Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 5, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ: 87 Karnataka Police Act..
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರಿಗೆ ದಿನಾಂಕ:- 04-05-2017 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದೇವಘಾಟ್ ಗುಡ್ಡದ ಒಂದು ಬಂಡೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಹೋಗಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿಬಿದ್ದಿದ್ದು, ಅವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಓಲಿ ಸಂಗಪ್ಪ ತಂದೆ ಸೋಮಲಿಂಗಪ್ಪ, ವಯಸ್ಸು 55 ವರ್ಷ, ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ಸತ್ಯನಾರಾಯಣ ಪೇಟೆ, ಜಯನಗರ-ಗಂಗಾವತಿ (2) ರಾಜಪ್ಪ @ ರಾಜ ತಂದೆ ಜಾಂಗೀರಾಮ, ವಯಸ್ಸು 48 ವರ್ಷ, ಜಾತಿ: ರಜಪೂತ ಉ: ವ್ಯಾಪಾರ ಸಾ: ಇಸ್ಲಾಂಪೂರ-ಗಂಗಾವತಿ (3) ಗುಲಾಮ ಹುಸೇನ್ ತಂದೆ ಚಂದೂಸಾಬ, ವಯಸ್ಸು 38 ವರ್ಷ, ಜಾತಿ: ಮುಸ್ಲೀಂ ಉ: ಕುಷನ್ ಕೆಲಸ ಸಾ: ಸಂತೆ ಬಯಲು, ಮಹಿಬೂಬ ನಗರ-ಗಂಗಾವತಿ (4) ರಸೂಲ್ ತಂದೆ ಇಬ್ರಾಹಿಂ ಸಾಬ, 48 ವರ್ಷ, ಜಾತಿ: ಮುಸ್ಲೀಂ ಉ: ಮೆಕಾನಿಕ್ ಸಾ: ಬನ್ನಿಗಿಡದ ಕ್ಯಾಂಪ್-ಗಂಗಾವತಿ (5) ಶರಣಪ್ಪ ತಂದೆ ವೀರಭದ್ರಪ್ಪ ಹಂಪನಗೌಡ್ರು, ವಯಸ್ಸು 48 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಜಯನಗರ-ಗಂಗಾವತಿ ಅಂತಾ ತಿಳಿಸಿದರು. ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 58,900/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಸಿಕ್ಕಿದ್ದು ಇರುತ್ತವೆ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 32, 34 Karnataka Excise Act.
ದಿನಾಂಕ: 04-05-2017 ರಂದು ಸಂಜೆ 4-30 ಗಂಟೆ ಸುಮಾರಿಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ರವರು ತಮ್ಮ ವ್ಯಾಪ್ತಿಯ ಮೂದೇನೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅನದೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ರಾಮಣ್ಣ ತಂದೆ ತಿಮ್ಮಪ್ಪ ಈಳಿಗೇರಾ ಸಾ: ಮುದೇನೂರು. ಇವನ ಮೇಲೆ  ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ  ಅಂದಾಜು 2976=00 ರೂ  ಬೆಲೆ ಬಾಳುವ ಒಂದು ಓಲ್ಡ್ ಟಾವರಿನ್ ಮದ್ಯದ ಬಾಕ್ಸ್ ಇದ್ದು ಅದರಲ್ಲಿ 47 ಓಲ್ಡ್ ಟಾವರಿನ್ ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದರು. ಹಾಗೂ ಸಾರಾಯಿ ಮಾರಾಟ ಮಾಡಿದ ನಗದು ಹಣ 3110=00 ರೂ ಗಳನ್ನು ಜಪ್ತಿ ಮಾಡಿಕೊಂಡು ಹಾಗೂ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ..
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 111/2017 ಕಲಂ: 87 Karnataka Police Act.
ದಿನಾಂಕ : 04-05-2017 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರಿಗೆ ತಮ್ಮ ವ್ಯಾಪ್ತಿಯ ನಿಡಶೇಸಿ ಗ್ರಾಮದ ಬಂಗಾಳಿ ಗಿಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ಹೋಗಿ ದಾಳಿ ಮಾಡಿದಾಗ 5 ಜನ ಆರೋಪಿತರು 1] ಮುತ್ತಣ್ಣ ತಂದೆ ಮಲ್ಲೇಶಪ್ಪ ಬನ್ನಿಗೋಳ ವಯಾ: 37 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ತಳವಗೇರಾ 2] ಉಮೇಶ ತಂದೆ ಭೀಮಣ್ಣ ಮಕಾಜಿ ವಯಾ: 24 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ 3] ಪ್ರಕಾಶ ತಂದೆ ಹನುಮಪ್ಪ ಹಾವರಗಿ ವಯಾ: 24 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ 4] ಹನುಮಂತ ತಂದೆ ಹನುಮಪ್ಪ ಅಗಸಿಮುಂದಿನ ವಯಾ: 46 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ ಹಾಗೂ 5] ಚನ್ನಬಸಪ್ಪ ತಂದೆ ಯಂಕಪ್ಪ ಹಾವರಗಿ ವಯಾ: 20 ವರ್ಷ ಜಾತಿ: ಉಪ್ಪಾರ ಉ: ಕೂಲಿಕೆಲಸ ಸಾ: ನಿಡಶೇಸಿ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 3800=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ..
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 112/2017 ಕಲಂ: 87 Karnataka Police Act.

ದಿನಾಂಕ : 04-05-2017 ರಂದು ಸಂಜೆ 4-45 ಗಂಟೆ ಸುಮಾರಿಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರಿಗೆ ತಮ್ಮ ವ್ಯಾಪ್ತಿಯ ಬಿಜಕಲ್ ಗ್ರಾಮದ ಬಸಪ್ಪ ಅಗಸಿರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 5 ಜನ ಆರೋಪಿತರು 1] ಹನುಮಂತ ತಂದೆ ಮುದಕಪ್ಪ ಮರಕಟ್ ವಯಾ: 32 ವರ್ಷ ಜಾತಿ: ವಾಲ್ಮೀಕಿ ಉ: ಕೂಲಿಕೆಲಸ ಸಾ: ವಾಲ್ಮೀಕಿ ಉ:ಕೂಲಿಕೆಲಸ ಸಾ:ಬಿಜಕಲ್ 2] ಹನುಮಂತಪ್ಪ ತಂದೆ ಯಲ್ಲಪ್ಪ ವಡ್ಡರ ವಯಾ: 39 ವರ್ಷ ಜಾತಿ: ಭೋವಿ ಉ: ಕೂಲಿಕೆಲಸ ಸಾ: ಬಿಜಕಲ್ 3] ಹನುಮಂತಪ್ಪ ತಂದೆ ಮೇಲಗಿರಿಯಪ್ಪ ಭೋವಿ ವಯಾ: 45 ವರ್ಷ ಜಾತಿ: ಭೋವಿ ಉ: ಕೂಲಿಕೆಲಸ ಸಾ: ಬಿಜಕಲ್ ಹಾಗೂ 4] ವೀರಭದ್ರಪ್ಪ ತಂದೆ ರುದ್ರಪ್ಪ ಉಪ್ಪನಾಳ ವಯಾ: 44 ವರ್ಷ ಜಾತಿ: ಲಿಂಗಾಯತ ಉ: ಕೂಲಿಕೆಲಸ ಸಾ: ಬಿಜಕಲ್ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 1700=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, May 4, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 108/2017 ಕಲಂ: 279, 304(ಎ) ಐ.ಪಿ.ಸಿ.
ದಿನಾಂಕ :03-05-2017 ರಂದು ಮುಂಜಾನೆ 10-15 ಗಂಟೆಗೆ ಫಿರ್ಯಾದಿದಾರರಾದ ಆನಂದ ತಂದೆ ಯಂಕಪ್ಪ ತಳವಾರ ವಯಾ: 34 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಯಲಬಣಚಿ ತಾ: ಕುಷ್ಟಗಿ ರವರು ಠಾಣೆಗೆ ಬಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ :02-05-2017 ರಂದು ಸಂಜೆ 04-15 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಗೋಪಾಲಕೃಷ್ಣ ಈತನು ನಮ್ಮ ತಂಗಿಯಾದ ರೇಣುಕಾ ಈಕೆಯ ಮಗನಾದ ದೇವಪ್ಪ ತಲ್ಲೂರ ವಯಾ 11 ವರ್ಷ ಈತನನ್ನು ಕೊನಸಾಗರ ಗ್ರಾಮಕ್ಕೆ ಬಿಟ್ಟು ಬರಲು ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ಚೆಸ್ಸಿ ನಂ :MD2A51BZ70WL20890  ನೇದ್ದನ್ನು ತೆಗೆದುಕೊಂಡು ಹೋಗಿ ಬಿಟ್ಟು ಬರಲು ಹೇಳಿ ಕಳಿಸಿದ್ದು ಇರುತ್ತದೆ. ನಂತರ ನಮ್ಮ ತಮ್ಮನು ನಮ್ಮ ಮೋಟಾರ ಸೈಕಲ್ ತೆಗೆದುಕೊಂಡು ನಮ್ಮ ಅಳಿಯ ದೇವಪ್ಪನನ್ನು ಹಿಂದೆ ಕೂಡ್ರಿಸಿಕೊಂಡು  ಹೋದನು. ನಂತರ  ಸಂಜೆ 04-30 ಗಂಟೆಯ ಸುಮಾರಿಗೆ ನಮ್ಮ ಅಳಿಯ ದೇವಪ್ಪನು ಪೋನ್ ಮಾಡಿ ಮಾಮ ಗೋಪಾಲಕೃಷ್ಣ ಈತನು ಸೈಕಲ್ ಮೋಟಾರ ಕೆಡವಿರುತ್ತಾನೆ ಅಂತಾ ಹೇಳಿದ್ದು, ನಾನು ಗಾಭರಿಯಾಗಿ ನಾನು ಮತ್ತು ನಮ್ಮ ಮಾವ ಫಕೀರಪ್ಪ ತಂದೆ ಹನುಮಪ್ಪ ಈಳಗೇರ ಇಬ್ಬರೂ ಕೂಡಿ ಬಂದು ನೋಡಲಾಗಿ ವಿಷಯ ನಿಜವಿದ್ದು, ನಮ್ಮ ತಮ್ಮನು ಬಜಾಬ ಡಿಸ್ಕವರಿ ಮೋಟಾರ ಸೈಕಲ್ ನೇದ್ದನ್ನು ಯಲಬಣಚಿ-ದೊಣ್ಣೆಗುಡ್ಡಾ ರಸ್ತೆಯ ಮೇಲೆ ಉಮೇಶ ದೇಸಾಯಿ ರವರ ಹೊಲದ ಹತ್ತಿರ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಬ್ರಿಜ್ ಗೆ ಟಕ್ಕರಕೊಟ್ಟು ಅಪಘಾತವಾಗಿದ್ದು ಇರುತ್ತದೆ. ಸದರಿ ಅಪಘಾತದಿಂದ ನನ್ನತಮ್ಮನಾದ ಗೋಪಾಲಕೃಷ್ಣನಿಗೆ ತಲೆಗೆ ಭಾರಿಪಟ್ಟಾಗಿ, ಗೆಜ್ಜೆಗೆ ಒಳಪೆಟ್ಟಾಗಿ, ಎಡಗಾಲು ತೊಡೆಯ ಹತ್ತಿರ ಮುರಿದಂತಾಗಿರುತ್ತದೆ. ನಮ್ಮ  ಅಳಿಯ ದೇವಪ್ಪನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನಂತರ 108 ಅಂಬುಲೆನ್ಸಗೆ ಪೋನ ಮಾಡಿ ಅಂಬುಲೆನ್ಸ ಬಂದ ನಂತರ ಚಿಕಿತ್ಸೆಗಾಗಿ ಕಟ್ಟಿ ಆಸ್ಪತ್ರೆ ಬಾಗಲಕೋಟಗೆ ಕರೆದುಕೊಂಡು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ :02-05-2017 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 109/2017 ಕಲಂ: 457, 380 ಐ.ಪಿ.ಸಿ.
ಇಂದು ದಿನಾಂಕ:03-05-2017 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರರಾದ ವೀರನಗೌಡ ತಂದೆ ಶಂಕರಗೌಡ ಪಾಟೀಲ ವಯಾ 55 ವರ್ಷ ಜಾ:ಲಿಂಗಾಯತ ಉ:ಪ್ರಭಾರಿ ಉಗ್ರಾಣ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಕುಷ್ಟಗಿ ಸಾ.ದಾಸ್ತಿಕೊಪ್ಪ ತಾ.ಕಲಘಟಗಿ ಜಿ.ಧಾರವಾಡ ಹಾ.ವ. ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಕುಷ್ಟಗಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಮ್ಮ ಇಲಾಖೆಯ ಕಛೇರಿ ಮತ್ತು 3 ಉಗ್ರಾಣಗಳು ಇದ್ದು, ಸದರಿ ಉಗ್ರಾಣಗಳಲ್ಲಿ ಒಂದು ಉಗ್ರಾಣವನ್ನು ಕೆ.ಎಫ್.ಸಿ.ಎಸ್.ಸಿ. ರವರಿಗೆ ಬಾಡಿಗೆಗೆ ಕೊಟ್ಟಿದ್ದು, ಉಳಿದ 2 ಉಗ್ರಾಣಗಳು ನಮ್ಮ ಇಲಾಖೆಯ ವಶದಲ್ಲಿರುತ್ತವೆ. ನಮ್ಮ ಇಲಾಖೆಯ ವಶದಲ್ಲಿರುವ 2 ಉಗ್ರಾಣಗಳಲ್ಲಿ ಉಗ್ರಾಣ ನಂ.1 ಮತ್ತು ಉಗ್ರಾಣ ನಂ. 3 ರಲ್ಲಿ  ಸರಕಾರದ ಮತ್ತು ರೈತರ ಧ್ಯಾನ್ಯಗಳನ್ನು ಸಂಗ್ರಹಿಸಿಟ್ಟಿದ್ದು, ಅದರಂತೆ ಉಗ್ರಾಣ ನಂ. 3 ರಲ್ಲಿ ದಿನಾಂಕ. 20-03-2017 ರಿಂದ ದಿನಾಂಕ. 15-04-2017 ರ ವರೆಗೆ ಕೇಂದ್ರ ಸರಕಾರದಿಂದ ಖರೀದಿಸಿದ ತೊಗರಿಕಾಳುಗಳ ಚೀಲಗಳು ಒಟ್ಟು 14932 ಚೀಲಗಳನ್ನು ಸಂಗ್ರಹಿಸಿಟ್ಟಿದ್ದು, ಸದರಿ ಉಗ್ರಾಣಗಳಿಗೆ ಕಾವಲುಗಾರರು ಇರುವದಿಲ್ಲ, ಪ್ರತಿ ದಿನ ನಾನು ಸಂಜೆ ಮನೆಗೆ ಹೋಗುವಾಗ ಉಗ್ರಾಣಗಳಿಗೆ ಕೀಲಿ ಹಾಕಿಕೊಂಡು ಹೋಗತ್ತಿದ್ದೆನು. ಅದರಂತೆ ನಿನ್ನೆ ದಿವಸ ದಿನಾಂಕ. 02-05-2017 ರಂದು ಸಾಯಂಕಾಲ 5-00 ಗಂಟೆಗೆ ನಮ್ಮ ಇಲಾಖೆಯ ಉಗ್ರಾಣ ನಂ.1 ಮತ್ತು ಉಗ್ರಾಣ ನಂ.3 ನೇದ್ದವುಗಳನ್ನು ಚೆಕ್ ಮಾಡಿಕೊಂಡು ಅವುಗಳಿಗೆ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ನಂತರ ಇಂದು ದಿನಾಂಕ. 03-05-2017 ರಂದು ಬೆಳಿಗ್ಗೆ 10-30 ಗಂಟೆಗೆ ನಮ್ಮ ಕಛೇರಿಗೆ ಬಂದು ಉಗ್ರಾಣಗಳನ್ನು ಸ್ವಚ್ಚ ಮಾಡಿಸುವ ಸಲುವಾಗಿ ಉಗ್ರಾಣ ನಂ.3 ನೇದ್ದರ ಕೀಲಿ ತೆರೆದು ಒಳಗೆ ಹೋಗಿ ನೋಡಿದಾಗ ಸದರಿ ಉಗ್ರಾಣದಲ್ಲಿ ಹಚ್ಚಿದ್ದ ತೊಗರಿಕಾಳುಗಳ ನಿಟ್ಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಆಗ ಸಂಶಯ ಬಂದು ತೊಗರಿಕಾಳುಗಳ ಚೀಲಗಳನ್ನು ಎಣಿಕೆ ಮಾಡಿ ನೋಡಿದಾಗ ಒಟ್ಟು  14932 ತೊಗರಿಕಾಳುಗಳ ಚೀಲಗಳಲ್ಲಿ ಒಟ್ಟು 140 ತೊಗರಿಕಾಳುಗಳ ಚೀಲಗಳು ಇರಲಿಲ್ಲ, ಸದರಿ ತೊಗರಿಕಾಳುಗಳ ಒಂದು ಚೀಲದ ಬೆಲೆ 2,750=00ರೂ. ಇದ್ದು, ಒಟ್ಟು 140 ತೊಗರಿಕಾಳುಗಳ ಚೀಲಗಳ ಬೆಲೆ ಒಟ್ಟು 3,85,000=00ರೂ. ಇರುತ್ತದೆ. ಸದರಿ 140 ತೊಗರಿಕಾಳುಗಳ ಚೀಲಗಳನ್ನು ದಿನಾಂಕ. 02-05-2017 ರಂದು ಸಂಜೆ 6-00 ಗಂಟೆ ಯಿಂದ ದಿನಾಂಕ. 03-05-2017 ರಂದು ಬೆಳಿಗ್ಗೆ 10-30 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ಕಳ್ಳರು ಉಗ್ರಾಣಕ್ಕೆ ಹಾಕಿದ ಕೀಲಿಯನ್ನು ನಕಲಿ ಕೀಲಿ ಬಳಸಿ ತೆಗೆದು ಉಗ್ರಾಣದ ಒಳಗೆ ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 43/2017 ಕಲಂ:  457, 380 ಐ.ಪಿ.ಸಿ.

ಫಿರ್ಯಾದಿ ಈರಪ್ಪ ತಂದೆ ಕಲ್ಲಪ್ಪ ಕೊಳೂರು ಸಾ: ತುಂಬ್ರಗುಂದಿ ತಾ: ಯಲಬುರ್ಗಾ ಇವರು ದಿನಾಂಕ;01-05-2017 ರಂದು ತಮ್ಮೂರಲ್ಲಿ ಶ್ರೀ ದುರ್ಗಾ ದೇವಿ ಜಾತ್ರೆನಿಮಿತ್ಯ ಗ್ರಾಮದಲ್ಲಿ ಮನರಂಜನೆಗಾಗಿ ನಾಟಕ ಪ್ರದರ್ಶನವಿದ್ದು, ನಾಟಕ ನೋಡುವ ಸಲುವಾಗಿ ತನ್ನ ಸಂಗಡ ತನ್ನ ಮಗಳು, ಮೊಮ್ಮಗಳು, ಅಳಿಯ,ಸೋಸೆ ಎಲ್ಲರೂ ರಾತ್ತಿ ಊಟ ಮಾಡಿ 10-30 ಗಂಟಗೆ ಮನೆಗೆ ಬೀಗ ಹಾಕಿಕೊಂಡು ನಾಟಕ ನೋಡಲು ಹೋಗಿದ್ದು, ಮರುದಿನ ಬೆಳಿಗ್ಗೆ 05-30 ಗಂಟೆಗೆ ವಾಪಸ ಫಿರ್ಯಾದಿದಾರರು ತಮ್ಮ ಮಗಳು, ಸೋಸೆಯೊಂದಿಗೆ ಮನೆಗೆ ಬಂದು ನೋಡಿದ್ದು, ಮನೆಯ ಬಾಗಿಲು ಸ್ವಲ್ಪ ತೆರೆದಿದ್ದು, ಒಳಗಡೆ ಹೋಗಿ ನೋಡಿದ್ದು, ಪಡಶಾಲಿಯಲ್ಲಿನ ತೀಜೋರಿಯನ್ನು  ಕುಡಗೋಲಿನಿಂದ ಮಿಟಿ ಬಾಗಿಲು ತೆರೆದು ಅದರಲ್ಲಿದ್ದ 1] 2 ಜೋತೆ ಬಂಗಾರದ ಕೀವಿಯಲ್ಲಿನ ಡ್ರಾಫ್ಸಗುಂಡು, ಅ.ಕೀ 9000/- 2] 2 ಬೆಳ್ಳಿಯ ಗುಂಡುಗಳಿಗೆ ಅ.ಕೀ 4000/- ರೂ 3] 1 ಜೊತೆ ಬೆಳ್ಳಿಯ ಪೆಂಡಾಲ ಗೆಜ್ಜೆ, ಅ.ಕೀ 3000/- 4] 1 ಜೋತೆ ಬೆಳ್ಳಿಯ ಮಾವಿನಕಾಯಿ ಗೆಜ್ಜೆ ಅ.ಕೀ 3000/- ರೂ 5] MU Phone ಕಂಪನಿಯ 1 ಮೊಬೈಲ ಅ.ಕೀ 400/- ರೂ ಮತ್ತು 6] ನಗದು ಹಣ 5000/- ರೂ ಹೀಗೆ ಒಟ್ಟು 24,400/- ರೂಗಳ ವಸ್ತುಗಳನ್ನ ದಿನಾಂಕ:01-05-2017 ರ ರಾತ್ರಿ 10-30 ಗಂಟೆಯಿಂದ ದಿನಾಂಕ:02-05-2017 ರ ಬೆಳಗಿನ ಜಾವ -05-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Wednesday, May 3, 2017

1] ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 21/2017 ಕಲಂ: 279, 338 ಐ.ಪಿ.ಸಿ.
ಫಿರ್ಯಾಧಿ ಕುಮಾರಿ ಸಲ್ಮಾನ ಬೇಗಂ ತಂದೆ ಮೌಲಾಸಾಬ ತಳಕಲ್ಲ ವಯ. 18 ಜಾತಿ. ಮುಸ್ಲಿಂ ಉ. ವಿದ್ಯಾರ್ಥಿ ಸಾ. ಸಿದ್ದಾಪುರ ತಾ. ಗಂಗಾವತಿ ಜಿ. ಕೊಪ್ಪಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 02-05-2017 ರಂದು ಸಂಜೆ ಫಿರ್ಯಾದಿದಾರರು ಅವರ ಅಣ್ಣ ಮರ್ದಾನ ಅಲಿ ಇತನ ಮೋಟಾರ್ ಸೈಕಲ್ ನಂಬರ. KA-37/Q-9344 ನೆದ್ದರ ಹಿಂದೆ ಕುಳಿತುಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ನಗರ ಸಭೆಯ ಸಮೀಪ ಬಸ್ ನಿಲ್ದಾಣದ ಕಡೆಗೆ ಹೊಗುತ್ತಿರುವಾಗ ಹಿಂದಿನಿಂದ ಕಾರ್ ನಂ. AP-03/AK-7999 ನೆದ್ದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ ನನಗೆ ಎಡಗಡೆ ಬುಜಕ್ಕೆ ಒಳಪೆಟ್ಟು, ಫಿರ್ಯಾದಿಯ ಅಣ್ಣನಿಗೆ ಎರಡೂ ಕೈಗಳಿಗೆ ರಕ್ತಗಾಯ, ಸೊಂಟಕ್ಕೆ ಮತ್ತು ಹೊಟ್ಟೆಗೆ ಒಳಪೆಟ್ಟು ಆಗಿರುತ್ತದೆ. ಚಾಲಕ ಹಮೀದ ಭಾಷಾ ಶೇಖ್ ಕಾರ್ ನಂಬರ. AP-03/AK-7999 ನೇದ್ದರ ಚಾಲಕ ಸಾ. ತಿರುಪತಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 89/2017 ಕಲಂ: 498(ಎ), 323, 504, 506 ಸಹಿತ 34 ಐ.ಪಿ.ಸಿ.
ದಿ:02-05-2017 ರಂದು ಸಾಯಂಕಾಲ 6-00 ಗಂಟೆಗೆ ಫಿರ್ಯಾದಿದಾರ ಮಂಜುಳಾ ಗಂಡ ಈರಣ್ಣ ಗುಡಿ ಸಾ: ಮೋಚಿ ಓನಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ಕಳೆದ 05 ವರ್ಷಗಳಿಂದ ಕೊಪ್ಪಳದ ಈರಪ್ಪ ಗುಡಿ ಇವರೊಂದಿಗೆ ಮದುವೆಯಾಗಿದ್ದು, ಸದರಿ ಆರೋಪಿತನು ಫಿರ್ಯಾದಿದಾರಳಿಗೆ ನಿನ್ನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲ  ಎಂದು ವಿನಾಕಾರಣ ಜಗಳ ತೆಗೆದು ದಿ: 15-12-2016 ರಂದು ಮದ್ಯಾಹ್ನ 12-30 ಗಂಟೆಗೆ ಟಣಕನಕಲ್ ಸೀಮಾದ ತಮ್ಮ ಹೊಲದ ಗುಡಿಸಲು ಮುಂದೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿದಾರಳು ಮಂಗಳೂರದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ನಂತರ ದಿ:30-04-2017 ರಂದು ಬೆಳಿಗ್ಗೆ 10-00 ಗಂಟೆಗೆ ಸಹ ಫಿರ್ಯಾದಿದಾರಳು ತನ್ನ ತಂದೆಯೊಂದಿಗೆ ಸದರಿ ಹೊಲದಲ್ಲಿ ಫಿರ್ಯಾಧಿದಾರಳಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಹೀಗೆ ದೈಹಿಕ ಮಾನಸಿಕ ಕಿರುಕುಳ ನೀಡಿದ್ದರಿಂದ ಸದರಿ 04 ಜನರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 87/2017 ಕಲಂ: 279, 337 ಐ.ಪಿ.ಸಿ ಹಾಗೂ 187 ಐ.ಎಂ.ವಿ ಕಾಯ್ದೆ..
ದಿನಾಂಕ :02/05/2017 ರಂದು  2-30 ಪಿ ಎಂ ಕ್ಕೆ ಪಿರ್ಯಾದಿ ಅಮರೇಶ ತಂದೆ ಸಾದೇವಪ್ಪ ಉಜರತಿ ಸಾ: ಗುರಗುಂಟಾ ತಾ: ಲಿಂಗಸಗೂರು ಜಿ: ರಾಯಚೂರು ಠಾಣೇಗೆ ಹಾಜರಾಗಿ ನಿಡಿದ ಗಣಕಿಕೃತ ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ 01/05/2017 ರಂದು  ಪಿರ್ಯಾದಿದಾರರು ಹಾಗೂ ಅವರ ಸಂಬಂಧಿಕರು ಕುಡಿಕೊಂಡು ಟ್ರಾಕ್ಸ ನಂ: ಕೆಎ- 34 ಎ- 7417 ನೇದ್ದರಲ್ಲಿ ಅವರ ಮನೇದೆವರಾದ ಹುಲಗಿಯ ಶ್ರೀ ಹುಲಿಗೇಮ್ಮ ದೇವಿಯ ದರ್ಶನಕ್ಕೆಂದು  ಬರುತ್ತಿರುವಾಗ ರಾತ್ರಿ 11-30 ಗಂಟೆಯ ಸುಮಾರಿಗೆ   ಎನ್ ಎಚ್ -50 ಕುಷ್ಟಗಿ ಹೊಸಪೇಟೆ ಏಕಮುಖ ರಸ್ತೆಯ ಮೆಲೆ ದನಕನ ದೊಡ್ಡಿ ಕ್ರಾಸ್ ಹತ್ತೀರ ರೋಡ್ ಬ್ರೇಕರ್ ಇದ್ದುದರಿಂದ ಪಿರ್ಯಾದುದಾರರ ವಾಹನ ಚಾಲಕನು ಬ್ರೇಕ್ ಹಾಕಿ ನಿಧಾನವಾಗಿ ಚಲಾಯಿಸುತ್ತಿರುವಾಗ  ಅವರ ಹಿಂದಿನಿಂದ ಲಾರಿ ನಂ: ಎಪಿ-27 ಎಕ್ಷ್ - 3709 ನೇದ್ರ ಚಾಲಕನಿ ತನ್ನ ಗಾಡಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಪಿರ್ಯಾದಿದಾರರು ಹೊಗುತ್ತಿದ್ದ ವಾಹನಕ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರ ವಾಹನದಲ್ಲಿದ್ದವರಿಗೆ ಗಾಯಪೆಟ್ಟುಗಳಾಗಿದ್ದು ಅಪಘಾತ ಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೊಗಿರುತ್ತಾನೆ ಕಾರಣ ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 106/2017 ಕಲಂ: 109 ಸಿ.ಆರ್.ಪಿ.ಸಿ..
ದಿನಾಂಕ 02-05-2017 ರಂದು ಬೆಳಿಗ್ಗೆ 05:30 ಗಂಟೆಗೆ ಕುಷ್ಟಗಿ ಪಟ್ಟಣದಲ್ಲಿ ಪಿ.ಎಸ್.ಐ. ಶ್ರೀ ವಿಶ್ವನಾಥ ಹಿರೇಗೌಡರ್ ರವರು ಪೆಟ್ರೋಲಿಂಗ ಮಾಡುವ ಕುರಿತು ತಿರುಗಾಡುತ್ತಾ ಕುಷ್ಟಗಿ ಪಟ್ಟಣದ ಅಡವಿರಾಯ ದೇವಸ್ಥಾನದ ಹತ್ತಿರ ಬಂದಾಗ ಇಲ್ಲಿ ಒಬ್ಬ ವ್ಯಕ್ತಿ ಆ ಕಡೆ ಈ ಕಡೆ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದು ಆಗ ಅವರನ್ನು ನೋಡಿ ತನ್ನ ಇರುವಿಕೆಯನ್ನು ಬದಲಾಯಿಸಿದಾಗ ಅವನನ್ನು ಕೂಡಲೇ ಹೋಗಿ ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು ಪುನಃ ಪುನಃ ವಿಚಾರಿಸಿದಾಗ ತನ್ನ ಹೆಸರು ಮುತ್ತಪ್ಪ ತಂದೆ ಕರಿಯಪ್ಪ ದಮ್ಮೂರ ವಯ : 24 ವರ್ಷ ಜಾ : ಕುಂಚಿಕೊರವರ್  : ಕೂಲಿಕೆಲಸ ಸಾ : 3 ನೇ ವಾರ್ಡ ಯಲಬುರ್ಗಾ ತಾ : ಯಲಬುರ್ಗಾ. ಅಂತಾ ಹೇಳಿದ್ದು ಇಲ್ಲಿ ಬಂದ ಬಗ್ಗೆ ಸಮರ್ಪಕವಾದ ಉತ್ತರವನ್ನು ಕೊಡದೇ ಇದ್ದು, ಸದರಿಯವನು ಇಲ್ಲಿ ಯಾವದೇ ತನ್ನ ಸಂಬಂಧಿಕರಾಗಲಿ ತನ್ನ ಗೆಳಯರಾಗಲಿ ಯಾರು ಇಲ್ಲದೇ ಇದ್ದು ಮತ್ತು ಪರಸ್ಥಳಿಯವನಾಗಿದ್ದು ಹೀಗಾಗಿ ಸದರಿಯವನು ಯಾವುದೇ ಸ್ವತ್ತಿನ ಅಪರಾಧ ಮಾಡಲು ಬಂದಿರಬಹುದು ಅಂತಾ ಬಲವಾಗಿ ಸಂಶಯ ಬಂದಿದ್ದು ಅಲ್ಲದೇ ಅವನನ್ನು ಹಾಗೆಯೇ ಬಿಟ್ಟಲ್ಲಿ ಸ್ವತ್ತಿನ  ಅಪರಾಧ ಮಾಡಬಹುದು ಅಂತಾ ಕಂಡು ಬಂದ ಮೇರೆಗೆ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲು ಮಾಡಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
5] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 143, 147, 148, 504, 506, 307 ಸಹಿತ 149  ಐ.ಪಿ.ಸಿ.

ದಿನಾಂಕ: 02-05-2017 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ಬಂಡಿಹಾಳ ಗ್ರಾಮದ ಮಾಳಗೌಡರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ 1] ಕರಿಬಸಪ್ಪ ತಂದೆ ಕಳಕಪ್ಪ ನಿಡಗುಂದಿ ಹಾಗೂ ಇತರೇ ಸುಮಾರು 27 ಜನರು ಕೂಡಿ ಕೈನಲ್ಲಿ ಬಡಿಗೆ, ಕೊಡಲಿ, ಕುಡಗೋಲು, ಒಡೆದ ಬಾಟಲಿ ಇವೆಲ್ಲವೂಗಳನ್ನು ಹಿಡಿದುಕೊಂಡು ಪಿರ್ಯಾದಿ ಶರಣು ತಂದೆ ಕರಿಬಸಪ್ಪ ಕಳಕಸಪ್ಪನವರ ಉ: ಸಮಾಜ ಸೇವಕ ಮತ್ತು ಆರ್.ಟಿ.ಐ. ಕಾರ್ಯಕರ್ತ ಸಾ: ಬಂಡಿಹಾಳ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ & ಗೂಳಪ್ಪ ದಿಂಡೂರು ಇವರಿಗೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಬಿಡಿಸಲು ಬಂದವರ ಮೇಲೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 

Tuesday, May 2, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 41/2017 ಕಲಂ: 323,324,307,504,506 ರೆ/ವಿ 34 ಐಪಿಸಿ.
ಫಿರ್ಯಾಧಿದಾರರಾದ ಶ್ರೀ ಪಂಪಯ್ಯ ತಂದೆ ಬಸಯ್ಯ ಪೊಲೀಸ್ ಪಾಟೀಲ. ವಯ : 50 ವರ್ಷ. ಜಾತಿ : ಲಿಂಗಾಯತ ಜಂಗಮ ಉ : ಒಕ್ಕಲುತನ. ಸಾ : ಬಚನಾಳ. ತಾ : ಕುಷ್ಟಗಿ. ರವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ: 30-04-2017 ರಂದು ಆರೋಪಿ ಹಿರೇಹನುಮಂತನ ಮಗಳಾದ ಮೀನಾಕ್ಷೀ ಈಕೆಯು ತಮ್ಮ ತಂದೆಯ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಆಕೆ ನೇಣು ಹಾಕಿಕೊಂಡು ಸಾಯಲು ಫಿರ್ಯಾದಿದಾರರ ಸಂಬಂಧಿಕನಾದ ಮಹೇಶ, ಮತ್ತು ಮಹೇಶನೊಂದಿಗೆ ತಿರುಗಾಡುತ್ತಿದ್ದ ಫಿರ್ಯಾಧಿದಾರರ ಮಗ ಅಮರಯ್ಯ 30 ವರ್ಷ ಇವರು ಕಾರಣ ಅಂತಾ ಹಿರೇಹನುಮಂತನ ಕಡೆಯವರು ದ್ವೇಷ ಇಟ್ಟುಕೊಂಡಿದ್ದರು. ದಿನಾಂಕ: 01-05-2017 ರಂದು ಸೋಮವಾರ ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಮತ್ತು ಅವರ ಮಗ ಅಮರಯ್ಯ ಇಬ್ಬರೂ ಕೂಡಿ ಕೊಟ್ರಯ್ಯ ರವರ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಅಲ್ಲಿಗೆ 4 ಜನ ಆರೋಪಿತರು ಕೂಡಿ ಬಂದು ಅಮರಯ್ಯನಿಗೆ  ಲೇ ಸೂಳೆ ಮಗನೇ ನೀನೆ ನಮ್ಮ ಮಗಳ ಸಾವಿಗೆ ಕಾರಣ ನೀನು ಮತ್ತು ಮಹೇಶನೊಂದಿಗೆ ಸೇರಿ ನಮ್ಮ ಮಗಳಿಗೆ ಪೋನ್ ಮಾಡಿ ಕೊಟ್ಟು ಅವಳ ಜೀವ ತೆಗೆದಿದ್ದೀಯಾ ಇವತ್ತು ನಿನ್ನ ಜೀವ ಸಹಿತ ಉಳಿಸುವುದಿಲ್ಲ ಅಂತಾ ಬೈದಾಡಿ ಕೊಲೆ ಮಾಡುವ ಉದ್ದೇಶದಿಂದ ಅಮರಯ್ಯನನ್ನು ಎತ್ತಿಕೊಂಡು ಹೋಗಿ ರಸ್ತೆಯಲ್ಲಿ ಹಾಕಿ, ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಎತ್ತಿ ಎತ್ತಿ ಹಾಕಿದ್ದು, ಬೆನ್ನಿಗೂ ಕೂಡ ಹಾಕಿದ್ದು ಆತನ ತಲೆಗೆ ಭಾರಿ ರಕ್ತ ಗಾಯವಾಗಿದ್ದು ಆಗ ಫಿರ್ಯಾಧಿದಾರರನು ಮಗನನ್ನು ಬಿಡಿಸಿಕೊಳ್ಳಲು ಹೋಗಿದ್ದು ಆಗ ಆರೋಪಿ ಹಿರೇಹನಮಂತನು ಫಿರ್ಯಾಧಿದಾರರಿಗೂ ಕೂಡ ಬೆನ್ನಿನ ಎರಡೂ ಕಡೆ ಕಲ್ಲಿನಿಂದ ಹೋಡಿದಿದ್ದು ಗಾಯಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 87/2017 ಕಲಂ: 279, 337, 338 ಐ.ಪಿ.ಸಿ.
ಫಿರ್ಯಾಧಿ ಹನುಮಂತ ತಂದೆ ಮಲ್ಲಪ್ಪ ಲೇಬಗೇರಿ. ಸಾ: ದೇವಲಾಪೂರ. ಇವರ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ಇಂದು ದಿ:01-05-2017 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೆಚ್.ಹೆಚ್.ಪಿ ಕೆನಾಲ್ ಹತ್ತಿರ ಬಂದಾಗ ಕೊಪ್ಪಳದ ಕಡೆಯಿಂದ ಬಂದ ಮೋಟಾರ ಸೈಕಲ್ ನಂ: ಕೆಎ-37/6700 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಯಾವುದೋ ಒಂದು ಆಟೋ ಓವರಟೇಕ್ ಮಾಡಿ ಎದುರುಗಡೆ ಬರುತ್ತಿದ್ದ ಮೋಟಾರ ಸೈಕಲ್ ನಂ: ಕೆಎ-37/ವಿ-3666 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಅಪಘಾತ ಮಾಡಿದ ಮೋ. ಸೈ ಸವಾರ ಗವಿಸಿದ್ದಪ್ಪ ಡಂಬಳ. ಹಾಗೂ ಎದುರುಗಡೆಯ ಮೋ. ಸೈ ಸವಾರ ಶೇಖರಪ್ಪ ಮತ್ತು ಹಿಂಬದಿ ಸವಾರ ಮಾರುತಿ ಇವರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 42/2017 ಕಲಂ: 279, 338 ಐ.ಪಿ.ಸಿ.
ರಾಮಣ್ಣ ತಂದೆ ಪವಾಡೆಪ್ಪ ಅಗಡಿ ವಯ: 55 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ತುಮ್ಮರಗುದ್ದಿ ತಾ: ಯಲಬುರ್ಗಾ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಾಂಶವೆನಂದರೆ ದಿನಾಂಕ: 01-05-2017 ರಂದು ಬೆಳಿಗ್ಗೆ 7-25 ಗಂಟೆ ಸುಮಾರಿಗೆ ಆರೋಪಿ ವೆಂಕಟೇಶ ತಂದೆ ನಿಂಗಪ್ಪ ಪಮ್ಮಾರ ಸಾ: ತುಮ್ಮರಗುದ್ದಿ ಇತನು ಮೋಟಾರ ಸೈಕಲ ನಂ ಕೆ.ಎ-26/ವಿ-6803 ನೇದ್ದರಲ್ಲಿ ಗಾಯಾಳುವಾದ ನೇತ್ರಾವತಿ ಈಕೆಯನ್ನು ಕೂಡಿಸಿಕೊಂಡು ತುಮ್ಮರಗುದ್ದಿ ಸೀಮಾದ ಕಳಕನಗೌಡ ಪಾಟೀಲ ರವರ ಹೊಲದ ಹತ್ತಿರ ತುಮ್ಮರಗುದ್ದಿ - ಯಲಬುರ್ಗಾ ರಸ್ತೆಯ ಮೇಲೆ ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಿಂದೊಮ್ಮಲೆ ಬ್ರೇಕ್ ಹಾಕಿದ್ದರಿಂದ ಗಾಯಾಳು ನೇತ್ರಾವತಿಯ ತಲೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿ ಬಲಗಿವಿಯಿಂದ ರಕ್ತಬಂದಿರುತ್ತದೆ. ಸದರಿ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 105/2017 ಕಲಂ: 87 Karnataka Police Act.
ದಿನಾಂಕ : 01-05-2017 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರಿಗೆ  ಕುಷ್ಟಗಿ ಪಟ್ಟಣದ ಸಂದೀಪ್ ನಗರದ ಜಾಲಿಯಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮೀ ತಿಳಿದು ಬಂದಿದ್ದು ಆಗ ಪಿ.ಎಸ್.ಐ. ರವರು ಮತ್ತು ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 5 ಜನ ಆರೋಪಿತರು 1] ಮೌನೇಶ ತಂದೆ ಲಕ್ಷ್ಮಪ್ಪ ಹಳ್ಳಿ ವಯಾ: 28 ವರ್ಷ ಜಾತಿ: ಹಿಂದೂ ಮಾದರ ಉ: ಗೌಂಡಿ ಕೆಲಸ ಸಾ: ಸಂದೀಪ್ ನಗರ ಕುಷ್ಟಗಿ 2] ಶರಣಪ್ಪ ತಂದೆ ರಾಮಪ್ಪ ಭಜೇಂತ್ರಿ ವಯಾ: 30 ವರ್ಷ ಜಾತಿ: ಭಜೇಂತ್ರಿ ಉ: ವ್ಯಾಪಾರ ಸಾ: ಸಂದೀಪ್ ನಗರ ಕುಷ್ಟಗಿ 3] ಯಮನೂರಪ್ಪ ತಂದೆ ಹನಮಂತಪ್ಪ ಗೊಂದಳಿ ವಯಾ: 22 ವರ್ಷ ಜಾತಿ: ಗೊಂದಳಿ ಉ: ವ್ಯಾಪಾರ ಸಾ: ಸಂದೀಪ್ ನಗರ ಕುಷ್ಟಗಿ 4] ಭರಮಲಿಂಗಪ್ಪ ತಂದೆ ಹುಲಗಪ್ಪ ಗುಳಗುಳಿ ವಯಾ: 26 ವರ್ಷ ಜಾತಿ: ಹಿಂದೂ ಮಾದರ ಉ: ಕೂಲಿಕೆಲಸ ಸಾ: ಸಂದೀಪ್ ನಗರ ಕುಷ್ಟಗಿ ಹಾಗೂ 5] ವೆಂಕಟೇಶ ತಂದೆ ಮಲ್ಲಿಕಾರ್ಜುನ ಬಗಡೆಕಲ್ಲು ವಯಾ: 30 ವರ್ಷ ಜಾತಿ: ಲಿಂಗಾಯತ ಉ: ಖಾನಾವಳಿ ಸಾ: ಸಂದೀಪ್ ನಗರ ಕುಷ್ಟಗಿ ಇವರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 4430=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 73/2017 ಕಲಂ: 429 ಐ.ಪಿ.ಸಿ.
ದಿನಾಂಕ:-01-05-2017 ರಂದು ಸಾಯಂಕಾಲ 6-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಷಣ್ಮುಖಪ್ಪ ತಂದಿ ದುರಗಪ್ಪ ಛಲವಾದಿ ವಯಾ-29 ವರ್ಷ ಜಾ. ಛಲವಾದಿ ಉ-ಒಕ್ಕಲುತನ ಸಾ. ಕುಂಟೋಜಿ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ:-01-05-2017 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತಮ್ಮ ಆಡು ಮತ್ತು ಹೋತುಗಳನ್ನು ಮೇಯಿಸಲೆಂದು ಊರಿನ ಪಕ್ಕದಲ್ಲಿ ಹೋಗಿದ್ದಾಗ್ಗೆ ಪಿರ್ಯಾದಿದಾರರ ಹೋತುಮರಿಯೊಂದು ನೀರು ಕುಡಿಯಲೆಂದು ಕುಂಟೋಜಿ ಗ್ರಾಮದ ಪಕ್ಕದಲ್ಲಿ ಸರ್ವೆ ನಂ 27 ನೆದ್ದರಲ್ಲಿರುವ ಬೊಕ್ಕಾ ವೆಂಕಟೇಶ್ವರರಾವ್ ತಂದಿ ನಾಗಣ್ಣ ಸಾ.ಅಂಜೂರಿ ಕ್ಯಾಂಪ್ ಹಾ.ವ ಶ್ರೀರಾಮನಗರ ಇವರ ಜಮೀನಿನಲ್ಲಿ ನೀರು ಕುಡಿಯಲು ಹೋಗಿದ್ದಾಗ್ಗೆ ಸದ್ರಿ ಜಮೀನಿನಲ್ಲಿ ಜಮೀನಿನ ಮಾಲೀಕರು ತಮ್ಮ ಜಮೀನಿನಲ್ಲಿ ಹಾಕಿಸಿದ್ದ ಹಳೆಯ ಬೋರವೇಲ್ ನ ಕೊಳವೆ ಬಾವಿಯಲ್ಲಿ ಹೊತು ಮರಿ ಬಿದ್ದಿದ್ದರಿಂದ ಪಿರ್ಯಾದಿದಾರರು ಮತ್ತು ಊರಿನವರು ಹೋಗಿ ಸದ್ರಿ ಕೋಳವೆ ಬಾವಿಯಿಂದ ಮರಿಯನ್ನು ಮೇಲೆತ್ತಿ ನೋಡಲು ಸದ್ರಿ ಪಿರ್ಯಾದಿದಾರರಿಗೆ ಸಂಬಂದಿಸಿದ ಅಂದಾಜು 4 ಸಾವಿರ ರೂ ಬೆಲೆಬಾಳುವ ಹೊತು ಮರಿಯು  ಸಂಪೂರ್ಣ ಅಂಗವಿಕಲಗೊಂಡಿರುತ್ತದೆ ಜಮೀನಿನ ಮಾಲೀಕರು ಬೊಕ್ಕ ವೆಂಕಟೇಶ್ವರರಾವ್ ತಂದಿ ನಾಗಣ್ಣ ಸಾ. ಅಂಜೂರಿ ಕ್ಯಾಂಪ್ ಹಾ.ವ ಶ್ರೀರಾಮನಗರ ತಾ. ಗಂಗಾವತಿ ಈತನು ನಿರ್ಲಕ್ಷತನದಿಂದ ತಮ್ಮ ಜಮೀನಿನಲ್ಲಿದ್ದ ಹಳೆಯ ಕೊಳವೆ ಬಾಯಿಯನ್ನು ಮುಚ್ಚದೆ ಹಾಗೆ ಬಿಟ್ಟು ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿದ್ದು ಜಮೀನಿನ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಕೆ  ಕೈಗೊಂಡಿದ್ದು ಇರುತ್ತದೆ.
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಎಫ್.ಎ. ನಂ. 03/2017 ಕಲಂ: ಆಕಸ್ಮೀಕ ಬೆಂಕಿ ಅಪಘಾತ.
ದಿ: 01-05-2017 ರಂದು ಅರ್ಜಿದಾರರಾದ ಶ್ರೀ ವಿರುಪಾಕ್ಷಿ ತಂದೆ ಗೌಡಪ್ಪ ಯರಾಸಿ. ಸಾ: ಕವಲೂರ. ಇವರು ನೀಡಿದ ಅರ್ಜಿ ಸಾರಾಂಶವೆನೆಂದರೇ, ಇಂದು ದಿ:01-05-2017 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಬೆಂಗಳೂರ ದಿಂದಾ ಮುಂಡರಗಿ ಗೆ ಹೋಗುವ ಖಾಸಗಿ ಬಸ್ ನಂ: ಎಆರ್-01/ಹೆಚ್-0909 ನೇದ್ದರ ಚಾಲಕನು ವದಗನಹಾಳ ಸಮೀಪ ಮುಂಡರಗಿ ಕಡೆಗೆ ಹೋಗುವಾಗ ಬಸ್ಸಿನ ಹಿಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿ ಬಸ್ ಸಂಪೂರ್ಣ ಕರಕಲಾಗಿದ್ದು ಇರುತ್ತದೆ. ಸದರ ಬಸ್ ಸುಟ್ಟು ಸುಮಾರು 15 ಲಕ್ಷ. ರೂ. ಹಾಗೂ ಅರ್ಜಿದಾರರ ಸುಮಾರು 10 ಸಾವಿರ ರೂ. ಬೆಲೆಬಾಳುವಷ್ಟು ಹೊಸ ಬಟ್ಟೆಗಳು ಸುಟ್ಟು ಹಾನಿಯಾಗಿದ್ದು ಇರುತ್ತದೆ. ಈ ಘಟನೆ ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ. ಅಂತಾ ಮುಂತಾಗಿ ಸಲ್ಲಿಸಿದ ಅರ್ಜಿ ಮೇಲಿಂದ ಠಾಣೆ ಯ ಎಫ್.ಎ ನಂ: 03/2017. ಆಕಸ್ಮಿಕ ಬೆಂಕಿ ಅಪಘಾತದ ಅಡಿಯಲ್ಲಿ ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.

Monday, May 1, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 103/2017 ಕಲಂ: 87 Karnataka Police Act.
ದಿನಾಂಕ : 30-04-2017 ರಂದು ಸಾಯಂಕಾಲ 4-00 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆ ರವರಿಗೆ ಬಿಜಕಲ್ ಗ್ರಾಮದ ಶ್ರೀ ಮಾರುತೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಂಚರು ಹಾಗೂ ಸಿಬ್ಬಂದಿ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ ಆರೋಪಿ 1] ರಾಚಪ್ಪ ತಂದೆ ನಿಂಗಪ್ಪ ಕೂಡ್ಲೂರ ವಯಾ: 32 ವರ್ಷ  ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಶಿರಗುಂಪಿ ಇತರೇ 5 ಜನರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 6240=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 104/2017 ಕಲಂ: 87 Karnataka Police Act.
ದಿನಾಂಕ : 30-04-2017 ರಂದು ರಾತ್ರಿ 7-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರಿಗೆ ಹಿರೇಮನ್ನಾಪೂರ ಗ್ರಾಮದ ಚಾಕರಿ ಹಳ್ಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಸಿಬ್ಬಂದಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ ಆರೋಪಿ 1] ರೆವಣೆಪ್ಪ ತಂದೆ ಚನ್ನಪ್ಪ ಬ್ಯಾಳಿ ವಯಾ: 34 ವರ್ಷ ಜಾತಿ: ಲಿಂಗಾಯತ ಉ: ವ್ಯಾಪಾರ ಸಾ: ನವಲಹಳ್ಳಿ ಹಾಲಿ ವಸ್ತಿ ಹಿರೇಮನ್ನಾಪೂರ ಹಾಗೂ ಇತರೇ  5 ಜನ ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 1520=00 ರೂ, ನಗದು ಹಣ ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 59/2017 ಕಲಂ:  504, 341, 323, 355, 354, 506 ಸಹಿತ 34 ಐ.ಪಿ.ಸಿ.
ದಿನಾಂಕ: 30-04-2017 ರಂದು ರಾತ್ರಿ 8-30 ಗಂಟೆಗೆ ಫೀರ್ಯಾದಿ ಶ್ರೀ ಈರಪ್ಪ ತಂದೆ ಪದ್ಮಪ್ಪ ಪೂಜಾರ, ವಯ: 44 ವರ್ಷ ಜಾತಿ: ಕುರುಬರ ಉ: ಒಕ್ಕಲುತನ ಸಾ: ಹಿರೇಸಿಂಧೊಗಿ ಇವರು ಠಾಣೆಗೆ ಹಾಜರಾಗಿ, ಫಿರ್ಯಾಧಿ ನೀಡಿದ್ದು ಸಾರಾಂಶವೆನಂದರೆ, ಫಿರ್ಯಾಧಿದಾರರು ಹಾಗೂ ಆರೋಪಿತರು ಸೇರಿ ಒಟ್ಟು 9 ಎಕರೆ ಹೊಲವನ್ನು ಖರೀದಿಸಿದ್ದು, ಅದರಲ್ಲಿ ಫಿರ್ಯಾದಿದಾರು 2 ಎಕರೆ ಹೊಲವನ್ನು ಹಾಗೂ ಆರೋಪಿತರು 7 ಎಕರೆ ಹೊಲವನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ: 29-04-2017 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಆರೋಪಿತರು ತಮ್ಮ ಹೊಲದಲ್ಲಿ ಬೋರ್ ಹಾಕಿಸಿದ್ದು, ಅದು ಫೇಲ್ ಆಗಿದ್ದು, ನಂತರ ಫಿರ್ಯಾಧಿದಾರರ ಸಾಗುವಳಿ ಮಾಡುತ್ತಿದ್ದ ಹೊಲದಲ್ಲಿ ಬಂದು ಬೋರ ಹಾಕಿಸಲು ಹೋದಾಗ ಫಿರ್ಯಾಧಿದಾರರು, ಅವರ ತಂದೆ ಪದ್ಮಪ್ಪ, ತಮ್ಮ ಸಿದ್ಧಪ್ಪ, ಸೊಸೆ ಹುಲಿಗೇಮ್ಮ ಇವರು ನಮ್ಮ ಹೊಲದಲ್ಲಿ ಯಾಕೆ ಬೋರ್ ಹಾಕಿಸುತ್ತಿರಾ, ನಮ್ಮ ಹೊಲದಲ್ಲಿ ಬೋರ್ ಹಾಕಬೇಡಿ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಫಿಯರ್ಾದಿದಾರರೊಂದಿಗೆ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಫಿರ್ಯಾಧಿದಾರರ ತಂದೆಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಚಪ್ಪಲಿಯಿಂದ ಹೊಡೆದಿದ್ದು, ಇದನ್ನು ನೋಡಿ ಬಿಡಿಸಲು ಹೋದ, ಫಿರ್ಯಾಧಿದಾರಿಗೆ ಹಾಗೂ ಆತನ ತಮ್ಮ ಸಿದ್ಧಪ್ಪನಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಕೈಯಿಂದ ಮೈಕೈಗೆ ಹೊಡೆ ಬಡೆ ಮಾಡಿದ್ದು, ನಂತರ ಫಿರ್ಯಾಧಿದಾರರ ಸೊಸೆ ಹುಲಿಗೇಮ್ಮಳು ಜಗಳ ಬಿಡಿಸಲು ಬಂದಾಗ ಅವಳಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದು, ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿದ್ದು ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 86/2017 ಕಲಂ: 457, 380 ಐ.ಪಿ.ಸಿ.
ದಿನಾಂಕ 30-04-2017ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿದಾರರಾದ ಕೆ.ಜಯಣ್ಣ ತಂದೆ ಕೆ.ದೊಡ್ಡಬಸಪ್ಪ ಕೂನಾ ಸಾ: ನೇಕಾರ ಕಾಲೋನಿ ಹೊಸಪೇಟೆ ಹಾ:ವ: ಕೆ.ಇ.ಬಿ.ಕ್ವಾಟರ್ಸ ಮುನಿರಾಬಾದ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಮಾಡಿದ ಪಿರ್ಯಾದಿ ನೀಡಿದ್ದು ಸಾರಾಂಶ ತಾವು 15 ದಿವಸಗಳ ಹಿಂದೆ ತಮ್ಮ ಹೆಂಡತಿಯೊಂದಿಗೆ ಶಕ್ತಿನಗರಕ್ಕೆ ತಮ್ಮ ದೊಡ್ಡಮಗನ ಹತ್ತಿರ ಹೋಗಿದ್ದು ದಿನಾಂಕ 28-04-2017 ರಂದು ತಮ್ಮ ಮಗಳು ಸಣ್ಣಮಗ ಮತ್ತು ಸೊಸೆ ಸಾಯಂಕಾಲ 6-30 ಗಂಟೆಗೆ ಕೆ.ಇ.ಬಿ.ಕ್ವಾಟರ್ಸಗೆ ಬೀಗ ಹಾಕಿಕೊಂಡು ಶಕ್ತಿನಗರಕ್ಕೆ ಹೋದಾಗ ದಿನಾಂಕ 29-04-2017 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕ್ವಾಟರ್ಸಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಅಲಮಾರಾಗಳಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಅಲಮಾರಾಗಳಲ್ಲಿದ್ದ ಬಂಗಾರದ ಆಭರಣಗಳು ಅ.ತೂ.152.5 ಗ್ರಾಂ ಅ.ಕಿ.1,22,000=00 ರೂ ಹಾಗೂ ಬೆಳ್ಳಿ ಆಭರಣಗಳು ಅ.ತೂ.272 ಗ್ರಾಂ ಅ.ಕಿ.27,100=00 ರೂ ಒಟ್ಟು 1,49,100=00 ರೂ ಬೆಲೆ ಬಾಳುವ ಬೆಳ್ಳಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 279, 337, 338 ಐಪಿಸಿ & 187 ಐ.ಎಂ.ವಿ. ಕಾಯ್ದೆ.
ದಿನಾಂಕ: 30-04-2017 ರಂದು ಮುಂಜಾನೆ 11 ಗಂಟೆ ಸುಮಾರಿಗೆ ಪಿರ್ಯಾದಿ ಪಾಲಾಕ್ಷಗೌಡ ತಂದೆ ವೀರನಗೌಡ ಅಯ್ಯನಗೌಡ್ರ ವ: 53 ವರ್ಷ ಜಾ: ಲಿಂಗಾಯತ   ಉ: ಒಕ್ಕಲುತನ ಸಾ: ಕೋಚಲಾಪುರ ತಾ: ರೋಣ ಜಿ: ಗದಗ ಇವರ ಅಣ್ಣನ ಮಗನಾದ ಶಿವನಗೌಡನು ಕೊಪ್ಪಳ ತಾಲೂಕಿನ ಷಾಪುರ ಗ್ರಾಮದಲ್ಲಿಯ ತನ್ನ ಅಕ್ಕಳನ್ನು ಮಾತನಾಡಿಸಿಕೊಂಡು ಬರುವ ಸಲುವಾಗಿ ಮೋಟಾರ್ ಸೈಕಲ್ ನಂ. ಕೆಎ-26/ಡಬ್ಲ್ಯೂ-2705 ನೇದ್ದರ ಮೇಲೆ ತನ್ನ ಅಳಿಯನಾದ ಸಚಿನ್ ನೊಂದಿಗೆ ತೊಂಡಿಹಾಳ-ಕುಕನೂರು ರಸ್ತೆಯ ಮೇಲೆ ಹೋಗುವಾಗ ಕುಕನೂರು ಇನ್ನೂ 07 ಕಿ.ಮೀ. ಅಂತರದಲ್ಲಿ ಇರುವಾಗ ತೊಂಡಿಹಾಳ ಸೀಮಾದಲ್ಲಿ ಕಾರ್ ನಂ. ಕೆಎ-53/ಎಂ-4294 ನೇದ್ದರ ಚಾಲಕ ಹೆಸರು ವಿಳಾಸ ಗೊತ್ತಾಗಿರುವದಿಲ್ಲ, ಇವನು ಸದರಿ ಕಾರನ್ನು ಅತೀಜೋರಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದುಗಡೆಯಿಂದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ನಂತರ ಆರೋಪಿತನು ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಈ ಅಪಘಾತದಲ್ಲಿ ಗಾಯಾಳುಗಳಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಕಾರ್ ನಂ. ಕೆಎ-53/ಎಂ-4294 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 41/2017 ಕಲಂ: 87 Karnataka Police Act.
ಶ್ರೀ ವಿನಾಯಕ ಪಿ.ಎಸ್.ಐ. ಯಲಬುರ್ಗಾ ರವರು ದಿನಾಂಕ: 30-04-2017 ರಂದು ಮಧ್ಯಾನ್ಹ 3-20 ಗಂಟೆಯ ಸುಮಾರಿಗೆ ಯಲಬುರ್ಗಾ ಪಟ್ಣದಲ್ಲಿ ಬರುವ ಶ್ರೀ ಮೊಗ್ಗಿಬಸವೇಶ್ವರ ದೇವಸ್ಥಾನದ ಹಿಂದೆಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆದ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿದಾಗ 1] ಬುಡನ್ ಸಾಬ ತಂದೆ ಮರ್ದಾನಸಾಬ ಕಲ್ಲೂರ ವಯ: 40 ವರ್ಷ ಜಾತಿ: ಮುಸ್ಲೀಂ ಉ: ಹೋಟಲ್ ಕೆಲಸ ಸಾ: ಯಲಬುರ್ಗಾ 2] ಶೇಖಪ್ಪ ತಂದೆ ರಂಗಪ್ಪ ಸಿಮೇರ ವಯ:48 ವರ್ಷ ಜಾತಿ : ರಡ್ಡಿ, ಉ: ಒಕ್ಕಲುತನ ಸಾ: ಮೀಟ್ಲಕೋಡ ತಾ: ಕುಷ್ಟಗಿ 3] ಪ್ರಕಾಶ ತಂದೆ ಗಾಳೇಪ್ಪ ಪೂಜಾರ ವಯ: 32 ವರ್ಷ ಜಾತಿ : ಮಾದರ ಉ: ಕೂಲಿಕೆಲಸ ಸಾ: ಬಿಸರಳ್ಳಿ 4] ಭೀಮಯ್ಯ ತಂದೆ ಚನ್ನಯ್ಯ ಪುರಾಣಿಮಠ ವಯ: 22 ವರ್ಷ ಜಾತಿ : ಜಂಗಮ ಉ: ಗೌಂಡಿಕೆಲಸ ಸಾ: ಯಲಬುರ್ಗಾ 5] ಮುಂಜುನಾಥ ತಂದೆ ರಾಮಪ್ಪ ನಡುವಲಮನಿ ವಯ: 26 ವರ್ಷ ಜಾತಿ : ಹರಿಜನ ಉ: ಪಾನ್ ಶಾಪ ಅಂಗಡಿ ಸಾ: ಯಲಬುರ್ಗಾ ಇವರು ಸಿಕ್ಕಿ ಬಿದ್ದಿದ್ದು. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 640=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008