Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 182/2015  ಕಲಂ 34 ಅಬಕಾರಿ ಕಾಯ್ದೆ ಮತ್ತು 188 ಐಪಿಸಿ:.
ದಿ: 27-09-2015 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸತೀಶ ಪಾಟೀಲ್ ಪಿ.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 27-09-2015 ರಂದು ಸಂಜೆ 07-30 ಗಂಟೆಗೆ ಕೊಪ್ಪಳ ನಗರದ ಬಸವೇಶ್ವರ ಸರ್ಕಲ್ ಹತ್ತಿರ ಯಾತ್ರಿ ನಿವಾಸ ಹೊಟೇಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಮಂಜುನಾಥ ಹಾಗೂ ಗಣೇಶ ಕಾಟವಾ  ಸಾ: ಕೊಪ್ಪಳ ಇವರು ಯಾವುದೇ ಅಧೀಕೃತ ಲೈಸನ್ಸ ಇಲ್ಲದೆ, ಅನಧೀಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು, ಸದರಿಯವರು ಗೌರಿ ಗಣೇಶ ಹಬ್ಬದ ಕಾಲಕ್ಕೆ ಇರುವ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ರವರ ಮಧ್ಯಪಾನ ನಿಷೇದ ಆದೇಶವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಅಂತಾ ಆರೋಪಿ, ಮುದ್ದೆಮಾಲು ಸಮೇತ ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 241/15 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ- 27.09.15 ರಂದು 2.30 ಪಿ.ಎಂ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗಾಗಿ ದಾಖಲಾದ ಬಗ್ಗೆ ಎಂ.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಲಕ್ಷ್ಮಣ ಹರಿಜನ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ-27.09.2015 ರಂದು ಮದ್ಯಾನ್ನ 01.30 ಗಂಟೆಗೆ ನಾನು ನನ್ನ ರಾಟಿ ಮಷಿನ್ ರಿಪೇರಿ ಮಾಡಿಸಲು ಅಂತಾ ನನ್ನ ಮೋಟಾರ್ ಸೈಕಲ್ ನಂಬರ್-ಕೆಎ37-ಎಲ್-5701 ನೇದ್ದರಲ್ಲಿ ಹಿಂದೆ ನಮ್ಮೂರ ಆಂಜನೆಯ ಈತನನ್ನು ಕೂಡ್ರಿಸಿಕೊಂಡು ಗಿಣಗೇರಿ ದಾಟಿ ಬಸಾಪುರ ಗ್ರಾಮದ ಸಿಮೆ ದುರಗಮ್ಮ ಗುಡಿಯ ಹತ್ತಿರ  ರಸ್ತೆಯ ಎಡಬಾಜು ಬರುತ್ತಿರುವಾಗ  ಅದೇ ವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ್ ಕೆಎ36 ಎಪ್ 922 ನೇದ್ದರ ಚಾಲಕನು ತನ್ನ ಬಸ್ಸನ್ನು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಒಮ್ಮೆಲೆ ಬಲಗಡೆ ತೆಗೆದುಕೊಂಡು ನನ್ನ ಮೊ.ಸೈಕಲ್ಲಿಗೆ ಟಕ್ಕರ ಕೊಟ್ಟಿದ್ದು ಈ ಅಪಘಾತದಲ್ಲಿ ನನಗೆ ಮತ್ತು ಆಂಜನೇಯನಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಬಸ್ ಚಾಲಕ ಸಿದ್ದಪ್ಪ ಅಂಬಿಗೇರ ರಾಯಚೂರ ಡಿಪೋ ಈತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ವಾಪಸ್ ಠಾಣೆಗೆ ಸಂಜೆ  5.30 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಠಾಣಾ ಗುನ್ನೆ ನಂ 241/2015 ಕಲಂ-279, 337, 338 ಐಪಿಇ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 97/2015  ಕಲಂ 279, 338 ಐ.ಪಿ.ಸಿ:.

ದಿನಾಂಕ: 27-09-2015 ರಂದು ಗಜೇಂದ್ರಗಡ ಕಡೆಯಿಂದ ಬಸ್ ನಂ: ಕೆ.ಎ-27 ಎಫ್.-514 ನೇದ್ದರ ಚಾಲಕನು ತನ್ನ ಬಸನ್ನು ಅತೀ ವೇಗ  ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಮುಂದೆ ಹನಮಸಾಗರ ಬಸ್ ನಿಲ್ದಾಣ ಇನ್ನು  ಸ್ವಲ್ಪ ದೂರದಲ್ಲಿ ರೋಡಿನ ಮೇಲೆ ಸೈಕಲ್ ಮೇಲೆ ಹೊರಟ 10 ವರ್ಷದ ಬಾಲಕ ಜಾವೀದ ತನಿಗೆ ಹಿಂದಿನಿಂದ ಠಕ್ಕರಕೊಟ್ಟು  ಅಪಘಾತಪಡಿಸಿದ್ದು ಅಪಘಾತದಲ್ಲಿ ಬಾಲಕನ ಬಲಗಾಲ ಪಾದಕ್ಕೆ ಬಾರಿ ರಕ್ತಗಾಯವಾಗಿ ಮುರಿದಂತಾಗಿ ಬಾವು ಬಂದಿದ್ದು ಹಾಗೂ ಹಣೆಗೆ, ಮೂಗಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ ಸೈಕಲ್ ಸ್ವಲ್ಪ ಡ್ಯಾಮೇಜ ಆಗಿದ್ದು ಇರುತ್ತದೆ. ಸದರ ಘಟನೆಯನ್ನು ಫಿರ್ಯಾದಿ ಪ್ರತ್ಯಕ್ಷ ಕಂಡಿದ್ದು ನಂತರ ಗಾಯಾಳನ್ನು ಉಪಚಾರ ಕುರಿತು ಹನಮಸಾಗರ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಹೆಚ್ಚಿನ ಲಾಜು ಕುರಿತು ಬಾಗಲಕೋಟ ಆಸ್ಪತ್ರೆಗೆ ಹೊಗಿದ್ದು ಇರುತ್ತದೆ ಕಾರಣ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

Sunday, September 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 98/2015  ಕಲಂ 78(3) Karnataka Police Act.  
ದಿನಾಂಕ: 26-09-2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ತುಮ್ಮರಗುದ್ದಿ ಗ್ರಾಮದಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಬಲಗಡೆ ಇರುವ ಬೇವಿನ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 3 ಜನರು ಸಿಕ್ಕಿ ಬಿದ್ದಿದ್ದು 10 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,110=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪ್ಲಾಸ್ಟೀಕ್ ಬರಕ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಠಾಣಾ ಗುನ್ನೆ ನಂ 98/2015 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 129/15 ಕಲಂ: 363, 109 ಸಹಿತ 34 ಐ.ಪಿ.ಸಿ:.
ದಿನಾಂಕ:26-09-2015 ರಂದು 9-00 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಮ್ಮ ಮಗಳು ವ:15ವರ್ಷ, ಈಕೆಯು ದಿನಾಂಕ:23-09-2015 ರಂದು ಮುಂಜಾನೆ 9-00 ಗಂಟೆಗೆ ಶಾಲೆಗೆ ಹೋಗಿದ್ದು, ಆದರೆ, ಸಾಯಂಕಾಲವಾದರೂ ವಾಪಸ್ ಬಾರದೇ ಇದ್ದುದರಿಂದ ತಾವು ಊರಲ್ಲಿ ವಿಚಾರಿಸಿದ್ದು ಅಲ್ಲದೇ, ಮರುದಿವಸ ಶಾಲೆಯಲ್ಲಿ ಕೇಳಲಾಗಿ ಅವಳು ಅಂದು ಮದ್ಯಾಹ್ನ 12-00 ಗಂಟೆಗೆ ಶಾಲೆಯಿಂದ ಹೋಗಿರುವುದಾಗಿ ತಿಳಿಸಿರುತ್ತಾರೆ. ಈಗ್ಗೆ ಎರಡು ತಿಂಗಳ ಹಿಂದೆ ಆರೋಪಿ ಮಾರುತಿ ಇವನು ಚುಡಾಯಿಸಿದ್ದರಿಂದ ಹಿರಿಯರ ಮುಖಾಂತರ ತಾಕೀತು ಮಾಡಿಸಿದ್ದು, ಮಾರುತಿ ಇವನೇ ಅವರ ಅಣ್ಣ ವಿರೇಶ ಇವನ ಪ್ರಚೋದನೆಯ ಮೇರೆಗೆ ತನ್ನ ಮಗಳನ್ನು ದಿನಾಂಕ:23-09-2015 ರಂದು ಮದ್ಯಾಹ್ನ 12-00 ಗಂಟೆಗೆ ಅಪಹರಿಸಿಕೊಂಡು ಹೋಗಿದ್ದು, ಮಾರುತಿ ಇವನು ಸಹ ಅಂದಿನಿಂದ ಊರಲ್ಲಿ ಇರುವುದಿಲ್ಲಾ.  ಕಾರಣ, ಮಾರುತಿ ಮತ್ತು ವಿರೇಶ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.


Saturday, September 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 180/2015  ಕಲಂ 143, 147, 341, 323, 504, 506 ಸಹಿತ 149 34 ಐ.ಪಿ.ಸಿ:.
ದಿ: 25-09-2015 ರಂದು 10-15 ಪಿ.ಎಮ್ ಕ್ಕೆ ಫಿರ್ಯಾದಿ ನಾಗರಾಜ ಜಂತಕಲ್ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ನಾನು ಹಾಗೂ ನನ್ನ ತಮ್ಮ ಭೀಮಣ್ಣ, ಆತನ ಮಗ ಅನಂತಕುಮಾರ 03 ಜನ ಕೂಡಿ ನಮ್ಮ ಆಸ್ತಿಯ ವ್ಯಾಜ್ಯ ಬಗೆಹರಿಸಿಕೊಳ್ಳಲು ಅಂತಾ ಗವೀಶ್ರಿ ನಗರದ ಮಲ್ಲಪ್ಪ ಕವಲೂರ ಇವರ ಮನೆಗೆ ಹೋಗಿದ್ದು, ಅಲ್ಲಿಗೆ ನಮೂದು ಆರೋಪಿತರು ಸಹ ಬಂದಿದ್ದು, ನಂತರ ನಾವು ವ್ಯಾಜ್ಯ ಬಗೆಹರಿಸಿಕೊಂಡು ಮನೆಯಿಂದ ಹರಗಡೆ ಬಂದು ಸ್ವಲ್ಪ ಮುಂದೆ ಹೋಗುತ್ತಿದ್ದಾಗ, ಆರೋಪಿತರು ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ತಡೆದು ನಿಲ್ಲಿಸಿ ಲೇ ಬೋಸೂಡಿ ಮಕ್ಕಳೆ ನೀವು ಸರಿಯಾಗಿ ಪಾಲು ಮಾಡಿಲ್ಲ, ನಾವು ಆಸ್ತಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅಂತಾ ನಮಗೆ ಗೊತ್ತು ಅಂತಾ ರಮೇಶ ನನಗೆ ಕಪಾಳಕ್ಕೆ ಹೊಡೆದಿದ್ದು, ನಂತರ ನನಗೆ ಮತ್ತು ಭೀಮಣ್ಣನಿಗೆ ಅನಂತಕುಮಾರನಿಗೆ ಸೂಳೆ ಮಕ್ಕಳದು ಬಹಳ ಆಗೈತಿ ಅಂತಾ ಅನ್ನುತ್ತಾ ಇವರಿಗೆ ಮುಗಿಸಿಬಿಟ್ಟರೆ ಆಸ್ತಿ ಎಲ್ಲಾ ನಮ್ಮ ಪಾಲು ಆಗುತ್ತ ಅಂತಾ ನಮಗೆಲ್ಲಾ ಮನಬಂದಂತೆ ಕೈಯಿಂದ ಬಡೆದು ಕಾಲಿನಿಂದ ಒದ್ದು ದುಖಾಪತ್ ಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ದೂರಿನ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದು ಅದೆ.
2) ಕುಕನೂರ ಪೊಲೀಸ್ ಠಾಣೆ ಯುಡಿಅರ್ ನಂ:24/15 ಕಲಂ:174 ಸಿ.ಅರ್.ಪಿ.ಸಿ.

ದಿನಾಂಕ:25-09-2015 ರಂದು 11-00 ಎಎಂಕ್ಕೆ ವರದಿದಾರ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿದ ಒಂದು ವರದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ವರದಿದಾರ ದತ್ತಕ್ಕೆ ಹೋಗಿ ಗಾವರಾಳದಲ್ಲಿ ತನ್ನ ಚಿಕ್ಕಪ್ಪನ ಆಸ್ತಿಗೆ ಹೋಗಿದ್ದು, ಆದರೆ ಮೃತ ಕೋಮಲಾಪುರದಲ್ಲಿಯ ತನ್ನ ತಂದೆಯ ಮನೆತನದ ಜವಾಬ್ದಾರಿಯನ್ನು ನೋಡಿಕೊಂಡಿದ್ದು, ಮೃತನ ತಂದೆ ಸನ್ 2009ರಲ್ಲಿ ಎಸ್.ಬಿ.ಹೆಚ್. ಶಾಖೆ ತಳಕಲ್ ದಲ್ಲಿ ಕೃಷಿ ಉದ್ದೇಶಕ್ಕಾಗಿ ಸಾಲ ಮಾಡಿ, ಮೃತಪಟ್ಟಿದ್ದು, ಅದನ್ನು ತೀರಿಸಲು ಬ್ಯಾಂಕಿನಿಂದ ನೋಟಿಸ್ ಬರುತ್ತಿದ್ದು, ಇದರಿಂದ ಸಾಲ ತೀರಿಸಲು ಆಗದೇ ಜೀವನದಲ್ಲಿ ಜುಗುಪ್ಸೆಗೊಂಡು ಮೃತ ದಿನಾಂಕ:24-09-2015 ರಂದು 11-00 ಪಿಎಂಕ್ಕೆ ತನ್ನ ಮನೆಯಲ್ಲಿ ಸೀರೆಯಿಂದ ಉರುಲು ಹಾಕಿಕೊಂಡಿದ್ದು, ನೋಡಿದ ಹೆಂಡತಿ ಮತ್ತು ತಾಯಿ ಬಾಯಿ ಮಾಡಿದ್ದರಿಂದ ಓಣಿಯ ಜನರು ಬಂದು ಎತ್ತಿ ಹಿಡಿದು ಉರುಲು ಬಿಚ್ಚಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಸರ್ಕಾರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲು ಹೊರಟಾಗ ದಾರಿಯಲ್ಲಿ ದಿನಾಂಕ:25-09-2015 ರಂದು 12-30 ಎಎಂಕ್ಕೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Thursday, September 24, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 179/2015  ಕಲಂ 323, 504, 506 ಸಹಿತ 34 ಐ.ಪಿ.ಸಿ. ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:.
ದಿನಾಂಕ: 23-09-2015 ರಂದು 10-00 ಪಿ.ಎಂ. ಕ್ಕೆ ಫಿರ್ಯಾದಿದಾರ ರಮೇಶ ತಂದೆ ಗವಿಸಿದ್ದಪ್ಪ ಗಿಣಿಗೇರಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ದಿನಾಂಕ: 20-09-2015 ರಂದು 11-00 ಎ.ಎಮ್. ಕ್ಕೆ ಕೊಪ್ಪಳ ನಗರದ ಗವೀಶ್ರೀ ನಗರದ ಕವಲೂರ ಮಲ್ಲಪ್ಪ ಇವರ ಮನೆಯ ಮುಂದೆ ಶ್ರೀ ಚಂದ್ರಪ್ಪ ಜಡಿಯವರಿಗೆ ಸಂಬಂಧಿಸಿದ ಆಸ್ತಿ ವ್ಯಾಜ್ಯ ಬಗೆಹರಿಸಲು ಹೋದಾಗ ಅಲ್ಲಿ ನನ್ನ ತಂದೆಯ ತಮ್ಮನಾದ ಭೀಮಪ್ಪ ಜಂತಕಲ್ ಹಾಗೂ ಅವರ ಮಕ್ಕಳಾದ ಪ್ರವೀಣ ತಂದೆ ಭೀಮಪ್ಪ ಜಂತಕಲ್, ಅನಂತಕುಮಾರ ಕಾಳಪ್ಪ ಜಂತಕಲ್, ವಿನೋದ ನಾಗರಾಜ ಜಂತಕಲ್ ಸಾ: ವಿಕಾಸ ನಗರ ಕೊಪ್ಪಳ ಇವರು  ಸೇರಿ ಅವರಿಗೆ ಸಂಬಂಧವಿಲ್ಲದ ವಿಷಯದಲ್ಲಿ ಬಂದು ನನಗೆ ಏಕಾಏಕಿ ಮಾದಿಗ ಸೂಳೆ ಮಗನ್ನ ಯಾಕ ನ್ಯಾಯಾ ಬಗಿಹರಿಸಲಿಕ್ಕೆ ಕರಿಸಿರಿ ಅಂತಾ ಜಾತಿ ನಿಂದನೆ ಮಾಡಿದ್ದರಿಂದ ನಾನು ಕೇಳಲು ಹೋದರೆ ನಿನಗೆ ಮತ್ತು ನಿನ್ನ ಕುಟುಂಬದವರಿಗೆ ರೋಡಿನಲ್ಲಿ ಪೆಟ್ರೊಲ್ ಹಾಕಿ ಸುಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ, ಎಲ್ಲರೂ ಕೂಡಿ ನನಗೆ ತೊಡೆಯ ಸಂಧಿಯಲ್ಲಿ ಎದೆಗೆ ಕಿವಿಗೆ, ಕಪಾಳಕ್ಕೆ ಹೊಟ್ಟೆಗೆ ಹೊಡಿಬಡಿ ಮಾಢಿರುತ್ತಾರೆ. ಆ ಕಾಲಕ್ಕೆ ನನ್ನ ಕೊರಳಲಿದ್ದ ಬಂಗಾರದ ಚೈನು ಸರ ಕೂಡಾ ಹೋಗಿದ್ದು, ಸದರಿವಯವರು ಹುಬ್ಬಳ್ಳಿಯಿಂದ ರೌಡಿಗಳನ್ನು ಕರೆಯಿಸಿ ನನ್ನ ಮತ್ತು ನನ್ನ ಕುಟುಂಭವರಿಗೆ ಪೆಟ್ರೊಲ್ ಉಗ್ಗಿ ಬೆಂಕಿ ಹಚ್ಚುತ್ತೀವಿ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ ನಮಗೆ ರಕ್ಷಣೆ ನೀಡಬೇಕು ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 92/2015  ಕಲಂ 143,147,148,323,324,504,506, 109 ಸಹಿತ 149.
ದಿನಾಂಕ:23-09-2015 ರಂದು ಬೆಳಿಗ್ಗೆ 11:30 ಗಂಟೆಗೆ ಫಿರ್ಯಾಧಿದಾರರಾದ ಬಸವರಾಜ ತಂದೆ ಫಕೀರಪ್ಪ ನೀಲಗುಂದ. ಸಾ:ಜಾಹಗೀರ ಗುಡದೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ  ಫಿರ್ಯಾದಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ಆರೋಪಿ ಹಾಗೂ ಫಿರ್ಯಾದಿದಾರರಿಗೆ ಪ್ಲಾಟಿನ ವಿಷಯವಾಗಿ ತಕರಾರು ಇರುತ್ತದೆ. ಇಂದು ದಿನಾಂಕ 23-09-2015ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಫಿರ್ಯಾದಿ ತಮ್ಮ ಶಿವರಾಜ ಈತನು ಶ್ರೀ ಶರಣಬಸವೇಶ್ವರ ಗುಡಿಯ ಹತ್ತಿರ ಹೋದಾಗ  ಆರೋಪಿತರಾದ 1) ಹಣಮಂತ.2)ಶಾಂತವ್ವ. 3)ಯಮನೂರಪ್ಪ. ಇವರು  ಶಿವರಾಜನಿಗೆ ಇಲ್ಲಿ ಯಾಕೇ ಅಡ್ಡಾಡುತ್ತೀಲೇ ಸೂಳೇ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆದು ಕಟ್ಟಿಗೆ, ಬಡಿಗೆಯಿಂದ ಪಿರ್ಯಾದಿ ಕಾಲಿಗೆ ಹೊಡೆದು ಹಾಗೂ ಫಿರ್ಯಾದಿ ಅಣ್ಣ ಶರಣಪ್ಪನಿಗೆ ಬಡಿಗೆಯಿಂದ ತಲೆಗೆ ಹೊಡೆದು ರಕ್ತ ಗಾಯ ಮಾಡಿರುತ್ತಾರೆ ಹಾಗೂ ಹಿಂದಿನಿಂದ 4)ದೇವೇಂದ್ರಪ್ಪ 5)ಹುಚ್ಚಪ್ಪ ರವರು ಈ ಸೂಳೇ ಮಕ್ಕಳಿಗೆ ಸಾಹಿಸಿ ಬಿಡು ಅಂತಾ ಪ್ರಚೋದಿಸಿರುತ್ತಾರೆ. ಹಾಗೂ ಜಾಗದ ವಿಷಯವಾಗಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತವಾಗಿ ಬಿಡುವದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 93/2015  ಕಲಂ 143,147,148,323,324,504,506, ಸಹಿತ 149.
ದಿನಾಂಕ:23-09-2015 ರಂದು ಮದ್ಯಾಹ್ನ 14-30 ಗಂಟೆಗೆ ಫಿರ್ಯಾಧಿದಾರರಾದ ಶಾಂತವ್ವ ಗಂಡ ಹನಮಪ್ಪ ನೀಲಗುಂದ ಸಾ:ಜಾಹಗೀರಗುಡದೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಆರೋಪಿ ಹಾಗೂ ಫಿರ್ಯಾದಿದಾರರಿಗೆ ಪ್ಲಾಟಿನ ವಿಷಯವಾಗಿ ತಕರಾರು ಇರುತ್ತದೆ. ಇಂದು ದಿನಾಂಕ 23-09-2015 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಫಿರ್ಯಾದಿಯ ಮಗ ಯಮನೂರಪ್ಪನು ತಮ್ಮ ಮನೆಯ ಮುಂದೆ ನಳದ ಮುಂದೆ ನೀರು ತುಂಬುವಾಗ ತಮ್ಮ ಮನೆಯ ಮುಂದೆ ಎತ್ತುಗಳನ್ನು ಕಟ್ಟಿಹಾಕಿದ್ದು ತಮ್ಮೂರಿನ ಶಿವಪ್ಪ ರವರು ನಳಕ್ಕೆ ನೀರು ತುಂಬಲು ಬಂದಾಗ ಎತ್ತುಗಳು ಗುದ್ದುತ್ತವೆ ಸ್ವಲ್ಪ ದೂರದಿಂದ ಅಡ್ಡಾಡು ಅಂತಾ ಹೇಳಿದ್ದಕ್ಕೆ ಅದಕ್ಕೆ ಅವನು ಅವಾಚ್ಯ ಶಬ್ದಗಳಿಂದ ಬೈದು ಜಗಳ ತೆಗೆದು, ಅವರ ಅಣ್ಣನಾದ ಶರಣಪ್ಪ, ತಮ್ಮನಾದ ಬಸವರಾಜ ನಾವು ಇಲ್ಲೆ ನೀರು ತುಂಬುತ್ತೇವೆ ನಿಮಗೇನು ತೊಂದರೆ? ಆಗುತ್ತದೆಂದು ಅದಕ್ಕೆ ನಿಮ್ಮ ಜಾಗಯೇನು ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ನ್ನ ಮಗನಾದ ಯಮನುರಪ್ಪನಿಗೆ ಶರಣಪ್ಪನು ಬಂದು ಕಲ್ಲಿನಿಂದ ಹೊಡೆದನು. ಮ್ಮ ಮಗನಿಗೆ ತಲೆಗೆ ಗಾಯವಾಗಿದ್ದು ನಂತರ ಲಕ್ಷ್ಮವ್ವ, ಬಸವ್ವ, ಮಹಾದೇವಿ ಮತ್ತು ಮಲ್ಲವ್ವ ಇವರೆಲ್ಲರೂ ಬಂದು ಅವಾಚ್ಯ ಶಬ್ಧಗಳಿಂದ ಬೈದಾಡಿದರು ಮತ್ತು ಕೈಯಿಂದ ಬೆನ್ನಿಗೆ ಮಗೆ ಬಡಿದರು. ಜಾಗದ ವಿಷಯವಾಗಿ ಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದು ಅಂತಾ ಮುಂತಾಗಿ ಫಿರ್ಯಾದಿ ಅದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ.ನಂ. 165/2015  ಕಲಂ 279, 338 ಐ.ಪಿ.ಸಿ:.

ದಿನಾಂಕ: 23-09-2015 ರಂದು ಸಂಜೆ 6-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸದರ ಫಿರ್ಯಾದಿ ಸಾರಂಶವೆನೆಂದರೆ ನಿನ್ನೆ ದಿನಾಂಕ: 22-09-2015 ರಂದು ಮುಂಜಾನೆ ಗಂಗಾವತಿಯಲ್ಲಿ ತಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ಮಣ್ಣಿಗೆ ಹೋಗಿ ಮಣ್ಣಿನ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಾಸ್ ಊರಿಗೆ ಬರಲು ಗಂಗಾವತಿ ಬಸ್ ನಿಲ್ದಾಣದಿಂದ ಬಸ್ ಹತ್ತಿ ಕುಷ್ಟಗಿಗೆ ಹೋರಟಿದ್ದು ಸಾಯಂಕಾಲ 7-30 ಗಂಟೆಗೆ ಬಸ್ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಬಂದಿದ್ದು ಬಸ್ ಚಾಲಕನು ಬಸ್ ನಿಲ್ಲಿಸಿದ್ದರಿಂದ ಪಿರ್ಯಾದಿದಾರನು ಬಸ್ ನಿಂದ ಕೆಳಗೆ ಇಳಿಯುತ್ತಿರುವಾಗ ಸದರಿ ಬಸ್ ಚಾಲಕನು ಒಮ್ಮಿಂದೊಮ್ಮೆಲೆ ಬಸ್ ನ್ನು ಮುಂದಕ್ಕೆ ವೇಗವಾಗಿ ಅಲಕ್ಷ್ಯತನದಿಂದ ನಡೆಸಿದ್ದರಿಂದ ಆತನು ಜೋಲಿ ತಪ್ಪಿ ಕೆಳಗೆ ಬಿದ್ದಿದ್ದು ಅದರಿಂದ ಫಿರ್ಯಾದಿದಾರನಿಗೆ ಬಲ ತೊಡೆಗೆ ಭಾರಿ ಒಳಪೆಟ್ಟಾಗಿದ್ದು ಮತ್ತು ಬಲ ಕಣ್ಣಿನ ಮೇಲೆ ರಕ್ತ ಗಾಯವಾಗಿದ್ದು ನಂತರ ಬಸ್ ನಂಬರ ನೋಡಲಾಗಿ ಕೆ.ಎ-37/ಎಫ್ -406 ಅಂತಾ ಇದ್ದು ಅದರ ಚಾಲಕನು ವಿಜಯಕುಮಾರ ತಂದೆ ಶರಣಗೌಡ ಲೆಕ್ಕಿಹಾಳ ವ: 23 ವರ್ಷ ಸಾ: ಗಟ್ಟಿಗನೂರು ತಾ: ಹುನಗುಂದ ಅಮತಾ ತಿಳಿಸಿದನು. ನಂತರ ತನನ್ನು ಯಾರೋ ಒಂದು ಖಾಸಗಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ನಂತರ ಅವರ ಮಗನಿಗೆ ಫೊನ ಮಾಡಿ ವಿಷಯ ತಿಳಿಸಿ ಅವರ ಮಗನು ನಾನು ಬರುತ್ತೇನೆ ಸದ್ಯ ಫಿರ್ಯಾದಿ ಕೊಡುವದು ಬೇಡ ಅಂತಾ ತಿಳಿಸಿದ್ದರಿಂದ ನಂತರ ಅವರ ಮಗ ನಾಗರಾಜ ಅಳ್ಳಿ ಇತನೊಂದಿಗೆ ವಿಚಾರ ಮಾಡಿ ತಡವಾಗಿ ಬಂದು ಫಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಕಾರಣ ಸದರಿ ಬಸ್ ನಂ: ಕೆ.ಎ.37/ ಎಫ್ – 406 ನೇದ್ದರ ಚಾಲಕನಾದ ವಿಜಯಕುಮಾರ ತಂದೆ ಶರಣಗೌಡ ಲೆಕ್ಕಿಹಾಳ ವ: 23 ವರ್ಷ ಜಾತಿ: ಗಾಣಿಗೇರ :ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-37/ಎಫ್-406 ನೇದ್ದರ ಚಾಲಕ ಸಾ: ಗಟ್ಟಿಗನೂರು ತಾ: ಹುನಗುಂದ ಜಿ: ಬಾಗಲಕೋಟ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಸಾರಾಂ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Wednesday, September 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 95/2015  ಕಲಂ 87 Karnataka Police Act.
ಫಿರ್ಯಾಧಿದಾರರಾದ ಶ್ರೀ ಗಣೇಶ. ಸಿ. ಪಿ.ಎಸ್.ಐ. ಅಳವಂಡಿ ರವರು, ಸಿಬ್ಬಂದಿಯವರು ಮತ್ತು ಪಂಚರು ಕೂಡಿಕೊಂಡು ದಿನಾಂಕ: 22-09-2015 ರಂದು ಸಾಯಂಕಾಲ 6-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬಿಸರಳ್ಳಿ ಗ್ರಾಮದಲ್ಲಿ ಅಲ್ಲಾಸಾಬ ಮಸೂತಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 8 ಜನರು ಸಿಕ್ಕಿದ್ದು, ಆರೋಪಿತರಿಂದ ನಗದು ಹಣ ರೂ. 9,000=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟಿಕ್ ಬಕರ್ಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು, ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ.ನಂ. 164/2015  ಕಲಂ 87 Karnataka Police Act.
ದಿನಾಂಕ 22-09-2015 ರಂದು ಸಂಜೆ 6-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಹುಲಸಗೇರಿ ಗ್ರಾಮದ ದುರುಗಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-108, ಪಿ.ಸಿ-, 117, 116, 344, 124,109,24,393 & ಜೀಪ್ ಚಾಲಕ ಎ.ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 2670=00, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 297/2015  ಕಲಂ 279, 337, 304(ಎ) ಐ.ಪಿ.ಸಿ:.

ದಿನಾಂಕ:- 22-09-2015 ರಂದು ಬೆಳಿಗ್ಗೆ 09:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹಂಪಣ್ಣ ತಂದೆ ಹುಸೇನಪ್ಪ ಕೌತಾಳ, ವಯಸ್ಸು 47 ವರ್ಷ, ಜಾತಿ: ಮಾದಿಗ ಉ: ಕೂಲಿ ಕೆಲಸ ಸಾ: ಗೋರಕಲ್ ತಾ: ಮಾನ್ವಿ ಹಾಲಿವಸ್ತಿ: ವಿದ್ಯಾನಗರ, 5ನೇ ವಾರ್ಡ, ಸಿರವಾರ, ತಾ: ಮಾನ್ವಿ ಜಿಲ್ಲೆ: ರಾಯಚೂರು ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ  ಪ್ರಕಾರ ಇದೆ. “ ನನ್ನ ಅಣ್ಣ ಹುಸೇನಪ್ಪ ಈತನ ಮಗನಾದ ಯಲ್ಲಪ್ಪ ವಯಸ್ಸು 36 ವರ್ಷ ಈತನು ಸುಮಾರು 5-6 ವರ್ಷಗಳಿಂದ ತನ್ನ ಹೆಂಡತಿ ಗಂಗಮ್ಮ ಹಾಗೂ 5 ಜನ ಮಕ್ಕಳೊಂದಿಗೆ ಗೋರಕಲ್ನಿಂದ ಬಂದು ಗಂಗಾವತಿಯಲ್ಲಿ ವಾಸವಾಗಿದ್ದನು. ಯಲ್ಲಪ್ಪನು ಸೀಮೆ ಎಣ್ಣೆ ಸಾಗಿಸುವ ಟ್ಯಾಂಕರನಲ್ಲಿ ಕ್ಲೀನರ ಕೆಲಸ ಮಾಡಿಕೊಂಡಿದ್ದರು.  ಯಲ್ಲಪ್ಪನ ತಂದೆ-ತಾಯಿಗಳು ತೀರಿಕೊಂಡಿರುತ್ತಾರೆ. ದಿನಾಂಕ:- 22-09-2105 ರಂದು ಬೆಳಗಿನಜಾವ 05:00 ಗಂಟೆಯ ಸುಮಾರಿಗೆ ಯಲ್ಲಪ್ಪನು ಕೆಲಸ ಮಾಡುವ ಟ್ಯಾಂಕರ್ ಮಾಲೀಕರು ಫೋನ್ ಮಾಡಿ ತಮ್ಮ ಟ್ಯಾಂಕರ ಹುಬ್ಬಳ್ಳಿಯಿಂದ ಗಂಗಾವತಿಗೆ ಸೀಮೆಎಣ್ಣೆ ತೆಗೆದುಕೊಂಡು ಬರುತ್ತಿರುವಾಗ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಹಿರೇಬೆಣಕಲ್ ಕ್ರಾಸ್ ಹತ್ತಿರ ದಿನಾಂಕ:-  21-09-2015 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಪಲ್ಟಿಯಾಗಿ ಬಿದ್ದು ಯಲ್ಲಪ್ಪನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಶವವನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಹಾಕಲಾಗಿದೆ ಅಂತಾ ತಿಳಿಸಿದರು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಹಿರೇಬೆಣಕಲ್ ಕ್ರಾಸ್ ಹತ್ತಿರ ಕೊಪ್ಪಳ ಕಡೆಯಿಂದ ಬರುವ ರಸ್ತೆಯ ಬಲಗಡೆ ಸೀಮೆಎಣ್ಣೆ ಟ್ಯಾಂಕರ್ ಉರುಳಿ ಬಿದ್ದಿದ್ದು, ನೋಡಲಾಗಿ ಅದು ಟಾಟಾ ಕಂಪನಿ ಇದ್ದು, ನಂಬರ: ಕೆ.ಎ-35/ 1820 ಅಂತಾ ಇತ್ತು. ನಂತರ ಗಂಗಾವತಿಗೆ ಬಂದು ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿದ್ದ ಶವವನ್ನು ನೋಡಲಾಗಿ ಗದ್ದಕ್ಕೆ, ಮುಖಕ್ಕೆ ಗಾಯಗಳಾಗಿ ತಲೆಯ ಹಿಂಭಾಗದಲ್ಲಿ ತೀವ್ರ ಒಳಪಟ್ಟಾಗಿತ್ತು. ನಂತರ ಟ್ಯಾಂಕರ ಚಾಲಕನ ಬಗ್ಗೆ ವಿಚಾರಿಸಲು ಆತನ ಹೆಸರು ಸೈಯ್ಯದ್ ಸಿರಾಜ್ ತಂದೆ ಸೈಯ್ಯದ್ ಅಹ್ಮದ್ ಸಾ: ಪ್ರಶಾಂತ ನಗರ-ಗಂಗಾವತಿ ಅಂತಾ ಇದ್ದು, ಆತನಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ತಿಳಿಯಿತು. ಸ್ಥಳ ಪರಿಶೀಲನೆಯಿಂದ ಮತ್ತು ವಿಚಾರಣೆಯಿಂದ ಕಂಡುಬಂದಿದ್ದೇನೆಂದರೆ, ಟ್ಯಾಂಕರ್ ನಂಬರ: ಕೆ.ಎ-35/ 1820 ನೇದ್ದರ ಚಾಲಕ ಸೈಯ್ಯದ್ ಸಿರಾಜ್ ಮತ್ತು ಕ್ಲೀನರನಾದ ಯಲ್ಲಪ್ಪ ತಂದೆ ಹುಸೇನಪ್ಪ ಸಾ: ಗೋರಕಲ್ ಹಾಲಿವಸ್ತಿ: ಗಂಗಾವತಿ ಇಬ್ಬರೂ ಕೂಡಿಕೊಂಡು ಹುಬ್ಬಳ್ಳಿಯಿಂದ ಟ್ಯಾಂಕರ್ನಲ್ಲಿ ಸೀಮೆ ಎಣ್ಣೆ ತುಂಬಿಕೊಂಡು ಗಂಗಾವತಿಗೆ ಬರುತ್ತಿರುವಾಗ ದಿನಾಂಕ:- 21-09-2015 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಚಾಲಕ ಸೈಯ್ಯದ್ ಸೀರಾಜ್ ಈತನು ಟ್ಯಾಂಕರ್ನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿ ಉರುಳಿ ಬಿದ್ದು ಯಲ್ಲಪ್ಪನು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಚಾಲಕನಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಣ ಮಾನ್ಯರು ಈ ಅಪಘಾತಕ್ಕೆ  ಕಾರಣನಾದ ಟ್ಯಾಂಕರ್ ಚಾಲಕ ಸೈಯ್ಯದ್ ಸಿರಾಜ್ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

Tuesday, September 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 91/2015  ಕಲಂ 87 Karnataka Police Act.
ಇಂದು ದಿನಾಂಕ: 21-09-2015 ರಂದು ಮದ್ಯಾಹ್ನ 15-30 ಗಂಟೆಗೆ ಇಲಕಲ ಚೆಕ್ ಪೋಸ್ಟ ಹತ್ತಿರ ಪಿ.ಎಸ್.ಐ ರವರು ಪೆಟ್ರೋಲಿಂಗ್ದಲ್ಲಿದ್ದಾಗ ಹುಲಗೇರಿ ಗ್ರಾಮದಲ್ಲಿ ಹಳೆ ಬಸ್ ನಿಲ್ದಾಣದ ಹತ್ತಿರ ಸಾರ್ವಕನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹೆಚ್.ಸಿ-11, ಪಿ.ಸಿ-162, 168, 328 ರವರು ಹಾಗೂ ಇಬ್ಬರು ಪಂಚರಾದ 1] ಪ್ರಕಾಶ ಸಾ: ಕಲ್ಲಗೋನಾಳ 2] ಯಂಕನಗೌಡ ಸಾ: ಕಲಗೋನಾಳ ರವರೊಂದಿಗೆ ಹುಲಗೇರಿ ಗ್ರಾಮಹಳೆ ಬಸ್ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರ ಪಂಚರ ಸಮಕ್ಷಮ ದಾಳಿ ಮಾಡಲು 5 ಜನ ಸಿಕ್ಕಿ ಬಿದಿದ್ದು ವಿಚಾರಿಸಲು, 1] ಪ್ರದೀಪ ಆತನ ಕೈಯಲ್ಲಿ 15 ಇಸ್ಪೀಟ್ ಎಲೆಗಳು ಹಾಗೂ 345/- ರೂ/- ಅಂಗಾತವಾಗಿ 17 ಎಲೆಗಳು ಮೇಲಿನ ಎಲೆ ಚೌಕ 9 ಇದ್ದು, ಇನ್ನೊಂದು ಬದಿಗೆ 20 ಎಲೆಗಳು ಅಂಗಾತವಾಗಿ ಬಿದ್ದಿದ್ದು, ಮೇಲಿನ ಎಲೆ ಇಸ್ಪಿಟ್ 6 ಇದ್ದು, ಅದರ ಪಕ್ಕದಲ್ಲಿ ಕಣಕ್ಕೆ ಹಚ್ಚಿದ 205/- ರೂ/- 2] ರವಿ ಆತನಿಗೆ ಸೇರಿದ 420/- ರೂ/-  3] ಮಂಜು ಆತನಿಗೆ ಸೇರಿದ 580/- ರೂ/- 4] ಅಂಬರೇಶ ಆತನಿಗೆ ಸೇರಿದ 505/- ರೂ/- 5] ರಮೇಶ ಆತನ ಸೇರಿದ 575/- ರೂ/- ಹೀಗೆ ಒಟ್ಟು 2630/- ರೂಪಾಯಿಗಳು ದೊರೆತಿದ್ದು ಇರುತ್ತದೆ. ಜಪ್ತ ಮಾಡಿಕೊಂಡು  ರೇಡ ಪಂಚನಾಮೆ ದಿನಾಂಕ: 21-09-2015 ರಂದು ಸಾಯಂಕಾಲ 16-15 ಗಂಟೆಯಿಂದ 17-15 ಗಂಟೆಯವರೆಗೆ ಸ್ಥಳದಲ್ಲಿಯೇ ನಿರ್ವಹಿಸಿ, 5 ಜನ ಆರೋಪಿತರನ್ನು ತಾಬಾಕ್ಕೆ ತೆಗೆದುಕೊಂಡು ವಾಪಾಸ್ ಠಾಣೆಗೆ ಬಂದು 5 ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಸದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 295/2015  ಕಲಂ 498(ಎ), 306 ಐ.ಪಿ.ಸಿ:.  
ದಿನಾಂಕ: 21-09-2015 ರಂದು ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿರೇಶಪ್ಪ ತಂದೆ ಹನುಮಂತಪ್ಪ ಭೋವಿ, ವಯಸ್ಸು: 49 ವರ್ಷ ಜಾತಿ: ಭೋವಿ, ಉ: ಗೌಂಡಿ ಕೆಲಸ ಸಾ: ಬಸವಣ್ಣ ಕ್ಯಾಂಪ್ ಸಿದ್ದರ ಓಣಿ ತಾವರಗೇರಾ ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಕೊಟ್ಟಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನನ್ನ ಎರಡನೇಯ ಮಗಳಾದ ಶ್ರೀಮತಿ ಚೆನ್ನಮ್ಮ 24 ವರ್ಷ ಇವಳನ್ನು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಬಸಾಪಟ್ಟಣದ ಹನುಮಂತಪ್ಪ ಎಂಬುವರ ಮಗನಾದ ಯಮನೂರ 26 ವರ್ಷ ಎಂಬುವನೊಂದಿಗೆ ಉಡುಮಕಲ್ ಗ್ರಾಮದಲ್ಲಿ ಸಾಮೂಹಿಕ ಮದುವೆಯನ್ನು ಮಾಡಿದ್ದೆವು. ಮದುವೆಯಾದ ನಂತರ ನನ್ನ ಮಗಳು ಅಳಿಯ ಇಬ್ಬರೂ ಅನ್ಯೊನ್ಯವಾಗಿದ್ದು ಅವರಿಗೆ 1] ಮಹೇಶ 2 ವರ್ಷ 2] 1 ತಿಂಗಳ ಗಂಡು ಮಗು ಇದ್ದು ಮೊದಲನೇಯ ಮಗು ಜನಸಿದ ನಂತರ ಯಮನೂರ ಈತನು ವಿಪರೀತ ಕುಡಿತದ ಚೆಟಕ್ಕೆ ಬಿದ್ದು ದುಡಿಯಲಾರದೇ ಪ್ರತಿದಿವಸ ನನ್ನ ಮಗಳಿಗೆ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕವಾಗಿ ತೊಂದರೆ ಕೊಡುತ್ತಿದ್ದನು. ಈ ಬಗ್ಗೆ ನನ್ನ ಮಗಳು ಅವನ ಕಿರುಕಳವನ್ನು ತಾಳಲಾರದೇ ನನ್ನ ಹತ್ತಿರ ತಿಳಿಸಿದ್ದರಿಂದ ಬಸಾಪಟ್ಟಣದ ಗುರುಹಿರಿಯರ ಸಮಕ್ಷಮದಲ್ಲಿ ಬಗೆಹರಿಸಿದ್ದು ಆದರೂ ಸಹ ತನ್ನ ಪ್ರವೃತ್ತಿಯನ್ನು ಮುಂದುವರಿಸಿದ್ದರಿಂದ ಈಗ್ಗೆ ಸುಮಾರು 6 ತಿಂಗಳ ಹಿಂದೆ ಸುಧಾರಿಸಬಹುದು ಅಂತಾ ತಿಳಿದುಕೊಂಡು ನನ್ನ ಮಗಳು ಮತ್ತು ಅಳಿಯ ಇಬ್ಬರನ್ನು ನಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದೆವು. ದಿನಾಂಕ: 15-08-2015 ರಂದು ನನ್ನ ಮಗಳಿಗೆ ಎರಡನೇಯ ಗಂಡು ಮಗು ಹೆರಿಗೆಯಾದ ನಂತರ ಇಂದು ದಿನಾಂಕ: 21-09-2015 ರಂದು ಬೆಳಿಗ್ಗೆ 8:30 ಗಂಟೆಯ ಸುಮಾರಿಗೆ ನನ್ನ ಅಳಿಯನಾದ ಯಮನೂರ ತಂದೆ ಹನುಮಂತಪ್ಪ ಭೋವಿ 26 ವರ್ಷ ಈತನು ಆಸ್ಪತ್ರೆಗೆ ತೋರಿಸಲೆಂದು ಮಗಳನ್ನು ಮತ್ತು ಕೂಸನ್ನು ಕರೆದುಕೊಂಡು ಬಂದಿದ್ದನು. ನಂತರ ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಬಸಾಪಟ್ಟಣ ಗ್ರಾಮದ ಅಳ್ಳಪ್ಪ ತಂದೆ ಸಣ್ಣೆಪ್ಪ 35 ವರ್ಷ ಇವರು ಪೋನ್ ಮುಖಾಂತರ ನನ್ನ ಮಗಳು ವಿಷ ಸೇವನೆ ಮಾಡಿದ್ದು ಅವಳನ್ನು ನಮ್ಮ ಗ್ರಾಮದ ರೇವಣೇಶ ತಂದೆ ರಾಮಸ್ವಾಮಿ 35 ವರ್ಷ ಹಾಗೂ ಆತನ ತಮ್ಮನಾದ ಭೀಮೇಶ 19 ವರ್ಷ ಇವರೊಂದಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಬಂದಿರುವದಾಗಿ ತಿಳಿಸಿದನು. ಕೂಡಲೇ ನಾನು ಮತ್ತು ನನ್ನ ಹೆಂಡತಿ ಶ್ರೀಮತಿ ಹುಲಿಗೆಮ್ಮ ಇಬ್ಬರೂ ಕೂಡಿ ಆಸ್ಪತ್ರೆಗೆ ಬಂದು ವಿಚಾರಿಸಲು ಅಳ್ಳಪ್ಪನನ್ನು ವಿಚಾರಿಸಲು ಆತನು ತಿಳಿಸಿದ್ದೇನಂದರೆ, ಇಂದು ಮುಂಜಾನೆ 11:00 ಗಂಟೆಯ ನಂತರ ಯಮನೂರ ಈತನು ತಾವರಗೇರಾದಿಂದ ತನ್ನ ಹೆಂಡತಿ ಮಗುವನ್ನು ಕರೆದುಕೊಂಡು ಬಂದು ಮನೆಯಲ್ಲಿ ಅವಳೊಂದಿಗೆ ಜಗಳ ಮಾಡಿದ್ದರಿಂದ ಅವನ ಕಿರುಕಳವನ್ನು ತಾಳಲಾರದೇ ಮನೆಯಲ್ಲಿ ಯಾವುದೋ ಕ್ರಿಮಿನಾಶಕ ಔಷಧ ಸೇವನೆ ಮಾಡಿದ್ದು ಆಗ ಪಕ್ಕದ ಮನೆಯವರು ಕೂಗಾಡಲು ವಿಷಯ ತಿಳಿದು ಎಲ್ಲರೂ ಕೂಡಿ ಒಂದು ಅಟೋದಲ್ಲಿ ಅವಳನ್ನು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕರೆತಂದಾಗ ವೈಧ್ಯರು ಮೃತಪಟ್ಟಿರುವದಾಗಿ  ತಿಳಿಸಿರುವ ಬಗ್ಗೆ ತಿಳಿಸಿದನು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ.ನಂ. 296/2015  ಕಲಂ 279 ಐ.ಪಿ.ಸಿ 187 ಐ.ಎಂ.ವಿ. ಕಾಯ್ದೆ:. 

ದಿನಾಂಕ:- 21-09-2015 ರಂದು ರಾತ್ರಿ 8:00 ಗಂಟೆಗೆ ಶ್ರೀ ಕೆ. ವಂಶಿ ಚಂದ್ರಶೇಖರ, ಮ್ಯಾನೇಜರ್ ಹೆಚ್.ಆರ್. @ ಎಡ್ಮಿ ಮಿನಸ್ಟ್ರೇಟರ್ ಸಿಂಧನೂರ-ಗಂಗಾವತಿ ಟೋಲವೇ ಪ್ರೈ.ಲಿ. ವೆಂಕಟಗಿರಿ ಕ್ಯಾಂಪ್ ಇವರು ಠಾಣೆಗೆ ಹಾಜರಾಗಿ ಒಂದು ಇಂಗ್ಲಿಷನಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ದಿನಾಂಕ: 21-09-2015 ರಂದು ಬೆಳಗಿನ ಜಾವ 00:20 ಗಂಟೆಯ ಸುಮಾರಿಗೆ ಮರಳಿ ಗ್ರಾಮ ಸೀಮಾದಲ್ಲಿ ನಿರ್ಮಾಣ ಹಂತಹದ ಟೋಲ್ ಗೇಟ್ ಸಿಬ್ಬಂದಿಯವರು ಪೋನ್ ಮಾಡಿ ತಿಳಿಸಿದ ಪ್ರಕಾರ ಸ್ಥಳಕ್ಕೆ ಹೋಗಿ ಪರಿಶೀಲಿಸಲು ಮರಳಿ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಟೋಲ್ ಪ್ಲಾಜ ನಿರ್ಮಾಣ ಮಾಡುವ ಕಾಲಕ್ಕೆ ಶ್ರೀರಾಮನಗರ ಕಡೆಯಿಂದ ಒಬ್ಬ ಲಾರಿ ನಂ: ಎ.ಪಿ.-20/ಟಿಬಿ-3588 ನೇದ್ದರ ಚಾಲಕನು ತನ್ನ ಲಾರಿಯನ್ನು ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟೋಲ್ ಬೂತಗೆ ನೇರವಾಗಿ ಟಕ್ಕರು ಕೊಟ್ಟು ಅಪಘಾತ ಮಾಡಿದ್ದರಿಂದ ಟೋಲ್ ಬೂತ್ ಸಂಪೂರ್ಣವಾಗಿ ಡ್ಯಾಮೇಜ್ ಆಗಿದ್ದು ಇರುತ್ತದೆ.  ಕಾರಣ ಈ ಬಗ್ಗೆ ಸದರಿ ಲಾರಿ ನಂ: AP-20/TB-3588 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಇಂಗ್ಲೀಷನಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008