Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 31, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/2015 ಕಲಂ. 102 (ಬಿ), 302 ಸಹಿತ 149 ಐ.ಪಿ.ಸಿ:.
ದಿನಾಂಕ 30-08-2015 ರಂದು 20-30 ಗಂಟೆಗೆ ಹಯತಪೀರ್ ತಂದೆ ಶಕ್ಷಾವಲಿ ವಯಸ್ಸು 29 ವರ್ಷ ಜಾ: ಮುಸ್ಲಿಂ ಉ: ಟ್ರ್ಯಾಕ್ಟರ್ ಡ್ರೈವರ್ ಸಾ: ಸ.ಹಿ.ಪ್ರಾ.ಶಾಲೆ ಹಿಂಭಾಗ ಹೆಬ್ಬಾಳ  ತಾ: ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಕೊಲೆಯಾದ ಮಹ್ಮದಸಾಬ ಇತನ ತಂಗಿ ಶ್ರೀಮತಿ ಮುಬೀನಾಬೇಗಂ ಗಂಡ ದಿ: ಮೌಲಾಲಿ ಇವರು ತನ್ನ ಪಾಲಿಗೆ ಬರಬೇಕಾಗಿರುವ ಆಸ್ತಿಯನ್ನು ಕೊಡುವಂತೆ ಆರೋಪಿತರಾದ ತನ್ನ ಅತ್ತೆ ಮತ್ತು ಮೈದುನರಿಗೆ ಕೇಳಿದ್ದು ಸದರಿಯವರು ಆಸ್ತಿ ಕೊಡುವುದಿಲ್ಲವೆಂದು ಹೇಳಿದ್ದಕ್ಕೆ ಮಹ್ಮದಸಾಬನು ತನ್ನ ತಂಗಿಗೆ ಆಸ್ತಿ ಕೊಡಿಸುವ ವಿಷಯವಾಗಿ ವಕೀಲರ ಮುಖಾಂತರ ಆರೋಪಿತರಿಗೆ ನೋಟಿಸ್ ನೀಡಿದ್ದು ಮತ್ತು ಪಂಚಾಯತಿ ಮಾಡಿಸಿದ್ದು ಇಷ್ಟಾದರೂ ಸಹ ಆರೋಪಿತರು ಆಸ್ತಿ ಕೊಡುವುದಿಲ್ಲವೆಂದು ಹೇಳಿದ್ದು, ಮಹ್ಮದಸಾಬನು ತನ್ನ ತಂಗಿಗೆ ಆಸ್ತಿ ಕೊಡಿಸುವ ಸಲುವಾಗಿ ತಂಗಿಯೊಂದಿಗೆ ತಿರುಗಾಡುತ್ತಿರುವುದರಿಂದ ಆರೋಪಿತರು ಮುಬೀನಾಬೇಗಂ ಇಕೆಗೆ  ಆಸ್ತಿ ಕೊಡಬಾರದೆಂದು ಮಹ್ಮದಸಾಬನಿಗೆ ಕೊಲೆ ಮಾಡುವ ಸಲುವಾಗಿ ಒಳಸಂಚು ನಡೆಸಿ ಇಂದು ದಿನಾಂಕ 30-08-2015 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಮಹ್ಮದಸಾಬನು ಅಮರ ಟಾಕೀಜ್ ಹತ್ತಿರದ ಚಿನಿವಾಲ ಆಸ್ಪತ್ರೆ ಕ್ರಾಸ್ ಹತ್ತಿರ ಹೋಗುತ್ತಿರುವಾಗ ಆರೋಪಿ ಹುಸೇನಬಾಷಾ ಇವನು ಮಚ್ಚು ನಿಂದ ಮಹ್ಮದಸಾಬ ಇವನ ಮೇಲೆ ಹಲ್ಲೆ ಮಾಡಿ ಕುತ್ತಿಗೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾನೆ. ಒಳಸಂಚು ನಡೆಸಿ ಮಹ್ಮದಸಾಬ ಇತನಿಗೆ ಕೊಲೆ ಮಾಡಿದ (01) ಹುಸೇನಬಾಷಾ (02) ರಾಜಾಭಕ್ಷಿ ಮತ್ತು ಇವರ ತಾಯಿ (03) ಜಾಫರಬೀ ಹಾಗೂ ಇವರ ಅಕ್ಕಂದಿರಾದ (04) ದಾದಾಬೀ. (05) ಅನಾರ್ಕಲಿ ಮತ್ತು (06) ಅಪ್ಸರ ಎಲ್ಲರೂ ಹಿರೇಜಂತಕಲ್, ಗಂಗಾವತಿ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 115/2015 ಕಲಂ.  87 Karnataka Police Act.
ದಿನಾಂಕ: 30-08-2015 ರಂದು 6-00 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 9 ಜನ ಆರೋಪಿತರನ್ನು ಹಾಜರಪಡಿಸಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-00 ಪಿಎಂಕ್ಕೆ ಯರೇಹಂಚಿನಾಳ ಗ್ರಾಮದ ಕಳಕಪ್ಪ ದೇವರ ಗುಡಿಯ ಹತ್ತಿರದ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1900-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 185/2015 ಕಲಂ.  279, 337 ಐ.ಪಿ.ಸಿ:.

ದಿನಾಂಕ. 30-08-2015 ರಂದು 11-30 ಎ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಭರತರಾಜ ಇವರು ಒಂದು ಟಿ.ವಿ.ಎಸ್. ಎಕ್.ಎಲ್ ಮೋ.ಸೈ. ನಂ. ಸಿ.ಟಿ.ಆರ್.7137 ನೇದ್ದರಲ್ಲಿ ಹಾಗೂ ಶಿವಣ್ಣ ಮತ್ತು ಶಾಹುಲ್ ಹಮೀದ ಇವರು ಒಂದು ಟಿ.ವಿ.ಎಸ್. ಎಕ್ಸ.ಎಲ್ ಮೋ.ಸೈ. ನಂ. ಕೆ.ಎ.35/ಎಕ್ಸ.8533 ನೇದ್ದರಲ್ಲಿ ಕೂಡಿಕೊಂಡು ಬೂದೇಶ್ವರ ದೇವಸ್ಥಾನಕ್ಕೆ ಹೋಗುತ್ತಿರುವಾಗ ಎನ್.ಹೆಚ್. 13 ರಸ್ತೆಯಿಂದ ದೇವಸ್ಥಾನಕ್ಕೆ ಹೋಗುವ ರಸ್ತೆಯ ಮೇಲೆ ಶಾಹುಲ್ ಹಮೀದ ಈತನು ಮೋ.ಸೈ. ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದೆ ಹೊರಟ ಫೀರ್ಯಾದಿ ಮೋ.ಸೈ.ಗೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನಾಲ್ಕು ಜನರಿಗೆ ಗಾಯ ಒಳಪೆಟ್ಟಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

Sunday, August 30, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 224/2015 ಕಲಂ. 380 ಐ.ಪಿ.ಸಿ:.
ದಿ:30-08-2015 ರಂದು 03-30 ಎ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಪುಟ್ಟರಾಮಯ್ಯ ತಹಶೀಲ್ದಾರರು ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:29-08-2015 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಪಾಲ್ಗೊಂಡಿರುವಾಗ ಮಾನ್ಯ ಶ್ರೀ ರಾಘವೇಂದ್ರ ಹಿಟ್ನಾಳ ಶಾಸಕರು, ಕೊಪ್ಪಳ ರವರು ಸಭೆಯಲ್ಲಿ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಾಗದಪತ್ರಗಳು ಪರಶುರಾಮ ಚಿತ್ರಗಾರ ಇವರು ತಮ್ಮ ಮನೆಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿದ್ದಾರೆಂದು ಜನರು ಮಾತನಾಡುತ್ತಿದ್ದಾರೆ. ಅಂತಾ ತಿಳಿಸಿದರು. ಆಗ ಸಭೆಯಲ್ಲಿದ್ದ ಮಾನ್ಯ ಜಿಲ್ಲಾಧಿಕಾರಿಗಳು, ಕೊಪ್ಪಳ ರವರು ಕೂಡಲೇ ನನಗೆ ಕಿನ್ನಾಳ ಗ್ರಾಮಕ್ಕೆ ಹೋಗಿ ಪರಶುರಾಮ ಚಿತ್ರಗಾರ ಇವರ ಮನೆಯಲ್ಲಿ ಇವೆ ಎನ್ನಲಾದ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮೌಖಿಕವಾಗಿ ಸೂಚಿಸಿದ ಮೇರೆಗೆ ನಾನು ಖುದ್ದಾಗಿ ನಮ್ಮ ಅಧೀನ ಸಿಬ್ಬಂದಿ ಸಹಾಯದಿಂದಾ ಕಿನ್ನಾಳಗೆ ಹೋಗಿ      ಪರಶುರಾಮ ಚಿತ್ರಗಾರ ಇವರು ಮನೆಯಲ್ಲಿ ಇರಲಿಲ್ಲ. ನಂತರ ಅವರ ಮನೆಯಲ್ಲಿ ಕಳೆದ 1998 ನೇ ಸಾಲಿನಿಂದ 2004-05 ರ ಅವಧಿಯಲ್ಲಿ ಕೊಪ್ಪಳದ ತಹಶೀಲ್ದಾರ ಕಾರ್ಯಾಲಯದ ಭೂ ಮಂಜೂರಾತಿಗೆ ಸಂಬಂಧಿಸಿದ ವಿಭಾಗದಲ್ಲಿ ನಿರ್ವಹಿಸುವ ಹಾಗೂ ಕೊಪ್ಪಳದ ತಾಲ್ಲುಕಾ ಪಂಚಾಯತಿಗೆ ಸಂಬಂಧಿಸಿದ ಸರ್ಕಾರಿ ಕಡತಗಳು ಸಿಕ್ಕಿದ್ದು ಅವುಗಳನ್ನು ಜಪ್ತಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಪರಶುರಾಮ ತಂದೆ ರಾಮಚಂದ್ರಪ್ಪ ಚಿತ್ರಗಾರ. ಸಾ: ಕಿನ್ನಾಳ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಲ್ಲಿಸಿದ ಫಿರ್ಯಾದಿ. ಮೇಲಿಂದ  ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿದ್ದು ಅದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 164/2015 ಕಲಂ.  417, 419, 420 ಸಹಿತ 34 ಐ.ಪಿ.ಸಿ:.
iªÀiÁ£Àå £ÁåAiÀiÁ®AiÀÄzÀ SÁ¸ÀV  zÀÆgÀÄ £ÀA J¯ï.n. £ÀA: 1359/15 ¢: 26-08-15 £ÉÃzÀÝ£ÀÄß oÁuÉAiÀÄ°è ¹éÃPÀÈvÀ UÉÆArzÀÄÝ ¸ÁgÁA±ÀªÉ£ÉAzÀgÉ, DgÉÆævÀgÀÄ ¦ügÁå¢zÁgÀjUÉ ¥ÉÆÃ£ï ªÀÄÄSÁAvÀgÀ ¸ÀA¥ÀQ𹠤êÀÅ £ÀªÀÄä PÀA¥À¤AiÀÄ ¯ÉÊ¥sï E£ÀÄìgÉ£Àì UÉ ZÀAzÁzÁgÀgÁzÀgÉ ¤ªÀÄä ºÉAqÀwAiÀÄ ºÉ¸Àj£À°è GavÀªÁV «ªÀiÁ ¥Á®¹ PÉÆqÀÄvÉÛÃªÉ ºÁUÀÆ £ÀªÀÄä ¥Á®¹AiÀÄ ¥Àæw ªÀµÀðzÀAvÉ PÉêÀ® 5 PÀAvÀÄUÀ¼À£ÀÄß vÀÄA©zÀgÉ 6£Éà ªÀµÀðPÉÌ ¤ªÀÄUÉ ºÀt qÀ§¯ï ¸ÀAzÁAiÀÄ ªÀiÁqsÀÄvÉÛêÉ, ¤ªÀÄä ºÉAqÀwUÉ ¸ÀºÀ ¤ªÀÄUÉ PÉÆqÀĪÀµÉÖ ºÀt PÉÆqÀÄvÉÛÃªÉ CAvÁ D«ÄñÀ vÉÆÃj¹ ¢: 29-04-2013 gÀAzÀÄ 5,000/- ªÀÄvÀÄÛ ¢: 08-05-2013 gÀAzÀÄ 15,000/- gÀÆUÀ¼À£ÀÄß ¦ügÁå¢zÁgÀjAzÀ ¥ÁªÀw¹PÉÆAqÀÄ gÀ¹Ã¢AiÀÄ£ÀÄß ¤ÃrzÀÄÝ EgÀÄvÀÛzÉ. DzÀgÉ £ÀAvÀgÀ ¦ügÁå¢zÁgÀgÀÄ DgÉÆævÀgÀÄ ¥ÀÄ£À: ¦æ«ÄAiÀĪÀiï ºÀt vÀÄA§ÄªÀAvÉ £ÉÆÃnÃ¸ï ¤ÃrzÀÄÝ ªÀÄvÀÄÛ ¸ÀzÀj ¦ügÁå¢zÁgÀjUÉ ¯ÉÊ¥sï E£ÀÄìgÉ£Àì UÉ ¨ÁAqÀUÀ¼À£ÀÄß PÀ¼ÀÄ»¹ CzÀgÀ°è ªÉÄåZÀÆåjn ¢: 19-04-2028 JAzÀÄ ºÁUÀÆ ¦æÃAiÀÄA£À PÀAvÀÄUÀ¼ÀÄ 15 ªÀµÀðUÀ¼ÀÄ CAvÁ £ÀªÀÄÆ¢¹ ¦ügÁå¢zÁjUÉ £ÀA©PÉ zÉÆæúÀ ªÀiÁrgÀÄvÁÛgÉ CAvÁ CªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸ÀĪÀAvÉ EgÀĪÀ SÁ¸ÀV zÀÆj£À ªÉÄðAzÀ PÉÆ¥Àà¼À £ÀUÀgÀ oÁuÉ UÀÄ£Éß £ÀA: 164/2015. PÀ®A: 417, 419, 420 ¸À»vÀ 34 L¦¹ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆAqÉ£ÀÄ.


Saturday, August 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 201/2015 ಕಲಂ. 78(3) Karnataka Police Act.
ದಿನಾಂಕ: 28-08-2015 ರಂದು ಸಾಯಂಕಾಲ 7-15 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 25-08-2015 ರಂದು 18-00 ಗಂಟೆಗೆ ಆರೋಪಿತನಾದ ಮಹ್ಮದಗೌಸ ತಂದೆ ಮೈಬೂಬಸಾಬ ಈತನು ಗಂಗಾವತಿ ನಗರದ ಇಸ್ಲಾಂಪುರದಲ್ಲಿ ಸಂಗಮೇಶ ಎಗ್ಗ್ ಸೆಂಟರ್   ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಮಹ್ಮದಗೌಸ ತಂದೆ ಮೈಬೂಬಸಾಬ ಈತನಿಂದ ಮಟಕ ಜೂಜಾಟದಿಂದ  ಸಂಗ್ರಹಿಸಿದ ನಗದು ಹಣ ರೂ. 430-00. (02) ಮಟಕಾ ನಂಬರ ಬರೆದ ಒಂದು ಚೀಟಿ. (03) ಒಂದು ಬಾಲ್ ಪೆನ್ನು ಹಾಗೂ (04) ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 6-00 ಪಿ.ಎಂ. ದಿಂದ 7-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಂಡು ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದು.  ಸದರಿ ಕೃತ್ಯವು ಕಲಂ: 78(III) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬರುತ್ತಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 84/2015 ಕಲಂ. 498(ಎ), 323, 504, 506(2) ಸಹಿತ 34 ಐ.ಪಿ.ಸಿ:.
ಇಂದು ದಿನಾಂಕ 28-08-2015 ರಂದು ರಾತ್ರಿ 08-15 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಜ್ಯೋತಿ ಗಂಡ ಬಸವರಾಜ ಕುಂಬಾರ ಸಾ: ಕಾಟಾಪುರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ತನಗೆ 05-04-2009 ರಂದು ಬಸವರಾಜ ಕುಂಬಾರ ಸಾ: ಕಲಾದಗಿ ಹಾ/ವ: ಶಿರಗುಪ್ಪ ಇವರ ಜೊತೆ ಮುಚಖಂಡಿ ಈರಣ್ಣ ದೇವಸ್ಥಾನದಲ್ಲಿ ಮದುವೆಯಾಗಿದ್ದು ನಂತರ ಫಿರ್ಯಾದಿದಾರಳು ಗಂಡನ ಮನೆಗೆ ನಡೆಯಲು ಹೋದಾಗ ಮನೆಯಲ್ಲಿ ಗಂಡ ಹಾಗೂ ಅತ್ತೆಯಾದ ಈರಮ್ಮ ಮತ್ತು ಗಂಡನ ಅಕ್ಕ ಲಕ್ಷ್ಮಿ, ತಂಗಿ ಸರಸ್ವತಿ ಕೂಡಿಕೊಂಡು ಹಲವಾರು ಸಾರಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಅಶ್ಲಿಲ ಪದಗಳಿಂದ ಬೈದಾಡಿದ್ದಲ್ಲದೇ 3 ತೊಲೆ ಬಂಗಾರ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ತೆಗೆದುಕೊಂಡು ಬರದಿದ್ದರೆ ನಿನ್ನ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಅಂತಾ ಕೈಯಿಂದ ಹೊಡೆಬಡೆ ಮಾಡಿದ್ದು ಹೀಗಾಗಿ ಗಂಡನ ಮನೆಯಿಂದ ತವರು ಮನೆಯಾದ ಕಾಟಾಪುರದಲ್ಲಿ ಬಂದು ಇದ್ದಿದ್ದು ಇರುತ್ತದೆ.  ದಿನಾಂಕ: 27-08-2015 ರಂದು ಸಾಯಾಂಕಾಲ 05-00 ಗಂಟೆಯ ಸುಮಾರಿಗೆ ಮನೆಯಲ್ಲಿ ಒಬ್ಬಳೆ ಇದ್ದಾಗ  ಈ ಮೇಲ್ಕಂಡವರಾದ ಗಂಡ ಬಸವರಾಜ ಅತ್ತೆ ಈರಮ್ಮ ನಾದಿನಿಯರಾದ ಸರಸ್ವತಿ, ಲಕ್ಷ್ಮಿ ರವರು ಕೂಡಿ ಫಿರ್ಯಾದಿಯ ತವರು ಮನೆಗೆ ಬಂದು ವರದಕ್ಷಣೆ ತರಲಿಲ್ಲ ಅಂತಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಎಲ್ಲರೂ ಕೂದಲು ಹಿಡಿದು ಜಗ್ಗಾಡಿ 3 ತೊಲೆ ಬಂಗಾರ, 2 ಲಕ್ಷ ರೂಪಾಯಿ ತವರು ಮನೆಯಿಂದ ಇಲ್ಲದಿದ್ದರೆ ನಿನ್ನ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 113/2015 ಕಲಂ. 110(ಇ) & (ಜಿ) ಸಿ.ಆರ್.ಪಿ.ಸಿ:
ದಿನಾಂಕ:28-08-2015 ರಂದು 5-30 ಪಿಎಂಕ್ಕೆ ಪಿ.ಎಸ್.ಐ,ಕುಕನೂರ ಠಾಣೆರವರು ವಾಪಸ್ ಠಾಣೆಗೆ ಬಂದು ಒಬ್ಬ ಪ್ರಶಾಂತ ತಂದೆ ಕೋಟ್ರಪ್ಪ ಕರೊಗಲ್ಲ ವಯಾ:23 ವರ್ಷ, ಜಾ:ಹಡಪದ. ಸಾ: ಯಮನೂರಸ್ವಾಮಿ ದರಗಾದ ಹತ್ತಿರ, ಕುಕನೂರ ಇವನನ್ನು ವಶಕ್ಕೆ ತೆಗೆದುಕೊಂಡು ಬಂದು ಸರ್ಕಾರೀ ತರ್ಫೆ ಪಿರ್ಯಾದಿ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:28-08-2015 ರಂದು 5-00 ಪಿಎಂಕ್ಕೆ ಕುಕನೂರ ವಾರದ ಸಂತೆ ಪ್ರಯುಕ್ತ ಪೆಟ್ರೋಲಿಂಗ್ ಕುರಿತು ಪಿ.ಎಸ್.ಐ ಮತ್ತು ಪಿಸಿ-353 ಸಮೇತ ಠಾಣಾ ಜೀಪ್ ನಂ ಕೆ.ಎ-37 ಜಿ-427 ನೇದ್ದರಲ್ಲಿ ಠಾಣೆಯಿಂದ ಹೊರಟು ಗುದ್ನೆಪ್ಪ ಸರ್ಕಲ್ ಮುಖಾಂತರ  ಬಸ್ ನಿಲ್ದಾಣದ ಹಿಂದೆ ಯಮನೂರಸ್ವಾಮಿ ದರಗಾದ ಹತ್ತಿರ ಹೊದಾಗ 5.15 ಪಿ.ಎಮ್ ದ ಸುಮಾರಿಗೆ  ಒಬ್ಬ ವ್ಯಕ್ತಿಯು ಸಾರ್ವಜನಿಕ ರಸ್ತೆಯಲ್ಲಿ ಅಸಬ್ಯವಾಗಿ  ವರ್ತಿಸುತ್ತಿದ್ದಲ್ಲದೇ ಸದರಿಯವನು ಮಹಿಳೆಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಕೆಟ್ಟ ದೃಷ್ಟಿಯಿಂದ ನೋಡಿ ಅಸಬ್ಯವಾಗಿ ವರ್ತಿಸುತ್ತಿದ್ದಾನೆ ಅಂತಾ ಸಾರ್ವಜನಿಕರು ಸದರಿಯವನ ಮೇಲೆ ಕೋಪಗೊಂಡು ಅವನಿಗೆ ಬೈಯುತ್ತಿರುವಾಗ ಅದೇ ವೇಳೆಗೆ ಹೋಗಿ ಸದರಿಯವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಪ್ರಶಾಂತ ತಂದೆ ಕೊಟ್ರಪ್ಪ ಕರೂಗಲ್ಲ ವಯ 23 ವರ್ಷ, ಜಾ: ಹಡಪದ, ಉ: ಗ್ಯಾರೇಜಿನಲ್ಲಿ ಕೆಲಸ, ಸಾ: ಯಮನೂರಸಾಬ ದರಗಾದ ಹತ್ತಿರ ಕುಕನೂರ ಅಂತಾ ತಿಳಿಸಿದ್ದು,  ಸದರಿಯವನನ್ನು ಹಾಗೇಯೆ ಬಿಟ್ಟಲ್ಲಿ ಅವನು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ವಿಷಯದಲ್ಲಿ ಅಸಬ್ಯವಾಗಿ ವರ್ತಿಸಿ ಸಾರ್ವಜನಿಕ ತೊಂದರೆ ಮಾಡುವದರಿಂದ ಸಾರ್ವಜನಿಕರು ಕುಪಿತರಾಗಿ ಗ್ರಾಮದಲ್ಲಿ ಅಶಾಂತತೆ ಏರ್ಪಡುವ ಸಾಧ್ಯತೆ ಕಂಡುಬಂದದ್ದರಿಂದ ಸದರಿಯವನನ್ನು  ವಶಕ್ಕೆ ಪಡೆದುಕೊಂಡು ವಾಪಾಸ ಠಾಣೆಗೆ 5-30 ಪಿ.ಎಂ ಕ್ಕೆ ಕರೆತಂದು.ಸರ್ಕಾರೀ ತರ್ಫೆ ಪಿರ್ಯಾಧಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸುವಂತೆ ಇದ್ದ ಪಿರ್ಯಾದಿ ಮೇಲಿಂದ  ನಾನು ಎಸ್.ಹೆಚ್.ಓ. ಹೆಚ್.ಸಿ-26, ಇಂದು ದಿನಾಂಕ:28-08-2015 ರಂದು 5-30 ಪಿಎಂಕ್ಕೆ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:113/15 ಕಲಂ;110(ಇ)(ಜಿ) ಸಿ.ಅರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡೆನು, 
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 223/2015 ಕಲಂ. 41(1)(ಡಿ), 102 ಸಿ.ಆರ್.ಪಿ.ಸಿ. ಮತ್ತು 98 ಕೆ.ಪಿ. ಕಾಯ್ದೆ:.

ದಿ:28-08-2015 ರಂದು ಬೆಳಗಿನಜಾವ 04-15 ಗಂಟೆಗೆ ಫಿರ್ಯಾದಿದಾರರಾದ ಹೊನ್ನಪ್ಪ ತಂದೆ ಬಸಪ್ಪ ಕನಕಗಿರಿ ಸಾ: ಬೆಳವಿನಾಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿ:28-08-2015 ರಂದು ಬೆಳಗಿನಜಾವ 03-30 ಗಂಟೆಯ ಸುಮಾರಿಗೆ ನಾನು ನಮ್ಮ ಪಂಪಸೆಟ್ದಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ ಬೆಳವಿನಾಳ ಗ್ರಾಮದಲ್ಲಿರುವ ಮನೆಗೆ ಬರಲು ನಮ್ಮೂರಿನ ಸಿದ್ದಲಿಂಗಯ್ಯ ಸ್ವಾಮಿ ಕಿರಾಣಿ ಅಂಗಡಿ ಮುಂದೆ ಹೊರಟಿದ್ದಾಗ ನಾಯಿಗಳು ಒದರಾಡುತ್ತಿದ್ದವು ಆಗ ಅತ್ತ ಇತ್ತ ನೋಡಿದಾಗ ಓರ್ವ ವ್ಯಕ್ತಿ ತನ್ನ ಹೆಗಲ ಮೇಲೆ ಒಂದು ಸಿಮೆಂಟ್ ಚೀಲದಲ್ಲಿ ಏನೋ ಹೊತ್ತುಕೊಂಡು ಮೇನರೋಡ ಕಡೆಗೆ ಹೊರಟಿದ್ದನು. ಆಗ ನಾನು ಆತನಿಗೆ ನೀನು ಯಾರು ಯಾವ ಊರು ಇಲ್ಲಿಗೇಕೆ ಬಂದಿರುವೆಂದು ಕೇಳಿದಾಗ ಆತನು ಏನು ಮಾತನಾಡದೇ ಹಾಗೇಯೇ ಹೊರಟನು. ಆಗ ಆತನ ಮೇಲೆ ಸಂಶಯ ಬಂದು ನೋಡಲಾಗಿ ಆತನ ಚೀಲದಲ್ಲಿ ಕಬ್ಬಿಣದ ತುಂಡುಗಳಿದ್ದವು. ಆಗ ನಾನು ಬರ್ರೆಪ್ಪೋ ಬರ್ರಿ ಅಂತಾ ಕೂಗಾಡಿದಾಗ ನಮ್ಮೂರಿನ ಬಸವರೆಡ್ಡಿ ಮತ್ತು ಖಾದರಸಾಬ ಹೊಸೂರ ಇವರುಗಳು ಬಂದರು. ಆಗ ಆತನು ನಮ್ಮನ್ನು ನೋಡಿ ಓಡೋಡಿ ಹೊರಟು ಮುಂದೆ ರೋಡ ಹತ್ತಿರ ಹೋಗಿ ಮುಕ್ಕರಿಸಿ ಬಿದ್ದನು. ಆಗ ಅವನಿಗೆ ನಾವು ಹಿಡಿದು ವಿಚಾರಿಸಿದಾಗ ಅವನು ತನ್ನ ಹೆಸರು ಪಂಪಣ್ಣ ತಂದೆ ಇಂದ್ರಪ್ಪ ಆಗೋಲಿ. ವಯಸ್ಸು: 30 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ: ಇಂದಿರಾನಗರ ತಾ: ಕೊಪ್ಪಳ ಅಂತಾ ಹೇಳಿದನು. ಆಗ ಕಬ್ಬಿಣದ ಸಾಮಾನುಗಳನ್ನು ಎಲ್ಲಿಂದ ತಂದಿರುವೆಂದು ಕೇಳಿದಾಗ ಆತನು ಎನು ಹೇಳಲಿಲ್ಲ. ಆತನು ಕಳ್ಳತನ ಮಾಡಿದ ಕಬ್ಬಿಣದ ತುಂಡುಗಳನ್ನು ತೆಗೆದುಕೊಂಡು ಹೊರಟಿರುವುದಾಗಿ ಖಚಿತವಾಯಿತು. ನಂತರ ಆತನಿಗೆ ನಾವು ಮಾಲು ಸಮೇತ ಕರೆದುಕೊಂಡು ಬಂದಿರುತ್ತೇವೆ. ಕಾರಣ ಸದರಿ ಪಂಪಣ್ಣ ತಂದೆ ಇಂದ್ರಪ್ಪ ಆಗೋಲಿ. ವಯಸ್ಸು: 30 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ: ಇಂದಿರಾನಗರ ತಾ: ಕೊಪ್ಪಳ ಇತನು ಸುಮಾರು 600=00 ರೂ. ಬೆಲೆಬಾಳುವ ಕಬ್ಬಿಣದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಹೋಗುವಾಗ ಸಿಕ್ಕಿರುತ್ತಾನೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Friday, August 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 222/2015 ಕಲಂ. 78(3) Karnataka Police Act.
ದಿನಾಂಕ:27-08-2015 ರಂದು ಸಾಯಂಕಾಲ 6-10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಗ್ರಾಮ ಪಂಚಾಯತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ. ಅಂತಾ ಕೂಗುತ್ತಾ ಹಣ ಪಡೆದು ನಂಬರ ಬರೆದು ಕೊಡುವ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಿತ್ತರಂಜನ್.ಡಿ. ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 675=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಹಾಗೂ ಒಂದು ಜೆನ್ ಕಂಪನಿಯ ಮೊಬೈಲ್ ಅಂಕಿ 300=00 ರೂ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದ ಮಟಕಾ ಚೀಟಯನ್ನು ಮುತ್ತಾಳ ಗ್ರಾಮದ ಚನ್ನಪ್ಪ ತೋಟದ ಎಂಬುವವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 275/2015 ಕಲಂ. 341, 323, 504, 506 ಸಹಿತ 34 ಐ.ಪಿ.ಸಿ:.
ದಿನಾಂ:- 27-08-2015 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗರಾಜ ತಂದೆ ನಿಂಗಪ್ಪ ಅಗಸರ, ವಯಸ್ಸು 32 ವರ್ಷ, ಉ: ಒಕ್ಕಲುತನ ಸಾ: ದಾಸನಾಳ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ರೈತರ ಅನುಕೂಲಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬ್ಯಾಂಕ್ ಪಾಸ್ ಬುಕ್ ನ್ನು ಮಾಡಿಸಿಕೊಡುತ್ತೇನೆ.  ನನ್ನ ಹತ್ತಿರ ನಮ್ಮ ಗ್ರಾಮದ ಅಮರೇಶಪ್ಪ ಈತನ ಮಗನಾದ ಬಸವರಾಜನ ಪಾಸ್ ಬುಕ್ ಇದ್ದು, ಅದನ್ನು ವಾಪಸ್ ಕೊಟ್ಟಿದ್ದೆನು.  ಇಂದು ದಿನಾಂಕ:-27-08-2015 ರಂದು ಬೆಳಿಗ್ಗೆ 08:30 ಗಂಟೆಯ ಸುಮಾರಿಗೆ ನಾನು ರೋಡಿನಲ್ಲಿ ಮದ್ದಾನಪ್ಪನ ಹೋಟಲ್ ಹತ್ತಿರ ಹೋಗುವಾಗ ನಮ್ಮ ಗ್ರಾಮದ (1) ಅಮರೇಶಪ್ಪ ತಂದೆ ಸಿದ್ದಪ್ಪ ರಾಮದುರ್ಗ 66 ವರ್ಷ (2) ಈಶಪ್ಪ ತಂದೆ ಸಿದ್ದಪ್ಪ ರಾಮದುರ್ಗ, 60 ವರ್ಷ, (3) ಸಿದ್ದಪ್ಪ ತಂದೆ ಅಮರೇಶಪ್ಪ ರಾಮದುರ್ಗ (4) ಶ್ರೀಕಾಂತ ತಂದೆ ಈಶಪ್ಪ, ವಯಸ್ಸು 27 ವರ್ಷ, ಲಿಂಗಾಯತ ಇವರುಗಳು ಕೂಡಿಕೊಂಡು ಬಂದು ನನ್ನನ್ನು ಅಕ್ರಮವಾಗಿ ತಡೆದು ಲೇ ಸೂಳೇ ಮಗನೇ ನಿನ್ನದು ಬಹಳಾ ಆಗಿದೆ ಅಂತಾ ಬೈದು ಕೈಗಳಿಂದ ಹೊಡಿ-ಬಡಿ ಮಾಡಿದ್ದು, ನನಗೆ " ಇನ್ನೊಮ್ಮೆ ನೀನು ನಮ್ಮ ಹುಡುಗನ ಪಾಸ್ ಬುಕ್ ಏನಾದರೂ ಕೇಳಿದರೆ ನಿನ್ನನ್ನು ಜೀವ ಸಹಿತ ಮುಗಿಸಿಬಿಡುತ್ತೇವೆ: ಅಂತಾ ಜೀವದ ಬೆದರಿಕೆ ಹಾಕಿದರು. ಈ ವಿಷಯವನ್ನು ನನ್ನ ಅಣ್ಣನಿಗೆ ತಿಳಿಸಿ ತಡವಾಗಿ ದೂರು ನೀಡಿರುತ್ತೇನೆ. ಕಾರಣ 4 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 151/2015 ಕಲಂ. 379 ಐ.ಪಿ.ಸಿ:
ದಿನಾಂಕ:27-08-2015 ರಂದು ರಾತ್ರಿ 8-30 ಗಂಟೆಗೆ ಪಿರ್ಯಾಧಿದಾರರಾದ ಗುರುಪಾದಪ್ಪ ತಂದೆ ಪರಪ್ಪ ಜಾಡರ ವಯಾ: 56 ವರ್ಷ ಜಾತಿ: ಜಾಡರ ಉ: ಕೆ.ಎಸ್.ಆರ್.ಟಿ.ಸಿ ಡ್ರೈವರ್ ಸಾ: ಇಂದಿರಾ ಕಾಲೋನಿ ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಪಿರ್ಯಾಧಿಯ ಸಾರಾಂಶವೆನೆಂದರೆ ಪಿರ್ಯಾದಿಯು ತನ್ನ ಉಪಯೋಗಕ್ಕಾಗಿ ಒಂದು ಬಜಾಜ್ ಪ್ಲಾಟಿನಾ 125  ಸಿ.ಸಿ ಮೋಟಾರ ಸೈಕಲ್ ನಂ:ಕೆ.ಎ-37/ ಆರ್-6573, ಇದರ ಇಂಜಿನ ನಂ JKMBSM61229, ಚೆಸ್ಸಿ ನಂ-MD2DDJKZZSWM15472 ನೇದ್ದನ್ನು ಇಟ್ಟುಕೊಂಡಿದ್ದು. ಸದರಿ ಮೋಟಾರ ಸೈಕಲ್ ಅಂ.ಕಿ.48,000-00 ರೂ:ಗಳಷ್ಟು ಆಗಬಹುದು. ಸದರಿ ಮೋ.ಸೈ.ನ್ನು ದಿನಾಂಕ:07-08-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಟ್ಟಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:151/2015 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
4) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 137/2015 ಕಲಂ. 143, 353, 323, 504, 506 ಸಹಿತ 149 ಐ.ಪಿ.ಸಿ:

ದಿನಾಂಕ 27-08-2015 ರಂದು ಸಂಜೆ 7-30 ಗಂಟೆಗೆ ಮೇಲ್ಕಂಡ ಫೀರ್ಯಾಧಿದಾರನು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಕೊಟ್ಟಿದ್ದು, ಅದರ ಸಾರಂಶವೇನೆಂದರೆ,  ನಿನ್ನೆ ದಿನಾಂಕ 26-08-2015 ರಂದು ನನ್ನನ್ನು ಕನಕಗಿರಿ ಗ್ರಾಮದ ಶ್ರೀ ಶಿವಯೋಗಿ ಚನ್ನಮಲ್ಲ ಹಿ.ಪ್ರಾ.ಶಾಲೆ ಯಲ್ಲಿ ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಟಗಳ ನೀಣರ್ಾಯಕರಾಗಿ ನೇಮಕ ಮಾಡಿದ್ದ ಪ್ರಕಾರ ಬಂಕಾಪೂರ ಗ್ರಾಮದ ಸ.ಹಿ. ಪ್ರಾ. ಶಾಲೆಯ ಬಾಲಕಿಯರು ಹಾಗೂ ಕನಕಗಿರಿ ಗ್ರಾಮದ ಶ್ರೀ ಶಿವಯೋಗಿ ಚನ್ನಮಲ್ಲ ಹಿ.ಪ್ರಾ.ಶಾಲೆಯ ಬಾಲಕಿಯರ ನಡುವೆ ಖೋ.ಖೋ. ಪಂದ್ಯಾವಳಿಯನ್ನು ಚನ್ನ ಮಲ್ಲ ಹಿ.ಪ್ರಾ.ಶಾಲೆ ಅಂಗಳದಲ್ಲಿ ಆಟ ಆಡುಸುತ್ತಿದ್ದಾಗ ಕನಕಗಿರಿಯ ಶ್ರೀ ಶಿವಯೋಗಿ ಚನ್ನಮಲ್ಲ ಹಿ. ಪ್ರಾ. ಶಾಲೆಯ ಬಾಲಕಿಯರು ವಿಜೇತರಾಗಿದ್ದು, ಬಂಕಾಪೂರ ಶಾಲೆಯ ಬಾಲಕಿಯರು ಸೋತ್ತಿದ್ದರಿಂದ ಅಲ್ಲಿಯೇ ನಿಂತಿದ್ದ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾಧಿದಾರನಿಗೆ ಏನಲೇ ಮಾಸ್ತರ್ ಸರಿಯಾಗಿ ತೀಪರ್ು ಕೊಡುವದಕ್ಕೆ ಬರುತ್ತೇನೇಲೆ ಈ ಖೋ.ಖೋ. ಪಂದ್ಯಾವಳಿಯಲ್ಲಿ ಬಂಕಾಪೂರ ಹುಡುಗಿಯರು ಗೆಲ್ಲುತ್ತಾರೆ, ಅವರ ಕಡೆ ತೀಪರ್ು ಕೊಡಲೇ ಸೂಳೇ ಮಗನೇ, ನಿನಗೆ ಸರಿಯಾಗಿ ತೀಪರ್ು ಕೊಡುವುದಕ್ಕೆ ಬರುವದಿಲ್ಲಲೇ ಸೂಳೇ ಮಗನೇ ಅಂತಾ ಬೈಯುತ್ತಾ ಆರೋಪಿತರು ಫೀರ್ಯಾಧಿದಾರನ ಅಂಗಿಯ ಕೊಳ ಪಟ್ಟಿಯನ್ನು ಗಟ್ಟಿಯಾಗಿ ಹಿಡಿದು ಕೈಯಿಂದ ಕಪಾಳಕ್ಕೆ, ಹೊಟ್ಟೆಗೆ, ಎದೆಗೆ ಜೋರಾಗಿ ಗುದ್ದಿದನು. ಮತ್ತು ನೆಲಕ್ಕೆ ಕೆಡವಿ ಕಾಲಿಗೆ ಹೊಟ್ಟೆಗೆ, ತೊಡೆಗೆ, ತಲೆಗೆ ಜೋರಾಗಿ ಕಾಲಿನಿಂದ ಒದ್ದು ಈ ಸಲಾ ಉಳಿದಿಯೇಲೇ ಮಾಸ್ತರ ಇನ್ನೋಮ್ಮೇ ನಮ್ಮ ಊರವರ ಕಡೆ ತೀಪು ಕೊಡದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಓಡಿ ಹೋದರು. ಈ ಜಗಳದಲ್ಲಿ ಫಿರ್ಯಾಧಿಯ ಕೊರಳಲ್ಲಿದ್ದ 2 ತೊಲೆ ಬಂಗಾರ ಮತ್ತು 1 ತೊಲೆ ಬಂಗಾರ ಎಲ್ಲಿಯೋ ಬಿದ್ದು ಹೋಗಿರುತ್ತದೆ. ಈ ಘಟನೆಯನ್ನು ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಅನುಮತಿ ಪಡೆದು ಈ ದಿವಸ ಠಾಣೆಗೆ ಬಂದಿರುತ್ತೇನೆ ಕಾರಣ ತನಗೆ ಕರ್ತವ್ಯಕ್ಕೆ ಅಡೆ-ತಡೆ ಮಾಡಿ ಕೈಯಿಂದ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದವನ ಮೇಲೆ ಕೇಸ್ ಮಾಡಬೇಕೆಂದು ಕೊಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Thursday, August 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 220/2015 ಕಲಂ. 78(3) Karnataka Police Act.
ದಿನಾಂಕ:26-08-2015 ರಂದು ಸಾಯಂಕಾಲ 6-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಚಿಕ್ಕಬೊಮ್ಮನಾಳ ಗ್ರಾಮದ ಬಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಮೇಶ ಪೂಜಾರಿ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಹೆಚ್.ಸಿ-90 ರಾಜಾಸಾಬ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 740=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಪೆನ್ನು ಅವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 221/2015 ಕಲಂ. 87 Karnataka Police Act.
ದಿ: 26.08-15 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಉಪಲಾಪೂರ ಗ್ರಾಮದ ಮಸೀದಿ ಹತ್ತಿರದ ಅಗಸಿ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 6 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 1550=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 94/2015 ಕಲಂ. 279, 337 ಐ.ಪಿ.ಸಿ:

 ದಿನಾಂಕ: 26-08-2015 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಪ್ಯಾಸೇಂಜರ್ ಆಟೋ ನಂ. ಕೆಎ-26/ಎ-1513 ನೇದ್ದರಲ್ಲಿ ಪಿರ್ಯಾದಿದಾರನನ್ನು ಕರೆದುಕೊಂಡು ಯಲಬುರ್ಗಾ-ಮುಧೋಳ ರಸ್ತೆಯ ಮೇಲೆ ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹಳ್ಳದ ಬ್ರಿಡ್ಜ ದಾಟಿ ಸ್ವಲ್ಪ ಮುಂದುಗಡೆ ತಿರುವಿನಲ್ಲಿ ಹೋಗುತ್ತಿರುವಾಗ ಪ್ಯಾಸೇಂಜರ್ ಆಟೋ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಆರೋಪಿತನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, August 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 184/2015 ಕಲಂ  78(3) Karnataka Police Act.
ದಿನಾಂಕ. 25-08-2015 ರಂದು ಅಗಳಕೇರಾ ಗ್ರಾಮದಲ್ಲಿ ಗ್ರಾಮ ಪಂಚಾಯತ ಮುಂದೆ ಹುಲಗಿ ಗಂಗಾವತಿ ರಸ್ತೆಯ ಮೇಲೆ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ ಜೂಜಾಟದ ಸಾಮಗ್ರಿಗಳಾದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 905=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಮಂಡಿದ್ದು ಇರುತ್ತದೆ.
2)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 197/2015 ಕಲಂ  78(3) Karnataka Police Act.
ಇಂದು ದಿನಾಂಕ: 25-08-2015 ರಂದು ರಾತ್ರಿ 8-30 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 25-08-2015  ರಂದು 19-00 ಗಂಟೆಗೆ ಆರೋಪಿತನಾದ (01) ದ್ಯಾವಣ್ಣ ತಂದೆ ಯಂಕಪ್ಪ  ಈತನು ಗಂಗಾವತಿ ನಗರದ ಗೌಸಿಯಾ ಕಾಲೋನಿಯ ಜುಮ್ಮಾ ಮಸೀಧಿ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿ ವ್ಯಕ್ತಿಯ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ದ್ಯಾವಣ್ಣ ತಂದೆ ಯಂಕಪ್ಪ  ಈತನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 450-00. (02) ಮಟಕಾ ನಂಬರ ಬರೆದ ಒಂದು ಚೀಟಿ. (03) ಒಂದು ಬಾಲ್ ಪೆನ್ನು ಹಾಗೂ (04) ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 7-00 ಪಿ.ಎಂ. ದಿಂದ 8-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಂಡು ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದು.  ಸದರಿ ಕೃತ್ಯವು ಕಲಂ: 78(III) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬರುತ್ತಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 192/2015 ಕಲಂ. 78(3) Karnataka Police Act.
ದಿನಾಂಕಃ-25-08-2015 ರಂದು ರಾತ್ರಿ 20-30 ಗಂಟೆಗೆ ಶ್ರೀ ನಿಂಗಪ್ಪ ಪಿ.ಎಸ್.ಐ ಕಾರಟಗಿ ಠಾಣೆ ಇವರು ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ ಇಂದು ದಿನಾಂಕಃ-25-08-2015 ರಂದು ಮಾಹಿತಿಯ ಪ್ರಕಾರ ಮಾನ್ಯ ಪಿ.ಎಸ್.ಐ ಸಾಹೇಭರು ಮತ್ತು ಸಿಬ್ಬಂದಿಯವರು ಮೈಲಾಪೂರ ಗ್ರಾಮಕ್ಕೆ ಹೋಗಿ ಮೈಲಾಪೂರ ಗ್ರಾಮದಲ್ಲಿರು ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ರಾತ್ರಿ 6-35 ಗಂಟೆಯ ಸುಮಾರಿಗೆ ಸಾರ್ವಜನಿಕರಿಗೆ ಮೋಸ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ 1) Doddanagouda S/o Ayyanagouda Malipatil Age- 56, R/o Mailapura 2) Shankarappa s/o Basanna Adapura age-60 R/o Mailapura tq- Gangavati 3)Sharanappa @ Sanna Sharanappa s/o Hire Iranna Idiger Age- 30 R/o Mailapura tq- Gangavati ಇವರ ಮೇಲೆ ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಹಿಡಿದು ಸಿಕ್ಕ ಆರೋಪಿತರಿಂದ ಮಟ್ಕಾ ಜೂಜಾಟದ ನಗದು ಹಣ ರೂ. 7010/- ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಸದರಿ ಆರೋಪಿತರು ತಾವು ಬರೆದ ಮಟ್ಕಾ ಪಟ್ಟಿ ಮತ್ತು ಹಣವನ್ನು ಮಲಾಪೂರ ಗ್ರಾಮದ ಲಕ್ಷಪ ತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿ ಇದ್ದ ಮೂಲ ಪಂಚನಾಮೆ ಮತ್ತು ವರದಿಯನ್ನು ನೀಡಿದ ಆಧಾರದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 272/2015 ಕಲಂ. 78(3) Karnataka Police Act & 420 IPC.

ದಿನಾಂಕ: 25-08-2015 ರಂದು ರಾತ್ರಿ 11:30 ಗಂಟೆಗೆ ಶ್ರೀ ಆಂಜನೇಯ ಡಿ.ಎಸ್. ಪಿ.ಎಸ್.ಐ. ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 25-08-2015 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರು ಗಂಗಾವತಿ ಇವರ ಮಾರ್ಗದರ್ಶನದಲ್ಲಿ ಮರಳಿ ಗ್ರಾಮದಲ್ಲಿ ದ್ಯಾಮವ್ವನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮೋಸ ಮಾಡುವ ಉದ್ದೇಶದಿಂದ ಮಟಕಾ ಜೂಟಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಪಿಸಿ 100, 293 287, 195 ಹಾಗೂ ಎ.ಪಿ.ಸಿ. ಬಾಸ್ಕರ ರವರೊಂದಿಗೆ ಸರಕಾರಿ ಜೀಪ್ ನಂ: ಕೆ.ಎ-37/ಜಿ-262 ನೇದ್ದರಲ್ಲಿ ಠಾಣೆಯಿಂದ ಸಂಜೆ 7:30 ಗಂಟೆಗೆ ರಾಯಚೂರ ರಸ್ತೆಯ ಮಾರ್ಗವಾಗಿ ಮರಳಿ ಕಡೆಗೆ ಹೋಗಿ ಊರ ಹೊರಗೆ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿ ನಡೆದುಕೊಂಡು ಹೋಗಿ ದ್ಯಾಮವ್ವನ ಗುಡಿ ಹತ್ತಿ ಕತ್ತಲ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ನಸೀಬದ ಮಟಕಾ ಜೂಜಾಟ ಅಂತಾ ಕೂಗುತ್ತಾ ಮಟಕಾ ನಂಬರುಗಳನ್ನು ಬರೆದುಕೊಡುತ್ತಿದ್ದು ಆಗ ಸಮಯ ರಾತ್ರಿ 8:00 ಗಂಟೆಯಾಗಿದ್ದು ಕೂಡಲೇ ದಾಳಿ ಮಾಡಲು ಮಟಕಾ ನಂಬರ್ ಬರೆದುಕೊಡುತ್ತಿದ್ದ ವ್ಯಕ್ತಿಯು ಸಿಕ್ಕಿಬಿದ್ದಿದ್ದು ಅವನ ಹೆಸರು ವಿಚಾರಿಸಲು ದುರುಗಪ್ಪ ತಂದೆ ಅಮಾಜೆಪ್ಪ ವಯಸ್ಸು: 52 ವರ್ಷ ಜಾತಿ: ನಾಯಕ, ಸಾ: ಮರಳಿ ಅಂತಾ ತಿಳಿಸಿದ್ದು ಅವನ ಅಂಗ ಜಡ್ತಿ ಮಾಡಲಾಗಿ ಮಟಕಾ ಜೂಜಾಟದ ನಗದು ಹಣ 1640-00 ರೂ, ಮಟಕಾ ಸಾಮಾಗ್ರಿ ದೊರೆತಿದ್ದು ಸದರಿ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ವಿಚಾರಿಸಲು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದರಿಂದ ದಾಳಿಯಲ್ಲಿ ಸಿಕ್ಕ ವ್ಯಕ್ತಿ ಹಾಗೂ ಮುದ್ದೆಮಾಲನ್ನು ವಶಕ್ಕೆ ತಗೆದುಕೊಂಡು ಈ ಬಗ್ಗೆ ರಾತ್ರಿ 8:00 ಗಂಟೆಯಿಂದ 9:00 ಗಂಟೆಯವರಗೆ ಸ್ಥಳದಲ್ಲಿಯೇ ನಿರ್ವಹಿಸಿ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು ಸಲ್ಲಿಸಿದ್ದು ಇರುತ್ತದೆಅಂತಾ ಮುಂತಾಗಿ ಸಾರಾಂಶ  ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇದೆ.

Tuesday, August 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 162/2015 ಕಲಂ  143, 147, 148, 448, 427, 504, 506, 307, 395 ಸಹಿತ 149 ಐ.ಪಿ.ಸಿ:.
ದಿ: 24-08-2015 ರಂದು ಮಧ್ಯಾಹ್ನ 2-10 ಗಂಟೆ ಸುಮಾರಿಗೆ ಫಿರ್ಯಾದಿ ಜಾಫರಖಾನ್ ತಂದೆ ಹಬೀಬಖಾನ್ ಸಾ: ಹಮಾಲರ ಕಾಲೋನಿ ಕೊಪ್ಪಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿ: 24-08-15 ರಂದು ಮುಂಜಾನೆ 8-00 ಗಂಟೆಯಿಂದ 8-10 ಗಂಟೆ ಸುಮಾರಿಗೆ ಫಿರ್ಯಾದಿದಾರರು ಹಾಗೂ ಅವರ ಮಕ್ಕಳು ಕೂಡಿಕೊಂಡು ನಗರದ ಶಾದಿ ಮಹಲ್ ಮುಂದೆ ಇರುವ ಜಾಗೆಯಲ್ಲಿ ಹಾಕಿದ್ದ ಹಣ್ಣಿನ ಅಂಗಡಿಯಲ್ಲಿದ್ದಾಗ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈಧಾಡುತ್ತಾ, ಫಿರ್ಯಾದಿದಾರರ ಮಕ್ಕಳಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗಾಯಗೊಳಿಸಿ ನಂತರ ಎರಡು ಜೆ.ಸಿ.ಬಿ. ನಂ: ಕೆಎ-37/ಎ-1004 ಮತ್ತು ಕೆ.ಎ-26/ಎಂ-5710 ನೇದ್ದವುಗಳಿಂದ ಹಣ್ಣಿನ ಅಂಗಡಿಯನ್ನು ಮತ್ತು ಅಂಗಡಿಯಲ್ಲಿದ್ದ ಹಣ್ಣು ಹಂಪಲು ಸೇರಿ ಅಂದಾಜು 8,00,000/- ರೂ ಗಳಷ್ಟು ಕೆಡವಿ ಲುಕ್ಸಾನು ಮಾಡಿದ್ದು ಅಲ್ಲದೆ ಅರ್ಷದಖಾನ್ ಈತನ ಕೊರಳಲಿದ್ದ 2 ತೊಲೆ ಬಂಗಾರದ ಚೈನು, ಕೈಯಲ್ಲಿದ್ದ 1 ತೊಲೆ ಬ್ರಾಸಲೇಟ್ ಅಲ್ಲದೇ ಒಂದು ಐ-ಪೋನ್ ಕಂ. ಮೊಬೈಲ್ ನಂ: .06 [64 ಜಿ.ಬಿ.] ಇವುಗಳನ್ನು ಸೈಯ್ಯದ ಜಮಾಲುದ್ದಿನ ಮತ್ತು ರಾಜಾವಲಿ ಮುದ್ದಾ ಬಳ್ಳಿ ಇವರು ಬಲವಂತವಾಗಿ ದರೋಡೆ ಮಾಡಿದ್ದು ಹಾಗು ಅಂಗಡಿಯಲ್ಲಿದ್ದ 50,000/- ರೂಗಳ ನಗದನ್ನು ದರೋಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 163/2015 ಕಲಂ  143, 147, 148, 341, 324, 504, 506, 307 ಸಹಿತ 149 ಐ.ಪಿ.ಸಿ:.
ದಿ: 24-08-2015 ರಂದು ಮಧ್ಯಾಹ್ನ 3-15 ಗಂಟೆ ಸುಮಾರಿಗೆ ಫಿರ್ಯಾದಿ ಸಯ್ಯದ ಸಮೀರ ಹುಸೇನಿ ಸಾ: ತೆಗ್ಗಿನಕೇರಿ ಕೊಪ್ಪಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿ: 24-08-15 ರಂದು ಮುಂಜಾನೆ 7-45  ಗಂಟೆಗೆ ಫಿರ್ಯಾದಿದಾರರು ಹಾಗೂ ಮುಸ್ಲಿಂ ಸಮಾಜದ ಶಾದಿ ಮಹಲ್ ಕಮೀಟಿ ಸದಸ್ಯರು ಕೂಡಿಕೊಂಡು ಆರೋಪಿತರು ಅನದೀಕೃತವಾಗಿ ಶಾದಿ ಮಹಲ್ ಜಾಗೆಯಲ್ಲಿ ಹಾಕಕಿಕೊಂಡ ಹಣ್ಣಿನ ಅಂಗಡಿಯನ್ನು ತೆರೆವುಗೊಳಿಸುವಂತೆ ಆರೋಪಿ ಹಾಗೂ ಆತನ ಮಕ್ಕಳಿಗೆ ನೋಟಿಸ್ ನ್ನು ಜಾರಿ ಮಾಡಿ ಕಾಲಿ ಮಾಡಲು ಸಮಯಾವಕಾಶ ನೀಡಿ ಶಾದಿ ಮಹಲ್ ಮುಂದೆ ಇದ್ದ ವಿಜಯ ದರ್ಶಿನಿ ಹೊಟೇಲ್ ಮುಂದೆ ಚಹಾ ಕುಡಿಯಲು ಹೋಗಿದ್ದು, ಬೆಳಗ್ಗೆ 8-10 ಗಂಟೆ ಸುಮಾರಿಗೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ ಕಬ್ಬಿಣದ ರಾಡು ಹಾಗೂ ಕಟ್ಟಿಗೆ ಮತ್ತು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಫಿರ್ಯಾದಿ ಹಾಗೂ ಇತರರಿಗೆ ಒಮ್ಮಿಂದೊಮ್ಮೆಲೆ ಅವಾಚ್ಯ ಶಬ್ದಗಳಿಂದ ಬೈಧಾಡುತ್ತಾ, ಆರೋಪಿತರು ಫಿರ್ಯಾದಿ ಹಾಗೂ ಇತರರಿಗೆ ರಾಡು ಕಟ್ಟಿಗೆಯಿಂದ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ನಸಿರುದ್ದೀನ ಈತನಿಗೆ ಭಾರಿ ರಕ್ತಗಾಯಗೊಳಿಸಿ ಹಾಗೂ ಇತರರಿಗೆ ಸಾದಾ ಮತ್ತು ಬಾರಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.  
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 191/2015 ಕಲಂ. 78(3) Karnataka Police Act & 420 IPC.
ದಿನಾಂಕಃ-24-08-2015 ರಂದು ರಾತ್ರಿ 22-55 ಗಂಟೆಗೆ ಶ್ರೀ ಅಂಜಿನೆಯಪ್ಪ ಪಿ.ಎಸ್.ಐ ಗಂಗಾವತಿ ಸಂಚಾರಿ ಠಾಣೆ ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 24-08-2015 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾಗನಕಲ್ ಗ್ರಾಮದ ವೆಂಕಟೇಶ ಈಳಿಗೆರ ಇವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮೋಸಮಾಡುವ ಉದ್ದೆದಿಂದ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ರಾತ್ರಿ 7-30 ಗಂಟೆಗೆ ದಾಳಿಮಾಡಿದ್ದು ಇಬ್ಬರು ಆರೋಪಿತರಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಆರೋಪಿ ಶರಣಪ್ಪ ತಂದೆ ಸಂಗಪ್ಪ ಕುಂಬಾರ ವಯಾ 39 ವರ್ಷ ಜಾತಿ: ಕುಂಬಾರ ಸಾ: ನಾಗನಕಲ್ ಇತನನ್ನು ದಸ್ತಗಿರಿ ಮಾಡಿಕೊಂಡಿದ್ದು ಸದರಿ ಆರೋಪಿತನಿಂದ ಮಟಕಾ ಜುಜಾಟದ ಹಣ 9700-00 ರೂಪಾಯಿಗಳು, 03 ಮಟಕಾ ನಂಬರು ಬರೆದ ಪಟ್ಟಿ ಮತ್ತು 1 ಬಾಲ್ ಪೆನ್ನು ದೊರೆತಿದ್ದು ಮಟಕಾದ ಪಟ್ಟಿ ಬರೆಯುತ್ತಿದ್ದ ಇನ್ನೊಬ್ಬ ಆರೋಪಿ ಸುರೇಶ ತಂದೆ ವೆಂಕಟೇಶ ಈಳಿಗೆರ ಸಾ: ನಾಗನಕಲ್ ಇತನು ಓಡಿ ಹೋಗಿದ್ದು ಮಟಕಾದ ಪಟ್ಟಿಯನ್ನು ಮಟಕಾದ ಬುಕ್ಕಿಯಾದ ಯೆಸುಬಾಬು ಸಾ: ಚೆಳ್ಳೂರು ಕ್ಯಾಂಪ ಇತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ಸದರಿ ಮಟಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚಾನಾಮೆಯನ್ನು ಇಂದು ದಿನಾಂಕ 24-08-2015 ರಂದು ರಾತ್ರಿ 7-30 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ಪೂರೈಸಿದ್ದು ಸದರಿ ಮೂಲ ದಾಳಿ ಪಂಚನಾಮೆಯನ್ನು ಮತ್ತು ನಗದು ಹಣ, ಮಟಕಾದ ಸಾಮಾಗ್ರಿಗಳನ್ನು ಹಾಗೂ ಆರೋಪಿ ಶರಣಪ್ಪ ತಂದೆ ಸಂಗಪ್ಪ ಕುಂಬಾರ ನನ್ನು ಹಾಜರುಪಡಿಸುತ್ತಿದ್ದು ಸದರಿ 3 ಜನ ಆರೋಪಿತರ ಬಗ್ಗೆ ಕಲಂ: 78(3) ಕೆ.ಪಿ. ಕಾಯ್ದೆಮತ್ತು 420 .ಪಿ.ಸಿ. ಆಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಜರುಗಿಸಲು ಈ ವರದಿಯನ್ನು ನೀಡಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 149/2015 ಕಲಂ. 87 Karnataka Police Act.
ದಿನಾಂಕ 24-08-2015 ರಂದು ರಾತ್ರಿ 7-15 ಗಂಟೆಗೆ ಶ್ರೀ ಆರ್.ಎಸ್. ಉಜ್ಜನಕೊಪ್ಪ ಸಿ.ಪಿ.ಐ. ಸಾಹೇಬರು ಕುಷ್ಟಗಿ ರವರು ಠಾಣೆಗೆ ಬಂದು ಒಂದು ವರದಿ, ಮತ್ತು ಇಸ್ಪೇಟ ಜೂಜಾಟದ ದಾಳಿ ಪಂಚನಾಮೆ 4 ಜನ ಆರೋಪಿತರನ್ನು ಹಾಗೂ ಜೂಜಾಟದ ಹಣ 8210=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಹಿರೇಮನ್ನಾಪೂರ  ಗ್ರಾಮದ ಗ್ಯಾನಪ್ಪನ ಗುಡ್ಡದಲ್ಲಿ ಅಂದರಬಾಹರ ಎಂಬ ಇಸ್ಪೇಟ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಫಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಪುಂಡಪ್ಪ ಎ.ಎಸ್.ಐ ಹೆಚ್.ಸಿ 36, ಪಿಸಿ-117,116,109,407,347,124 ಎ.ಪಿ.ಸಿ-115 ರವರೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ ಆರೋಪಿತರನ್ನು ಹಾಗೂ ಇಸ್ಪೇಟ ಜೂಜಾಟದ ಒಟ್ಟು ಹಣ 8210=00, ಹಾಗೂ 52 ಇಸ್ಪೇಟ ಎಲೆಗಳು ಹಾಗೂ ನಾಲ್ಕು ಮೋಬೈಲ್ ಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಠಾಣೆ ಗುನ್ನೆ ನಂ.: 149/2015 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 150/2015 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ : 24-08-2015 ರಂದು 10-15 ಪಿ.ಎಂ ಗಂಟೆಗೆ ಪಿರ್ಯಾಧಿದಾರನಾದ ರಂಗಪ್ಪ ತಂದೆ ಯಂಕಪ್ಪ ದಾಸರ ಸಾ: ಯಪಲದಿನ್ನಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು ಸದರ ದೂರಿನ ಸಾರಾಂಶವೆನೆಂದರೆ. ದಿನಾಂಕ:24-08-2015 ರಂದು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕಂದಕೂರ ಸೀಮಾದಲ್ಲಿ ಯರೇಹಳ್ಳದ ಹತ್ತಿರ ಪಿರ್ಯಾಧಿ ಅಳಿಯನು ಟ್ರ್ಯಾಕ್ಟರ ಕೆಲಸಕ್ಕೆ ಹೋಗಿದ್ದಾಗ ಟ್ರ್ಯಾಕ್ಟರ ಚಾಲಕನಾದ ಹನುಮಂತಪ್ಪ ತಂದೆ ಮಲ್ಲಣ್ಣ ಮಂಗಳೂರ ಸಾ: ಕಂದಕೂರ ಈತನು ಬಸವರಾಜನಿಗೆ ಟ್ರ್ಯಾಕ್ಟರನ್ನು ನಡೆಸಲು ಹೇಳಿದ್ದು ಆಗ ಬಸವರಾಜನು ಟ್ರ್ಯಾಕ್ಟರ ಡ್ರೈವಿಂಗ ಸೀಟನಲ್ಲಿ ಹತ್ತುವಾಗ ಸದರಿ ಹನುಮಂತಪ್ಪ ಈತನು ಒಮ್ಮಿಂದೊಮ್ಮಲೇ ಟ್ರ್ಯಾಕ್ಟರನ್ನು ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿದ್ದು ಆಗ ಬಸವರಾಜ ಈತನು ಜೋಲಿ ತಪ್ಪಿ ಕೆಳಗೆ ಬಿದ್ದು ಗಾಯ ಮತ್ತು ಒಳಪೆಟ್ಟುಗಳಾಗಿದ್ದು ನಂತರ ಆತನನ್ನು ಚಿಕಿಸ್ತೆ ಕುರಿತು ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಸೇರಿಕೆ ಮಾಡಿದಾಗ ಸಂಜೆ 04-15 ಗಂಟೆಗೆ ಸುಮಾರಿಗೆ ಸದರಿಯವನು ಚಿಕಿಸ್ತೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ವಿಷಯ ತಿಳಿದು ಬಂದು ನೋಡಿ ವಿಷಯ ನಿಜವಿದ್ದು ಕಾರಣ ಸದರಿ ಟ್ರ್ಯಾಕ್ರರ ನಂ: ಕೆ.ಎ-37 ಟಿ.ಎ-120 & ಅದರ ಟ್ರ್ಯಾಲಿ ನಂ: ಕೆ.ಎ-37 ಟಿ.ಎ-121 ನೇದ್ದರ ಚಾಲಕನಾದ ಹನುಮಂತಪ್ಪ ಈತನು ನನ್ನ ಅಳಿಯನಾದ ಬಸವರಾಜನಿಗೆ ಟ್ರ್ಯಾಕ್ಟ್ರರ ನಡೆಸಲು ಹೇಳಿ ಆತನು ಟ್ರ್ಯಾಕ್ಟರ ನಡೆಸಲು ಡ್ರೈವಿಂಗ ಸೀಟ ಮೇಲೆ ಹತ್ತುತ್ತಿದ್ದಾಗ ವಾಹನವನ್ನು ಮುಂದಕ್ಕೆ ನಡೆಸಿ ಅಪಘಾತಪಡಿಸಿದ್ದರಿಮದ ನನ್ನ ಅಳಿಯ ಮೃತ ಪಟ್ಟಿದ್ದು ಕಾರಣ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


 
Will Smith Visitors
Since 01/02/2008