Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 31, 2017

1] ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ. 121/2017 ಕಲಂ: 87 Karnataka Police Act :.
ದಿನಾಂಕ:30-08-2017 ರಂದು ಬೆಳಗಿನ ಜಾವ 3-00 ಗಂಟೆ ಸುಮಾರಿಗೆ ಆರೋಪಿತರು ಬಿನ್ನಾಳ ಗ್ರಾಮದ ಮಸೂತಿ ಸಮೀಪ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ ಮೇಲೆ ಶ್ರೀ. ಚಂದ್ರಹಾಸ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಬರಕಾ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 27480=00 ರೂ.ಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್  ಠಾಣೆ ಗುನ್ನೆ ನಂ. 152/2017 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 30-08-2017 ರಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ದೊಡ್ಡಪ್ಪನಾದ ಮಳ್ಳಪ್ಪ ತಾಯಿ ಮರಿಯಮ್ಮ 70 ವರ್ಷ ಇವರು ವೈಯಕ್ತಿಕ ಕೆಲಸದ ನಿಮಿತ್ಯ ಮುಂಡರಗಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ ಕಾತರಕಿ ಕ್ರಾಸದಿಂದ ಬಸ್ ನಿಲ್ದಾಣದ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮುಂಡರಗಿ ಕಡೆಯಿಂದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ದೊಡ್ಡಪ್ಪನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ ತೀವ್ರವಾಗಿ ಗಾಯಗೊಳಿಸಿದ ನಂತರ ಅಲ್ಲಿಂದ ಹೊರಟು ಹೋಗಿದ್ದು ಅಪಘಾತದ ನಂತರ ಗಾಯಾಳನ್ನು ಹಿರೇಸಿಂಧೋಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್  ಠಾಣೆ ಗುನ್ನೆ ನಂ. 242/2017 ಕಲಂ: 279, 337, 338 ಐ.ಪಿ.ಸಿ:
ಪಿರ್ಯಾದಿದಾರನು  ತಮ್ಮೂರಿನಿಂದ ಕುಷ್ಟಗಿಯಲ್ಲಿ ತಾನು ಮಾಡುವ ಎಲೆಕ್ಟ್ರಿಕಲ್ ಅಂಗಡಿಗೆ ಕೆಲಸಕ್ಕಾಗಿ ಬರುತ್ತಿರುವಾಗ ತಮ್ಮೂರ ಬಸ್ ನಿಲ್ದಾಣದಲ್ಲಿದ್ದಾಗ ಗಂಗಾವತಿ ಕಡೆಯಿಂದ ಗಂಗಾವತಿ ಬಾಗಲಕೋಟ ಬಸ್ ನಂ : ಕೆ.-28/ಎಫ್-1795 ನೇದ್ದು ಬಂದಿದ್ದು ಸದರಿ ಬಸ್ಸಿನಲ್ಲಿ ತಾನು ಮತ್ತು ತಮ್ಮೂರಿನ ಬಾಬು ಮಾದರ ಹಾಗೂ ಮುತ್ತಮ್ಮ ಭಜೇಂತ್ರಿ ಮೂರು ಜನರು ಬಸ್ ನಲ್ಲಿ ಕುಳಿತುಕೊಂಡು ಕುಷ್ಟಗಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾವು ಬರುತ್ತಿರುವ ಬಸ್ ಕುಷ್ಟಗಿಯ ಎನ್.ಹೆಚ್. ಕ್ರಾಸ್ ನಲ್ಲಿ ತಾನು ಹೋಗುತ್ತಿರುವ ರಸ್ತೆಗೆ ಸಿಗ್ನಲ್ ಬಿದ್ದಿದ್ದರೂ ಸಹ ತಾನು ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹೊಸಪೇಟೆ ಕಡೆಯಿಂದ ಬರುತ್ತಿರುವ ಲಾರಿ ನಂ : ಎಂ.ಹೆಚ್-46/ಎಆರ್-5945 ನೇದ್ದಕ್ಕೆ ಟಕ್ಕರ ಮಾಡಿದ್ದರಿಂದ ಸದರಿ ಬಸ್ಸಿನಲ್ಲಿದ್ದ ನನಗೆ ಹಾಗೂ ನಮ್ಮೂರಿನ ಬಾಬು ಮಾದರ ಹಾಗೂ ಮುತ್ತಮ್ಮ ಭಜೇಂತ್ರಿ ಹಾಗೂ ಬಸ್ಸಿನಲ್ಲಿದ್ದ ಇತರರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್  ಠಾಣೆ ಗುನ್ನೆ ನಂ. 192/2017 ಕಲಂ: 343, 323, 353, 332, 504, 506 ಐ.ಪಿ.ಸಿ:

ದಿನಾಂಕ:-30-08-2017 ರಂದು ಸಾಯಂಕಾಲ 5-00 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕಾರಟಗಿರವರು ನನಗೆ ಮತ್ತು ರಮೇಶ ಹೋಮ್ ಗಾರ್ಡ್ ನಂ 708 ಇಬ್ಬರಿಗೂ ನನ್ನ ಬೀಟ್ ಗ್ರಾಮವಾದ ಸೋಮನಾಳ ಗ್ರಾಮಕ್ಕೆ ಗೌರಿ ಗಣೇಶ ವಿಸರ್ಜನೆಯ ಬಂದೋ ಬಸ್ತ ಕರ್ತವ್ಯಕ್ಕೆ ನೇಮಕ ಮಾಡಿದ ಪ್ರಕಾರ ಸೋಮನಾಳ ಗ್ರಾಮಕ್ಕೆ ಹೋಗಿ, ಸೋಮನಾಳ ಗ್ರಾಮದ ಸರಕಾರಿ ಶಾಲೆಯ ಆವರಣದಲ್ಲಿ ಶ್ರೀ ವಿಧ್ಯಾವಿನಾಯಕ ಸಂಘದವರು ಆಯೋಜನೆ ಮಾಡಿದ್ದ ಗಣೇಶ ಮೂರ್ತಿ ವಿಸರ್ಜನೆಯ ಬಂದೋ ಬಸ್ತ ಕರ್ತವ್ಯದ ಮೇಲಿದ್ದಾಗ್ಗೆ ರಾತ್ರಿ 8-00 ಗಂಟೆಯ ಸೋಮನಾಳ ಗ್ರಾಮದ ಶರಣಯ್ಯ ತಂದೆ ಚಂದ್ರಶೇಖರಯ್ಯ ಜಾ. ಜಂಗಮ ಎಂಬುವವನು ಗಣೇಶ ವಿಸರ್ಜನೆಯ ಸಮಯದಲ್ಲಿ ಸೋಮನಾಳ ಗ್ರಾಮದ ನವಲಿ-ಕಾರಟಗಿ ಮುಖ್ಯ ರಸ್ತೆಯ ಮೇಲೆ ಸಾರ್ವಜನಿಕರಿಗೆ ಅಸಹ್ಯಕರವಾಗುವಂತೆ ಡ್ಯಾನ್ಸ್ ಮಾಡುತ್ತಾ, ಅಶ್ಲೀಲ ಪದಗಳಿಂದ ಮಾತನಾಡುತ್ತಾ ಹೋಗಿ ಬರುವ ಸಾರ್ವಜನಿಕರ ವಾಹನಗಳಿಗೆ ಅಡ್ಡಗಟ್ಟಿ ನಿಲ್ಲಿಸಿ ಅವರಿಗೆ ಹೆದರಿಸುವುದು ಬೆದರಿಸುವುದು ಮಾಡುತ್ತಾ ತೊಂದರೆ ಮಾಡುತ್ತಿದ್ದಾಗ್ಗೆ ಸದ್ರಿಯವನಿಗೆ ನಾನು ಹೋಗಿ ಈ ರೀತಿ ಮಾಡುವುದು ತಪ್ಪು ಸಾರ್ವಜನಿಕರಿಗೆ ತೊಂದರೆಕೊಡಬೇಡ ರಸ್ತೆ ಬಿಟ್ಟು ಸರಿದು ನಿಲ್ಲು ಅಂದಿದ್ದಕ್ಕೆ ಆ ವ್ಯಕ್ತಿ  ನನಗೆ ಏ ಪೊಲೀಸ ನಾನು ಯಾರೂ ಅಂತಾ ನನ್ನ ಬಗ್ಗೆ ಕೇಳಿಲ್ಲವೇನು ನಿನ್ನ ಕೆಲಸ ನೀನು ಮಾಡು ನನಗೆನು ಸೆಂಟಾ ಹೇಳಾಕ ಬರುತ್ತಿ ಅಂತಾ ಅಂದನು ಆಗ ಅಲ್ಲಿ ಇದ್ದ ಸೋಮನಾಳ ಗ್ರಾಮದ ಬಸವರಾಜ ತಂದೆ ಶರಣಪ್ಪ, ಬಸವರಾಜ ತಂದೆ ಮೇಲಗಿರಿಯಪ್ಪ, ಹನುಮನಗೌಡ ಮತ್ತು ಗಣೇಶ ಆಯೋಜಕರಾದ ಸಂಜೀವ್ ತಂದೆ ಶರಣಪ್ಪ, ಸುರೇಶ ತಂದೆ ಬಾಲಪ್ಪ ಹುಗಾರ ಇವರುಗಳು ಬಂದು ಆತನಿಗೆ ಬೈದು ಬುದ್ದಿವಾದ ಹೇಳಿ ಕಳುಹಿಸಿದ್ದರು ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ಸದ್ರಿ ವ್ಯಕ್ತಿ ಮತ್ತೆ ಗಣೇಶ ವಿಸರ್ಜನೆಯ ಬಂದೂ ಬಸ್ತ ಕರ್ತವ್ಯದ ಮೇಲಿದ್ದ ನನ್ನ ಹತ್ತಿರ ಬಂದು ನನಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿ, ಲೇ ಸೂಳೆ ಮಕ್ಕಳೆ ಪೊಲೀಸರೇ ನಿಮ್ಮದು ಬಾಹಳಾ ಆಗೈತಿ ನಿನ್ನ ತಿಂಡಿ ಏನ್ಲೇ ಬೋಸುಡಿ ಮಗನೆ ಅಂತಾ ಅಂದು ನಾನು ಸರಕಾರಿ ಕರ್ತವ್ಯದ ಮೇಲೆ ಇರುವುದು ಗೊತ್ತಿದ್ದು ನಾನು ಮಾಡುತ್ತಿದ್ದ ಬಂದೋ ಬಸ್ತ ಕರ್ತವ್ಯಕ್ಕೆ ಅಡೆತಡೆ ಮಾಡಿ ನನ್ನ ಮೇಲೆ ಎರಗಿ ಹೊಡೆಯಲು ಬಂದಾಗ ನಾನು ನನ್ನ ಕೈಯಿಂದ ಆತನಿಗೆ ಹಿಂದಕ್ಕೆ ದೂಡುತ್ತಿದ್ದಂತೆ ಆತನು ನನ್ನ ಎಡಗೈಯನ್ನು ಹಿಡಿದುಕೊಂಡು ತನ್ನ ಬಾಯಿಯಿಂದ ಕಚ್ಚಿ ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು ಅಷ್ಟರಲ್ಲಿ ನನ್ನೊಂದಿಗೆ ಕರ್ತವ್ಯದ ಮೇಲಿದ್ದ ರಮೇಶ ಹೋಮ್ ಗಾರ್ಡ ಮತ್ತು ಅಲ್ಲಿದ್ದ ಸೋಮನಾಳ ಗ್ರಾಮದ ಬಸವರಾಜ ತಂದೆ ಶರಣಪ್ಪ, ಬಸವರಾಜ ತಂದೆ ಮೇಲಗಿರಿಯಪ್ಪ, ಹನುಮನಗೌಡ ಮತ್ತು ಗಣೇಶ ಆಯೋಜಕರಾದ ಸಂಜೀವ್ ತಂದೆ ಶರಣಪ್ಪ, ಸುರೇಶ ತಂದೆ ಬಾಲಪ್ಪ ಹುಗಾರ ಮತ್ತು ಗಣೇಶ ವಿಸರ್ಜನೆ ನೋಡಲು ಬಂದ ಇತರೆ ಸಾರ್ವಜನಿಕರು ಬಂದು ನನಗೆ ಬಿಡಿಸಿಕೊಂಡರು. ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.

Monday, August 28, 2017

1] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 197/2017 ಕಲಂ: 87 Karnataka Police Act :.
ದಿ: 27-08-2017 ರಂದು 04-40 ಎ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹೊಸಗೊಂಡಬಾಳ ಗ್ರಾಮದ ಅನ್ನದಾನೇಶ್ವರ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ, 4800=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ.
2] ಯಲಬರ್ಗಾ ಪೊಲೀಸ್  ಠಾಣೆ ಗುನ್ನೆ ನಂ. 110/2017 ಕಲಂ: 32, 34 Karnataka Excise Act.
ದಿನಾಂಕ:27-08-2017 ರಂದು ಸಂಜೆ 5-20 ಗಂಟೆ ಸುಮಾರಿಗೆ ಆರೋಪಿತನು ಯಲಬುರ್ಗಾ ಪಟ್ಟಣದ  ಬಸ್ಸನಿಲ್ದಾಣದ ಹತ್ತಿರ ಇರುವ ಪ್ರಶಾಂತ ಖಾನಾವಳಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ, ಸದರಿ ಆರೋಪಿತನಿಂದ 90 ML ನ HAYWARDS CHEERS WHISKY- ಒಟ್ಟು 170 (ಒಂದು ನೂರಾ ಎಪ್ಪತ್ತು] ಟೇಟ್ರಾ ಪಾಕೀಟಗಳು ಇದ್ದು. ಪ್ರತಿಯೊಂದಕ್ಕೆ 28.13 ರೂಗಳಂತೆ ಒಟ್ಟು 4,782.1 ರೂ. ಬೆಲೆವುಳ್ಳಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 540/- ರೂಗಳನ್ನು ಜಪ್ತಪಡಿಸಿ ಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್  ಠಾಣೆ ಗುನ್ನೆ ನಂ. 116/2017 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 27-08-2017 ರಂದು ಮುಂಜಾನೆ 09 ಗಂಟೆ ಸುಮಾರಿಗೆ ಯಲಬುರ್ಗಾ ಕುಕನೂರು ರಸ್ತೆಯ ಮೇಲೆ ಕುಕನೂರು ಪಟ್ಟಣದ ಐ.ಬಿ ಮುಂದುಗಡೆ ಆರೋಪಿತರನು ತಾನು ನಡೆಸುತ್ತಿದ್ದ ಅಪೆ ವಾಹನದ ಇಂಜನ್ ನಂ: S6H8599359 ಹಾಗೂ ಚಾಸ್ಸಿ ನಂ ; MBX0000ZFUH335351 ನೇದ್ದನ್ನು ಸಂಗನಾಳ ಕಡೆಯಿಂದ ಕುಕನೂರು ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಬಂದು ತನ್ನ ಅಪೆ ವಾಹನದ ಮೇಲೆ ಹತೋಟಿ ಸಾದಿಸದೆ ರಸ್ತೆಯ ಮೇಲೆ ಬಲಮಗ್ಗಲಾಗಿ ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಅಪೆ ವಾಹನದಲ್ಲಿದ್ದ ಸುಮಾರು 6 ಜನರಿಗೆ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಾಳಾಗಿರುತ್ತವೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್  ಠಾಣೆ ಗುನ್ನೆ ನಂ. 238/2017 ಕಲಂ: 20 [B], [ii], [A], NDPS Act 1985

ದಿನಾಂಕ :- 27-08-2017 ರಂದು ಮದ್ಯಾಹ್ನ  3-00  ಗಂಟೆಗೆ ಶ್ರೀ ವಿಶ್ವನಾಥ ಹಿರೇಗೌಡ್ರ ಪಿ.ಎಸ್.ಐ. ಕುಷ್ಟಗಿ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ: 27-08-2017 ರಂದು ಬೆಳಿಗ್ಗೆ 10-30 ಗಂಟೆಗೆ  ವಣಗೇರಿ ರಸ್ತೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದು ಮಾಹಿತಿಯನ್ನು ಮೇಲಾಧಿಕಾರಿಗಳಿ ತಿಳಿಸಿ ದಾಳಿ ಕುರಿತು ಪರವಾನಿಗೆ ಪಡೆದು ಸಂಗಡ ಸರ್ಕಾರಿ ವೈದ್ಯಾಧಿಕಾರಿಗಳನ್ನು ಹಾಗೂ ಪಂಚರನ್ನು ಕರೆದುಕೊಮಡು ಹೋಗಿ ದಾಳಿ ಮಾಡಿಕೊಂಡು ಮೂಲ ಪಂಚನಾಮೆಯೊಂದಿಗೆ ಇಬ್ಬರೂ ಆರೋಪಿತರನ್ನು 20,000=00 ರೂ ಬೆಲೆ ಬಾಳುವ ಗಾಂಜಾವನ್ನು ತಂದು ಹಾಜರುಪಡಿಸಿ ಆರೋಪಿತ ವಿರುದ್ದ ಕ್ರಮ ಕೈಕೊಳ್ಳುವಂತೆ ನೀಡಿರುವ ವರದಿಯ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, August 27, 2017

1] ಮುನಿರಾಬಾದ  ಪೊಲೀಸ್  ಠಾಣೆ ಗುನ್ನೆ ನಂ. 232/2017 ಕಲಂ: 78, 80 Karnataka Police Act :.
ದಿನಾಂಕ: 26-08-2017 ರಂದು  4-00 ಪಿ.ಎಂ. ಸುಮಾರಿಗೆ ಮುನಿರಾಬಾದನ ತುಂಗಭದ್ರ ಸ್ಟೋರ್ಟ್ಸ & ರಿಕ್ರಿಯೇಶನ್(ರಿ) ಕ್ಲಬ್ ನಲ್ಲಿ ಆರೋಪಿತರು ಕೌಶಲ್ಯದ ಆಟವನ್ನು ಆಡದೇ ಕಾನೂನು ಬಾಹೀರ ಅದೃಷ್ಟದ ಆಟದಲ್ಲಿ ತೊಡಗಿದ್ದಾಗ, ಕ್ಕೆ  ಶ್ರೀ ಭೀಮಣ್ಣ ಎಂ. ಸೋರಿ ಆರಕ್ಷಕ ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತ ರವರು ಸಿಬ್ಬಂದಿ ಸಮೇತ ಪಂಚರ ಸಮಕ್ಷಮ ಸಾಕ್ಷಿದಾರರೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದುಕೊಂಡು ಅವರಿಂದ 1] 1,88,980-00 ರೂ. ನಗದು ಹಣ, 2] 10 ಕಾರುಗಳು ಅಂ.ಕಿ. 22 ಲಕ್ಷ 50 ಸಾವಿರ ರೂ.ಗಳು., 3] 32 ಮೋಟರ ಸೈಕಲಗಳು 5 ಲಕ್ಷ 30 ಸಾವಿರ ರೂ.ಗಳು 4] 40 ಮೊಬೈಲ್ ಗಳು 76,300/-, 5] ಪ್ಲಾಸ್ಟಿಕ್ ಖುರ್ಚಿಗಳು 65 ಅಂ.ಕಿ 13 ಸಾವಿರ ರೂ., 6] ಪ್ಲಾಸ್ಟೀಕ್ ಸ್ಟೂಲ್ 5 ಅಂ.ಕಿ. 1 ಸಾವಿರ. ರೂ., 7] ರೌಂಡ ಟೇಬಲ್ 9 ಅಂ.ಕಿ. 3 ಸಾವಿರದ 6 ನೂರು. ರೂ.ಗಳು, 7] 1 ಡಿ.ವಿಆರ್ ಮತ್ತು 1 ಮಾನಿಟರ್ ಅಂ.ಕಿ. 5 ಸಾವಿರ.ರೂ., 8] 1 ಜನರೇಟರ್ ಅಂ.ಕಿ. 20 ಸಾವಿರ. ರೂ.ಗಳು 9] 4 ಇಸ್ಪೇಟ ಎಲೆಗಳ ಬಾಕ್ಸ್ ಮತ್ತು 468 ಇಸ್ಪೇಟ ಎಲೆಗಳು ಅಂ.ಕಿ. ಇಲ್ಲ. 10] 375 ಪ್ಲಾಸ್ಟೀಕ್ ಬಿಲ್ಲೆಗಳು ಅಂ.ಕಿ. ಇಲ್ಲ. ಇವುಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್  ಠಾಣೆ ಗುನ್ನೆ ನಂ. 124/2017 ಕಲಂ: 32, 34 Karnataka Excise Act.

ಶ್ರೀ ವೀರಭದ್ರಪ್ಪ ಪಿ.ಎಸ್.ಐ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇಲಿನಿಂದ ಸಿಬ್ಬಂದಿಗಳೊಂದಿಗೆ ಹಾಗೂ ಪಂಚರೊಂದಿಗೆ ಸಂಜೆ 7-00 ಪಿ.ಎಂ ಕ್ಕೆ ಠಾಣೆಯನ್ನು ಬಿಟ್ಟು ಹನುಮನಾಳ ಕ್ರಾಸ್ ಹತ್ತಿರಕ್ಕೆ ಹೋಗಿ ಜೀಪನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಇಬ್ಬರು ವ್ಯಕ್ತಿಗಳು ಒಂದು ಮೋಟಾರ್ ಸೈಕಲ್ ಮೇಲೆ ಅಕ್ರಮ ಮಧ್ಯವನ್ನು ಮಾರಾಟ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಸದರಿಯವರಿಗೆ ಕೂಡಲೇ ಧಾಳಿ ಮಾಡಿ ಹಿಡಿದು ಆರೋಪಿತರಿಂದ 90 ಎಂ.ಎಲ್. ಅಳತೆಯ ಓರಿಜೀನಲ್ ಚಾಯ್ಸ ವಿಸ್ಕಿಯ 30 ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಹಾಗೂ 180 ಎಂ.ಎಲ್. ಅಳತೆಯ ಓಲ್ಡ ಟವರೀನ್ ವಿಸ್ಕಿಯ 07 ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಒಟ್ಟು ರೂ, 1323.82 ಬೆಲೆ ಬಾಳುವವುಗಳನ್ನು ಹಾಗೂ ಮೋಟಾರ್ ಸೈಕಲ್ ಗಳನ್ನು ಪಂಚರ ಸಮಕ್ಷಮದಲ್ಲಿ ಜಫ್ತಿಪಡಿಸಿಕೊಂಡು ಆರೋಪಿ ಹಾಗೂ ಇತರೇ ಸಾಮಾಗ್ರಿಗಳೊಂದಿಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Friday, August 25, 2017

1] ಮುನಿರಾಬಾದ  ಪೊಲೀಸ್  ಠಾಣೆ ಗುನ್ನೆ ನಂ. 229/2017 ಕಲಂ: 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 22-08-2017 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಗಾಯಾಳು ಯಮನಪ್ಪ ತಂದೆ ಯಲ್ಲಪ್ಪ ಬಿಂಗಿ ಇತನು ಎನ್.ಎಚ್-50 ರಸ್ತೆಯಲ್ಲಿ ವೈಷ್ಣವಿ ಪೆಟ್ರೋಲ್ ಬಂಕ್ ಹತ್ತಿರ ತಮ್ಮ ಲಾರಿಗೆ ಬೋಲ್ಟ್ ತೆಗೆದುಕೊಂಡು ರಸ್ತೆಯನ್ನು ದಾಟಿಕೊಂಡು ಹೋಗುತ್ತಿರುವಾಗ ಆರೋಪಿತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿರುತ್ತಾನೆ.  ಈ ಅಪಘಾತದಿಂದಾಗಿ ಗಾಯಾಳು ಯಮನಪ್ಪನಿಗೆ ತಲೆಗೆ ಒಳಪೆಟ್ಟಾಗಿ, ಎಡಗಣ್ಣಿಗೆ ಮತ್ತು ಕಣ್ಣಿನ ಕೆಳಗೆ ಹಾಗೂ ಮೂಗಿಗೆ ರಕ್ತಗಾಯವಾಗಿ, ಎಡಗಡೆ ಭುಜಕ್ಕೆ ಮತ್ತು ಎಡಗಡೆ ಪಕ್ಕಡಿಗೆ ಒಳಪೆಟ್ಟುಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ ಗುನ್ನೆ ನಂ. 259/2017 ಕಲಂ: 279, 337, 338 ಐ.ಪಿ.ಸಿ:

ದಿನಾಂಕ. 24-08-2017 ರಂದು ರಾತ್ರಿ 20-15 ಗಂಟೆಗೆ ಆಂಜಿನೇಯ ತಂದೆ ರಾಮಪ್ಪ, ವಯಸ್ಸು 55 ಫಿರ್ಯಾದಿ ನೀಡಿದ್ದು ದಿನಾಂಕ:- 23-08-2017 ರಂದು ಸಂಜೆ 4:30 ಗಂಟೆಯ ಸುಮಾರಿಗೆ ನನ್ನ ಮಕ್ಕಳಾದ ಎ. ಅನುಷಾ ಗಂಡ ಜಿ.ನಿಂಗಪ್ಪ, ವಯಸ್ಸು 28 ವರ್ಷ, ಸಾ: ಧರ್ಮಾಪೂರ ತಾ: ಸೊಂಡೂರು, ಎ. ಅಕ್ಷತಾ-20 ವರ್ಷ, ಅಳಿಯ ಜಿ. ನಿಂಗಪ್ಪ ತಂದೆ ಜಿ.ಎಸ್. ಹನುಮಂತಪ್ಪ-35 ವರ್ಷ, ಮೊಮ್ಮಗಳು ಜಿ.ಎನ್. ಕ್ರಿಷಾ ತಂದೆ ಜಿ. ನಿಂಗಪ್ಪ-3 ವರ್ಷ, ಪಿಯುಷ್ ತಂದೆ ಜಿ. ನಿಂಗಪ್ಪ-1 ವರ್ಷ ಇವರುಗಳು ಕೂಡಿಕೊಂಡು  ಬುಲೆರೋ ವಾಹನ ನಂ: ಕೆ.ಎ-35/ ಎಂ-9917 ನೇದ್ದರಲ್ಲಿ ಗಂಗಾವತಿಯಿಂದ ಧರ್ಮಾಪೂರಕ್ಕೆ ಹೋಗುತ್ತಿರುವಾಗ ಗಂಗಾವತಿ-ಆನೇಗುಂದಿ ಮುಖ್ಯ ರಸ್ತೆಯ ಸಂಗಾಪೂರು ಸೀಮಾದಲ್ಲಿ ಚಾಲಕ ಲಕ್ಷ್ಮಣ. ಎಂ ತಂದೆ ಕುಮಾರಪ್ಪ. ಎಂ. ವಯಸ್ಸು 37 ವರ್ಷ, ಸಾ: ಧರ್ಮಾಪೂರು ಈತನು ವಾಹನವನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಎಡ ಪಕ್ಕದ ಕಾಲುವೆಯಲ್ಲಿ ಉರುಳಿ ಬಿದ್ದು ಅಪಘಾತವಾಗಿ ವಾಹನದಲ್ಲಿದ್ದ ಎ. ಅನುಷಾ, ಎ. ಅಕ್ಷತಾ,  ಜಿ. ನಿಂಗಪ್ಪ ಇವರುಗಳಿಗೆ ಕೈ ಕಾಲುಗಳಿಗೆ, ಮೈಗೆ, ತಲೆಗೆ ಗಾಯಗಳಾಗಿರುತ್ತವೆ. ನಂತರ ವಿಷಯ ತಿಳಿದು ನಾನು ಸ್ಥಳಕ್ಕೆ ಹೋಗಿ ಗಾಯಗೊಂಡವರನ್ನು ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಬಂದು ದಾಖಲು ಮಾಡಿ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.  

Thursday, August 24, 2017

1] ಕೊಪ್ಪಳ ಮಹಿಳಾ  ಪೊಲೀಸ್  ಠಾಣೆ ಗುನ್ನೆ ನಂ. 06/2017 ಕಲಂ: 498(ಎ), 323, 504, 506 ಐ.ಪಿ.ಸಿ ಮತ್ತು ಕಲಂ. 3[2], 5[ಎ] ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ: 24-08-2017 ರಂದು ರಾತ್ರಿ 8-45 ಗಂಟೆಗೆ ಫಿರ್ಯಾದಿದಾರರ ಶ್ರೀಮತಿ ಸೀತಾ ಗಂಡ ರಾಮಪ್ಪ ಬಳ್ಳಾರಿ. ಸಾ: ನಂದಿನಗರ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಕಳೆದ 03 ವರ್ಷಗಳಿಂದ ಫಿರ್ಯಾದಿದಾರರು ಕಿಡದಾಳ ಗ್ರಾಮದ ರಾಮಪ್ಪ @ ರಮೇಶ ಎಂಬುವವರನ್ನು ಮದುವೆಯಾಗಿದ್ದು, ಅವರಿಗೆ 02 ವರ್ಷದ ಧೃವ ಎಂಬ ಗಂಡು ಮಗನಿದ್ದಾನೆ. ಕಳೆದ 01 ತಿಂಗಳಿಂದೆ ರಾತ್ರಿ 8-00 ಗಂಟೆಗೆ ನಂದಿನಗರದಲ್ಲಿರುವ ಗಂಡನ ಬಾಡಿಗೆಮನೆಯಲ್ಲಿ ತನ್ನ ಗಂಡನು ಫಿರ್ಯಾದಿದಾರಳಿಗೆ ನೀನು ಚಲುವಾದಿ ಕೀಳು ಜಾತಿಯವಳಿದ್ದಿಯಾ ನಿನ್ನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲ ನೀನು ಮನೆಯಲ್ಲಿ ಇರುವುದು ಬೇಡ ಎಂದು ಮಾನಸಿಕ ಕಿರುಕುಳ ಕೊಡುತ್ತಾ, ತಾನು ಬೇರೆ ಮದುವೆಯಾಗುತ್ತೇನೆ. ಎಂದು ದೈಹಿಕವಾಗಿ ಹಲ್ಲೆ ಮಾಡಿ ಯಾವತ್ತಿದ್ದರು ನಿನ್ನ ಸಾವು ನನ್ನ ಕೈಯಲ್ಲೇ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್  ಠಾಣೆ ಗುನ್ನೆ ನಂ. 234/2017 ಕಲಂ: 363 ಐ.ಪಿ.ಸಿ:
ದಿನಾಂಕ :- 23-08-2017 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ಬಾಳಪ್ಪ ತಂದೆ ಮರಿಹುಲುಗಪ್ಪ ಬೂತಬಿಲ್ಲಿ, ವಯಾ: 45 ವರ್ಷ ಜಾತಿ: ಪರಿಶೀಷ್ಟ, : ಕೆ..ಬಿ. ಲೈನ್ ಮ್ಯಾನ ಕೆಲಸ, ಸಾ: ಅಂಬೇಡ್ಕರ ಕಾಲೋನಿ ಕುಷ್ಟಗಿ ರವರು ಠಾಣೆಗೆ ಬಂದು ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ನನಗೆ 3 ಜನ ಮಕ್ಕಳಿದ್ದು ಎಲ್ಲರೂ ವಿದ್ಯಾಭ್ಯಾಸವನ್ನು ಮಾಡಿಕೊಂಡಿದ್ದು ಹಿರಿಯ ಮಗನಾದ ಅಭಿಶೇಕ ವಯಾ 16 ವರ್ಷ ಇತನು 10 ನೇ ತರಗತಿಯಲ್ಲಿ ಓದುತ್ತಿದ್ದು ದಿನಾಂಕ : 21-08-2017 ರಂದು ಮುಂಜಾನೆ 6-00 ಗಂಟೆಗೆ ನನ್ನ ಹೆಂಡತಿ ಪದ್ಮಾ ಇವಳು ನನ್ನ ಮಗನನ್ನು ದಿನಾಲೂ ಎಬ್ಬಿಸುವಂತೆ ಟ್ಯೂಷನ್ನಿಗೆ ಹೋಗಿ ಬಾ ಅಂತಾ ಎಬ್ಬಿಸಿದ್ದು ನನ್ನ ಮಗನು ಎದ್ದು ಮನೆಯಿಂದ ಹೋದವನು ಸಂಜೆಯಾದರು ಮನೆಗೆ ಬಾರದ್ದರಿಂದ ನಾನು ನಮ್ಮ ಸಂಬಂಧಿಕರಲ್ಲಿ ಮತ್ತು ನಮ್ಮ ಗೆಳೆಯರಲ್ಲಿ ಹೋಗಿ ಹುಡುಕಾಡಿದ್ದು ನನ್ನ ಮಗನ ಸುಳಿವು ದೋರೆಯಲಿಲ್ಲಾ. ನನ್ನ ಮಗನ ಪತ್ತೆ ಕುರಿತು ಇಲಕಲ್, ಹೋಸೂರು ತಾ : ಬಾದಾಮಿ, ಗದಗ, ಹೊಸಪೇಟೆ, ಸಿಂದನೂರು, ಗಜೇಂದ್ರಗಡಾ ಮುಂತಾದ ಕಡೆಗಳಲ್ಲಿ ವಾಸವಾಗಿರುವ ನಮ್ಮ ಸಂಬಂಧಿಕರಿಗೆ ಕರೆಮಾಡಿ ನನ್ನ ಮಗನ ಬಗ್ಗೆ ವಿಚಾರಿಸಲು ನನ್ನ ಮಗನ ಬಗ್ಗೆ ಯಾವುದೇ ಸುಳಿವು ದೋರೆತಿರುವುದಿಲ್ಲಾ. ನನ್ನ ಮಗನು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಬಿಳಿಯ ಬಣ್ಣದ ಟೀ ಶರ್ಟ, ಧರಿಸಿದ್ದು ಅದೆ. ನನ್ನ ಮಗನು ಕೋಲುಮುಖ ಸಾಧ ಗಪ್ಪು ಬಣ್ಣ, 4-5 ಅಡಿ ಎತ್ತರ, ಕಪ್ಪು ಕೂದಲು, ತೆಳ್ಳನೆಯ ಮೈಕಟ್ಟು ಹೊಂದಿದ್ದು ಕನ್ನಡ ಬಾಷೆಯನ್ನು ಮಾತನಾಡುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ  
3] ಕಾರಟಗಿ ಪೊಲೀಸ್  ಠಾಣೆ ಗುನ್ನೆ ನಂ. 186/2017 ಕಲಂ: 379 ಐ.ಪಿ.ಸಿ KMMC Role 3 ,36 & 42 R/w 44 MMRD Act 1957 Rule 4, 4[1] 4[a] R/w 21[4], 21:

ದಿನಾಂಕ 23-08-2017 ರಂದು ಮದ್ಯಾಹ್ನ 1-45ಗಂಟೆಯ ಸುಮಾರಿಗೆ ಕಾರಟಗಿ ಬೂದಗುಂಪಾ ರಸ್ತೆಯ ಕೇನಾಲ್ ಹತ್ತಿರ 1) ಒಂದು ಜಾನ್ ಡೀರ್ ಕಂಪನಿಯ ಟ್ರ್ಯಾಕ್ಟರ್ ಇಂಜಿನ್ ನಂ PY30290307439 ಚೆಸ್ಸಿ ನಂ 3029DPY26 ಮತ್ತು ಇದಕ್ಕೆ ಹೊಂದಿಕೊಂಡಿರುವ ನಂಬರ ಇಲ್ಲದ ಟ್ರ್ಯಾಲಿಯಲ್ಲಿ ಇದರ ಚಾಲಕ ರಮೇಶ ತಂದೆ ಮುದಕಪ್ಪ ಸಾ.ಗುಂಜಳ್ಳಿ ಈತನು ಅಂದಾಜು 1500/- ರೂಪಾಯಿ ಬೆಲೆಬಾಳುವ ಮರಳನ್ನು ಸರಕಾರದಿಂದ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಸಾಗಿಸುತ್ತಿದ್ದಾಗ್ಗೆ ಶ್ರಿ ಮೋನಯ್ಯ ಎ.ಎಸ್.ಐ ಹಿಡಿದುಕೊಂಡು ಪರವಾನಿಗೆ ಬಗ್ಗೆ ವಿಚಾರಿಸುತ್ತಿದ್ದಂತೆ ಚಾಲಕನು ಪರಮೀಟ್ ತೋರಿಸುವ ನೇಪದಲ್ಲಿ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದ್ರಿ ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಪಂಚರ ಸಮಕ್ಷಮದಲ್ಲಿ ಜಪ್ತು ಪಂಚನಾಮೆಯ ಮೂಲಕ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

Tuesday, August 22, 2017

1] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ ಗುನ್ನೆ ನಂ. 258/2017 ಕಲಂ: 279, 337, 338 ಐ.ಪಿ.ಸಿ:
ದಿನಾಂಕ. 20-08-2017 ರಂದು ಫಿರ್ಯಾದಿ ಅಣ್ಣ ಶರಣಪ್ಪ ಹಾಗಲೂರ ಮತ್ತು ಫಿರ್ಯಾದಿ ಸಂಬಂಧಿಕ ಶರಣಪ್ಪ ಶ್ಯಾವಿ ಇಬ್ಬರು ಕೂಡಿಕೊಂಡು ಹೊಸಪೇಟೆಯ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿದ್ದು ದಿನಾಂಕ. 21-08-2017 ರಂದು ಬೆಳಿಗ್ಗೆ ಪೂಜೆ ಮಾಡಿಕೊಂಡು ಇಬ್ಬರು ಕೂಡಿಕೊಂಡು ಶರಣಪ್ಪ ಶ್ಯಾವಿ ಇವರ ಮೋಟಾರ ಸೈಕಲ್ ನಂ. ಕೆ.ಎ.37/ಎಸ್.731 ನೇದ್ದರಲ್ಲಿ ವಾಪಸ ಗಂಗಾವತಿಗೆ ಬರುತ್ತಿರುವಾಗ ಆನೆಗುಂದಿ ಗಂಗಾವತಿ ರಸ್ತೆಯ ಮೇಲೆ ಸಂಗಾಪುರ ದಾಟಿ ತ್ರಿಮೂರ್ತಿ ತೋಟದ ಹತ್ತಿರ ಮೋಟಾರ ಸೈಕಲ ಚಲಾಯಿಸುತ್ತಿದ್ದ ಶರಣಪ್ಪ ಶ್ಯಾವಿ ಈತನು ಮೋಟಾರ ಸೈಕಲನ್ನು ಅತಿವೇಗವಾಗಿ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ಮಾಡಲು ಆಗದೆ ರಸ್ತೆಯ ಪಕ್ಕದಲ್ಲಿರುವ ಸಣ್ಣ ಕಾಲುಗೆ ಬಿದ್ದು ಮೋಟಾರ ಸೈಕಲ ಚಲಾಯಿಸುತ್ತಿದ್ದು ಶರಣಪ್ಪ ಶ್ಯಾವಿ ಮತ್ತು ಹಿಂದೆ ಕುಳಿತ ಫಿರ್ಯಾದಿ ಅಣ್ಣ ಶರಣಪ್ಪ ಹಾಗಲೂರ ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್  ಠಾಣೆ ಗುನ್ನೆ ನಂ. 185/2017 ಕಲಂ: 78(3) Karnataka Police Act.

ದಿನಾಂಕ:- 21-08-2017 ರಂದು ರಾತ್ರಿ 9-15 ಗಂಟೆಗೆ  ಶ್ರೀ ಎಂ.ಶಿವುಕುಮಾರ ಪಿ.ಎಸ್.ಐ ಕಾರಟಗಿ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು ದಿನಾಂಕ:-21-08-2017 ರಂದು ರಾತ್ರಿ 7-40 ಗಂಟೆಯ ಸುಮಾರಿಗೆ ನಮೂದು  ಮಾಡಿದ ಆರೋಪಿ ನಂ 1 ನೇದ್ದವನು ಬೂದುಗುಂಪಾ ಗ್ರಾಮದ ಅಂಬೇಡ್ಕರ್ ಸರ್ಕಲ್ ಹತ್ತಿರು ಜುಮ್ಮಾ ಮಸೀದಿ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ ಆರೋಪಿತನ ಮೇಲೆ ದಾಳಿ ಮಾಡಲು ಆರೋಪಿ ನಂ 1 ಈತನು ಸಿಕ್ಕಿ ಬಿದ್ದದ್ದು ಸಿಕ್ಕಿಬಿದ್ದವನಿಂದ ರೂ.790=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, August 21, 2017

1] ಮುನಿರಾಬಾದ  ಪೊಲೀಸ್  ಠಾಣೆ ಗುನ್ನೆ ನಂ. 227/2017 ಕಲಂ: 32 , 34 Karnataka Excise Act.
ದಿನಾಂಕ: 20-08-2017 ರಂದು ಆರೋಪಿತನು ನಾಗೇಶನಹಳ್ಳಿ ಗ್ರಾಮದಲ್ಲಿ ರಾಮಣ್ಣನ ಮನೆಯಲ್ಲಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಅಕ್ರಮ ಮಧ್ಯವನ್ನು ಮಾರಾಟಾ ಮಾಡುತ್ತಿರುವ ಕಾಲಕ್ಕೆ ಶ್ರೀ. ಜಯಪ್ರಕಾಶ ಪಿ.ಎಸ್.ಐ ಹಾಗೂ ಸಿಬ್ಬಂದಿ ರವರು ದಾಳಿ ಮಾಡಿದ್ದು, ಆರೋಪಿ ಸುರೇಶ ಈಳಿಗೇರ. ಸದರಿಯವನಿಂದ 58 ಒರಿಜಿನಲ್ ಚಾಯ್ಸ್ 90 ಎಂ.ಎಲ್.ನ  ಪೌಚಗಳನ್ನು ಜಪ್ತ ಪಡಿಸಿಕೊಂಡಿರುತ್ತದೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
2] ಬೇವೂರ ಪೊಲೀಸ್  ಠಾಣೆ ಗುನ್ನೆ ನಂ. 102/2017 ಕಲಂ: 341, 323, 324, 504, 506 ಐ.ಪಿ.ಸಿ:.

ದಿನಾಂಕ: 16-08-2017 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಅಜ್ಜಿಯಾದ ನಾಗಮ್ಮ ಗಂಡ ವೀರಬಸಯ್ಯ ಹಿರೇಮಠ ಇವರ ಹೆಸರಿನಲ್ಲಿರುವ ಜಮೀನ  ಸರ್ವೇ ನಂ 01 ಹಿಸ್ಸಾ 1 ವಿಸ್ತೀರ್ಣ 1 ಎಕರೆ 29 ಗುಂಟೆ ಜಮೀನದಲ್ಲಿ ಕಣ್ಣು ಕಾಣಲಾರದ ತನ್ನ ಮಾವನಾದ ವಿರುಪಾಕ್ಷಯ್ಯ ಹಿರೇಮಠ ಇವರೊಂದಿಗೆ ಕೆಲಸ ಮಾಡುತ್ತಾ ಇದ್ದಾಗ ಆರೋಪಿತಳು ಸದರಿ ಜಮೀನದಲ್ಲಿ ಬಂದು ಫಿರ್ಯಾದಿಯ ಮಾವ ವಿರುಪಾಕ್ಷಯ್ಯನಿಗೆ ''ನೀನು ನಮ್ಮ ಜಮೀನದಲ್ಲಿ ಯಾಕೇ ಬಂದಿರುತ್ತಿ ಕುರುಡ ಸೂಳ್ಳೆ ಮಗನ ನಿನ್ನ ಸೊಕ್ಕು ಜಾಸ್ತಿಯಾಗಿದೆ'' ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಅವನ ಎಡಕಪಾಳಕ್ಕೆ ಜೋರಾಗಿ ಹೊಡೆದು ಅವನಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕಟ್ಟಿಗೆಯ ಬಡಿಗೆಯಿಂದ ಹೊಡೆ ಬಡೆ ಮಾಡಿದ್ದು ಆಗ ಬಿಡಿಸಲು ಬಂದ ಫಿರ್ಯಾದಿದಾರಳ ಎಡಗೈ ಮುಂಗೈ ಮೇಲೆ ಹೊಡೆದು ದುಃಖಪಾತಗೊಳಿಸಿ, ನಿಮ್ಮನ್ನು ಇಷ್ಟಕ್ಕೆ ಬೀಡುವದಿಲ್ಲ ನಿಮ್ಮ ಜೀವ ತೆಗೆಯುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, August 20, 2017

1] ಮುನಿರಾಬಾದ  ಪೊಲೀಸ್  ಠಾಣೆ ಗುನ್ನೆ ನಂ. 226/2017 ಕಲಂ: 279, 337, 304(ಎ) ಐ.ಪಿ.ಸಿ:.
ದಿನಾಂಕ 19-08-2017 ರಂದು ಮೃತ ಚಲುವರಾಜ ಮತ್ತು ಪ್ರಶಾಂತ ಇಬ್ಬರು ತಮ್ಮ ಮೋ.ಸೈ. ನಂ.ಕೆ.ಎ.37/ಯು-2691 ನೇದ್ದರಲ್ಲಿ ಹಳೆ ಬಂಡಿ ಹರ್ಲಾಪುರಕ್ಕೆ ಹೋಗಿ ವಾಪಾಸ್ ಹೊಸಬಂಡಿ ಹರ್ಲಾಪುರಕ್ಕೆ ಬರುತ್ತಿರುವಾಗ ಮೋ.ಸೈ.ನ್ನು ಪ್ರಶಾಂತ ಇವನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಗಾಳೆಮ್ಮನ ಗುಡಿಯ ಹತ್ತಿರ ಬರುತ್ತಿದ್ದಾಗ ಮಳೆ ಜೋರಾಗಿ ಬರುತ್ತಿದ್ದು ರಸ್ತೆಯ ಮೇಲೆ ಒಂದು ನಾಯಿ ಅಡ್ಡಬಂದಿದ್ದು ಒಮ್ಮೆಲೆ ಮೋ.ಸೈ.ಬ್ರೇಕ ಹಾಕಿದ್ದರಿಂದ ಮೋ.ಸೈ.ಸಮೇತವಾಗಿ ಕೆಳಗೆ ಬಿದ್ದಿದ್ದು ಚಿಕಿತ್ಸೆ ಕುರಿತು ಮುನಿರಾಬಾದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿಒತ್ಸೆ ಕೊಡಿಸಿ ನಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಲ್ಳಿಗೆ ಕರೆದುಕೊಮಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಚಲುವರಾಜನು ಮೃತ ಪಟ್ಟಿದ್ದು ಇರುತ್ತದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ ಗುನ್ನೆ ನಂ.191/2017 ಕಲಂ: 143, 147, 447, 324, 504, 506 ಸಹಿತ 149 ಐ.ಪಿ.ಸಿ ಮತ್ತು 3(2), 5(ಎ) ಎಸ್.ಸಿ/ಎಸ್.ಟಿ. ಕಾಯ್ದೆ:.

ದಿ: 19-08-2017 ರಂದು ಬೆಳಿಗ್ಗೆ 09-00 ಗಂಟೆಗೆ ಸದರಿ ಜಮೀನುದಲ್ಲಿ ಫಿರ್ಯಾದಿದಾರರು ಸುರೇಶ ಇವರ ಟ್ರ್ಯಾಕ್ಟರ ತೆಗೆದುಕೊಂಡು ಟ್ರಿಲ್ಲರ ಹೊಡೆಯಲು ಹೋಗಿದ್ದು ಇರುತ್ತದೆ. ನಂತರ ಇಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೆಲಸ ಮಾಡಿಸುತ್ತಿದ್ದಾಗ, ಬಾಜು ಹೊಲದಲ್ಲಿರುವ ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಫಿರ್ಯಾದಿಯ ಜಮೀನುದಲ್ಲಿ ಅತೀಕ್ರಮ ಪ್ರವೇಶ ಮಾಡಿ ಏಕಾಏಕೀ ಕೆಲಸವನ್ನು ನಿಲ್ಲಿಸಿ ಈಗಾಗಲೇ ಈ ಮೊದಲು ಆ ಸೂಳೇಮಗ ರಮೇಶಪ್ಪನಿಗೆ ಹೊಡೆದು ಕಳಿಸಿದ್ದೇವೆ. ಆಧರೂ ನೀನು ಹೊಲೆಯ ಸೂಳೇಮಗನೇ ನಮ್ಮ ಹೊಲದಲ್ಲಿ ಬಂದು ಟ್ರಿಲ್ಲರ ಹೊಡೆಯಲಿಕ್ಕೆ ಎಷ್ಟು ದೈರ್ಯ ಲೇ ಎಂದು ಅವಾಚ್ಯವಾಗಿ ಬೈಯ್ದು ಜಾತಿ ನಿಂದನೆ ಮಾಡಿ ಅವಮಾನ ಮಾಡಿರುತ್ತಾರೆ. ಅಲ್ಲದೇ ಆರೋಪಿ ಬಸವಂತಪ್ಪನು ಹಿಡಿಗಾತ್ರದ ಕಲ್ಲು ತೆಗೆದುಕೊಂಡು ಫಿರ್ಯಾದಿಯ ಎಡಹಣೆಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಮತ್ತು ಆರೋಪಿತರೆಲ್ಲರೂ ಫಿರ್ಯಾದಿಗೆ ಕೆಳಗಡೆ ಕೆಡವಿ ಕೈಗಳಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ದುಖಾಃಪಾತ ಮಾಡಿದ್ದು ಇರುತ್ತದೆ. ಅಲ್ಲದೇ ಲೇ ಸೂಳೇಮಗನೇ ಈಗಲೇ ನಿಮ್ಮ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೊಲ ಖಾಲಿ ಮಾಡು, ಇಲ್ಲದಿದ್ದರೆ ನಿಮ್ಮನ್ನೆಲ್ಲಾ ಟ್ರ್ಯಾಕ್ಟರ ಸಮೇತ ಸುಟ್ಟು ಬಿಡುತ್ತೇವೆ ಎಂದು ಪ್ರಾಣದ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಬಿಡಿಸಲು ಬಂದ ಸುರೇಶ ಎಂಬುವವರಿಗೆ ಆರೋಪಿ ಬಸವಂತಪ್ಪನು ತನ್ನ ಕೈಗಳಿಂದ ಮೈ ಕೈ ಗೆ ಹಲ್ಲೆ ಮಾಡಿದ್ದು ಇರುತ್ತದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, August 19, 2017

1] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ ಗುನ್ನೆ ನಂ. 254/2017 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:- 18-08-2017 ರಂದು ಬೆಳಿಗ್ಗೆ 11:00 ಗಂಟೆಗೆ ನಾನು ಮತ್ತು ಆಟೋ ಚಾಲಕ ಲೋಹಿತ್ ಕುಮಾರ ಕೂಡಿಕೊಂಡು ಆಟೋ ನಂಬರ್: ಕೆ.ಎ-34/ ಬಿ-5773 ನೇದ್ದರಲ್ಲಿ ನಮ್ಮೂರಿನಿಂದ ಗಂಗಾವತಿಗೆ ಬರುತ್ತಿರುವಾಗ ಬಸಾಪಟ್ಟಣ ದಾಟಿ ಆಟೋ ಚಾಲಕನು ಆಟೋವನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಅದೇ ರೀತಿಯಾಗಿ ನಮ್ಮ ಎದುರುಗಡೆ ಗಂಗಾವತಿ ಕಡೆಯಿಂದ ಕಾರ್ ನಂ: ಕೆ.ಎ- 35 / ಎನ್- 5692 ನೇದ್ದರ ಚಾಲಕ ಅರ್ಜುನ ತಂದಿ ರಾಮ ಕಿಶನ್  ಸಿಂಗ್, ಸಾ: ಗಂಗಾವತಿ ಈತನು ಸಹ ತನ್ನ ಕಾರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಇದರಿಂದ ಎರಡೂ ವಾಹನಗಳು ಪರಸ್ಪರ ಎದುರುಬದುರಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ನನಗೆ ಎಡ ಮೊಣಕೈ ಹಾಗೂ ಇತರೆ ಕಡೆ ಗಾಯಗಳಾಗಿದ್ದು, ಲೋಹಿತಕುಮಾರನಿಗೆ ತಲೆಗೆ ಹಾಗೂ ಎರಡೂ ಕೈ ಕಾಲುಗಳಿಗೆ ಹಾಗೂ ಎಡ ಹಿಂಬಡಿಗೆ ಪೆಟ್ಟಾಗಿದ್ದು, ಕಾರು ಚಾಲಕ ಅರ್ಜುನ್ ಈತನಿಗೆ ತಲೆಗೆ ಮುಖಕ್ಕೆ ಕೈ ಕಾಲುಗಳಿಗೆ ರಕ್ತಗಾಯ ಮತ್ತು ಪೆಟ್ಟುಗಳಾಗಿದ್ದು, ಅದೇ ಕಾರಿನಲ್ಲಿದ್ದ ಸುನೀತಾ ಮತ್ತು ಜ್ಯೋತಿಲಕ್ಷ್ಮೀ ತಂದೆ ರಾಮಕಿಶನ್ ಸಿಂಗ್ ಎಂಬುವವರಿಗೆ ತಲೆಗೆ ಹಾಗೂ ಕೈಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ  ಪೊಲೀಸ್  ಠಾಣೆ ಗುನ್ನೆ ನಂ. 183/2017 ಕಲಂ: 379 ಐ.ಪಿ.ಸಿ KMCC Role 3, 36 & 42 ಸಹಿತ 44 ಹಾಗೂ MMRD Act 1957 Role 4, 4(1), 4(a) R/w 21(4), 21

ದಿನಾಂಕ 18-08-2017 ರಂದು ಸಂಜೆ 5-20 ಗಂಟೆಗೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ್ , ಮೂಲ ವರದಿ ಹಾಗೂ ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 18-08-2017 ರಂದು ಮದ್ಯಾಹ್ನ 3-30 ಗಂಟೆಗೆ ಸಿದ್ದಾಪೂರದಿಂದ ಬರಗೂರ ಕಡೆಗೆ ಹೋಗುವ ಹಳ್ಳದಲ್ಲಿ ನಮೂದು ಮಾಡಿದ ಆರೋಪಿತನು ತನ್ನ ಟ್ರ್ಯಾಕ್ಟರ್ ಇಂಜೀನ್ ನಂ 3100ELI33I3684F3 ಹಾಗೂ ಚೆಸ್ಸಿ ನಂ DZESV369459S3 ಮತ್ತು ಇದಕ್ಕೆ ಹೊಂದಿಕೊಂಡು ಟ್ರೆಲರ್ ನಂ. KA-37/TA-322 ನೆದ್ದರಲ್ಲಿ ಮರಳನ್ನು ತುಂಬಿಕೊಂಡು ಬರಗೂರು ರಸ್ತೆಯಲ್ಲಿ ಸಾಗಣಿಕೆ ಮಾಡುತ್ತಿದ್ದಾಗ್ಗೆ ನಿಲ್ಲಿಸಿ ಹೆಸರು ವಿಳಾಸ ವಿಚಾರಿಸಿ ಪರವಾನಿಗೆಯ ಬಗ್ಗೆ ಕೇಳಲು ಪರವಾನಿಗೆ ಹುಡಿಕಿದಂತೆ ಮಾಡಿ ಚಾಲಕ  ಓಡಿ ಹೋಗಿದ್ದು  ಪಂಚರ ಸಮಕ್ಷಮದಲ್ಲಿ ಸದ್ರಿ ಟ್ರ್ಯಾಕ್ಟರ್, ಟ್ರೇಲರ್ ಮತ್ತು ಅದರಲ್ಲಿ ಇದ್ದ ಅಂದಾಜು 2 ಕ್ಯೂಬಿಕ್ ಮಿಟರ್ ಅ.ಕಿ ರೂ.1500/- ಬೆಲೆಬಾಳುವ ಮರಳನ್ನು ಜಪ್ತಮಾಡಿಕೊಂಡಿದ್ದು ಮತ್ತು ಸದ್ರಿ ಟ್ರ್ಯಾಕ್ಟರ್ ಚಾಲಕನು ತನ್ನ ಚಾಲಾಯಿಸಿಕೊಂಡು ಬರುವಾಗ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿದ್ದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Friday, August 18, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 231/2017 ಕಲಂ: 110(ಇ) & (ಜಿ) ಸಿ.ಆರ್.ಪಿ.ಸಿ:
ದಿನಾಂಕ: 17-08-2017 ರಂದು ನಾನು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಪೆಟ್ರೋಲಿಂಗ ಕುರಿತು ಕೆ.ಬೋದೂರು ತಾಂಡಾ ಕಡೆಗೆ  ಹೋಗಿದ್ದಾಗ ಸದರಿ ಮೇಲ್ಕಂಡ ಆರೋಪಿತರು ರಾಷ್ಠ್ರೀಯ ಹೆದ್ದಾರಿ-50 ರಲ್ಲಿ ಹೋಗಿ ಬರುವ ವಾಹನಗಳಿಂದ ಗಣಪತಿ ಹಬ್ಬದ ಪಟ್ಟಿಯನ್ನು ವಸೂಲಿ ಮಾಡುವದು ಹಾಗೂ ಹೋಗಿ ಬರುವ  ಲಾರಿಯವರು ಹಣವನ್ನು ಕೋಡದೇ ಇದ್ದಾಗ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈಯುವದು ಅಸಭ್ಯವಾಗಿ ವರ್ತಿಸುವದು ಮಾಡುತ್ತಿದ್ದು ಸದರಿಯವರಿಗೆ ಈ ರೀತಿ ಮಾಡುವದು ಸರಿಯಲ್ಲ ಅಂತಾ ಹೇಳಿದವರಿಗೆ ಯಾವ ಸೂಳೇ ಮಗ ಏನು ಮಾಡುತ್ತಾನೆ ಅಂತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿದ್ದರಿಂದ ಸದರಿಯವರನ್ನು ವಶಕ್ಕೆ ತೆಗೆದುಕೊಂಡು  ಸದರಿಯವರು  ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಮತ್ತು ಶಾಂತವಿದ್ದ ವಾತಾವರಣವನ್ನುಕದಡುವ ಕೃತ್ಯವನ್ನು ಮಾಡುವ ಸಂಭವ ಕಂಡು ಬಂದಿದ್ದರಿಂದ  ಸದರಿಯವನನ್ನು ವಶಕ್ಕೆ ತೆಗದುಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕ್ರಮ ಕೈಕೊಂಡಿದೆ.


Wednesday, August 16, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 392 IPC.
ದಿನಾಂಕ: 15-08-2017 ರಂದು ಬೆಳಗ್ಗೆ 06-00 ಗಂಟೆಗೆ ಫಿರ್ಯಾದಿ ಶ್ರೀಮತಿ ವಿದ್ಯಾ ಗಂಡ ನಾಗೇಶ ರಾಯಭಾಗಿ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾವು ಹಾಗೂ ತಮ್ಮ ಯಜಮಾನರು ಮತ್ತು ಮಗ ಗಣೇಶ ಇವರು ಕೂಡಿಕೊಂಡು ಗಣೇಶನಿಗೆ ಹೆಣ್ಣು ನೋಡಿಕೊಂಡು ಬರಲು ಇಲಕಲ್ ಕ್ಕೆ ಹೋಗಿದ್ದು, ವಾಪಾಸ ರಾತ್ರಿ 08-45 ಗಂಟೆಯ ಸುಮಾರಿಗೆ  ನಾನು ಹಾಗೂ ನನ್ನ ಗಂಡ ಇಬ್ಬರೂ ನಡೆದುಕೊಂಡು ಜವಾಹರ ರಸ್ತೆಯಲ್ಲಿ ಬಂದಿದ್ದು, ದಿವಟರ್ ಸರ್ಕಲ್ ದಾಟಿದ ನಂತರ ದಿವಟರ್ ರವರ ಮನೆಯ ಮುಂದೆ ಬರುತ್ತಿರುವಾಗ ನಮ್ಮ ಹಿಂದುಗಡೆಯಿಂದ ಯಾರೋ ಅಪರಿಚಿತರು ಪಲ್ಸರ್ ಮೋಟಾರ್ ಸೈಕಲ್ ಮೇಲೆ ಬಂದಿದ್ದು, ಸದರಿ 2 ಜನರು ಸುಮಾರು 30-35 ವರ್ಷದ ವಯೋಮಾನದ ಗಂಡಸರು ಇದ್ದು, ಮಧ್ಯಮ ಮೈಕಟ್ಟು ಹೊಂದಿದವರಿರುತ್ತಾರೆ, ನಾನು ಹಾಕಿಕೊಂಡಿದ್ದ ಕರಿಮಣಿ ಸರದ ಬಂಗಾರದ ಗುಂಡುಗಳು ಹಾಗೂ ಬಂಗಾರದ ಪದಕವಿರುವ ಅಂದಾಜು 8 ಗ್ರಾಂ ಇರುವ ಒಂದು ತಾಳಿ ಚೈನ್, ಅಂ.ಕಿ ರೂ- 21,000=00 ರೂಗಳು ಹಾಗೂ ನನ್ನ ಕೊರಳಲ್ಲಿದ್ದ ರಾಣಿ ಹಾರ (ಲಾಂಗ್ ಚೈನ್) ಅಂದಾಜು 48 ಗ್ರಾಂ ಇರುವದು, ಅಂ.ಕಿ ರೂ 1,20,000=00 ರೂಗಳು ಹೀಗೆ ಒಟ್ಟು 1,41,000=00 ಗಳ ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಯಾರೋ ಅಪರಿಚಿತ 2 ಗಂಡಸು ವ್ಯಕ್ತಿಗಳು ಜಬರ್ ದಸ್ತಿಯಿಂದ  ಸುಲಿಗೆ ಮಾಡಿಕೊಂಡು ಹೋಗಿದ್ದರಿಂದ ಸದರಿ 2 ಜನ ಸುಲಿಗೆಕೋರರನ್ನು ಪತ್ತೆ ಮಾಡಿ ಹಾಗೂ ನಮ್ಮ ಒಡವೆ ಪತ್ತೆ ಮಾಡಿಕೊಡಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರ ಪೊಲೀಸ್ ಠಾಣೆ ಕೊಪ್ಪಳ  ಗುನ್ನೆ ನಂ. 39/2017 ಕಲಂ 279, 304(ಎ) ಐ.ಪಿ.ಸಿ
ದಿನಾಂಕ. 15-08-2017 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ಸಲೀಮಾ ಗಂಡ ಅಲ್ಲಾಭಕ್ಷಿ ಹನಕುಂಟಿ ವಯ. 32 ಜಾತಿ. ಮುಸ್ಲಿಂ ಉ. ಮನೆ ಕೆಲಸ ಸಾ. ಸರದಾರ ಗಲ್ಲಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಸದರಿ ಗಣಕೀಕರಣ ಫಿರ್ಯಾದಿಯ ಸಾರಾಂಶವೇನೆಂದರೆ, ನಿನ್ನೆ ದಿನಾಂಕ. 14-08-2017 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಫಿರ್ಯಾದಿಯ ಅತ್ತೆ ರಾಜಮ್ಮ ಮತ್ತು ಅವರ ಮಗ ಅಮೀನಸಾಬ ಇಬ್ಬರೂ ಮೊಟಾರ್ ಸೈಕಲ್ ಮೇಲೆ ಕಾತರಕಿ ಗ್ರಾಮಕ್ಕೆ ಹೋಗುವಾಗ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯ ಮೇಲೆ ಚುಕ್ಕನಕಲ್ ಕ್ರಾಸ್ ಸಮೀಪ ಅಮೀನಸಾಬ ಇತನು ಮೋಟಾರ್ ಸೈಕಲ್ ವಾಹನವನ್ನು ನಿಲ್ಲಿಸಿದ್ದು ಫಿರ್ಯಾದಿಯ ಅತ್ತೆ ರಾಜಮ್ಮ ಇವರು ಮೂತ್ರ ವಿಸರ್ಜನೆಯನ್ನು ಮಾಡಲು ಮೋಟಾರ್ ಸೈಕಲ್ ಇಳಿದು ರಸ್ತೆ ದಾಟುತ್ತಿರುವಾಗ ಕೊಪ್ಪಳದ ಕಡೆಯಿಂದ ಮೋಟಾರ್ ಸೈಕಲ್ ನಂಬರ.KA-37/S-9518 ನೆದ್ದರ ಸವಾರ ಮಾಬುಸಾಬ ಕದರಳ್ಳಿ ಇತನು ತನ್ನ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಾಜಮ್ಮ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಅವರು ರಸ್ತೆಯ ಮೇಲೆ ಅಂಗಾತವಾಗಿ ಬಿದ್ದು ತಲೆಗೆ ಒಳಪೆಟ್ಟು ಆಗಿರುತ್ತದೆ. ನಂತರ ರಾಜಮ್ಮ ಇವರು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಂದು ದಿನಾಂಕ. 15-08-2017 ರಂದು ಬೆಳಿಗ್ಗೆ 7-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತಾ ಇದ್ದ ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ.ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 124/2017 ಕಲಂ: 107 ಸಿ.ಆರ್.ಪಿ.ಸಿ .
ನಾನು ಬಿ. ತಿಪ್ಪೇಸ್ವಾಮಿ ಪಿ.ಎಸ್.ಐ. ಹನಮಸಾಗರ ಪೊಲೀಸ್ ಇದ್ದು, ಇಂದು ದಿನಾಂಕ: 15-08-2017 ಮುಂಜಾನೆ 9-00 ಗಂಟೆಗೆ ಕಾಟಾಪೂರ ಗ್ರಾಮದಲ್ಲಿ ಗಸ್ತು ಮಾಡುವಾಗ ಪೊಲೀಸ್ ಬಾತ್ಮೀದಾರರಿಂದ ತಿಳಿದು ಬಂದಿದ್ದೇನಂದರೆ. ಈಗ್ಗೆ ಒಂದು ವಾರದಿಂದ ಗ್ರಾಮದಲ್ಲಿ ರಾಜಪ್ಪ ತಂದೆ ಹನಮಪ್ಪ ಹರಿಜನ ವಯಾ: 36 ವರ್ಷ ಜಾ: ಮಾದರ ಉ: ಕೂಲಿಕೆಲಸ ಸಾ: ಕಾಟಾಪೂರ ತಾ: ಕುಷ್ಟಗಿ ಈತನು ಹಾಗೂ ಮರಿಯಪ್ಪ ತಂದೆ ಸಂಗಪ್ಪ ಹಾದಿಮನಿ ವಯಾ: 26 ವರ್ಷ ಜಾ: ಕುರುಬ ಉ: ಒಕ್ಕಲುತನ ಸಾ: ಕಾಟಾಪೂರ ತಾ: ಕುಷ್ಟಗಿ  ಇವರುಗಳ ಇವರುಗಳು ಗ್ರಾಮದಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದು. ಇವರ ಪೈಕಿ 1ನೇ ರಾಜಪ್ಪ ದಲಿತನಿದ್ದು 2ನೇ ಮರಿಯಪ್ಪ ಸವರ್ಣಿಯನಿದ್ದು ಸದರಿಯವರುಗಳ ಮದ್ಯ ದೇಶ ವೈಶ್ಯಮ್ಯ ಬೆಳೆದಿದ್ದು ಇರುತ್ತದೆ ಈಗ್ಗೆ ಗ್ರಾಮದಲ್ಲಿ ಫಿರ್ಯಾದಿ ನೀಡಲು ಯಾರು ಮುಂದೆ ಬಂದಿರುವುದಿಲ್ಲಾ. ಮುಂದೆ ಒಬ್ಬರಿಗೊಬ್ಬರು ಜಗಳ ತೆಗೆದು ಹೊಡೆದಾಡಿ, ಜೀವ ಹಾನಿ, ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುವದು ಹಾಗೂ ಸಾರ್ವಜನಿಕ ಶಾಂತತೆ ಭಂಗವನ್ನುಂಟು ಮಾಡುವ ಸಂಭವ ಹೆಚ್ಚಾಗಿ ಕಂಡು ಬಂದಿದ್ದು ಇರುತ್ತದೆ. ಸದರ ಗ್ರಾಮದಲ್ಲಿ ಶಾಂತತೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವದನ್ನು ತಡೆಯುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಮುಂಜಾಗೃತೆ ಕ್ರಮವಾಗಿ ಪ್ರಕರಣ ದಾಖಲು ಮಾಡಿಕೊ0ಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
4] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 125/2017  ಕಲಂ 32, 34 ಕೆ.ಇ. ಕಾಯ್ದೆ.
ಪಿ.ಎ.ಸ್.ಐ. ಹನಮಸಾಗರ ರವರಿಗೆ ಅನಧೀಕೃತ ಮದ್ಯ ಮಾರಾಟ ಮಾಡಲು ಮತ್ತು ಸಾಗಿಸುತಿದ್ದ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83, ಪಿ.ಸಿ-223  ರವರೊಂದಿಗೆ ಠಾಣೆಯಿಂದ ಹೊರಟು ಬಾದಿಮನಾಳ, ಜಹಗೀರಗುಡದೂರ ದಾಟಿ ಹನಮನಾಳ ಜೂನಿಯರ್ ಕಾಲೇಜ್ ಹತ್ತಿರ ಮಧ್ಯಾಹ್ನ 13-20 ಗಂಟೆಗೆ ತಲುಪಿ ಮಧ್ಯಾಹ್ನ 13-25 ಗಂಟೆಗೆ ದಾಳಿಮಾಡಿದಾಗ ಮೋಹನ್ ದಾನಿ ಸಾ: ಹನಮನಾಳ ಇವನು ಸಿಕ್ಕಿಬಿದಿದ್ದು ಅವನ 1] 180 .ಎಂ.ಎಲ್.ಅಳತೆಯ 25 ಟೆಟ್ರಾ ಪಾಕೇಟಗಳು HAYWARDS ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1714-00 ರೂಪಾಯಿಗಳು ಆಗುತಿದ್ದು. ಹಾಗೂ 2] 180 ಎಂ.ಎಲ್. ಅಳತೆಯ 9 ಟೆಟ್ರಾ ಪಾಕೇಟಗಳು OLD TAVERN ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 607-04 ರೂಪಾಯಿಗಳು ಆಗುತ್ತಿದ್ದು, ಹಾಗೂ ನಗದು ಹಣ 850-00 ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮಧ್ಯಾಹ್ನ 13-25 ಗಂಟೆಯಿಂದ ಮಧ್ಯಾಹ್ನ 14-35 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಮಧ್ಯಾಹ್ನ 15-00 ಗಂಟೆಗೆ ಬಂದು ಸದರಿ ಆರೋಪಿ ಮೋಹನ ತಂದೆ ರೆವಣಸಾ ದಾನಿ ಸಾ: ಹನಮನಾಳ ಇವನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ 341, 323, 324, 504, 506 ಸಿಹಿತ 34 ಐ.ಪಿ.ಸಿ
ದಿನಾಂಕ 15-08-2017 ರಂದು ರಾತ್ರಿ 1-30 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ ಮಾಹಿತಿಯು ಬಂದಿದ್ದು ಬೆಳಿಗ್ಗೆ 6-00 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಗೆ ಹೋಗಿ ಫಿರ್ಯಾದಿ ಗಂಗಮ್ಮ ಗಂಡ ಯಮನೂರಪ್ಪ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೇ ನಿನ್ನೆ ದಿನಾಂಕ 14-08-2017 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಫಿರ್ಯಾದಿ ಗಂಗಮ್ಮ ಇವರ ಮಕ್ಕಳು ತಮ್ಮ ಹೊಲಕ್ಕೆ ಹೋದಾಗ ಫಕೀರಪ್ಪನ ಮಕ್ಕಳಾದ ಪರಸಪ್ಪನು ಫಿರ್ಯಾದಿಯ ಮಗನ ಸಂಗಡ ಜಗಳ ಮಾಡಿದ್ದು ಈ ವಿಷಯವನ್ನು ಫಿರ್ಯಾದಿಯು ತನ್ನ ಗಂಡನಿಗೆ ಊರಿನಿಂದ ಬಂದ ನಂತರ ತಿಳಿಸಿದ್ದು ಸಂಜೆ 7-00 ಗಂಟೆಯ ಸುಮಾರಿಗೆ ಯಮನೂರಪ್ಪ ಈತನು ಆರೋಪಿತರಿಗೆ ನಡೆದ ಘಟನೆಯ ಬಗ್ಗೆ ಮನೆಯ ಹತ್ತಿರ ವಿಚಾರಿಸುತ್ತಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಮೈಮೇಲೆ ಬಂದು ಯಾಕಲೇ ಸೂಳೆ ಮಗನೇ ನಿಮ್ಮದು ತುಂಬಾ ಜಾಸ್ತಿಯಾಗಿದೆ ಅಂತಾ ಮುಂತಾಗಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಕಾಲಿನಿಂದ ಒದ್ದು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಹೊಡೆದು ನಂತರ ಮನೆಯೊಳಗಿನಿಂದ ತಂದ ಕೊಡಲಿಯ ತುಂಬಿನಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯನ್ನು ತೆಗದುಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಬೇವೂರು ಪೊಲೀಸ್ ಠಾಣೆ ಯು.ಡಿ.ಆರ್ .ನಂ. 12/2017 ಕಲಂ 174 ಸಿ.ಆರ್.ಪಿ.ಸಿ.  
ಮೃತ ಗ್ಯಾನಪ್ಪ ತಂದೆ ಸಿದ್ದಪ್ಪ ಕಟಗಿಹಳ್ಳಿ ಸಾ: ತಿಪ್ಪನಾಳ ಇತನಿಗೆ ತಿಪ್ಪನಾಳ ಗ್ರಾಮದ ಸೀಮಾದಲ್ಲಿ ಜಮೀನ ಸರ್ವೇ ನಂ 34 ವಿಸ್ತಿರ್ಣ 6 ಎಕರೆ ಮತ್ತು ಸವರ್ೇ ನಂ 35 ವಿಸ್ತಿರ್ಣ 3 ಎಕರೆ 20 ಗುಂಟೆ ಜಮೀನ ಹೊಂದಿದ್ದು ಸದರಿಯವನು ಎಸ್.ಬಿ.ಐ ಬ್ಯಾಂಕ್ ಯಲಬುಗರ್ಾದಲ್ಲಿ 80000=00 ರೂಪಾಯಿ ಬೆಳೆಸಾಲ ಪಡೆದುಕೊಂಡಿದ್ದು ಅದರಂತೆ ಯಲಬುಗರ್ಾ ಪಿ.ಎಲ್.ಡಿ ಬ್ಯಾಂಕ, ಹಿರೇವಂಕಲಕುಂಟಾ ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಗಳಲ್ಲಿ ಸಹ ಸಾಲ ಪಡೆದುಕೊಂಡಿದ್ದು ಆದರೆ ಎಷ್ಟು ಸಾಲ ಪಡೆದುಕೊಂಡಿರುತ್ತಾನೆ ಎಂಬುವುದು ತಿಳಿದುಬಂದಿರುವದಿಲಮ,್ಲ ಸದರಿಯವನು ಬೆಳೆಸಾಲ ಹೇಗೆ ತುಂಬಬೇಕು ಎಂದು ಮನನೊಂದು ಇತ್ತೀಚೆಗೆ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಇರುತ್ತದೆ. ದಿನಾಂಕ 14-08-2017 ರಂದು ರಾತ್ರಿ 11:45 ಗಂಟೆಯ ಸುಮಾರಿಗೆ ತಿಪ್ಪನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ತನ್ನ ಜಮೀನದಲ್ಲಿ ಕಟ್ಟಿಸಿರುವ ಜನತಾ ಮನೆಯಲ್ಲಿ ತನ್ನ ಸಣ್ಣ ಮಕ್ಕಳಾದ ಕರಿಯಮ್ಮ, ಮುತ್ತಪ್ಪ, ಮತ್ತು ಸಿದ್ದಪ್ಪ ಇವರಿಗೆ ಇತ್ತೀಚೆಗೆ ಮಳೆ ಬಾರದೇ ಸರಿಯಾಗಿ ಬೆಳೆಗಳು ಬಾರದೇ ಇರುವುದರಿಂದ ತಾನು ಮಾಡಿದ ಸಾಲವನ್ನು ಹೇಗೆ ತೀರಿಸಬೇಕೆಂದು ಮನನೊಂದು ಮಾನಸಿಕ ಅಸ್ತವ್ಯಸ್ಥನಾಗಿ ನಾನು ಸತ್ತು ಹೋಗುತ್ತೇನೆ ನಿಮ್ಮಿಂದ ಸಾಲವನ್ನು ಕಟ್ಟಲು ಸಾಧ್ಯವಾಗುವುದಿಲ್ಲ ನೀವು ಸಣ್ಣ ಮಕ್ಕಳು ಇರುತ್ತೀರಿ ಅಂತಾ ತನ್ನ ಮಕ್ಕಳಿಗೆ ಹೇಳಿ ಪೂಜೆ ಸಲುವಾಗಿ ಇಟ್ಟಿದ್ದ ಖಡ್ಗದಿಂದ ತನ್ನ ಹಣೆಗೆ ಮತ್ತು ನೆತ್ತಿಯ ಮೇಲೆ ಹೊಡೆದುಕೊಂಡು ನಂತರ ತನ್ನ ದೋತರವನ್ನು ಬಿಚ್ಚಿ ಮನೆಯ ಛಾವಣಿಯ ಡಂಬಿಗೆ ಕಟ್ಟಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಸದರಿಯವನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಶರಣಪ್ಪ ತಂದೆ ಬಸಪ್ಪ ಕಟಗಿಹಳ್ಳಿ ಸಾ: ತಿಪ್ಪನಾಳ ತಾ: ಯಲಬುರ್ಗಾ ಇವರು ನೀಡಿದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7] ಗಂಗಾವತಿ ಗ್ರಾಮಿಣ ಪೊಲೀಸ್ ಠಾಣೆ ಗುನ್ನೆ ನಂ. 252/2017 ಕಲಂ: 279, 337, 338 ಐ.ಪಿ.ಸಿ

ಫಿರ್ಯಾದಿದಾರಾದ ಹನಮಂತಪ್ಪ ತಂದೆ ಮಲ್ಲಪ್ಪ ಪುರದ ವಯಾ 45, ಜಾ. ಕುರುಬರು. ಉ. ಒಕ್ಕಲುತನ ಸಾ. ಮಲ್ಲಾಪುರ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು ಸಾರಾಂಶವೆನಂದರೆ. “ ಫಿರ್ಯಾದಿದಾರರು ನಿನ್ನೆ ದಿನಾಂಕ. 14-08-2017 ರಂದು ಭತ್ತದ ಸಸಿ ಮಡಿಗೆ ನೀರು ಹರಿಸಲು ಹೋಗಿದ್ದು ರಾತ್ರಿ 09-30 ಗಂಟೆಗೆ ಹೊಲದ ಹತ್ತಿರ ಇರುವಾಗ ಸಂಗಾಪುರ ಮಲ್ಲಾಪುರ ರಸ್ತೆಯ ಮೇಲೆ ಇಬ್ಬರು ಪಾದಚಾರಿಗಳು ಹೊರಟಿದ್ದು, ಸಂಗಾಪುರ ಕಡೆಯಿಂದ ಮೋಟಾರ ಸೈಕಲ ನಂ. ಕೆ.ಎ.01/ಈ.ಜೆ.1643 ನೇದ್ದರ ಚಾಲಕ ನಾಗರಾಜ ಈತನು ಮೋಟಾರ ಸೈಕಲನ್ನು ಎರ್ರಿಬಿರ್ರಿಯಾಗಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಗೆ ಹೊರಟಿದ್ದ ವೆಂಕಟೇಶ ತಂದೆ ಪಾಮಯ್ಯ ಬೆಣಕಲ್ ಸಾ. ಮಲ್ಲಾಪುರ, ನಿಂಗಪ್ಪ ತಂದೆ ಗಂಗಪ್ಪ ಸಾ. ಮಲ್ಲಾಪುರ ಇವರು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ವೆಂಕಟೇಶನಿಗೆ ಬಲಗಾಲು ಮೊಣಕಾಲಿಗೆ, ಸೊಂಟಕ್ಕೆ ಮತ್ತು ಇತರೆ ಕಡೆಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ನಿಂಗಪ್ಪನಿಗೆ ಮುಖಕ್ಕೆ, ಬಾಯಿಗೆ, ತಲೆಗೆ ಕೈಕಾಲುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ” ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, August 15, 2017

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ: 379 IPC and MMRD 1957 Rule 4, 4(1),4(A).
ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರಿಗೆ ದಿನಾಂಕ: 14-08-2017 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯ ಚಿಕ್ಕಸಿಂಧೋಗಿ ಕಡೆಯಿಂದ ಒಂದು ವಾಹನದಲ್ಲಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಹಿರೇಸಿಂಧೋಗಿ ಗ್ರಾಮ ಸೀಮಾ ಹಳ್ಳದ ಹತ್ತಿರ ಹೋಗಿ ಕೊಳೂರ-ಕಾಟ್ರಳ್ಳಿ ಕ್ರಾಸ ಹತ್ತಿರ ನಿಂತಿರುವಾಗ ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಆರೋಪಿತರು ಕೂಡಿಕೊಂಡು ನಂಬರ ಇರಲಾರದ ಹೊಸ ಟಾಟಾ 207 ವಾಹನದಲ್ಲಿ ಕಾಟ್ರಳ್ಳಿ ಗ್ರಾಮದ ಹತ್ತಿರ ಸರಕಾರಕ್ಕೆ ಸೇರಿದ ಹಿರೇ ಹಳ್ಳದಲ್ಲಿ ಅಂದಾಜು 2,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಲೋಡ ಮಾಡಿಕೊಂಡು ಬರುತ್ತಿರುವಾಗ ಹಿಡಿದಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮರಳು ತುಂಬಿದ ಟಾಟಾ ಬುಲೆರೋ ವಾಹನ ಹಾಗೂ ಆರೋಪಿತರನ್ನು ವಶಕ್ಕೆ ತಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. ಗುನ್ನೆ ನಂ 123/2017 ಕಲಂ 143, 341, 427, 504 ಸಹಿತ 149 ಐಪಿಸಿ.
ದಿನಾಂಕ 14-08-2017 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾಧಿ ನಾಗಪ್ಪ ಎ.ಎಸ್.ಐ. ರವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಪಿರ್ಯಾಧಿಯ ಸಾರಾಂಶ ವೇನೆಂದರೆ, ಇಂದು ದಿನಾಂಕ 14-08-2017 ರಂದು 11-30 ಗಂಟೆಗೆ ಸುಮಾರಿಗೆ ಪಿರ್ಯಾಧಿದಾರರು ಹಾಗೂ ಠಾಣೆಯ ಸಿಬ್ಬಂದಿಗಳಾದ ಪಿಸಿ-214 ಹಾಗೂ ಹೆಚ್.ಸಿ-85 ರವರೊಂದಿಗೆ ನಗರದ ಕೊಪ್ಪಳ-ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಹತ್ತಿರ ಗಲಾಟೆ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋದಾಗ ಸದರಿ ಸ್ಥಳದಲ್ಲಿ ಶಾಮಿಯಾನ ಹಾಕುವುದರ ಬಗ್ಗೆ ಗಲಾಟೆ ನಡೆಯುತ್ತಿದ್ದು, ಯೂನಿಸ್ ಡೆಕೋರೆಟರ್ ಕೆಲಸಗಾರರು ಕೆಲಸ ಮಾಡುತ್ತಿರುವಾಗ ಆರೋಪಿತರು ಚನ್ನಬಸಪ್ಪ ಬಳ್ಳಾರಿ ಹಾಗೂ ಇತರೇ ಆರೋಪಿತರು ಎಲ್ಲರೂ ಸೇರಿಕೊಂಡು ಕೆಲಸಗಾರರಿಗೆ ನೀವು ಯಾಕೆ ಇಲ್ಲಿ ಶಾಮಿಯಾನ ಹಾಕುತ್ತೀರಿ ನಮಗೆ ಗಣಪತಿ ಹಬ್ಬದ ಸಲುವಾಗಿ ಡಿಜೆ ಮತ್ತು ಶಾಮಿಯಾನ ಹಾಕಲು ಅನುಮತಿ ನೀಡಿರುವುದಿಲ್ಲಾ, ಅನುಮತಿ ನೀಡುವವರೆಗೆ ಯಾವುದೇ ಕಾರ್ಯಕ್ರಮಕ್ಕೆ ಶಾಮಿಯಾನ ಹಾಕಬೇಡಿ ಅಂತಾ ಮೀಟಿಂಗ್ ಮಾಡಿ ಹೇಳಿದ್ದರೂ ಕೂಡ ನೀವು ಯಾಕೆ ಶಾಮಿಯಾನ ಹಾಕುತ್ತೀರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಶಾಮಿಯಾನದ ಬಟ್ಟೆಯನ್ನು ಹರಿದು ಹಾಕಿ ಲುಕ್ಸಾನು ಮಾಡಿದ್ದು ಸದರಿಯವರ ಮೇರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಸಲ್ಲಿಸಿದ ಪಿರ್ಯಾಧಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 142/2017 ಕಲಂ: 32, 34 ಕೆ.ಇ. ಆ್ಯಕ್ಟ.
ದಿನಾಂಕ: 13-08-2017 ರಂದು ರಾತ್ರಿ 9-05 ಗಂಟೆಯ ಸುಮಾರಿಗೆ ಆರೋಪಿತನು ಠಾಣೆ ವ್ಯಾಪ್ತಿಯ ಬಿಸರಳ್ಳಿ ಗ್ರಾಮದಲ್ಲಿ ಬರುವ ಮರಳುಸಿದ್ದೇಶ್ವರ ಮಠದ ಹತ್ತಿರ ರಸ್ತೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಮಧ್ಯವನ್ನು ಮಾರಾಟ ಮಾಡುತ್ತಿದ್ದಾಗ, ಶ್ರೀ ಶಂಕರಪ್ಪ ಎಲ್. ಪಿ.ಎಸ್.ಐ. ಅಳವಂಡಿ ಠಾಣೆರವರು ಹಾಗೂ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಲಾಗಿ ಆರೋಪಿತನು  ಓಡಿ ಹೋಗಿದ್ದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಹನಮಂತ ತಂದೆ ನಾಗಪ್ಪ ಸಲಬಗೌಡ್ರ ವಯ: 28 ವರ್ಷ ಜಾತಿ: ಕುರಬರ ಉ:  ಒಕ್ಕಲುತನ  ಉ: ಒಕ್ಕಲುತನ ಸಾ: ಬಿಸರಳ್ಳಿ ತಾ: ಕೊಪ್ಪಳ ಅಂತಾ ಗೊತ್ತಾಗಿದ್ದು ಸ್ಥಳದಲ್ಲಿ ಒಂದು ಚೀಲದಲ್ಲಿ   1] Haywards Cheers Whisky 90 ML -30 ಟೆಟ್ರಾ ಪಾಕೇಟ್ಗಳು. ಪ್ರತಿಯೊಂದಕ್ಕೆ 28.13 ರೂ. ಗಳಂತೆ ಒಟ್ಟು ಅಂ.ಕಿ- 843.9 ರೂ.ಗಳು. ಬೆಲೆಯುಳ್ಳ ಟೆಟ್ರಾ ಪಾಕೇಟಗಳುಗಳನ್ನು, ಒಂದು ಚೀಲ ಅಂ.ಕೀ ಇಲ್ಲಾ ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 113/2017  ಕಲಂ 323, 324, 326, 306, 504, 506 ಸಹಿತ  34 ಐ.ಪಿ.ಸಿ.
ದಿನಾಂಕ: 14-08-2017 ರಂದು ಸಾಯಂಕಾಲ 6:30 ಗಂಟೆಗೆ ಕೊರ್ಟ ಕರ್ತವ್ಯ ನಿರ್ವಹಿಸುವ ಪಿಸಿ-378 ರವರು ಠಾಣೆಗೆ ಹಾಜರಾಗಿ ಯಲಬುರ್ಗಾ ಮಾನ್ಯ ಸಿನಿಯರ್ ಸಿವಿಲ್ ಜಡ್ಜ್ & ಜೆ.ಎಂ.ಎಫ್.ಸಿ ನ್ಯಾಯಾಲಯದ ಆದೇಶ ಪತ್ರ ಸಂ: 1392/2017 ದಿನಾಂಕ: 09-08-2017 ನೇದ್ದಕ್ಕೆ ಲಗತ್ತಿಸಿಕೊಟ್ಟ ನ್ಯಾಯಾಲಯದಲ್ಲಿ ಉಲ್ಲೇಖಿತಗೊಂಡ ಒಂದು ಖಾಸಗಿ ಫಿಯರ್ಾದಿ ಸಂ: 05/2017 ನೇದ್ದನ್ನು ತಂದು ಹಾಜರಪಡಿಸಿದ್ದು ಅದರ ಸಾರಾಂಶ ಏನೆಂದರೆ ದಿನಾಂಕ: 18-06-2017 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಆರೋಪಿ 1) ತಿಮ್ಮಾರಡ್ಡಿ ತಂದೆ ಚನ್ನಪ್ಪ ಬೆನ್ನಳ್ಳಿ ವಯಾ: 40 ಉ: ಒಕ್ಕಲುತನ  2) ರವಿರಡ್ಡಿ ತಂದೆ ವೆಂಕರೆಡ್ಡಿ ಬೆನ್ನಳ್ಳಿ ವಯ: 34 ವರ್ಷ ಉ: ಒಕ್ಕಲುತನ  3) ಸಿಮಿತ್ರಾ ಗಂಡ ವೆಂಕರಡ್ಡಿ ಬೆನ್ನಳ್ಳೀ ವಯಾ: 50 ಉ: ಮನೆಕೆಲಸ ಎಲ್ಲರೂ ಸಾ: ತಳಕಲ್ ತಾ: ಯಲಬುರ್ಗಾ ಇವರು ಫಿರ್ಯಾದಿ ನಾಗರಾಜ ತಂದೆ ಸುಬಾಷರಡ್ಡಿ ನರೇಗಲ್ ವಯಾ: 32 ಉ: ಒಕ್ಕಲುತನ ಸಾ: ತಳಕಲ್ ತಾ: ಯಲಬುರ್ಗಾರವರ ಮನೆಯ ಮುಂದೆ ಬಂದು ಫಿರ್ಯಾಧಿದಾರರಿಗೆ ಲೆ ಬೋಸೂಡಿ ಮಗೆ ಹೊರಗೆ ಬಾ ಅಂತಾ  ಕರೆದು ಆರೋಪಿ ನಂ; 2 ಇವನು ಕಬ್ಬಿಣದ ರಾಡಿನಿಂದ ಫಿರ್ಯಾದಿದಾರನ ತಲೆಗೆ ಹೊಡೆದು ಭಾರಿ ಗಾಯ ಮಾಡಿ ಆರೋಪಿತರೆಲ್ಲರೂ ಫಿರ್ಯಾದಿಗೆ ಸುಳೆಮಗನೆ ನಿಮ್ಮ ಅವ್ವನ ಕಡೆಯಿಂದ ನ್ಯಾಯಾಲಯದಲ್ಲಿ ಓ.ಎಸ್ ನಂ; 259/2012 ಅಂತಾ ಕೆಸ್ ಹಾಕಿತೀ ಏನಲೇ ಮಗನೆ ನಿನ್ನ ಮತ್ತು ನಿಮ್ಮ ಅವ್ವನ ಜೀವ ಸಹಿತ ಬಿಡುವುದಿಲ್ಲಾ ಕೊಂದು ಹಾಕುತ್ತೆವೆ ಅಂತಾ  ಜೀವ ಹೋಗುವ ರೀತಿ ರಾಡಿನಿಂದ ಹೊಡಿಬಡಿ ಮಾಡಿ ಜೀವ ತೆಗೆಯಲು ಪ್ರಯತ್ನಿಸಿರುತ್ತಾರೆ ಆಗ ಅಲ್ಲಿಯೇ ಇದ್ದ ಫಿರ್ಯಾಧಿದಾರನ ಹೆಂಡತಿ ಮತ್ತು ಅವನ ತಂದೆ ತಾಯಿ ಜಗಳ ಬಿಡಿಸಲು ಬಂದಾಗ ಅವರಿಗೂ ಕೂಡಾ ಜೀವ ಬೆದರಿಕೆ ಹಾಕಿರುತ್ತಾರೆ ನಂತರ ಫಿರ್ಯಾಧಿದಾರನು ತನ್ನ ಅಳಿಯ ವಿರುಪಾಕ್ಷಿಯೊಂದಿಗೆ ಮೊಟಾರ್ ಸೈಕಲ್ ಮೇಲೆ ಕುಕನೂರು ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ನಂತರ ಕೊಪ್ಪಳ ಜಿಲ್ಲಾ ಆಸ್ಪತ್ರೆ ಗೆ ಚಿಕಿತ್ಸೆ ಮಾಡಿಸಿಕೊಂಡಿದ್ದು ಇರುತ್ತದೆ, ಅಂತಾ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008