಲಾಪೂರ ತನು ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು
ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನ ಕಡೆಯಿಂದ ರೂ.1960=00 ನಗದು ಹಣ ಮತ್ತು ಮಟ್ಕಾ ಜೂಜಾಟದ
ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
Posted by Koppal District Police at 10:19 AM 0 comments
Subscribe to:
Posts (Atom)