1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 182/2017 ಕಲಂ. 143, 147,
148, 323, 324, 395, 504, 506 ಸಹಿತ 149 ಐ.ಪಿ.ಸಿ:
ದಿನಾಂಕ
22-07-2017 ರಂದು ಸಂಜೆ 4-00 ಗಂಟೆಗೆ ಶ್ರೀ ಖಾಜಾಹುಸೇನ್ ತಂದೆ ಮೆಹಬೂಬಸಾಬ, 51 ವರ್ಷ, ಜಾ: ಮುಸ್ಲಿಂ,
ಉ: ಶಾಮಿಯಾನ ಸಪ್ಲಾಯರ್ ಕೆಲಸ, ಸಾ: ಪ್ರಶಾಂತನಗರ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿಯರ್ಾದಿ
ನೀಡಿದ್ದು ಅದರ ಸಾರಂಶವೇನೆಂದರೆ, ನನ್ನ ಮಗನಾದ ಅಜೀಜ್,
23 ವರ್ಷ ಇವನು ಮೆಕ್ಯಾನಿಕ್ ಇದ್ದು, ಚಾಲಕನಾಗಿಯೂ ಕೆಲಸ ಮಾಡುತ್ತಾನೆ. ನಿನ್ನೆ ದಿನಾಂಕ 21-07-2017 ರಂದು ನಮ್ಮ ಓಣಿಯಲ್ಲಿರುವ
ತಸ್ಲೀಮ್ ತಂದೆ ಸಾಧಿಕ್ಸಾಬ ಇವಳು ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗುತ್ತಿದ್ದು, ಕಾರಣ ನೀನೂ
ನಮ್ಮೊಂದಿಗೆ ಬರಬೇಕೆಂದು ತಿಳಿಸಿದ್ದರಿಂದ ನನ್ನ ಮಗನು ಕಾರನ್ನು ತೆಗೆದುಕೊಂಡು ಅವರನ್ನು ಬಳ್ಳಾರಿಗೆ
ಕರೆದುಕೊಂಡು ಹೋಗಿದ್ದು, ನಂತರ ವಾಪಸ್ ಗಂಗಾವತಿಗೆ ಬಂದಿದ್ದು ಇದೆ. ನಂತರ ರಾತ್ರಿ 9-00 ಗಂಟೆ ಸುಮಾರಿಗೆ ನನ್ನ ಮಗ ಅಜೀಜನಿಗೆ
ಕೈಸರ್ ಮತ್ತಿತರರು ಹೊಡೆಯುತ್ತಿದ್ದಾರೆ ಅಂತಾ ವಿಷಯ ತಿಳಿದು ಹೋಗಿ ನೋಡಲಾಗಿ ನನ್ನ ಮಗ ಅಜೀಜನಿಗೆ
ಹಣೆಗೆ, ಮುಖಕ್ಕೆ ಹಾಗೂ ಮೈಕೈಗೆ ತರಚಿದ ಗಾಯಗಳಾಗಿದ್ದವು. ಅವನಿಗೆ ವಿಚಾರಿಸಲಾಗಿ ನಾನು ಎ.ಪಿ.ಎಂ.ಸಿ. ಏರಿಯಾದ
21ನೇ ಮಳಿಗೆ ಹತ್ತಿರ ನಿಂತಿದ್ದಾಗ ಏಕಾಏಕಿ (1) ಕೈಸರ್ ತಂದೆ ಶಫೀಸಾಬ ಇವನು ಅವನೊಂದಿಗೆ (2) ಇಮ್ರಾನ್
ತಂದೆ ಸಾಧಿಕಸಾಬ, (3) ಮೆಹಬೂಬ ಬಿಲ್ಡರ್ ತಂದೆ ಬಾಬಣ್ಣ, (4) ಇಬ್ಬು, (5) ಅಜ್ಜು, (6) ಸದ್ದಾಂ,
(7) ನವಾಜ್ ಇವರೆಲ್ಲರೂ ಬಂದು ಏಯ್ ಸೂಳೇಮಗನೇ ನಮ್ಮ ಹೆಣ್ಣಮಕ್ಕಳನ್ನು ಕಕರ್ೊಂಡು ಹೊಗ್ತಿ ಏನಲೇ ಅಂತಾ ಅನ್ನುತ್ತಾ ಕೈಸರನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ
ನನ್ನ ಹಣೆಗೆ ಹೊಡೆದಿದ್ದು, ಉಳಿದವರೆಲ್ಲರೂ ಹಾಕ್ರಿ ಆ ಸೂಳೇಮಗ್ಗ ಬಿಡಬ್ಯಾಡ್ರಿ ಅಂತಾ ಅನ್ನುತ್ತಾ
ಕೈಯಿಂದ ಬೆನ್ನಿಗೆ, ಮೈಕೈಗೆ ಹೊಡೆಬಡೆ ಮಾಡಿದ್ದು ಅಲ್ಲದೇ ಎಲ್ಲರೂ ಸೇರಿ ನನ್ನನ್ನು ನೆಲಕ್ಕೆ ಹಾಕಿ
ಕಾಲಿನಿಂದ ಒದ್ದಿರುತ್ತಾರೆ. ಅಲ್ಲದೇ ನನ್ನ ಹತ್ತಿರವಿದ್ದ ರೂ. 48,000-00 ಗಳನ್ನೂ ಸಹಾ ಕಸಿದುಕೊಂಡಿರುತ್ತಾರೆ.
ಅಲ್ಲದೇ ಅವರೆಲ್ಲರೂ ಭೋಸುಡಿಕೆ, ನಮ್ಮ ಹೆಣ್ಣುಮಕ್ಕಳ ತಂಟೆಗೆ ಬಂದ್ರ ನಿನ್ನ ಉಳಸಂಗಿಲ್ಲ, ಹುಷಾರ್
ಅಂತಾ ಅನ್ನುತ್ತಾ ಹೊರಟು ಹೋದರು. ಅಂತಾ ತಿಳಿಸಿದನು.
ನಂತರ ನನ್ನ ಮಗನನ್ನು ಕರೆದುಕೊಂಡು ಠಾಣೆಗೆ ಬಂದಿದ್ದು, ಅಲ್ಲಿಂದ ನನ್ನ ಮಗನನ್ನು ಚಿಕಿತ್ಸೆ
ಕುರಿತು ಸಕರ್ಾರಿ ಆಸ್ಪತ್ರೆ, ಗಂಗಾವತಿಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಕರ್ಾರಿ ಆಸ್ಪತ್ರೆ, ಕೊಪ್ಪಳಕ್ಕೆ
ಕರೆದುಕೊಂಡು ಹೋಗಿದ್ದು, ಚಿಕಿತ್ಸೆಗಾಗಿ ದಾಖಲು ಮಾಡಿ ಈಗ ತಡವಾಗಿ ಠಾಣೆಗೆ ಬಂದಿರುತ್ತೇನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ
ನಗರ ಪೊಲೀಸ್ ಠಾಣೆ ಗುನ್ನೆ ನಂ. 183/2017
ಕಲಂ. 379 ಐ.ಪಿ.ಸಿ:
ದಿನಾಂಕ 22-07-2017 ರಂದು 17-00
ಗಂಟೆಗೆ ಜಿ.ವಿಠ್ಠಲ ತಂದೆ ಮಲ್ಲಯ್ಯ ಗಾಜುಲ ವಯಾ: 70 ವರ್ಷ ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ. ದಿ: 19-07-2017 ರಂದು ಮಧ್ಯಾಹ್ನ
12-30 ಪಿ ಎಮ್ ಗಂಟೆಯಿಂದ 2-00 ಪಿ ಎಮ್ ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಗಂಗಾವತಿ ನಗರದ ಕೋರ್ಟಿನ ಕಂಪೌಂಡ ಮುಂಭಾಗದ ಬಲ
ಬಾಗದಲ್ಲಿ ನಿಲ್ಲಿಸಿದ ಪಿರ್ಯಾಧಿದಾರರ ಹೊಂಡ್ ಕಂಪನಿಯ ಡ್ರೀಮ್
ಯುಗ ಸೈಕಲ್ ಮೋಟಾರ ನಂ KA37 - U
9833 ಚಾಸ್ಸಿ ನಂ: ME4JC583HC8048780
ಇಂಜಿನ್ ನಂ JC58E1049367 ಇದ್ದು ಸಿಲ್ವರ್ ಬಣ್ಣದ್ದು ಅಂ.ಕಿ 25,000-00.ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 220/2017 ಕಲಂ. 87 Karnataka Police Act.
ದಿನಾಂಕ :
22-07-2017 ರಂದು ಸಾಯಂಕಾಲ
06-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು
ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಜುಂಜಲಕೊಪ್ಪ ಗ್ರಾಮದ ಸಮುದಾಯ ಭವನದ
ಮುಂದೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ
ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಸಿಬ್ಬಂದಿಯವರಾದ
HC-70 ಅತೀಕಅಹ್ಮದ್
, PC-116 ಸಂಗಮೇಶ, PC-344 ಸಂಗಪ್ಪ ಮೇಟಿ, PC-184
ಮಂಜುನಾಥ, PC-407 ಜೈರಾಮ ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 8 ಜನ
ಆರೋಪಿತರು ಸಿಕ್ಕಿದ್ದು ಇರುತ್ತದೆ.
ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 8145=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು
ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ. 32. 34 Karnataka Excise Act.
ದಿನಾಂಕ: 22-07-2017 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಆರೋಪಿತನು ವಜ್ರಬಂಡಿ ಸೀಮಾದ
ವಜ್ರಬಂಡಿ-ಮಂಡಲಮರಿ ರಸ್ತೆಯ ಮೇಲೆ ಶ್ರೀ ದ್ಯಾಮಪ್ಪ ಪೂಜಾರ ಇವರ ಹೊಲದ ಹತ್ತಿರ. ಯಾವುದೇ ಪರವಾನಿಗೆ
ಇಲ್ಲದೇ ಮಾರಾಟ ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ತಮ್ಮ ಗ್ರಾಮದಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ
ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ ರವರು, ತಮ್ಮ ಸಿಬ್ಬಂದಿ
ಮತ್ತು ಪಂಚರೊಂದಿಗೆ ದಾಳಿ ಮಾಡಿ, ಆರೋಪಿತನಿಂದ 90 ML ನ HAYWARDS CHEERS WHISKY - ಒಟ್ಟು 61 (ಅರವತ್ತೊಂದು) ಟೆಟ್ರಾ ಪಾಕೀಟಗಳು.
ಪ್ರತಿಯೊಂದಕ್ಕೆ-28.13 ರೂ.ಗಳಂತೆ ಒಟ್ಟು 1,715.93 ರೂ.ಗಳು ಸಿಕ್ಕಿದ್ದು ಇರುತ್ತದೆ. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.